Lakshmibaramma: ವೈಷ್ಣವ್‌ಗೆ ಗೊತ್ತಾಯ್ತು ಕಾವೇರಿ ಸುಳ್ಳು; ಈಗ ನಿಮ್ಮ ಹೀರೋ ಲಕ್ಷ್ಮೀ ಕಡೆಗಾ? ಕೀರ್ತಿ ಕಡೆಗಾ?

By ಎಸ್ ಸುಮಂತ್

ಲಕ್ಷ್ಮೀ ಈಗ ಹುಷಾರಾಗಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾಳೆ. ಮನೆಯಲ್ಲಿಯೇ ಹಾರೈಕೆ ಮಾಡಬಹುದು ಎಂದು ತಿಳಿದ ಮೇಲೆ ಮನೆಯವರೆಲ್ಲಾ ಸೇರಿ ಅವಳನ್ನು ಜೋಪಾನವಾಗಿ ಮನೆಗೆ ಕರೆದುಕೊಂಡು ಹೋದರು. ಕಾರಿನಲ್ಲಿ ಹೋಗುವಾಗಲೂ ವೈಷ್ಣವ್, ಲಕ್ಷ್ಮೀಯನ್ನು ಕಾಳಜಿ ಮಾಡುತ್ತಿದ್ದ ರೀತಿಗೆ ಕಾವೇರಿ ಕೋಪ ಮಾಡಿಕೊಳ್ಳುತ್ತಿದ್ದಳು.

ಮಗ ಕೈ ಮೀರಿ ಹೋಗುತ್ತಿದ್ದಾನಲ್ಲ ಎಂದು ಕಾವೇರಿ ಮನಸ್ಸೊಳಗೆ ನೊಂದುಕೊಳ್ಳಿತ್ತಿದ್ದಳು. ಕೀರ್ತಿಯನ್ನ ದೂರ ಮಾಡಿದ್ದೇಕೆ? ಲಕ್ಷ್ಮೀ ತಂದಿದ್ದೇಕೆ? ಈಗಿನ ಪರಿಸ್ಥಿತಿ ಕಂಡು ಕಾವೇರಿ ಪರಿತಪಿಸುವಂತೆ ಆಗಿ ಹೋಗಿದೆ.

Colors kannada Lakshmibaramma Written Update on July 16th episode

ಆಸ್ಪತ್ರೆಯಿಂದ ಹೊರಟಾಗಲೇ ಲಕ್ಷ್ಮೀಗೆ ಕೀರ್ತಿ ಕಾಲ್ ಬಂದಿದೆ. ಆದರೆ ಲಕ್ಷ್ಮೀ ಈಗ ತಾನೇ ಚೇತರಿಸಿಕೊಳ್ಳುತ್ತಿದ್ದ ಕಾರಣ ಆ ಫೋನ್ ಕರೆ ಅಟೆಂಡ್ ಮಾಡುವುದಕ್ಕೂ ಯಾರೂ ಬಿಡಲಿಲ್ಲ. ಮನೆಗೆ ನಡೆದಿದ್ದಾರೆ.

ಲಕ್ಷ್ಮಿಗೆ ಕಾವೇರಿ ಮೇಲೆ ಅನುಮಾನ

ಕಡೆಯದಾಗಿ ಕೀರ್ತಿಯನ್ನು ಭೇಟಿ ಮಾಡಿದಾಗ ಅಲ್ಲಿ ಏನೋ ಅವಾಂತರ ನಡೆಯುತ್ತಿದೆ ಎಂಬುದು ಲಕ್ಷ್ಮೀಗೆ ಅರ್ಥವಾಗಿದೆ. ಕೀರ್ತಿಯೇ ಚಾಕು ಚುಚ್ಚಿದರು ಎಲ್ಲವೂ ಸರಿ ಇಲ್ಲ ಎಂಬ ಸೂಚನೆ ಲಕ್ಷ್ಮೀಗೆ ಸಿಕ್ಕಿದೆ. ಕೀರ್ತಿ ಹೇಳಿದ ಮಾತುಗಳು ಸತ್ಯ ಎನಿಸುವುದಕ್ಕೆ ಶುರುವಾಗಿದೆ. ಅದಕ್ಕೆ ಸ್ವಲ್ಪ ಎಚ್ಚರವಾದಾಗಲೇ ಕೀರ್ತಿಯ ಬಗ್ಗೆ ಕೇಳಿದ್ದಳು ಲಕ್ಷ್ಮೀ. ಈಗ ಇಬ್ಬರು ಒಂದಾದರೇ ಕಾವೇರಿಗಿಲ್ಲ ಉಳಿಗಾಲ.

ಸುಳ್ಳು ಜಾಸ್ತಿ ದಿನ ಇರಲ್ಲ ಎಂದ ಲಕ್ಷ್ಮೀ

ಇನ್ನು ಕಾವೇರಿಯ ಮೇಲೂ ಲಕ್ಷ್ಮೀಗೆ ಅನುಮಾನ ಬಂದಂತೆ ಕಾಣುತ್ತಿದೆ. ಹೀಗಾಗಿಯೇ ಅವಳಿಗೂ ಕ್ಲಾಸ್ ತೆಗೆದುಕೊಂಡಿದ್ದಾಳೆ. ಕಾವೇರಿ ನಿಜ ಒಪ್ಪಿಕೊಳ್ಳುವುದು ಇದೆಯಾ. ಏನಾದರೂ ಮಾಡಿ ಯಾಮಾರಿಸಿ ಬಿಡುತ್ತಾಳೆ. ಆದರೆ ಲಕ್ಷ್ಮೀಯ ಬಳಿ ಅದು ಸಾಧ್ಯವಿಲ್ಲ. ಕಾವೇರಿಯನ್ನೇ ಮುಂದೆ ನಿಲ್ಲಿಸಿಕೊಂಡು ಇದೀಗ ಸುಳ್ಳಿನ ಕೋಟೆ ಜಾಸ್ತಿ ದಿನ ಉಳಿಯುವುದಿಲ್ಲ ಅತ್ತೆ ಎಂದಿದ್ದಾಳೆ. ಕಾವೇರಿಗೆ ಲಕ್ಷ್ಮೀ ಮಾತು ಅಷ್ಟಕ್ಕೆ ಅರ್ಥ ಆಗಬೇಕಿತ್ತು. ಅರ್ಥ ಆಗಿರುತ್ತೆ. ಆದರೂ ಇನ್ನೇನಾದರೊಂದು ಪ್ಲ್ಯಾನ್ ಮಾಡುತ್ತಾಳೆ.

Colors kannada Lakshmibaramma Written Update on July 16th episode

ಅಮ್ಮನನ್ನೇ ಗದರಿದ ವೈಷ್ಣವ್

ಕೀರ್ತಿ ಅಂದೇ ಜಾತಕದ ವಿಚಾರವನ್ನು ಹೇಳಿವುದಕ್ಕೆ ಪ್ರಯತ್ನ ಪಟ್ಟಿದ್ದಳು. ನಿಮ್ಮ ಅಮ್ಮನೇ ಜಾತಕದಲ್ಲಿ ದೋಷ ಇದೆ ಎಂದಿದ್ದು. ಅದಕ್ಕೆ ನಿನ್ನ ಬಿಟ್ಟು ಕೊಟ್ಟಿದ್ದು ಎಂದಿದ್ದಳು. ಆದರೆ ಆ ಕ್ಷಣಕ್ಕೆ ವೈಷ್ಣವ್ ಕೂಡ ಅದನ್ನ ನಂಬಿರಲಿಲ್ಲ. ಮೊದಲೇ ಲಕ್ಷ್ಮೀಗೆ ಹೀಗಾಯ್ತಲ್ಲ ಎಂಬ ಆತಂಕದಲ್ಲಿಯೇ ಕೀರ್ತಿಯನ್ನು ಅಲ್ಲಿಂದ ಹೋಗುವಂತೆ ಹೇಳಿದ್ದ. ಆದರೆ ಅವನಿಗೂ ಸತ್ಯ ಗೊತ್ತಾಗಬೇಕಿತ್ತು. ಅದಕ್ಕಾಗಿಯೇ ಕಾವೇರಿ ಬಳಿ ಬಂದು, ಜಾತಕದಲ್ಲಿ ದೋಷ ಇದ್ದದ್ದು ನಿಜನಾ..? ನಿಮಗೆ ಕೇಳ್ತಾ ಇರೋದು ಹೇಳಿ ಎಂದು ಜೋರಾಗಿಯೇ ರೇಗಿದ್ದಾನೆ.‌

ಈಗ ವೈಷ್ಣವ್ ಯಾರ ಪರ ಇರ್ತಾನೆ?

ವೈಷ್ಣವ್ ಮಾತಿಗೆ ಕಾವೇರಿ ಇರುವ ಸತ್ಯವನ್ನು ಹೇಳಿದ್ದಾಳೆ. ಹೌದು ಜಾತಕದಲ್ಲಿ ದೋಷ ಇದ್ದದ್ದು ಸತ್ಯ ಎಂದು ಒಪ್ಪಿಕೊಂಡಿದ್ದಾಳೆ. ಈಗ ಪ್ರೇಕ್ಷಕರಿಗೆಲ್ಲಾ ಒಂದು ದೊಡ್ಡ ಅನುಮಾನವೇ ಮೂಡಿದೆ. ಮೊನ್ನೆ ಮೊನ್ನೆಯಷ್ಟೇ ಆಸ್ಪತ್ರೆಯನ್ನೇ ಅಲಂಕಾರ ಮಾಡಿ, ಲಕ್ಷ್ಮೀಗೆ ಪ್ರಪೋಸ್ ಮಾಡಿದ್ದಾನೆ ವೈಷ್ಣವ್. ಈಗ ಸತ್ಯ ಬೇರೆ ಗೊತ್ತಾಗಿದೆ. ಏನ್ ಮಾಡ್ತಾನೆ ನಿಮ್ಮ ಹೀರೋ. ಮತ್ತೆ ಏನಾದರೂ ಕೀರ್ತಿ ಹಿಂದೆ ಹೋಗ್ತಾನಾ ಹೇಗೆ ಅಂತ ಪ್ರಶ್ನೆ ಮಾಡ್ತಾ ಇದಾರೆ. ಆದರೆ ಕೀರ್ತಿ ಹಿಂದೆ ವೈಷ್ಣವ್ ಹೋಗುವುದು ಕಷ್ಟ. ಒಂದು ಕ್ಷಮಾಪ್ಪಣೆ ಕೇಳಿ ಸುಮ್ಮನೆ ಆಗಬಹುದು.

More from Filmibeat

English summary
Colors kannada Lakshmibaramma Written Update on July 16th episode. Here is the details about Will Vaishnav stand for Lakshmi..? Will he go with Kirti..?;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X