Lakshmibaramma: ವೈಷ್ಣವ್‌ಗೆ ಕಾವೇರಿ ಇನ್ನು ಅದೆಷ್ಟು ಮದುವೆ ಮಾಡ್ತಾಳೆ? ಬರ್ತಿರೋ ಕಮೆಂಟ್ಸ್ ಮಾತ್ರ ಬೆಂಕಿ!
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ತಾನೇ, ತನ್ನದೆ ಎಂದುಕೊಂಡಿದ್ದ ಕಾವೇರಿಯನ್ನ ಮಾಸ್ಟರ್ ಪ್ಲ್ಯಾನ್ ಮಾಡಿ ಲಕ್ಷ್ಮೀ ಜೈಲಿಗೇನೋ ಕಳುಹಿಸಿದಳು. ಆದರೆ ಕಾವೇರಿ ಅದಕ್ಕಿಂತ ಮಾಸ್ಟರ್ ಪ್ಲ್ಯಾನ್ ಮಾಡುವವಳಲ್ಲವೇ.
ಮೊದಲಿನಿಂದ ತನ್ನ ಸ್ವಾರ್ಥಕ್ಕಾಗಿಯೇ ಬದುಕುವ ಕಾವೇರಿ ಯಾರ ಜೀವನ ಹಾಳಾದ್ರೂ ಚಿಂತೆ ಮಾಡಲ್ಲ, ಯಾರ ಪ್ರಾಣ ಹೋದರು ತಲೆ ಕೆಡಿಸಿಕೊಳ್ಳಲ್ಲ. ತನ್ನ ಸ್ವಾರ್ಥಕ್ಕಾಗಿ ಮಗನ ಜೀವನವನ್ನೇ ಬಲಿಕೊಟ್ಟವಳು.

ಕೆಲವೊಮ್ಮೆ ಸಿನಿಮಾ, ಧಾರಾವಾಹಿಗಳು ಹೊರಗಿನ ಜನರ ಮೇಲೂ ಪರಿಣಾಮ ಬೀರುತ್ತವೆ. ಒಮ್ಮೊಮ್ಮೆ ನಿಜ ಕಥೆಗಳೇ ಪಾತ್ರವಾಗಿ ರೂಪುಗೊಳ್ಳುತ್ತವೆ ಕೂಡ. ಹೀಗಾಗಿಯೇ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕಾವೇರಿ ಪಾತ್ರವನ್ನು ಹೊರಗಿನ ಹೆಣ್ಣು ಮಕ್ಕಳು ದ್ವೇಷ ಮಾಡ್ತಾರೆ. ಇಂಥೊಬ್ಬ ಅತ್ತೆ ಇದ್ದು ಬಿಟ್ಟರೆ ಮಗನೂ ಹಾಳಾದ, ಸೊಸೆಯೂ ಬದುಕಲಾರಳು. ಅಂಥ ಕೆಟ್ಟ ಚಟ ಇವಳದ್ದು.
ಮಗ-ಸೊಸೆ ದೂರ ಮಾಡಿದ ಕಾವೇರಿ
ಕಾವೇರಿಯ ಪ್ಲ್ಯಾನ್ ಕೊನೆಗೂ ಸಕ್ಸಸ್ ಆಗಿದೆ. ಮಗನಿಂದ ಲಕ್ಷ್ಮೀಯನ್ನು ದೂರ ಮಾಡಬೇಕೆಂದುಕೊಂಡಿದ್ದ ಕೆಲಸ ಕಡೆಗೂ ಆಗಿದೆ. ಕೋರ್ಟ್ ನಲ್ಲಿ ಲಕ್ಷ್ಮೀ ಮಾಡಿದ್ದು ನಾಟಕ, ಕಾವೇರಿ ಮುಗ್ಧಳು ಎಂದು ಪ್ರೂವ್ ಆದ ಮೇಲೆ ವೈಷ್ಣವ್, ಲಕ್ಷ್ಮೀಯಿಂದ ಅಂತರವನ್ನು ಕಾಯ್ದುಕೊಂಡಿದ್ದಾನೆ. ಮತ್ತೆ ಪ್ರೇಮಿಗಳನ್ನ ದೂರ ಮಾಡುವಲ್ಲಿ ಕಾವೇರಿಯೇ ಗೆದ್ದಿದ್ದಾಳೆ.
ಪ್ರೀತಿ ಇದ್ರು ಸ್ವಾಭಿಮಾನ ಅಡ್ಡಿ
ವೈಷ್ಣವ್‌ಗೂ ಮಹಾಲಕ್ಷ್ಮಿ ಎಂದರೆ ಈಗಲೂ ಬಿಟ್ಟಿರಲಾರದಷ್ಟು ಪ್ರೀತಿ. ಲಕ್ಷ್ಮೀ ಕೂಡ ಕ್ಷಮೆ ಕೇಳುವುದಕ್ಕೆ ರೆಡಿ ಇದ್ದಾಳೆ. ಆದರೆ ವೈಷ್ಣವ್ ಸ್ವಾಭಿಮಾನ ಅಡ್ಡ ಬರುತ್ತಿದೆ. ಕೀರ್ತಿ ಹಾಗೂ ಅಂಕಿತ್ ಮಾಡಿದ್ದ ಪ್ಲ್ಯಾನ್ ಕೂಡ ಲಕ್ಷ್ಮೀ ಮತ್ತು ವೈಷ್ಣವ್‌ನ ಒಂದು ಮಾಡುವುದಕ್ಕೆ ಆಗಲಿಲ್ಲ. ಜಗಳ, ಕೋಪ, ಅಹಂ ಬಿಟ್ಟು ಒಂದಾಗಬೇಕಿದ್ದ ಪ್ರೀತಿ ಮತ್ತೆ ದೂರ ದೂರವೇ ಆಗಿದೆ.
ವೈಷ್ಣವ್ ಮತ್ತೆ ಹೊಸ ನಿರ್ಧಾರ
ಕಾವೇರಿ ಮಾತ್ರ ತನ್ನ ಕೆಟ್ಟ ಚಾಳಿಯನ್ನ ಬಿಡ್ತಾ ಇಲ್ಲ. ಲಕ್ಷ್ಮೀಗೆ ಅನ್ಯಾಯ ಮಾಡುವ ಮಾತಾಡಿದ್ದಕ್ಕೇನೆ ದೇವಿಯೇ ಶಿಕ್ಷೆ ಕೊಟ್ಟಳು. ಆದರೂ ಕಾವೇರಿಗೆ ಅದ್ಯಾವುದು ನಾಟಲೇ ಇಲ್ಲ. ಸುಪ್ರೀತಾ ಎಚ್ಚರಿಕೆ ನೀಡಿದರು ಕರ್ಮದ ಬಗ್ಗೆ ಎಚ್ಚರಗೊಳ್ಳುತ್ತಿಲ್ಲ. ಈಗ ಮಗನ ಬಗ್ಗೆ ತೆಗೆದುಕೊಂಡ ದಿಟ್ಟ ನಿರ್ಧಾರ ಕೇಳಿ ಒಂದು ಕ್ಷಣ ಮನೆಯವರೇ ಶಾಕ್ ಆಗಿದ್ದಾರೆ. 'ಪುಟ್ಟ ಒಂಟಿಯಾಗಿರುವುದನ್ನ ನೋಡುವುದಕ್ಕೆ ಆಗ್ತಿಲ್ಲ. ನನಗೂ ಸೊಸೆ ಬೇಕು ಅನ್ನಿಸ್ತಾ ಇದೆ. ಅದಕ್ಕೆ ಪುಟ್ಟನಿಗೆ ಇನ್ನೊಂದು ಮದುವೆ ಮಾಡಬೇಕು ಎಂದುಕೊಂಡಿದ್ದೇನೆ' ಎಂದಿದ್ದಾಳೆ.
ವೀಕ್ಷಕರಿಂದ ಪ್ರಶ್ನೆಗಳ ಸುರಿಮಳೆ!
ಈ ಮಾತನ್ನು ಕೇಳಿದ ವೀಕ್ಷಕರು ನಾವೇ ಧನ್ಯರು ಎನ್ನುತ್ತಿದ್ದಾರೆ. ಮದುವೆ ಅನ್ನೋದು ಕಾವೇರಿ ವಿಚಾರಕ್ಕೆ ಯಾಕೋ ಈ ಸ್ಕೂಲ್ ದರಿ ಇಲ್ಲ, ಯಾಕೋ ಈ ಜಾಬ್ ಮ್ಯಾಚ್ ಆಗ್ತಿಲ್ಲ, ಯಾಕೋ ಡ್ರೆಸ್ ಚೆನ್ನಾಗಿಲ್ಲ ಬದಲಾಯಿಸೋಣ ಎನ್ನುವಷ್ಟು ಈಸಿಯಾಗಿ ತೆಗೆದುಕೊಂಡಿದ್ದಾಳೆ ಎನ್ನಿಸುತ್ತಿದೆ. ವೀಕ್ಷಕರಂತು ಸಿಕ್ಕಾಪಟ್ಟೆ ಫನ್ನಿ ಕಮೆಂಟ್‌ಗಳನ್ನೇ ಹಾಕಿದ್ದಾರೆ. ಹಾಗಾದ್ರೆ ಮೂರನೇ ಮದುವೆಯೂ ಕಾವೇರಿಗೆ ಒಂದಾಣಿಕೆಯಾಗಲಿಲ್ಲ ಅಂದ್ರೆ ಅವಳನ್ನು ಕಳುಹಿಸಿ ವೈಷ್ಣವ್ ಗೆ ನಾಲ್ಕನೇ ಮದುವೆ ಮಾಡ್ತೀರಾ. ವೈಷ್ಣವ್ ಗಲ್ಲ ಕಾವೇರಿಗೆ ಬಂದವಳು ಹೊಂದಿಕೊಳ್ಳದೇ ಹೋದರೆ ಪದೇ ಪದೇ ಚೆಂಜ್ ಮಾಡ್ತಾ ಇರ್ತೀರಾ ಎಂದಿದ್ದಾರೆ.


Click it and Unblock the Notifications











