Lakshmibaramma: ಕೀರ್ತಿಯ ದಡ್ಡತನ.. ಕಾವೇರಿ ಬಲೆಗೆ ಬಿದ್ರು ಸುಪ್ರೀತಾ, ಲಕ್ಷ್ಮೀ!
ಪಾಪಿ ಚಿರಾಯು ಎಂಬ ಮಾತಿದೆ. ಕಾವೇರಿ ಅದಕ್ಕೆ ತಕ್ಕವಳಾಗಿದ್ದಳು. ಏನೇ ತಪ್ಪು ಮಾಡಿದರು ಕ್ಷಣ ಮಾತ್ರದಲ್ಲಿ ಬಚಾವ್ ಆಗುತ್ತಿದ್ದಳು. ಇದರಿಂದ ಲಕ್ಷ್ಮೀ ಸಂಕಷ್ಟಕ್ಕೆ ಸಿಲುಕುತ್ತಿದ್ದಳು. ಎಲ್ಲಾ ಸತ್ಯ ಗೊತ್ತಿದ್ದರು ಲಕ್ಷ್ಮೀಗೆ ಏನು ಮಾಡಲು ಆಗದ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಳು. ತಪ್ಪೆಲ್ಲ ಲಕ್ಷ್ಮೀಯದ್ದೇ ಎಂಬಂತೆ. ಕಾವೇರಿ ತನಗೆ ಹೇಗೆ ಬೇಕೋ ಆ ರೀತಿಯ ಬದುಕನ್ನೇ ಬದುಕಿದವಳು. ಅದಕ್ಕಾಗಿಮಗನ ಜೀವನವೇ ಹಾಳಾದರೂ ಚಿಂತೆ ಇರಲಿಲ್ಲ.
ಕಾವೇರಿಯಿಂದ ಹಾಳಾದದ್ದು ಕೀರ್ತಿ, ವೈಷ್ಣವ್, ಲಕ್ಷ್ಮೀ ಜೀವನ. ಆದರೂ ಒಂಚೂರು ಬೇಸರ ಅವಳಲ್ಲಿ ಇರಲಿಲ್ಲ. ಕೀರ್ತಿ ಸಾವಿನಿಂದ ಬಚಾವ್ ಆಗಿ ಹೊಸ ಬದುಕು ಶುರು ಮಾಡಿದ್ದಾಳೆ. ಕಡೆಗೂ ಎಲ್ಲಾ ಸಾಹಸಗಳನ್ನು ಪಟ್ಟು ಕಾವೇರಿಗೆ ಶಿಕ್ಷೆಯಾಗುವಂತೆ ಮಾಡಿಸಿದ್ದರು. ಆದ್ರೀಗ ಮತ್ತೆ ಎಲ್ಲಾ ಉಲ್ಟಾ ಆಗುವಂತೆ ಕಾಣಿಸುತ್ತಿದೆ.

ಸಾಧಿಸಿದ ಖುಷಿಯಲ್ಲಿ ಕಾವೇರಿ
ಕಾವೇರಿ ಜೈಲಿನಲ್ಲಿದ್ದುಕೊಂಡೇ ಹೊರಗಿನ ಎಲ್ಲಾ ವಿಚಾರಗಳನ್ನು ಕಲೆ ಹಾಕುತ್ತಿದ್ದಾಳೆ. ಮನೆಯಲ್ಲಿ ಏನೆಲ್ಲಾ ನಡೆಯುತ್ತಾ ಇದೆ ಎಂಬುದನ್ನಿ ತಿಳಿದುಕೊಳ್ಳುವುದಕ್ಕೆ ಚಿಂಗಾರಿಯನ್ನ ಬಿಟ್ಟಿದ್ದಾಳೆ. ಅವಳಿಂದಾನೇ ಕೀರ್ತಿ ಪೆದ್ದು ಪೆದ್ದು ಥರ ಆಡ್ತಾ ಇರೋದು, ಸುಪ್ರೀತಾ ಹಾಗೂ ಲಕ್ಷ್ಮೀ ಏನನ್ನೋ ಮುಚ್ಚಿಡ್ತಾ ಇರೋದು ತಿಳಿದುಕೊಂಡಿದ್ದಾಳೆ. ಇದು ಕಾವೇರಿಗೆ ಪ್ಲಸ್ ಪಾಯಿಂಟ್ ಆಗಿದ್ದು, ಇದೀಗ ಕೀರ್ತಿಯಿಂದ ಸತ್ಯವನ್ನ ಹೊರಗೆ ತಂದಿದ್ದಾಳೆ.
ಲಕ್ಷ್ಮೀ ಮನೆಗೆ ಬಂದ ಲಾಯರ್
ಕಾವೇರಿ ಕೈಗೆ ಸಾಕ್ಷಿಗಳು ಸಿಕ್ಕ ಕೂಡಲೇ ಕೇಸನ್ನ ರೀಓಪನ್ ಮಾಡಿಸಿದ್ದಾಳೆ. ಇದನ್ನ ತಿಳಿದ ಲಾಯರ್ ಗೆ ಅನುಮಾನ ಮೂಡಿದೆ. ತಕ್ಷಣ ಲಕ್ಷ್ಮೀ ಮನೆಗೆ ಲಾಯರ್ ಓಡೋಡಿ ಬಂದಿದ್ದಾರೆ. ಆದರೆ ಏನಾಗಿದೆ ಅನ್ನೋದು ಯಾರಿಗೂ ಅರ್ಥವೇ ಆಗುತ್ತಿಲ್ಲ. ಕಾವೇರಿ ಕೈಗೆ ಏನೋ ಸಾಕ್ಷಿ ಸಿಕ್ಕಿರೋ ಅನುಮಾನದ ವಾಸನೆ ಹೊಡೆಯುತ್ತಿದೆ. ಅತ್ತ ಕಾರುಣ್ಯಗೂ ಏನು ನೆನಪಾಗುತ್ತಿಲ್ಲ. ಹೆಚ್ಚು ಆತಂಕದಲ್ಲಿರೋದೇ ಸುಪ್ರೀತಾ ಹಾಗೂ ಲಕ್ಷ್ಮೀ. ಕಾವೇರಿ ಈಗ ಕೇಸ್ ರೀ ಓಪನ್ ಮಾಡಿಸಿರುವುದಕ್ಕೆ ಏನೋ ಬಲವಾದ ಕಾರಣವಿದೆ ಅಂತಾನೇ ಅನ್ನಿಸಿದೆ. ಅದಕ್ಕೆ ಕೀರ್ತೀ ಮೇಲೆ ಸುಪ್ರೀತಾ ರೇಗಾಡಿದ್ದಾಳೆ.
ಕಾವೇರಿ ಬಲೆಯಲ್ಲಿ ಸಿಕ್ಕ ಕೀರ್ತಿ
ಕೀರ್ತಿಗೆ ಆಗಾಗ ನೆನಪಿನ ಶಕ್ತಿ ಬರುತ್ತದೆ. ಮತ್ತೆ ಪೆದ್ದು ಪೆದ್ದು ಥರ ಆಡುತ್ತಾಳೆ. ಆದರೆ ಇದನ್ನ ಸುಪ್ರೀತಾ ನಂಬುತ್ತಿಲ್ಲ. ಈಗ ಕೀರ್ತಿ ಕೂಡ ಎಲ್ಲದನ್ನು ಲಕ್ಷ್ಮೀಯೇ ನಿಂತು ಮಾಡಿಸಿರುವುದು ಎಂದು ಇಂಟರ್ ವ್ಯೂ ಬೇರೆ ಕೊಟ್ಟಿದ್ದಾಳೆ. ಅದು ಟಿವಿಯಲ್ಲಿ ಬರುತ್ತೆ ಅಂತ ಬೇರೆ ಕಾಯುತ್ತಾ ಕೂತಿದ್ದಾಳೆ. ಅತ್ತ ಕಡೆ ಕಾವೇರಿ ಫುಲ್ ಖುಷಿಯಾಗಿದ್ದಾಳೆ. ಲಕ್ಷ್ಮೀ ಇನ್ಮೇಲೆ ನಿನ್ನ ಆಟ ಮುಗೀತು ಅಂತ ಬೀಗುತ್ತಿದ್ದಾಳೆ.
ಸುಪ್ರೀತಾ - ಲಕ್ಷ್ಮೀ ಸಿಕ್ಕಿ ಬೀಳ್ತಾರಾ?
ಕಾವೇರಿ ಎಂಥಾ ಕ್ರಿಮಿನಲ್ ಅನ್ನೋದು ಲಕ್ಷ್ಮೀ ಹಾಗೂ ಸುಪ್ರೀತಾಗೆ ಗೊತ್ತಿದ್ದರು ಅರೆ ಕ್ಷಣದಲ್ಲಿ ಯಾಮಾರಿದ್ದಾರೆ. ಕಾರುಣ್ಯಳನ್ನು ಜ್ಞಾನ ತಪ್ಪಿಸಿ, ಕಾವೇರಿ ಕಡೆಯವರು ತಮಗೆ ಬೇಕಾದದ್ದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಹೋಗಿದ್ದಾರೆ. ಲಕ್ಷ್ಮೀ ಸಮಾಧಾನವಾಗಿ ಕೇಳಿದಾಗಲೇ ಯಾರಿಗೋ ತಾನೂ ಇಂಟರ್ ವ್ಯೂ ಕೊಟ್ಟಿದ್ದೀನಿ. ಅದು ಟಿವಿಯಲ್ಲಿ ಬರುತ್ತೆ ಅಂತ ಕೀರ್ತಿ ಹೇಳಿದ್ದು. ಈಗ ಲಾಯರ್, ಲಕ್ಷ್ಮೀ, ಸುಪ್ರೀತಾ ಮೂವರು ಹೆದರಿದ್ದಾರೆ. ಕೇಸ್ ಉಲ್ಟಾ ಆದರೆ, ಇದೆಲ್ಲ ನಾಟಕ ಎಂದಾದರೇ ಲಕ್ಷ್ಮೀ, ಸುಪ್ರೀತಾಗೆ ಶಿಕ್ಷೆಯಾಗಬಹುದು.


Click it and Unblock the Notifications











