Lakshmibaramma: ಕೀರ್ತಿ ಕೈಯಿಂದ ಕಾವೇರಿ ಕೈಗೆ ಗನ್; ಕಾಪಾಡಲು ಹೋದವಳನ್ನೇ ಪ್ರಪಾತಕ್ಕೆ ತಳ್ಳಿದ ಕಾವೇರಿ!
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಳೆದ ಒಂದು ವಾರದಿಂದ ಪ್ರೇಕ್ಷಕರ ಎದೆಯಲ್ಲೂ ಭಯದ ವಾತಾವರಣ ಮೂಡಿಸುವಂತ ಎಪಿಸೋಡ್ ಪ್ರಸಾರವಾಗುತ್ತಿತ್ತು. ಸತ್ಯ ಎಲ್ಲರಿಗೂ ಗೊತ್ತಾಗಿದೆ. ಆದರೆ ಆ ಸತ್ಯವನ್ನ ಕಾವೇರಿ ಒಪ್ಪಿಕೊಳ್ಳಬೇಕಿತ್ತು. ಕೀರ್ತಿ ಬೇರೆ ಕಾವೇರಿಯನ್ನ ಕಿಡ್ನ್ಯಾಪ್ ಮಾಡಿದ್ದಾಳೆ. ಕಾವೇರಿ ನಿಜಕ್ಕೂ ಸತ್ಯ ಒಪ್ಪಿಕೊಳ್ಳುತ್ತಾಳಾ..? ಕೀರ್ತಿಗೆ ಅಪಾಯ ತರುತ್ತಾಳಾ ಎಂಬೆಲ್ಲಾ ಪ್ರಶ್ನೆಗಳು ಪ್ರೇಕ್ಷಕರ ತಲೆಯಲ್ಲಿ ಇತ್ತು. ಈಗ ಅದಕ್ಕೆಲ್ಲಾ ಉತ್ತರ ಸಿಕ್ಕಿದೆ.
ಕಾವೇರಿಯ ಆಟ ನಿಲ್ಲುವುದು ಯಾವಾಗ..? ಮಗನಿಗೆ ಮುಂದೆ ನಿಂತು ಮದುವೆ ಮಾಡಿಸಿದ್ದಾಳೆ. ಕೀರ್ತಿಯಿಂದ ದೂರ ಮಾಡುವುದೇ ಕಾವೇರಿಯ ಉದ್ದೇಶವಾಗಿತ್ತು. ಅದರಂತೆ ಪ್ಲ್ಯಾನ್ ಮಾಡಿ ದೂರ ಮಾಡಿದಳು. ಲಕ್ಷ್ಮೀಯನ್ನು ಸಹಿಸಲಿಲ್ಲ. ಇತ್ತೀಚೆಗೆ ಆಸ್ಪತ್ರೆಯಲ್ಲಿದ್ದಾಗ ಲಕ್ಷ್ಮೀಯನ್ನೇ ಕೊಲ್ಲಲು ಹೋಗಿದ್ದಳು. ಈಗ ಕೀರ್ತಿಯನ್ನೇ ಕೊಂದಿದ್ದಾಳೆ.

ಕೀರ್ತಿ ಬಳಿ ಸತ್ಯ ಹೇಳಿದ ಕಾವೇರಿ
ಕೀರ್ತಿ ತನ್ನ ಮನಸ್ಸಲ್ಲಿ ಇದ್ದ ಕೋಪವನ್ನೆಲ್ಲ ಕಾವೇರಿ ಮೇಲೆ ತೀರಿಸಿಕೊಂಡಳು. ಆದರೆ ಈಗಲೂ ವೈಷ್ಣವ್ ಜೊತೆಗೆ ಮದುವೆ ಆಗ್ತೀನಿ ಅಂತಾನೇ ಹೆದರಿಸಿದಳು. ಸತ್ಯ ಏನೆಂಬುದನ್ನು ತಿಳಿಯುವುದಕ್ಕೆ ನೇರವಾಗಿ ಕಾವೇರಿಯ ಹಣೆಗೆ ಗನ್ ಇಟ್ಟು ಕೇಳಿದ್ದಾಳೆ. ಕೀರ್ತಿಯ ಭಯಕ್ಕೆ ಎಲ್ಲಾ ಸತ್ಯವನ್ನು ಹೇಳಿದ್ದಾಳೆ ಕಾವೇರಿ. ನೀನಂದ್ರೆ ನನಗೆ ಇಷ್ಟವಿರಲಿಲ್ಲ. ಅದಕ್ಕೆ ಆ ರೀತಿ ಮಾಡಿದೆ ಎಂದಿದ್ದಾಳೆ.
ಯಾರಿಗೂ ಹೇಳಬೇಡ ಎಂದ ಕಾವೇರಿ
ಕೀರ್ತಿ ಜೊತೆಗೆ ಎಲ್ಲಾ ಸತ್ಯವನ್ನು ಒಪ್ಪಿಕೊಂಡ ಬಳಿಕ ಕಾವೇರಿ ಕೈ ಮುಗಿದು ಬೇಡಿಕೊಂಡಿದ್ದಾಳೆ. ಯಾರ ಬಳಿಯೂ ಈ ಸತ್ಯವನ್ನ ಹೇಳ್ಬೇಡ ಎಂದಿದ್ದಾಳೆ. ಕೀರ್ತಿಗೆ ಆ ಕಹಿ ಸತ್ಯವನ್ನೇ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಬಾಯ್ತುಂಬಾ ಸೊಸೆ ಸೊಸೆ ಅಂತ ಕರೆದು, ಈ ರೀತಿ ಮಾಡಿಬಿಟ್ರಾ ಎಂಬ ಬೇಸರ ಅವಳದ್ದು. ಆದರೆ ಲಕ್ಷ್ಮೀಯಿಂದ ವೈಷ್ಣವ್‌ನ ದೂರ ಮಾಡುವುದಕ್ಕೂ ಮನಸ್ಸಿಲ್ಲ. ವೈಷ್ಣವ್‌ನ ಬಿಟ್ಟು ಬದುಕುವ ಶಕ್ತಿಯೂ ಈಗ ಅವಳಲ್ಲಿ ಇಲ್ಲ.

ಕೀರ್ತಿಗೆ ಅವಾಜ್ ಹಾಕಿದ ಕಾವೇರಿ
ಇನ್ನು ಕೀರ್ತಿ ಕೈಯಿಂದ ಗನ್ ಕಿತ್ತುಕೊಂಡ ಕಾವೇರಿ, 'ಅದ್ಯಾವ ಮೊಂಡು ಧೈರ್ಯದಲ್ಲಿ ಬಂದೇ ನೀನು. ನನ್ನ ಎದುರಾಕಿಕೊಂಡು ನೀನು ಗೆಲ್ಲಬಹುದು ಅಂತ ಅದೇಗೆ ಅಂದುಕೊಂಡೆ. ನಾನು ಸಾಯ್ತೀನಿ. ನೀನು ಲಕ್ಷ್ಮೀ ನರಳಬೇಕು' ಎಂದಿದ್ದಾಳೆ. ಕಾವೇರಿಯ ಹುಚ್ಚಾಟಕ್ಕೆ ಕೀರ್ತಿ ಬೆಚ್ಚಿದ್ದಾಳೆ. ಆಂಟಿ ಹುಡುಗಾಟ ಆಡಬೇಡಿ, ಅಲ್ಲಿ ಪ್ರಪಾತ ಇದೆ. ದಯವಿಟ್ಟು ಈ ಕಡೆ ಬನ್ನಿ ಎಂದಿದ್ದಾಳೆ. ಆದರೆ ಕಾವೇರಿ ಒಂದೊಂದೆ ಹೆಜ್ಜೆ ಹಿಂದೆ ಹೋಗಿದ್ದಾಳೆ.
ಬೆಟ್ಟದಿಂದ ಕೆಳಗೆ ತಳ್ಳಿದ ಕಾವೇರಿ
ಕಾವೇರಿಯ ಪ್ಲ್ಯಾನ್ ಕೀರ್ತಿಯನ್ನು ಕೊಲ್ಲುವುದೇ ಆಗಿತ್ತು. ತಾನೇ ಸಾಯಬೇಕಿದ್ದರೆ ಇಷ್ಟೆಲ್ಲ ಮಾಡ್ತಾ ಇರಲಿಲ್ಲ. ಈಗ ಕೀರ್ತಿ ಕಾಪಾಡುವುದಕ್ಕೆ ಎಂದು ಮುಂದೆ ಬಂದೊಡನೆ ಅವಳನ್ನೆ ಎಳೆದು ಪ್ರಪಾತಕ್ಕೆ ಎಸೆದಿದ್ದಾಳೆ. ಕಾವೇರಿಯನ್ನು ನಂಬಿ ಈಗ ತನ್ನ ಪ್ರಾಣವನ್ನೇ ಕೊಡುವ ಸ್ಥಿತಿಗೆ ಬಂದಿದ್ದಾಳೆ ಕೀರ್ತಿ. ಅತ್ತ ಲಕ್ಷ್ಮೀ ಹಾಗೂ ವೈಷ್ಣವ್ ಸತ್ಯ ತಿಳಿಯಲು ಕೀರ್ತಿಯನ್ನು ಹುಡುಕಿ ಬರುತ್ತಿದ್ದಾರೆ.
ಕೀರ್ತಿ ಪ್ರಾಣಕ್ಕೆ ಕುತ್ತು ತಂದ ಕಾವೇರಿ!
ಕಾವೇರಿಯ ಬಣ್ಣ ಬಯಲಾಗದೆ ಹೋದರೂ, ಕೀರ್ತಿಯನ್ನು ಕಾಪಾಡುತ್ತಾರಾ? ಅಂತ ನೋಡಬೇಕಿದೆ. ಕೀರ್ತಿ ಕೆಟ್ಟವಳಲ್ಲ ಅನ್ನೋದು ಲಕ್ಷ್ಮೀಗೆ ಗೊತ್ತು. ಅದನ್ನೇ ವೈಷ್ಣವ್‌ಗೂ ಹೇಳುತ್ತಿದ್ದಾಳೆ. ಆದರೆ ಇತ್ತ ಕಾವೇರಿಯೇ ಕೀರ್ತಿಯ ಪಾಲಿಗೆ ಯಮಧರ್ಮರಾಯ ಆಗಿಬಿಟ್ಟಿದ್ದಾಳೆ.


Click it and Unblock the Notifications











