Lakshmibaramma: ಕೀರ್ತಿ ಪಾತ್ರ ಅಂತ್ಯವಾಗಿ ಬಿಡ್ತಾ? ಆ ನಗು, ಅಳುಗೆ ನೋಡುಗರ ಮನಸ್ಸು ನೋಯುತ್ತಿದೆ!

By ಎಸ್ ಸುಮಂತ್

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರ ಬಹಳ ಮುಖ್ಯ ಪಾತ್ರ ವಹಿಸಿದೆ. ಯಾಕಂದ್ರೆ ಅವಳ ಪ್ರೀತಿಯನ್ನು ದೂರ ಮಾಡುವುದಕ್ಕೇನೆ ಕಾವೇರಿ, ಲಕ್ಷ್ಮೀಯನ್ನ ಸೊಸೆಯಾಗಿ ತಂದದ್ದು. ಆಮೇಲೆ ಕೀರ್ತಿಯ ನಡವಳಿಕೆ ನೋಡುಗರಿಗೆ ಕೊಂಚವೂ ಇಷ್ಟವಾಗುತ್ತಿರಲಿಲ್ಲ. ಎಲ್ಲರೂ ಅವಳನ್ನೇ ಬೈದುಕೊಳ್ಳುತ್ತಿದ್ದರು. ಕೀರ್ತಿ ಯಾಕೆ ವೈಷ್ಣವ್ ಹಿಂದೆ ಬಿದ್ದು ಈ ರೀತಿ ಆಡುತ್ತಿದ್ದಾಳೆ ಎಂದು.

ಯಾವಾಗ ಕೀರ್ತಿಯನ್ನು ಕಾವೇರಿ ಬಕ್ರ ಮಾಡಿದ್ದಾಳೆ ಎಂಬುದು ಗೊತ್ತಾಯ್ತೋ ಅಲ್ಲಿಂದ ಕೀರ್ತಿಯ ನಡೆ ಬೇರೆ ರೀತಿಯಾಗಿಯೇ ತಿರುಗಿತು. ಕಾವೇರಿ ಮೇಲೆ ದ್ವೇಷ ತೀರಿಸಿಕೊಳ್ಳಲು ಹೋದಳು, ವೈಷ್ಣವದ ಬೇಡ ಎಂದು ತೀರ್ಮಾನಿಸಿದಳು, ಲಕ್ಷ್ಮೀಗೆ ಅನ್ಯಾಯವಾಗಬಾರದು ಎಂದುಕೊಂಡಳು. ಹೀಗಾಗಿ ಕೀರ್ತಿಯ ನಟನೆ, ಕೀರ್ತಿಯ ನಡವಳಿಗೆ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗುತ್ತಾ ಹೋಯ್ತು. ಈಗ ನೋಡಿದರೆ ಕೀರ್ತಿ ಪ್ರಪಾತಕ್ಕೆ ಬಿದ್ದೇ ಹೋಗಿದ್ದಾಳೆ‌. ಈ ದೃಶ್ಯ ಜನರಿಗೆ ಬೇಡವಾಗಿದೆ.

Colors kannada Lakshmibaramma Written Update on August 9th episode

ಸತ್ಯ ಮರೆಮಾಚಲು ನಾಟಕ

ಕ್ಯಾಮೆರಾ ಎಲ್ಲಿದೆ ಎಂದು ಹುಡುಕುತ್ತಿರುವಾಗಲೇ ವೈಷ್ಣವ್ ಮತ್ತು ಲಕ್ಷ್ಮೀ ಅಲ್ಲಿಗೆ ಬಂದಿದ್ದಾರೆ. ಅವರಿಬ್ಬರನ್ನು ನೋಡಿ ಕಾವೇರಿ ಏನೇನೋ ಹೇಳುವುದಕ್ಕೆ ಶುರು ಮಾಡಿದ್ದಾಳೆ. ಆದರೆ ಲಕ್ಷ್ಮೀ ಅದನ್ನು ನಂಬದೇ ವೈಷ್ಣವ್ ತಲೆಯಲ್ಲೂ ಅನುಮಾನ ಹುಟ್ಟು ಹಾಕಿದಾಗ, ಕಾವೇರಿ ನಾಟಕ ಶುರು ಮಾಡಿದ್ದಾಳೆ. ಕೊಲೆ ನೋಡಿದ ಆ ವ್ಯಕ್ತಿ ಬಂದಾಗ ನಂಗೆ ಹೆದರಿಕೆಯಾಗುತ್ತೆ ಬಾ ಪುಟ್ಟ ಹೋಗೋಣಾ ಎಂದು ಓಡಿ ಹೋಗುವ ಪ್ರಯತ್ನ ಮಾಡಿದ್ದಾಳೆ.

ಎಲ್ಲರನ್ನು ಧಿಕ್ಕರಿಸಿ ಓಡಿದ ಲಕ್ಷ್ಮೀ

ಅಮ್ಮ ಹೆದರಿದ್ದು, ಕೀರ್ತಿ ಕಾಣದೆ ಇರುವುದು, ಲಕ್ಷ್ಮೀಗೆ ರಕ್ತ ಬರುತ್ತಿರುವುದು ಎಲ್ಲವನ್ನು ಕಂಡ ವೈಷ್ಣವ್ ಮೊದಲು ಇಲ್ಲಿಂದ ಹೋಗೋಣಾ ಬನ್ನಿ ಎಂದು ಲಕ್ಷ್ಮೀಯನ್ನು ಕರೆದುಕೊಂಡು ಹೊರಟಿದ್ದಾನೆ. ಆದರೆ ಲಕ್ಷ್ಮೀಗೆ ಮನಸ್ಸು ತಡೆಯಲಿಲ್ಲ. ಒಂದು ನಿಮಿಷ ಇರಿ ಎಂದು ವೈಷ್ಣವ್ ಕೈಯಿಂದ ಬಿಡಿಸಿಕೊಂಡು ಆ ವ್ಯಕ್ತಿ ತೋರಿಸುವ ಕಡೆ ಓಡಿ ಹೋಗಿದ್ದಾಳೆ. ವೈಷ್ಣವ್ ಮತ್ತು ಕಾವೇರಿಯೂ ಹಿಂದೆ ಓಡಿ ಬಂದಿದ್ದಾರೆ.

Colors kannada Lakshmibaramma Written Update on August 9th episode

ಬಿದ್ದೆ ಬಿಟ್ಟಳು ಕೀರ್ತಿ

ಕೀರ್ತಿ ಬಂಡೆ ಕಲ್ಲಿನಿಂದ ಕೆಳಗೆ ಬೀಳುವಾಗಲೇ ಕಲ್ಲಿನ ಸಹಾಯದಿಂದ ಮೇಲಕ್ಕೆ ಏಳಲು ಯತ್ನಿಸಿದಳು. ಆದರೆ ಆತುರದಲ್ಲಿ ಕಾವೇರಿ ಅವಳ ಕೈಗಳನ್ನು ತುಳಿದು ಕಳಕ್ಕೆ ಬೀಳಿಸಿದ್ದಳು. ಮತ್ತೆ ಕೊಂಬೆಗಳ ಸಹಾಯದಿಂದ ಪ್ರಾಣ ಉಳಿಸಿಕೊಳ್ಳಲು ಹೋರಾಟ ನಡೆಸಿದಳು. ಆದರೆ ಲಕ್ಷ್ಮೀ ಬಂದು ನೋಡುವಷ್ಟರಲ್ಲಿ ಕೈ ಜಾರಿ ಕೆಳಗೆ ಬಿದ್ದೆ ಬಿಟ್ಟಳು. ಲಕ್ಷ್ಮೀ ಕಣ್ಣಿಗೆ ಕೀರ್ತಿ ಬೀಳುತ್ತಾಳಾ ಎಂಬುದೇ ಈಗ ಎಲ್ಲರ ಗಮನ ಸೆಳೆದಿದೆ. ಬಿದ್ದ ರಭಸ ದೂರವಾಗಿದ್ದರೆ, ಲಕ್ಷ್ಮೀ ಕಾಣಿಸದೆ ಹೋದರೆ ಎಂಬೆಲ್ಲಾ ಯೋಚನೆಗಳು ಮೂಡುತ್ತಿವೆ.

ಕೀರ್ತಿ ಸಾವನ್ನು ಸಹಿಸದ ವೀಕ್ಷಕರು

ಕೀರ್ತಿಯನ್ನು ಆ ಸ್ಥಿತಿಯಲ್ಲಿ ನೋಡುವುದಕ್ಕೆ ಯಾರಿಗೂ ಇಷ್ಟವಾಗುತ್ತಿಲ್ಲ. ಯಾಕಂದ್ರೆ ಅನ್ಯಾಯವಾಗಿರುವುದು ಕೀರ್ತಿಗೆ. ಅದರ ಜೊತೆಗೆ ಕಲರ್ಸ್ ಕನ್ನಡ ಬಿಟ್ಟಿರುವ ಪ್ರೋಮೋ ಮನಸ್ಸಿಗೆ ಇನ್ನಷ್ಟು ನೋವು ಕೊಟ್ಟಿದೆ. ಕೀರ್ತಿಯ ನಗು, ಕಣ್ಣೀರು, ಆಕ್ರಂದನ ಎಲ್ಲವನ್ನು ಒಟ್ಟಿಗೆ ವಿಡಿಯೋದಲ್ಲಿ ಸೇರಿಸಿದ್ದಾರೆ. ಇದನ್ನು ನೋಡಿದ ವೀಕ್ಷಕರು ಕೀರ್ತಿ ನಿಜವಾಗಲೂ ನಮ್ಮನ್ನು ಬಿಟ್ಟು ಹೋಗಿಬಿಟ್ಟರೇನೋ ಎಂಬಂತೆ ಫೀಲ್ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೀರ್ತಿಗೆ ಅನ್ಯಾಯವಾಗಬಾರದು, ಕೀರ್ತಿ ಬದುಕಬೇಕು, ಕಾವೇರಿಯ ನಿಜ ಬಣ್ಣ ಬಯಲಾಗಲೇಬೇಕು ಎಂದು ಬಯಸುತ್ತಿದ್ದಾರೆ.

More from Filmibeat

English summary
Lakshmibaramma kannada serial today episode. Here is the details about The audience is pained to see Kirti's smile;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X