Lakshmibaramma: ಪಾರ್ಥ-ಸೌಧಾಮಿನಿ ಜಿದ್ದಾ-ಜಿದ್ದಿ; ಕೀರ್ತಿ ವಿಚಾರದಲ್ಲಿ ಎಡವಿದ ಡೈರೆಕ್ಟರ್!
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕೋರ್ಟ್ ಸೀನ್ ಬಹಳ ಇಂಟ್ರೆಸ್ಟಿಂಗ್ ಆಗಿರುತ್ತದೆ. ಕಾವೇರಿ ಪರ ಹಿರಿಯ ವಕೀಲೆ ಸೌಧಾಮಿನಿ, ಲಕ್ಷ್ಮೀ ಪರ ಕ್ರಿಮಿನಲ್ ಲಾಯರ್ ಪಾರ್ಥ ನಿಂತಿದ್ದಾರೆ. ಇಬ್ಬರ ವಾದ - ಪ್ರತಿವಾದ ಕೇಳ್ತಾ ಇದ್ರೆ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಕೋರ್ಟ್‌ಗಳಲ್ಲಿ ಕೇಸ್ ನಡೆಯುವುದನ್ನು ನೋಡುವುದಕ್ಕೇನೆ ಚೆಂದ. ರಿಯಲ್ ಆಗಿ ಹೇಗೆ ನಡೆಯುತ್ತೆ ಎಂಬುದು ಗೊತ್ತಿರಲ್ಲ. ಆದರೆ ಹೀಗೆ ಸೀರಿಯಲ್‌ನಲ್ಲಿ ಕಾಮಿಡಿ ಪಂಚ್ ಕೊಡ್ತಾ ವಾದ ನಡೆಸಿದರೆ ಮಜಾ ಬರುವಂತಿರುತ್ತದೆ.
ಕೀರ್ತಿ ಹಾಗೂ ಲಕ್ಷ್ಮೀಯನ್ನು ಕೊಲ್ಲಲು ಹೊರಟಿದ್ದ ಕಾವೇರಿ ಜೈಲು ಪಾಲಾಗಿದ್ದಾಳೆ. ಆದರೆ ಕ್ರಿಮಿನಲ್ ಬುದ್ದಿ ಇರುವ ಕಾವೇರಿ ಸುಮ್ಮನೇ ಕೂರುವುದಕ್ಕೆ ಸಾಧ್ಯವಾ..? ಅಲ್ಲಿಂದಾನೇ ತನ್ನ ಬುದ್ದಿ ಉಪಯೋಗಿಸಿ, ಕೀರ್ತಿಯನ್ನು ಲಾಕ್ ಮಾಡಿದ್ದಾಳೆ. ಈಗ ಕೇಸ್ ರೀಓಪನ್ ಮಾಡಿಸಿದ್ದು, ಮತ್ತೆ ಕೋರ್ಟ್ ಕಟಕಟೆಯಲ್ಲಿ ಮನರಂಜನೆ ಶುರುವಾಗಿದೆ.

ಹಣದ ವಿಚಾರದಲ್ಲಿ ಲಾಕ್
ಆರಂಭದಲ್ಲಿಯೇ ಶುರುವಾದ ಕೇಸ್ ವಾದ, ಗಿರಿಜಾಗೆ ಟ್ರಾನ್ಸಫರ್ ಆದ ಹಣದ ವಿಚಾರಕ್ಕೆ ತಿರುಗಿತ್ತು. ಲಕ್ಷ್ಮೀ ಯಾಕೆ ಗಿರಿಜಾಗೆ ಹಣ ಕೊಡಬೇಕಿತ್ತು ಎಂದು ಸೌಧಾಮಿನಿ ಪ್ರಶ್ನೆ ಮಾಡಿದಾಗ ಕಾವೇರಿ ಫುಲ್ ಖುಷಿಯಾದಳು. ಈ ಬಾರಿ ಸಿಕ್ಕಿ ಬೀಳ್ತೀಯಾ ಲಕ್ಷ್ಮೀ ಎಂದು ಸಂಭ್ರಮ ಪಟ್ಟಳು. ಲಕ್ಷ್ಮೀಯೂ ಕೊಂಚ ಗಾಬರಿಯಾದಳು.
ಪಾರ್ಥನ ಮುಂದೆ ಸೌಧಾಮಿನಿ ಠುಸ್
ಸೈಲೆಂಟ್ ಆಗಿನೇ ನೋಡ್ತಿದ್ದ ಪಾರ್ಥ, ಇದನ್ನ ಸಾಲ್ವ್ ಮಾಡುವ ದಾರಿ ಕಂಡು ಹಿಡಿದರು. ತಕ್ಷಣವೇ ಗಿರಿಜಾಳಿಗೆ ತಾನೂ ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದರು. ಆಗ ಗಿರಿಜಾ, ತನಗಿದ್ದ ಕಷ್ಟ ಹಾಗೂ ಮಗಳಿಗೆ ಶಾಲೆಗೆ ಫೀಸ್ ಕಟ್ಟಲು ಹಣವಿರಲಿಲ್ಲ. ಅದಕ್ಕೆ ಲಕ್ಷ್ಮೀ ಬಳಿ ಕೇಳಿದ್ದೆ, ಅವರು ಸಹಾಯ ಮಾಡಿದರು ಎಂದರು. ಬಳಿಕ ಕಾವೇರಿ ಅಕೌಂಟ್ ನಂಬರ್ ಹಿಡಿದು ಆ ಟಾಪಿಕ್ ಅನ್ನು ಉಲ್ಟಾ ಪಲ್ಟಾ ಮಾಡಿದರು. ಜೊತೆಗೆ ಜಡ್ಜ್ ಅವರನ್ನು ನಕ್ಕಿ ನಲಿಸಿದರು.
ಕೀರ್ತಿ ವಿಚಾರದಲ್ಲಿ ಗೆಲುವು?
ಅಕೌಂಟ್, ಹಣ ಅದನ್ನ ಹೇಗೋ ತಿರುಗಿಸಿದರು. ಆದರೆ ನಿರೀಕ್ಷೆಯೇ ಮಾಡದಂತ ಸಾಕ್ಷಿಯನ್ನ ಸೌಧಾಮಿನಿ ಕರೆದಿದ್ದರು. ಕೀರ್ತಿ ಈ ಕೇಸಲ್ಲಿ ಬಹಳ ಮುಖ್ಯ. ಹೀಗಾಗಿ ಅವರನ್ನ ಕರೆಸಬೇಕು ಎಂದು ಕೇಳಿದರು. ಅಲ್ಲಿ ಪಾರ್ಥ ಸಾರಥಿ ಹಾಗೂ ಲಕ್ಷ್ಮೀ, ಸುಪ್ರೀತಾಗೆ ಸಿಕ್ಕಾಪಟ್ಟೆ ಭಯ ಆಯ್ತು. ಯಾಕಂದ್ರೆ ಕೀರ್ತಿ ಈಗಾಗಲೇ ಸಂದರ್ಶನದಲ್ಲಿ ಏನನ್ನ ಹೇಳಿದ್ದಾರೆ ಅನ್ನೋದೆ ಗೊತ್ತಿಲ್ಲ. ಇಂಟರ್‌ವ್ಯೂ ಆದ ಮೇಲೆಯೇ ಕಾವೇರಿ ಕೇಸ್ ರೀ ಓಪನ್ ಮಾಡಿಸಿದ್ದಾರೆ. ಚಿಂಗಾರಿ ಬಳಿ ಆ ವಿಡಿಯೋ ಇದೆ. ಚಿಂಗಾರಿಯ ಮೊಬೈಲ್ ಬರಿ ಕಾಣಿಸ್ತಾ ಇಲ್ಲ. ಆ ವಿಡಿಯೋವನ್ನು ಚಿಂಗಾರಿ ಸರೊಯಾದ ಸಮಯಕ್ಕೆ ಕೋರ್ಟ್ ತರ್ತಾರಾ ನೋಡಬೇಕಿದೆ.
ಕೀರ್ತಿ ಬಗ್ಗೆ ಬಂದಿದೆ ಭಯ
ಇನ್ನು ಸೌಧಾಮಿನಿ, ಕೀರ್ತಿಯನ್ನ ಸಾಕ್ಷಿಯಾಗಿ ಕರೆಸಿ ಎಂದಾಗ ಪಾರ್ಥ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ನ್ಯಾಯಾಧೀಶರು ಅದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಹೊರಗೆ ಹೋಗಿ ಕೀರ್ತಿ ಯಾರೂ ಎನ್ನುತ್ತಿದ್ದಂತೆ ನಾನೇ ಎಂದು ಓಡಿ ಬಂದಿದ್ದಾಳೆ. ಮನೆಗೆ ಕಳುಹಿಸುವುದಕ್ಕೆ ಸುಪ್ರೀತಾ ಸಾಕಷ್ಟು ಪ್ರಯತ್ನ ಪಟ್ಟರು ಆಗಲಿಲ್ಲ. ಈಗೇನು ಕೀರ್ತಿ ಪಾತ್ರ ಮಾಡಬೇಕಾ ಎಂದೇ ಓಡಿ ಬಂದಿದ್ದಾಳೆ. ಲಕ್ಷ್ಮೀ ಹೇಳಿಕೊಟ್ಟಿದ್ದೆಲ್ಲವು ಕೀರ್ತಿಗೆ ನೆನಪಿದ್ದು, ಕೀರ್ತಿಯಂತೆ ವರ್ತಿಸಿದರೆ ಲಕ್ಷ್ಮೀ ಬಚಾವ್ ಆಗ್ತಾಳೆ. ಇಲ್ಲವಾದರೆ ಮತ್ತೆ ಕಾವೇರಿಯ ಬಲೆಗೆ ಸಿಲುಕಿ ನಲುಗುತ್ತಾಳೆ.


Click it and Unblock the Notifications











