Lakshmibaramma: ವೀಕ್ಷಕರ ಕಣ್ಣಿಗೆ ಮತ್ತೆ ವಿಲನ್ ಆದ್ಲೂ ಕೀರ್ತಿ; ಯಾಕೆ ಗೊತ್ತಾ?

By ಎಸ್ ಸುಮಂತ್

'ಲಕ್ಷ್ಮೀಬಾರಮ್ಮ' ಧಾರಾವಾಹಿಯಲ್ಲಿ ಸತ್ತವರೆಲ್ಲ ಒಬ್ಬೊಬ್ಬರೇ ಎದ್ದು ಬರ್ತಿದ್ದಾರೆ. ಸತ್ತೇ ಹೋದರು ಎಂದುಕೊಂಡು ತಿಥಿ ಕಾರ್ಯವನ್ನು ಮಾಡಿ ಮುಗಿಸಿದ್ದರು. ಕೀರ್ತಿ ಅಂದುಕೊಂಡು ಯಾರದ್ದೋ ದೇಹವನ್ನ ಸುಟ್ಟು ಹಾಕಿ, ಅಸ್ತಿಯನ್ನು ಬಿಟ್ಟಿದ್ದರು. ಲಕ್ಷ್ಮೀ ಕೂಡ ರಾವಣ ದಹನದಲ್ಲಿ ಸತ್ತಿದ್ದಾಳೆ ಎಂದುಕೊಂಡರು. ಆದರೆ ಇಬ್ಬರು ಬದುಕಿ ಬಂದು ಮನೆಯವರಿಗೆ ಸಂತಸದ ಜೊತೆಗೆ ಆಶ್ಚರ್ಯವನ್ನು ಉಂಟು ಮಾಡಿತ್ತು. ಆ ಕಡೆ ಕಾರುಣ್ಯಗೆ ಮಗಳು ಸಿಕ್ಕ ಖುಷಿಯಲ್ಲಿದ್ದಳು.

ಕೀರ್ತಿ ಮಗು ರೀತಿ ಆಡ್ತಾ ಇದ್ದಾಳೆ. ಯಾವೊಂದು ನೆನಪು ಅವಳಿಗಿಲ್ಲ. ವೈಷ್ಣವ್ ಯಾರೆಂದು ಕೂಡ ಅವಳಿಗೆ ಗೊತ್ತಿಲ್ಲ. ಆದರೆ ಕೋರ್ಟ್‌ನಲ್ಲಿ, ಕಾವೇರಿ ಮುಂದೆ ಎಲ್ಲಾ ವಿಚಾರಗಳನ್ನು ಸ್ಪಷ್ಟವಾಗಿ ಆಡಿದ್ದಳು. ಇದರ ಹಿಂದೆಲ್ಲಾ ಇದ್ದದ್ದು ಲಕ್ಷ್ಮೀ. ಟಾಕ್ ಬ್ಯಾಕ್‌ನಲ್ಲಿ ಹೇಳಿಕೊಡ್ತಾ ಇದ್ಲು. ಆದರೆ ಕೀರ್ತಿ ತಾನೂ ಪೆದ್ದು ಎಂಬಂತೆ ಆಡುತ್ತಿರುವುದೇ ನಾಟಕ ಅನ್ನೋದು ವೀಕ್ಷಕರಿಗೂ ಅನುಮಾನ ಬಂದಿದೆ. ಹೀಗಾಗಿ ಅವಳ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ.

Colors kannada lakshmibaramma Written Update on December 26th episode

ಗೊತ್ತಿದ್ದು ನಾಟಕ

ಕೀರ್ತಿ ಈಗ ಮಗುವಿನಂತೆ ಆಡ್ತಾ ಇದಾಳೆ. ಎಲ್ಲದಕ್ಕೂ ಲಕ್ಷ್ಮೀಯೇ ಬೇಕು ಎಂಬ ಹಠ ಮಾಡ್ತಿದ್ದಾಳೆ‌. ಕೆಲವೊಮ್ಮೆ ಈ ಪೆದ್ದುತನ ಕಾಣಿಸದೆ ಅಹಂ ಇದ್ದ, ಆಟ್ಯಿಟ್ಯೂಡ್ ಇದ್ದಂತಹ ಕೀರ್ತಿ ಕಣ್ಣ ಮುಂದೆ ಬಂದು ಬಿಡುತ್ತಾಳೆ‌. ಇದನ್ನೆಲ್ಲ ನೋಡುತ್ತೊರುವ ಸುಪ್ರೀತಾಗೆ ಕೀರ್ತಿ ಮೇಲೆ ಅನುಮಾನ ಮೂಡಿದೆ. ನಾಟಕವಾಡ್ತಾ ಇದಾಳೆ ಎನಿಸಿದೆ.

ಸೇವೆ ಮಾಡ್ತಿದ್ದಾಳಾ ಲಕ್ಷ್ಮೀ

ಲಕ್ಷ್ಮೀಗೆ ಕೀರ್ತಿ ಮೇಲೆ ಕಾಳಜಿ ಜಾಸ್ತಿ. ಕೀರ್ತಿಯನ್ನ ನಿಜವಾಗಿಯೂ ನಂಬಿದ್ದಾಳೆ. ಅವಳು ಕರೆದಾಗೆಲ್ಲಾ ಓಡೋಡಿ ಬರುತ್ತಾಳೆ, ಊಟ ಮಾಡಿಸುತ್ತಾಳೆ, ಸಮಾಧಾನ ಮಾಡಿ ಮಲಗಿಸುತ್ತಾಳೆ. ಕೀರ್ತಿಗೋಸ್ಕರ ಅಲ್ಲಿ ವೈಷ್ಣವ್ ಪ್ರೀತಿಯಿಂದ ಸಿದ್ದ ಮಾಡಿಕೊಂಡಿದ್ದ ಪಾರ್ಟಿಗೂ ತಡವಾಗಿ ಹೋದಳು. ಕೀರ್ತಿನೆ ಎಲ್ಲಾ ಎಂದು ನಂಬಿದ್ದಾಳೆ. ಆದರೆ ಹೀಗೆ ಕೀರ್ತಿ ಮೋಸ ಮಾಡ್ತಾ ಇರೋದು ತಿಳಿದರೆ ಏನು ಮಾಸಬಹುದು. ಕಾಳಿ ಆಗ್ತಾಳೆ ಅಷ್ಟೇ.

ವೈಷ್ಣವ್‌ಗಾಗಿ ಹೊಸ ನಾಟಕ

ಕೀರ್ತಿ ಹುಚ್ಚಿ ಥರ ಪ್ರೀತಿ ಮಾಡ್ತಾ ಇದ್ಲು. ವೈಷ್ಣವ್ ಕೂಡ ಅಷ್ಟೇ. ಆದರೆ ಕಾವೇರಿಯ ಸ್ಚಾರ್ಥಕ್ಕೆ ಆ ಪ್ರೀತಿ ಬಲಿ ಆಯ್ತು. ಆದರೆ ಕೀರ್ತಿ ಮತ್ತೆ ವೈಷ್ಣವ್‌ನನ್ನು ಪಡೆದುಕೊಳ್ಳುವ ಪ್ರಯತ್ನ ಮಾಡಿದಳು. ಲಕ್ಷ್ಮೀ ಸ್ಟ್ರಾಂಗ್ ಆಗಿ ನಿಂತಳು. ಮತ್ತೆ ವೈಷ್ಣವ್ ನ ಬಲವಂತದಿಂದ ಪಡೆಯೋದಕ್ಕೆ ಆಗಲ್ಲ‌. ಹೀಗಾಗಿ ನಾಟಕ ಮಾಡಿ ವೈಷ್ಣವ್‌ನಿಂದ ಲಕ್ಷ್ಮೀಯನ್ನ ದೂರ ದೂರ ಮಾಡ್ತಾ ಇರುವ ಅನುಮಾನ ಶುರುವಾಗಿದೆ.

ವೀಕ್ಷಕರಿಗೇನು ಬೇಸರ..?

ಈ ಹಿಂದೆ ಕಾವೇರಿಯ ಕುತಂತ್ರಕ್ಕೆ ಬಲಿಯಾಗಿದ್ದ ಕೀರ್ತಿ ಕಂಡು ವೀಕ್ಷಕರು ಅಯ್ಯೋ ಪಾಪ ಎಂದು ಬೇಸರ ಮಾಡಿಕೊಂಡಿದ್ದರು. ಕಾವೇರಿಯಿಂದ ಸತ್ತೇ ಹೋದಳು ಎಂದಾಗಲಂತು ಇನ್ನಷ್ಟು ಮರುಕ ಪಟ್ಟುಕೊಂಡಿದ್ದರು. ಮತ್ತೆ ಕೀರ್ತಿಯನ್ನ ಕರೆತನ್ನಿ, ಅವಳಿಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದರು. ವಾಪಸ್ ಬದುಕಿ ಬಂದಾಗ ಖುಷಿ ಪಟ್ಟಿದ್ದರು. ಬುದ್ದಿ ಭ್ರಮಣೆಯಾಗಿದೆ ಎಂದಾಗ ನೊಂದುಕೊಂಡಿದ್ದರು. ಆದರೆ ಕೀರ್ತಿ ಈಗ ವೈಷ್ಣವ್‌ಗಾಗಿ ನಾಟಕ ಆಡ್ತಾ ಇದಾಳೆ ಎಂದು ಅನುಮಾನ ಮೂಡಿದಾಗಿನಿಂದ ಕೀರ್ತಿ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಲಕ್ಷ್ಮೀ ನಿನ್ನ ನಂಬಿದ್ದಾಳೆ ಕೀರ್ತಿ. ಅವಳಿಗೆ ಅನ್ಯಾಯ ಮಾಡೀದು ಎಂದು ಪ್ರಶ್ನೆ ಮಾಡ್ತಾ ಇದಾರೆ.

More from Filmibeat

English summary
Lakshmibaramma serial today episode. Here is the details about Viewers are fed up with Keerthi's drama.
Read more about: sumanth tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X