Lakshmibaramma: ಕಾವೇರಿಗೆ ಶಿಕ್ಷೆ ಕೊಡಿಸುವ ಮುನ್ನವೇ ಕೀರ್ತಿ ಎಡವಟ್ಟು? ಸುಪ್ರೀತಾ, ಲಕ್ಷ್ಮೀ ಶಾಕ್..!

ಯಾರದ್ದೋ ತಪ್ಪನ್ನು ತೋರಿಸುವುದಕ್ಕಾಗಿ, ಶಿಕ್ಷೆ ಕೊಡಿಸುವುದಕ್ಕಾಗಿ, ಇಲ್ಲದ ವ್ಯಕ್ತಿಯನ್ನು ಕರೆ ತಂದು ನಾಟಕ ಆಡಿಸುವಾಗ ಮೈ ಎಲ್ಲಾ ಕಣ್ಣಾಗಿರಬೇಕಾಗುತ್ತದೆ. ಈಗ ಸುಪ್ರೀತಾಗೆ ಅದೇ ದೊಡ್ಡ ತಲೆ ನೋವಾಗಿರುವುದು. ಕೀರ್ತಿ ಸತ್ತಿದ್ದಾಳೆ. ಆದರೆ ಸುಪ್ರೀತಾ ಕರೆತಂದಿರುವ ಕೀರ್ತಿ ಯಡವಟ್ಟು ಮಾಡದೆ ಸುಮ್ಮನೆ ಇದ್ದರೆ ಸಾಕಾಗಿ ಹೋಗಿದೆ. ಸುಪ್ರೀತಾಗೆ ಸೆರಗಲ್ಲಿ ಕೆಂಡ ಕಟ್ಟಿಕೊಟ್ಟಂತ ಫೀಲ್ ಆಗ್ತಿದೆ.

ಸದ್ಯ ಕಾವೇರಿಯ ಪಾಪದ ಕೊಡ ಕೋರ್ಟ್ ಕಟಕಟೆಯಲ್ಲಿ ನಿಂತಿದೆ. ಕೀರ್ತಿ ಪರ ವಕೀಲರು ಸ್ಟ್ರಾಂಗ್ ಆಗಿ ನಿಂತಿದ್ದಾರೆ. ಸಖತ್ತಾಗಿನೇ ವಾದ ಮಂಡಿಸುತ್ತಿದ್ದಾರೆ. ಇನ್ನೇನು ಕಾವೇರಿಯ ತಪ್ಪು ಅರಿವಾಗಬೇಕು ಎನ್ನುವಷ್ಟರಲ್ಲಿ ತಪ್ಪೆಲ್ಲ ಕೀರ್ತಿಯ ಕಡೆಗೆ ತಿರುಗುವಂತೆ ಮಾಡಿದ್ದಾರೆ ವಕೀಲೆ ಸೌಧಾಮಿನಿ ಅವರು. ಆದರೆ ಲಕ್ಷ್ಮೀ ಎಂಟ್ರಿ ಕಾವೇರಿಗೆ ನಡುಕ ಹುಟ್ಟಿಸಿದೆ.

Colors kannada lakshmibaramma Written Update on December 3rd episode

ಕೀರ್ತಿಯೇ ಕೊಂದಳಾ ಲಕ್ಷ್ಮೀಯನ್ನ?

ಕೋರ್ಟ್‌ನಲ್ಲಿ ಇಬ್ಬರು ವಕೀಲರು ಸಖತ್ತಾಗಿನೇ ವಾದ ಪ್ರತಿವಾದ ಮಂಡಿಸುತ್ತಿದ್ದಾರೆ. ಆದರೆ ಇನ್ನೇನು ಕಾವೇರಿಗೆ ಶಿಕ್ಷೆಯಾಗುವಂತ ಪರಿಸ್ಥಿತಿ ಬಂತು ಎನ್ನುವಷ್ಟರಲ್ಲಿ ಸೌಧಾಮಿನಿಗೆ ಅಸ್ತ್ರವಾಗಿ ಸಿಕ್ಕಿದ್ದೆ ರಾಣಿ ಗೊಂಬೆ. ಆ ಗೊಂಬೆ ಕೀರ್ತಿ ಮನೆಯಲ್ಲಿ ಸಿಕ್ಕಿದ್ದು ಎಂದು ಹೇಳುವ ಮೂಲಕ ಕೊಲೆ ಕೇಸನ್ನ ಕೀರ್ತಿ ಕಡೆಗೆ ತಿರುಗಿಸಿದರು. ವೈಷ್ಣವ್ ಕೂಡ ಲಕ್ಷ್ಮೀಯನ್ನು ಕಳೆದುಕೊಂಡ ನೋವಲ್ಲಿರುವ ಕಾರಣ ಕೀರ್ತಿ ಮೇಲೆ ಅನುಮಾನಿಸಿದ.

ಕಾವೇರಿ ಫುಲ್ ಹ್ಯಾಪಿ ಮೂಡ್

ಯಾವಾಗ ಕೊಲೆ ಆರೋಪ ಕೀರ್ತಿ ಕಡೆಗೆ ವಾಲೀತೋ ಆಗ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದು ಇದೇ ಕಾವೇರಿ. ಕಟಕಟೆಯಲ್ಲಿ ನಿಂತು ಸೊಸೆ ಬಗ್ಗೆ ನಾಟಕ ಶುರು ಮಾಡಿದಳು. ನನ್ನ ಸೊಸೆ ಲಕ್ಷ್ಮೀಯನ್ನ ಅನ್ಯಾಯವಾಗಿ ಸಾಯಿಸಿಬಿಟ್ಟಳು ಎಂದು ಕಣ್ಣೀರು ಹಾಕುವುದಕ್ಕೆ ಶುರು ಮಾಡಿದಳು. ಇತ್ತ ಸುಪ್ರೀತಾಗೆ ಹಾಗೂ ಲಾಯರ್ ಗೆ ಕೊಂಚ ಟೆನ್ಶನ್ ಶುರುವಾಯ್ತು. ಕಡೆಯ ಬಾಣವನ್ನ ಬಿಡುವುದಕ್ಕೆ ರೆಡಿಯಾದರು. ಕಣ್ಣ ಸನ್ನೆಯಲ್ಲಿಯೇ ಲಕ್ಷ್ಮೀಯನ್ನ ಕರೆತರಲು ಹೇಳಿದರು. ಸುಪ್ರೀತಾ ಕೂಡ ಹೋದಳು.

ಲಕ್ಷ್ಮೀಯನ್ನ ಕಂಡು ಮತ್ತೆ ನಾಟಕ

ಕೋರ್ಟ್‌ನಲ್ಲಿ ಕೀರ್ತಿ ವಿರುದ್ಧವಾಗಿದ್ದ ಸಾಕ್ಷಿ ಲಕ್ಷ್ಮೀ ಬಂದ ಮೇಲೆ ಸೈಲೆಂಟ್ ಆಗೋಯ್ತು. ವೈಷ್ಣವ್ ಹಾಗೂ ಮನೆಯವರಿಗೆ ಲಕ್ಷ್ಮೀ ಸತ್ತಿಲ್ಲ ಎಂಬುದೇ ನೆಮ್ಮದಿಯ ನಿಟ್ಟುಸಿರು ಬಿಡುವುದಕ್ಕೆ ಕಾರಣವಾಯ್ತು. ಆದರೆ ಕಾವೇರಿಗೆ ಇವಳೇಗೆ ಬದುಕಿ ಬಂದಳು ಎಂಬ ಪ್ರಶ್ನೆ ಕಾಡುವುದಕ್ಕೆ ಶುರು ಆಯ್ತು. ಆದರೆ ಸುಮ್ಮನೆ ನಿಲ್ಲುವಂತೆ ಇಲ್ಲ ಓಡಿ ಬಂದು ಎಲ್ಲರ ಮುಂದೆ ಮತ್ತೆ ನಾಟಕ ಶುರು ಮಾಡಿದಳು. ಲಕ್ಷ್ಮೀ ನೀನು ಬಂದೇ ಬರ್ತೀಯಾ ಅಂತ ನನ್ನ ಮನಸ್ಸು ಹೇಳ್ತಾ ಇತ್ತು. ನೀನು ಬಂದ್ಯಲ್ಲ, ನನ್ನ ಪುಟ್ಟನ ಪ್ರಾರ್ಥನೆಯೂ ಫಲಿಸಿತು ಎಂದೇ ನಾಟಕ ಶುರು ಮಾಡಿದಳು.

ಕೀರ್ತಿ ಮುಗ್ಧತೆಯೇ ಸುಪ್ರೀತಾಗೆ ಆತಂಕ

ಅತ್ತ ಕಾವೇರಿಯ ತಾಯಿ, ಲಕ್ಷ್ಮೀ ಬಂದಾಯ್ತಲ್ಲ ಇನ್ನು ಕಾವೇರಿಯನ್ನು ಅವಳೇ ಬಿಡಿಸುತ್ತಾಳೆ ಅಂತ ಬೇರೆ ಹೇಳಿದಳು. ಲಕ್ಷ್ಮೀ ವ್ಯಂಗ್ಯವಾಗಿಯೇ ಉತ್ತರ ಕೊಟ್ಟಳು. ಇದೆಲ್ಲ ನೋಡುತ್ತಿದ್ದ ಕೀರ್ತಿ ಓಡಿ ಬಂದು ಲಕ್ಷ್ಮೀಯನ್ನ ತಬ್ಬಿಕೊಂಡಳು. ನಿಮಗೋಸ್ಕರವೇ ನಾನು ಬಂದಿದ್ದು ಎಂದು ಕೀರ್ತಿಗೆ ಲಕ್ಷ್ಮೀ ಹೇಳಿದಾಗ, ತಕ್ಷಣ ಸರಿ ಬಾ ನಾವೂ ಇಲ್ಲಿರೋದು ಬೇಡ. ಇಲ್ಲಿಂದ ಹೋಗೋಣ ಎಂದಳು. ಕೀರ್ತಿಯ ಈ ಮುಗ್ಧತೆಯೇ ಮಾಡಿರುವ ಎಲ್ಲಾ ಪ್ಲ್ಯಾನ್ ಅನ್ನು ಉಲ್ಟಾ ಮಾಡುತ್ತಾ ಎಂಬುದೇ ಎಲ್ಲರಿಗೂ ಇರುವ ಅನುಮಾನವಾಗಿದೆ.

More from Filmibeat

English summary
Colors kannada lakshmibaramma Written Update on December 3rd episode. Here is the details about Will Supreeta's plan fail brcause of keerthi?
Read more about: sumanth tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X