Lakshmibaramma: ಕೀರ್ತಿ ಯಾವುದೇ ಕಾರಣಕ್ಕೂ ಕಾವೇರಿನಾ ಸಾಯಿಸಬಾರದು, ಯಾಕೆ ಗೊತ್ತಾ?

By ಎಸ್ ಸುಮಂತ್

ಈ ಹಿಂದೆ ಒಂದು ಕಾಲ ಇತ್ತು ನಾವು ಮಾಡಿದ ಪಾಪ ಕರ್ಮಗಳು ನಮ್ಮ ಮಕ್ಕಳಿಗೆ ಮೀಸಲು ಅಂತ. ಅದಕ್ಕಾಗಿಯೇ ಅಪ್ಪ ಅಮ್ಮ ಸಾಧ್ಯವಾದಷ್ಟು ಪುಣ್ಯ ಕೆಲಸಗಳತ್ತ ಗಮನ ಕೊಡುತ್ತಾ ಇದ್ದರು. ಈಗ ಕಾಲ ಆ ರೀತಿ ಅಲ್ಲ. ನಾವೂ ಏನೇ ಅನ್ಯಾಯ ಮಾಡಿದರು. ಕರ್ಮಾ ನಮಗೆ ರಿಟರ್ನ್ ಆಗುತ್ತೆ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಲಕ್ಷ್ಮೀ ಬಾರಮ್ಮ ಧಾರಾವಾಹಿ. ಕಾವೇರಿಯ ಪಾಪದ ಕೊಡ ತುಂಬಿದೆ. ಇನ್ನೇನಿದ್ದರು ಶಿಕ್ಷೆಯ ಸಮಯವಷ್ಟೇ.

ವೈಷ್ಣವ್ ಜಾತಕದಲ್ಲಿ ದೋಷ ಇರುವ ಸುಳ್ಳನ್ನೇ ಮನೆಯವರ ಮುಂದೆ ಸತ್ಯ ಎಂದು ಕಾವೇರಿ ನಂಬಿಸಿದ್ದಾಳೆ. ಮಗನಿಂದ ಮತ್ತೆ ಪ್ರೀತಿ ಪಡೆಯಲು ಕಾಲನ್ನೇ ಹಿಡಿದಿದ್ದಾಳೆ. ತನ್ನ ಮುಖವಾಡದ ಬದುಕಿನಿಂದ ಎಲ್ಲರನ್ನು ಯಾಮಾರಿಸುತ್ತಿದ್ದಾಳೆ. ಕೀರ್ತಿಯೂ ಅವಳ ಮಾತಿಗೆ ಕಟ್ಟು ಬಿದ್ದು, ಪ್ರೀತಿಯನ್ನೇ ಕಳೆದುಕೊಂಡಿದ್ದಾಳೆ. ಈಗ ಕಾವೇರಿಯ ಜೀವ ತೆಗೆಯುತ್ತಾಳಾ ಎಂಬ ಪ್ರಶ್ನೆ ಎದುರಾಗಿದೆ.

Colors kannada Lakshmibaramma Written Update on July 23rd episode

ಲಕ್ಷ್ಮೀಗೆ ಕೀರ್ತಿ ಮೇಲಿದೆ ನಂಬಿಕೆ

ಕಾವೇರಿ ಮತ್ತೆ ತಪ್ಪನ್ನೆಲ್ಲಾ ಕೀರ್ತಿ ಕಡೆಗೆ ತಿರುಗಿಸುವುದಕ್ಕೆ ನೋಡಿದ್ದಾಳೆ. ಆದರೆ ಲಕ್ಷ್ಮೀಗೆ ಕೀರ್ತಿ ಮೇಲೆ ಸಂಪೂರ್ಣ ನಂಬಿಕೆ ಇದೆ. ಹೀಗಾಗಿಯೇ ಅವಳಿಂದಾನೇ ಆಗಿದ್ದೆಲ್ಲ ಏನು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಕಾಯುತ್ತಿದ್ದಾಳೆ. ಕೀರ್ತಿ ಮನೆಗೆ ಹೋಗಿ ಕೂತಿದ್ದಾಳೆ. ಅಲ್ಲಿ ಕಾರುಣ್ಯ ಮಗಳ ಪರವಾಗಿ ವಹಿಸಿಕೊಂಡರೆ ಕೃಷ್ಣಾ, ಕೀರ್ತಿ ವಿರುದ್ಧವಾಗಿ ಮಾತನಾಡಿದ್ದಾರೆ.

ಕಾವೇರಿಗೀಗ ಕರ್ಮ ರಿಟರ್ನ್

ಕಾವೇರಿಯನ್ನ ಕೀರ್ತಿ ತಾನಿರುವ ಜಾಗಕ್ಕೆ ಕರೆಸಿಕೊಳ್ಳುತ್ತಿದ್ದಾಳೆ. ವೈಷ್ಣವ್ ಜೊತೆಗೆ ಕ್ಷಮೆ ಕೇಳುವಾಗಲೇ ಕೀರ್ತಿಯ ಕಾಲ್ ಬಂದಿದೆ. ಕಾವೇರಿಯನ್ನ ರೌಡಿಗಳು ಕರೆದುಕೊಂಡು ಬರುತ್ತಿದ್ದಾರೆ. ಕಾವೇರಿಗೆ ಟೆನ್ಶನ್, ಎಲ್ಲಿ ಹೋಗ್ತಾ ಇದ್ದೀವಿ ಎಂಬುದು ಕೂಡ ಗೊತ್ತಿಲ್ಲ. ಹೀಗಾಗಿ ಎಲ್ಲಿಗೆ ಅಂತ ಹೇಳಿ ಸಾಯಬಾರದಾ ಎಂದಾಗ ರೌಡಿಗಳು ಚಾಕು ತೋರಿಸಿದ್ದಾರೆ. ಕಾವೇರಿ ಸುಮ್ಮನೆ ಕುಳಿತಿದ್ದಾಳೆ. ಕಾವೇರಿಯ ಈ ಸ್ಥಿತಿ ಕಂಡ ಪ್ರೇಕ್ಷಕರು ಕಾವೇರಿಗೆ ಕರ್ಮ ರಿಟರ್ನ್ಸ್ ಎಂದಿದ್ದಾರೆ. ಅಂದು ಕೀರ್ತಿ ಮತ್ತು ಲಕ್ಷ್ಮೀಯನ್ನು ಹೀಗೆ ಎತ್ತಾಕಿಕೊಂಡು ಹೋಗಿದ್ದು ಅಲ್ಲವೇ ಎಂದಿದ್ದಾರೆ.

Colors kannada Lakshmibaramma Written Update on July 23rd episode

ಶತ್ರುವನ್ನ ತೋರಿಸುತ್ತೇನೆಂದ ಕೀರ್ತಿ

ಮನೆಯಲ್ಲಿಯೇ ಕಾಯೋಣ. ಕೀರ್ತಿ ಬಂದ ಮೇಲಷ್ಟೇ ಸತ್ಯ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುವುದು ಎಂದು ಲಕ್ಷ್ಮೀ ಕಾಯುತ್ತಾ ಕುಳಿತಿದ್ದಳು. ಕೀರ್ತಿ ಕಾಲ್ ಮಾಡಿದ್ದು, ಇಬ್ಬರು ಕುಶಲೋಪರಿ ವಿಚಾರಿಸಿದ್ದಾರೆ. ಆಗ ಕೀರ್ತಿ ನಮ್ಮಿಬ್ಬರ ನಡುವೆ ಶತ್ರು ಯಾರು ಎಂಬುದನ್ನು ಇಷ್ಟರಲ್ಲಿಯೇ ನಾನು ತೋರಿಸುತ್ತೀನಿ ಎಂದು ಪ್ರಾಮೀಸ್ ಮಾಡಿದ್ದಾಳೆ‌. ಆ ಶತ್ರು ಕಾವೇರಿಯೇ ಆಗಿರುವ ಕಾರಣ ಅವಳ ಕೆಟ್ಟ ಬುದ್ದಿ ತೋರಿಸುವುದಕ್ಕೇನೆ ಪ್ಲ್ಯಾನ್ ಮಾಡಿದ್ದಾಳೆ‌.

ಕೀರ್ತಿಗೆ ನ್ಯಾಯ ಸಿಗಬೇಕೆಂದ ಫ್ಯಾನ್ಸ್

ಕಾವೇರಿಯನ್ನು ಕರೆದುಕೊಂಡು ಬರುವಾಗ ರೌಡಿಗಳು ಬೇರೆ ಚಾಕು ತೋರಿಸಿದ್ದಾರೆ‌. ಅತ್ತ ಕೀರ್ತಿ ಬಾಸ್ ಥರ ಕೂತು ಕಾಯುತ್ತಿದ್ದಾಳೆ. ಕಾವೇರಿಯನ್ನು ಕರೆತಂದು ಕೀರ್ತಿ ಕೊಂದು ಬಿಡುತ್ತಾಳಾ ಎಂಬ ಭಯ ಪ್ರೇಕ್ಷಕರದ್ದು. ಆದರೆ ಕೀರ್ತಿ ಆ ರೀತಿ ಮಾಡಬಾರದು ಎಂದು ಸಲಹೆಯನ್ನು ನಿರ್ದೇಶಕರಿಗೆ ನೀಡಿದ್ದಾರೆ. ಯಾಕಂದ್ರೆ ಇಲ್ಲಿ ನಿಜಕ್ಕೂ ಅನ್ಯಾಯವಾಗಿದ್ದು ಕೀರ್ತಿಗೆ. ಕಾವೇರಿಯ ಮಾತು ನಂಬಿ, ಪ್ರೀತಿ ಕಳೆದುಕೊಂಡು ನೋವಲ್ಲಿದ್ದಾಳೆ. ಹೀಗಿರುವಾಗ ಕಾವೇರಿಯನ್ನು ಒಂದೇ ಸಲ ಕೊಂದು ಬಿಟ್ಟರೆ ಕೀರ್ತಿಯೇ ಮತ್ತೆ ಕೆಟ್ಟವಳಾಗುತ್ತಾಳೆ. ಅವಳಿಗೆ ನ್ಯಾಯ ಸಿಗಬೇಕು ಅಂದ್ರೆ ಮೊದಲು ಕಾವೇರಿಯ ತಪ್ಪು ಎಲ್ಲರಿಗೂ ಗೊತ್ತಾಗುವಂತೆ ಮಾಡಿ ಎನ್ನುತ್ತಿದ್ದಾರೆ.

More from Filmibeat

English summary
Colors kannada Lakshmibaramma Written Update on July 23rd episode. Here is the details about Keerthi should not kill Kaveri;
Read more about: filmbeat original serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X