Lakshmibaramma: ಡೈರೆಕ್ಟ್ರೇ ಲಕ್ಷ್ಮೀ ಅಡ್ಮಿಟ್ ಆಗಿದ್ದ ಆಸ್ಪತ್ರೆ ಯಾವ್ದು? ಅಡ್ರೆಸ್ ಕೊಟ್ರೆ ಇವರೆಲ್ಲ ಹೋಗ್ತಾರಂತೆ!
ಪಾಪದ ಕೊಡ ತುಂಬಿದಾಗ ಯಾರಿಂದಲೂ ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಮಾಡಿದ ಪಾಪಕ್ಕೆ ಶಿಕ್ಷೆ ಖಂಡಿತ ಸಿಗುತ್ತೆ. ಕಾವೇರಿಯದ್ದು ಅದೇ ಗ್ರಹಚಾರ ಈಗ ಕೆಟ್ಟಿದೆ. ಮಂಕು ಬೂದಿ ಎರಚಿ ಕೀರ್ತಿಯನ್ನ ಮಂಕು ಮಾಡುತ್ತಿದ್ದಳು. ಆದರೆ ಈಗ ಆ ಕೀರ್ತಿಯೇ ಕಾಳಿಯಾಗಿದ್ದಾಳೆ. ಕಾವೇರಿ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದ್ದಾಳೆ. ದೇವರಿಂದಾನೂ ಆಶೀರ್ವಾದ ಸಿಕ್ಕಿದೆ. ಇನ್ಮೇಲೆ ಏನಿದ್ದರು ಕೀರ್ತಿ ಸೇಡಿನಲ್ಲಿ ಪತಾಕೆ ಹಾರಿಸೋದೆ.
ಲಕ್ಷ್ಮೀಗೆ ಚಾಕು ಚುಚ್ಚಿದ್ದು ಕಾವೇರಿಗೆ ಇನ್ನಿಲ್ಲದಂತ ಸಂತೋಷ ಆಗಿದೆ. ಲಕ್ಷ್ಮೀ ಸತ್ತೆ ಹೋಗಿದ್ದರೆ ಇನ್ನಷ್ಟು ಖುಷಿ ಪಡ್ತಾ ಇದ್ಲು. ಆದರೆ ಅದೃಷ್ಟವಶಾತ್ ಕಾವೇರಿ ಖುಷಿ ಪಡುವಂತ ಘಟನೆ ನಡೆದಿಲ್ಲ. ಲಕ್ಷ್ಮೀ ಬದುಕಿದ್ದಾಳೆ. ವೈಷ್ಣವ್ ಮಾಡಿದ ವ್ರತದ ಫಲ ಸಿಕ್ಕಿದೆ. ಈಗ ಕಾವೇರಿಗೆ ನಡುಕ ಉಂಟಾಗಿದೆ.

ಕೊನೆಗೂ ಕಣ್ಣು ಬಿಟ್ಟ ಲಕ್ಷ್ಮೀ
ಕೀರ್ತಿ-ಲಕ್ಷ್ಮೀಗೆ ಚಾಕು ಚುಚ್ಚಿದ್ದರ ಪರಿಣಾಮ ಕಳೆದ ಎರಡ್ಮೂರು ವಾರಗಳಿಂದ ಲಕ್ಷ್ಮೀ ಕೋಮಾಗೆ ಹೋಗಿದ್ದಳು. ಪಾಪ ವೈಷ್ಣವ್, ಲಕ್ಷ್ಮೀಗಾಗಿ ಕಠಿಣ ವ್ರತವನ್ನೆಲ್ಲಾ ಮಾಡಿದ. ಈಗ ಆ ವ್ರತಕ್ಕೆ ಫಲ ಸಿಕ್ಕಿದೆ. ಲಕ್ಷ್ಮೀ ಕಣ್ಣು ಬಿಟ್ಟಿದ್ದಾಳೆ. ಲಕ್ಷ್ಮೀ ಕಣ್ಣು ಬಿಡುತ್ತಿದ್ದಂತೆ ವೈಷ್ಣವ್ ಗೆ ಸಮಾಧಾನವಾಗಿದೆ. ಆಕ್ಸಿಜನ್‌ನಲ್ಲಿಯೇ ಉಸಿರಾಡುತ್ತಿದ್ದ ಲಕ್ಷ್ಮೀ ಈಗ ಎಚ್ಚರಗೊಂಡಿದ್ದಾಳೆ.
ಮನೆಯವರಿಗೆಲ್ಲಾ ಖುಷಿಯೋ ಖುಷಿ
ಲಕ್ಷ್ಮೀ ಎಚ್ಚರವಾಗುತ್ತಿದ್ದಂತೆ ಮನೆಯವರಿಗೆಲ್ಲಾ ತುಂಬಾನೇ ಖುಷಿಯಾಗಿದೆ. ಅದರಲ್ಲೂ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿರುವ, ಕಾಳಜಿ ಮಾಡುವ ವೈಷ್ಣವ್ ಆಕಾಶವೇ ಸಿಕ್ಕಿದಂತೆ ಕುಣಿದಾಡುತ್ತಿದ್ದಾನೆ. ಲಕ್ಷ್ಮೀ ಕಣ್ಣು ಬಿಡಲೆಂದು ಮಾಡಿದ ಪ್ರಯತ್ನಗಳು ಒಂದೆರಡಲ್ಲ. ಜೊತೆಗೆ ಇನ್ಯಾವತ್ತು ನಮ್ಮಿಬ್ಬರ ನಡುವೆ ಕೀರ್ತಿ ಬರಲ್ಲ ಅಂತಾನೇ ಮಾತು ಕೊಟ್ಟಿದ್ದಾನೆ. ಲಕ್ಷ್ಮೀಯನ್ನ ಮನಸ್ಸಾರೆ ಪ್ರೀತಿ ಮಾಡುತ್ತಿದ್ದಾನೆ. ಲಕ್ಷ್ಮೀಗೆ ಏನಾದರೂ ಹೆಚ್ಚು ಕಡಿಮೆಯಾದರೆ ನಾನು ಬದುಕಿರುವುದೇ ಇಲ್ಲ ಎಂದು ಹೇಳಿದ್ದ. ಆದರೆ ದೇವರು ಲಕ್ಷ್ಮೀಯನ್ನು ಉಳಿಸಿಕೊಟ್ಟಿದ್ದಾನೆ. ಮನೆಯವರೆಲ್ಲಾ ಖುಷಿಯಾಗಿರುವಾಗ ಕಾವೇರಿಗೆ ಮಾತ್ರ ನಡುಕ ಶುರುವಾಗಿತ್ತು. ಕೃಷ್ಣ ಅದನ್ನ ಗಮನಿಸಿದ್ದ. ಯಾಕಿಷ್ಟು ಬೆವರುತ್ತಾ ಇದ್ದೀಯಾ ಅಂತ ಕೇಳಿದ್ದ.

ದೇವರ ಸನ್ನಿಧಿಯಲ್ಲಿರುವ ಕೀರ್ತಿ
ನಿಧಾನಕ್ಕೆ ಚೇತರಿಸಿಕೊಂಡ ಲಕ್ಷ್ಮೀಗೆ ಕೀರ್ತಿಯ ನೆನಪಾಗಿದೆ. ಅಂದು ಕೀರ್ತಿ ಏನಾದಳು ಎಂಬುದು ಗೊತ್ತಿಲ್ಲ. ಲಕ್ಷ್ಮೀಗೆ ಕೀರ್ತಿ ಹೇಳಿದ ಮಾತಿನ ಮೇಲೆ ನಂಬಿಕೆ ಬಂದಂತೆ ಇದೆ. ಹಾಗಾಗಿಯೇ ಕೀರ್ತಿಯನ್ನು ಕೇಳಿದ್ದಾಳೆ. ಆದರೆ ಮನೆಯಲ್ಲಿ ಯಾರೂ ಕೂಡ ಕೀರ್ತಿಯ ಬಗ್ಗೆ ಮಾತನಾಡುವುದಕ್ಕೆ ಇಷ್ಟಪಡಲಿಲ್ಲ. ಅತ್ತ ಕೀರ್ತಿ ಮೋಸ ಹೋಗಿದ್ದು, ಪ್ರೀತಿ ಕಳೆದುಕೊಂಡಿದ್ದೆಲ್ಲವನ್ನು ಅರಗಿಸಿಕೊಳ್ಳಲಾಗದೆ ದೇವರ ಸನ್ನಿಧಿಯಲ್ಲಿ ಕಾಳಿ ರೂಪ ತೆಗೆದುಕೊಂಡಿದ್ದಾಳೆ. ಲಕ್ಷ್ಮೀಗೆ ಅನ್ಯಾಯ ಮಾಡಲು ಮನಸ್ಸಿಲ್ಲ, ವೈಷ್ಣವ್ ಬಿಟ್ಟುಕೊಡುವುದಕ್ಕೂ ಆಗುತ್ತಿಲ್ಲ ಆ ಸ್ಥಿತಿ ಅವಳದ್ದು. ಆದರೆ ಈಗ ಕಾವೇರಿಯ ಮೇಲೆ ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ ಕೀರ್ತಿ.
ಯಾವ ಆಸ್ಪತ್ರೆ ಡೈರೆಕ್ಟ್ರೇ ಇದು..?
ಲಕ್ಷ್ಮೀ ಬೇಗ ಹುಷರಾಗಲಿ ಎಂಬ ಕಾರಣಕ್ಕೆ ವೈಷ್ಣವ್ ಸಾಕಷ್ಟು ಪ್ರಯತ್ನ ಮಾಡಿದ್ದಾನೆ. ಅದರಲ್ಲಿ ಅವಳಿದ್ದ ವಾರ್ಡ್ ಅನ್ನು ಹೂಗಳಿಂದ ಅಲಂಕಾರ ಮಾಡಿರುವುದು ಒಂದು. ಆರಂಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಬೇಡವೆಂದರು, ವೈಷ್ಣವ್ ರಿಕ್ವೆಸ್ಟ್ ಮಾಡಿ ಆ ರೂಮಿನ ಅಲಂಕಾರ ಮಾಡಿದ್ದಾನೆ. ಹೀಗಾಗಿ ಆ ಆಸ್ಪತ್ರೆ ಎಲ್ಲಿದೆ ಅಂತ ಗೊತ್ತಾದ್ರೆ ನಾವೂ ಡೈಲಿ ಹೋಗಿ ಬರ್ತೀವಿ ಅಂತ ವೀಕ್ಷಕರು ಕೇಳ್ತಾ ಇದಾರೆ. ಆದರೆ ಅದನ್ನ ಗಮನಿಸಿದರೆ ಆಸ್ಪತ್ರೆ ಅಲ್ಲ, ಯಾವುದೋ ಒಂದು ರೂಮಿನಲ್ಲಿ ಮಾಡಿರುವ ಅಲಂಕಾರ ಅನ್ನೋದು ಸ್ಪಷ್ಟವಾಗುತ್ತಿದೆ. ಆದ್ರೂ ನಿರ್ದೇಶಕರೊಮ್ಮೆ ಅಡ್ರೆಸ್ ಹಾಕಿಬಿಡಿ.


Click it and Unblock the Notifications











