Lakshmibaramma: ಧಾರಾವಾಹಿಯಲ್ಲೇಕೆ ವೈಷ್ಣವ್ ನ ಬ್ಲಾಕ್ ಅಂಡ್ ವೈಟ್ ನಲ್ಲಿ ತೋರಿಸಿದ್ದು : ಗಮನಿಸಿದ್ರಾ..?

By ಎಸ್ ಸುಮಂತ್

'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕಡೆಗೂ ಅನ್ಯಾಯ ನೆಲ ಕಚ್ಚಿದೆ, ಕಾವೇರಿಯ ಪಾಪದ ಕೊಡ ತುಂಬಿದೆ, ಈಗ ನ್ಯಾಯ ಗೆದ್ದು ಕಾವೇರಿ ಜೈಲು ಪಾಲಾಗಿದ್ದಾಳೆ. ಇದು ಲಕ್ಷ್ಮೀ ಹೋರಾಟಕ್ಕೆ ಸಿಕ್ಕ ಫಲವೆ ಸರಿ. ಮನೆಯವರಿಗೆಲ್ಲ ಇದು ನಂಬಲು ಅಸಾಧ್ಯವಾದಂತ ಘಟನೆಯಾಗಿತ್ತು. ನನ್ನಮ್ಮ ಕೊಲೆಗಾತಿಯಾಗಲು ಸಾಧ್ಯವೇ ಇಲ್ಲ ಎಂದು ವಿಧಿ ಭ್ರಮೆಯಲ್ಲಿದ್ದಳು. ಆದರೆ ಕೋರ್ಟ್ ಕಟಕಟೆಯಲ್ಲಿ ಎಲ್ಲಾ ಸಾಕ್ಷಿಗಳು ಕಾವೇರಿಯ ತಪ್ಪನ್ನು ಎತ್ತಿ ತೋರಿಸಿದವು.

ಕಾವೇರಿಗೆ ಸಾವು ಎಂಬುದು ತುಂಬಾನೇ ಸರಳವಾದ ವಿಚಾರವಾಗಿತ್ತು. ತನ್ನೆದುರು ಯಾರೆ ಬಂದರು ಉಡೀಸ್ ಮಾಡಿ ಎನ್ನುತ್ತಿದ್ದಳು. ಆದರೆ ಈಗ ಪೊಲೀಸರ ಜೊತೆಗೆ ಜೀಪ್ ಹತ್ತಿದ್ದಾಳೆ. ಮನೆಯವರೆಲ್ಲ ಮೂಕರಾಗಿದ್ದಾರೆ. ಮನಸ್ಸಿಗೆ ನೋವಾದರೂ ಮಗಳ ಮುಖ ನೋಡುವುದಕ್ಕೆ ಹೋಗುತ್ತಿಲ್ಲ. ಇದು ಕಾವೇರಿಯ ಇಷ್ಟು‌ ಮಾಡಿದ ಎಲ್ಲಾ ಪಾಪಗಳಿಗೆ ಹೊಡೆತ ಬಿದ್ದಂತೆ ಮಾಡಿದೆ.

Colors kannada lakshmibaramma Written Update on December 13th episode

ಬಂದಿರೋ ಕೀರ್ತಿಯೇ ನಿಜವಾದ ಕೀರ್ತಿ

ಕಾವೇರಿಯನ್ನು ಕಟಕಟೆಯಲ್ಲಿ ನಿಲ್ಲಿಸಿ ಕೋರ್ಟ್ ಸಾಕ್ಷ್ಯಾಧಾರಗಳನ್ನು ಕೇಳುವಾಗ ಕೀರ್ತಿಯ ನಡೆ ನೋಡುಗರಿಗೆ ಅನುಮಾನ ಮೂಡಿಸಿತ್ತು. ಇದು ಕೀರ್ತಿ ಅಲ್ಲ ಕೀರ್ತಿಯಂತಿರುವ ಇನ್ನೊಬ್ಬಳಿ ಎಂಬಂತೆ ಅನುಮಾನ ಮೂಡಿತ್ತು. ಆದರೆ ಇಂದು ಕಾವೇರಿಯನ್ನು ಪೊಲೀಸರು ಜೀಪಿನಲ್ಲಿ ಕೂರಿಸಿಕೊಂಡಾಗ ಕೀರ್ತಿಗೆ ಕಾಡಿದ ಹಳೇ ನೆನಪುಗಳಿಂದ ಇದೇ ಕೀರ್ತಿಯೇ‌ ನಿಜವಾದ ಕೀರ್ತಿ ಎಂಬುದು ಅರ್ಥವಾಗಿದೆ.

ಎದ್ದಾಗಲೂ ಸರಿಯಾಗದ ಕೀರ್ತಿ

ಕೀರ್ತಿಗೆ ಅಂದು ಬೆಟ್ಟದ ಮೇಲೆ ತಳ್ಳಿದಾಗಿನ ದೃಶ್ಯ, ತಳ್ಳಿದವರು ಕಂಡದ್ದು ಮಂಜು ಮಂಜಾಗಿ. ಆದರೆ ಇದೇ ಕಾವೇರಿ‌ ಎಂಬುದು ಅರ್ಥವಾಗಿತ್ತು. ಕಾಲಲ್ಲಿದ್ದ ಶೂ ತೆಗೆದು ಕಾವೇರಿಯ ಕಡೆಗೆ ಎಸೆದಳು. ಇದು ಮನೆಯವರಿಗೆಲ್ಲಾ ಶಾಕ್ ಎನಿಸಿತ್ತು. ಎಲ್ಲರೂ ಏನಾಯ್ತು ಎಂದು ನೋಡುವಾಗಲೇ ಕೀರ್ತಿ ತಲೆ ಸುತ್ತಿ ಬಿದ್ದಳು. ಮನೆಗೆ ಕರೆದುಕೊಂಡು ಹೋಗಿ ಹಾರೈಕೆ ಮಾಡಲಾಯ್ತು. ಎಚ್ಚರ ಆದಾಗ ಕೀರ್ತಿಗೆ ಎಲ್ಲಾ ನೆನಪು ಬಂದಿರುತ್ತೆ ಎಂದುಕೊಂಡಿದ್ದ ವೀಕ್ಷಕರ ನಂಬಿಕೆ ಹುಸಿಯಾಯ್ತು. ಎದ್ದಾಗಲೂ ಕೀರ್ತಿ ಮಗುವಿನಂತೆ ಆಡಿದಳು.

ಈ ರೀತಿ ಮಾಡಿದ್ದೇಕೆ?

ಇಷ್ಟೆಲ್ಲಾ ಎಪಿಸೋಡ್ ನಡೆಯುವಾಗ ಅದರಲ್ಲೂ ಕಾವೇರಿಯ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ನಡೆಯುವಾಗ ಎಲ್ಲರೂ ಒಂದನ್ನ ಗಮನಿಸಿರಬಹುದು. ವೈಷ್ಣವ್‌ನ ಮಾತ್ರ ಬ್ಲಾಕ್ ಅಂಡ್ ವೈಟ್‌ನಲ್ಲಿ ತೋರಿಸಲಾಗಿತ್ತು. ಇದನ್ನು ವೀಕ್ಷಕರು ಕೂಡ ಗಮನಿಸಿದ್ದಾರೆ. ಅಮ್ಮನ ಮೇಲಿಟ್ಟ ನಂಬಿಕೆಗಳು ಸುಳ್ಳು ಎಂದು ಪ್ರೂವ್ ಆಗುವ ಸಂದರ್ಭದಲ್ಲಿ ಈ ರೀತಿ ಬ್ಲಾಕ್ ಅಂಡ್ ವೈಟ್‌ನಲ್ಲಿ ವೈಷ್ಣವ್‌ನ ತೋರಿಸಲಾಗಿತ್ತು. ವೈಷ್ಣವ್ ಮೇಲೆ ವಿಪರೀತ ಮೋಹ ಹೊಂದಿದ್ದ ಕಾವೇರಿ ಎಲ್ಲವನ್ನು ಮಾಡಿದ್ದು ಮಗನಿಗಾಗಿ. ಹಾಗೇ ವೈಷ್ಣವ್ ಕೂಡ ತಾಯಿ ಮೇಲೆ ಇನ್ನಿಲ್ಲದ ನಂಬಿಕೆಯನ್ನಿಟ್ಟುಕೊಂಡಿದ್ದ. ಆ ನಂಬಿಕೆ ಹುಸಿಯಾಗಿದ್ದಕ್ಕೆ ಬ್ಲಾಕ್ ಅಂಡ್ ವೈಟ್ ಫ್ರೇಮ್ ಮಾಡಿದರಾ ಎಂಬ ಪ್ರಶ್ನೆ ಕಾಡ್ತಾ ಇದೆ.

ಡೈರೆಕ್ಟ್ರೇ 2 ಪ್ರಶ್ನೆಗಳಿಗೆ ಕ್ಲಾರಿಟಿ ಕೊಡಿ

ಇದು ನೋಡಿದ ವೀಕ್ಷಕರಿಗೆ ಕೊಂಚ ಕಲ್ಪನೆ ಅಷ್ಟೇ. ಆದರೆ ನಿರ್ದೇಶಕರಿಂದ ಒಂದೆರಡು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಬಂದಾಗಿನಿಂದ ಲಕ್ಷ್ಮೀ ಹಾಕಿಕೊಂಡಿರುವ ಕನ್ನಡಕಕ್ಕೆ ಈಗ ವೈಷ್ಣವ್‌ನ ಬ್ಲಾಕ್ ಅಂಡ್ ವೈಟ್‌ನಲ್ಲಿ ತೋರಿಸಿದ್ದಕ್ಕೆ. ಸೀರಿಯಲ್‌ನಲ್ಲಿ ಎಲ್ಲರನ್ನು ಕಲರ್‌ನಲ್ಲಿಯೇ ತೋರಿಸಿ, ಒಬ್ಬರನ್ನು ಮಾತ್ರ ಬ್ಲಾಕ್ ಅಂಡ್ ವೈಟ್‌ನಲ್ಲಿ ತೋರಿಸುವುದ ಸುಮ್ಮ ಸುಮ್ಮನೆ ಆಗಿರಲ್ಲ. ಅದಕ್ಕೊಂದು ಸರಿಯಾದ ಕಾರಣವಂತು ಇರುತ್ತದೆ.

More from Filmibeat

English summary
Lakshmibaramma Serial; Here is the details about Why is Vaishnav's character being shown in black and white?;
Read more about: sumanth tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X