Lakshmibaramma: ಅಯ್ಯೋ ಕಾವೇರಿ ಅದೆಷ್ಟು ಕ್ರೂರಿ ನೀನು; ಕೆಟ್ಟವರಿಗೆ ಒಳ್ಳೆಯದೇ ಆಗುತ್ತಾ?

By ಎಸ್ ಸುಮಂತ್

ಕೀರ್ತಿಗೆ ತಾನೂ ಮೋಸ ಹೋಗಿದ್ದ ವಿಚಾರ ಅರ್ಥ ಆಯ್ತು. ಕಾವೇರಿ ತನ್ನ ಮುಗ್ಧತೆಯನ್ನು ಬಳಕೆ ಮಾಡಿಕೊಂಡಿರುವುದು ಗೊತ್ತಾಯ್ತು. ಮನೆಯವರ ಮುಂದೆಲ್ಲಾ ತನ್ನನ್ನೇ ಸುಳ್ಳಿ ಎಂಬ ಪಟ್ಟ ಕಟ್ಟಿಸಿದ್ದು ಇದೆ ಕಾವೇರಿ ಅನ್ನೋದು ಗೊತ್ತಾಯ್ತು.

ವೈಷ್ಣವ್ ಜಾತಕದಲ್ಲಿ ದೋಷವೇ ಇಲ್ಲ ಅನ್ನೋದು ಸ್ಪಷ್ಟವಾಗಿತ್ತು. ಈಗ ಕೀರ್ತಿಯ ನೇರ ಟಾರ್ಗೆಟ್ ಕಾವೇರಿಯಾಗಿದ್ಲು. ಕಾವೇರಿಯ ಒಡಲೊಳಗೆ ಮುಚ್ಚಿಟ್ಟ ಆ ಕಹಿ ಸತ್ಯವನ್ನ ಎಲ್ಲರೆದುರು ತೆರೆದಿಡುವ ಆತುರಕ್ಕೆ ಬಿದ್ದಳು. ಆ ಆತುರದಲ್ಲಿ ಆಯ್ಕೆ ಮಾಡಿಕೊಂಡ ಜಾಗ ರಾಂಗ್ ಆಗಿತ್ತು.

Colors kannada Lakshmibaramma Written Update on August 7th episode

ಕಾವೇರಿ ಹೆದರುವುದನ್ನು ನೋಡಿ ಸ್ಟ್ರಾಂಗ್ ವಿಲನ್ ಅಲ್ಲ ಎಂದುಕೊಂಡಿದ್ದೆವು. ಆದರೆ ಕೊಲೆ ಮಾಡುವ ಹಂತಕ್ಕೆ ತಲುಪುತ್ತಾಳೆ ಎಂದು ಊಹೆ ಕೂಡ ಮಾಡಿರಲಿಲ್ಲ. ತಪ್ಪಾಯ್ತು ಎಂದು ತಲೆ ಬಾಗಿ ಕಾಲಿಡಿದವಳು, ಕಾಲು ಎತ್ತಿ ಕೀರ್ತಿಯನ್ನೇ ಕೊಂದು ಬಿಟ್ಟಳು.

ಕಾಪಾಡಿ ಎಂದು ಕಿರುಚಿದ ಕೀರ್ತಿ

ತಾನೇ ಶೂಟ್ ಮಾಡಿಕೊಳ್ಳುವ ನಾಟಕವಾಡಿದ ಕಾವೇರಿ, ಕಾಪಾಡಲು ಬಂದಾಗ ಕೀರ್ತಿಯನ್ನು ಪ್ರಪಾತಕ್ಕೆ ತಳ್ಳಿ ಬಿಟ್ಟಳು. ಹೇಗೋ ಕಲ್ಲೊಂದನ್ನು ಹಿಡಿದು ಕೊಂಡು ಮೇಲಕ್ಕೆ ಏಳಲು ಪ್ರಯತ್ನಿಸಿದ ಕೀರ್ತಿ, ಆಂಟಿ ಪ್ಲೀಸ್ ನನ್ನ ಬದುಕಿಸಿ ಎಂದು ಕೇಳಿಕೊಂಡಳು. ಕಾವೇರಿ ಮುಂದೆ ಬಾರದೆ ಇದ್ದಾಗ ನಾನು ಸತ್ತರು ನಿಮ್ಮನ್ನು ಬಿಡುವುದಿಲ್ಲ ಎಂದೇ ಸವಾಲು ಹಾಕಿದಳು ಕೀರ್ತಿ.

ಕ್ಯಾಮೆರಾ ಫಿಕ್ಸ್ ಮಾಡಿರುವ ಕೀರ್ತಿ

ನಾನು ಈಗ ಸಾಯಬಹುದು. ಆದರೆ ಬೆಟ್ಟದಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದ್ದೀನಿ. ಅದರಲ್ಲಿ ಎಲ್ಲವೂ ಸೆರೆಯಾಗಿದೆ ಎಂದಳು. ಇದನ್ನು ಕೇಳಿದ ಕಾವೇರಿಗೆ ಮತ್ತಷ್ಟು ಕೋಪ ಬಂತು. ಕಾವೇರಿಯನ್ನು ಬದುಕಿಸುವ ಬದಲಿಗೆ ಕೈ ತುಳಿದು ಕೆಳಗೆ ಬೀಳುವಂತೆ ಮಾಡಿದಳು. ಕೀರ್ತಿ ಕಿರುಚುತ್ತಾ ಕೆಳಗೆ ಬಿದ್ದೇ ಹೋದಳು. ಕಾವೇರಿಗೆ ಅರೆ ಕ್ಷಣ, ತಾನೆಂತ ಕೆಲಸ ಮಾಡಿದೆ. ಕೋಪದ ಕೈಗೆ ಬುದ್ದಿ ಕೊಟ್ಟು ಬಿಟ್ಟೇನಲ್ಲ ಎನಿಸಿದಂತು ಸತ್ಯ. ಆದರೆ ನೆಕ್ಸ್ಟ್ ಮೂಮೆಂಟ್ ಕ್ಯಾಮೆರಾ ಕಡೆಗೆ ಅವಳ ಗಮನ ಹೋಗಿದೆ.

Colors kannada Lakshmibaramma Written Update on August 7th episode

ಅಮ್ಮನನ್ನು ಕಂಡು ವೈಷ್ಣವ್ ಶಾಕ್

ಕ್ಯಾಮೆರಾದಲ್ಲಿ ಎಲ್ಲವೂ ರೆಕಾರ್ಡ್ ಆಗಿದೆ ಎಂದಾಗ ಶಾಕ್ ಆದ ಕಾವೇರಿ, ಆ ಕ್ಯಾಮೆರಾ ಬೇರೆ ಯಾರದ್ದೇ ಕೈಗೆ ಹೋದರೂ ತನಗೆ ಸಂಕಷ್ಟ ಎಂದು ದೃಢಪಡಿಸಿಕೊಂಡಳು. ಮಂಟಪದ ಬಳಿಗೆ ಓಡಿ ಬಂದು, ಕ್ಯಾಮೆರಾ ಎಲ್ಲಿ ಫಿಕ್ಸ್ ಮಾಡಿರಬಹುದೆಂದು ಹುಡುಕಾಟ ನಡೆಸಿದಳು. ಆದರೆ ಎಷ್ಟೇ ಹುಡುಕಾಡಿದರೂ ಕ್ಯಾಮೆರಾ ಕಾಣಲಿಲ್ಲ. ಅಲ್ಲಿಗೆ ಬಂದ ವೈಷ್ಣವ್‌ಗೆ ಅಮ್ಮ ಅಲ್ಲಿ ಇದ್ದದ್ದು ಆಶ್ಚರ್ಯ ಉಂಟಾಗಿದೆ. ಮಗನನ್ನು ಕಂಡ ಕಾವೇರಿ ಗಾಬರಿಯಾಗಿದ್ದಾಳೆ.

ಕೀರ್ತಿಯ ಸಾವಿಗೆ ವೀಕ್ಷಕರ ಸಾಂತ್ವನ

ಮೊದಲಿನಿಂದಲು ಅನ್ಯಾಯವಾಗಿದ್ದು ಕೀರ್ತಿಗೆ‌. ಈಗ ಸಾವು ಬಂದದ್ದು ಕೂಡ ಕೀರ್ತಿಗೆ. ಇದು ಯಾವ ನ್ಯಾಯ. ಯಾವಾಗಲೂ ಪಾಪಿಗಳೇ ಗೆಲ್ಲುತ್ತಾರಾ..? ಮುಗ್ಧರಿಗೆ ಶಿಕ್ಷೆಯಾಗುತ್ತಾ..? ಕೀರ್ತಿ ಸತ್ತಿದ್ದೇ ನಿಜವಾದರೆ ನೀವೂ ಕೊಡ್ತಿರೋದು ಇದೇ ಸಂದೇಶ ಅಲ್ವಾ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಕೆಲವರು ಕೀರ್ತಿಯೇ ಮುಖ್ಯವಾದ ಟ್ವಿಸ್ಟ್. ಹೀಗಾಗಿ ಕೀರ್ತಿ ಸತ್ತಿರಲ್ಲ. ಕದ್ದು ನೋಡುತ್ತಿದ್ದ ವ್ಯಕ್ತಿ ಆಕೆಯನ್ನು ಕಾಪಾಡಬಹುದು. ಲಕ್ಷ್ಮೀ ಕೈಗೆ ಕ್ಯಾಮೆರಾ ಸಿಗಬಹುದು ಎಂದೆಲ್ಲಾ ಊಹೆ‌ ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Lakshmibaramma kannada serial today episode. Here is the details about Netizens cursed the director from today's episode;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X