Lakshmibaramma: ನೀನು ಖಂಡಿತ ಹೆತ್ತ ತಾಯಿಯಲ್ಲ; ಕಾವೇರಿಯ ಮೇಲೆ ವೀಕ್ಷಕರು ಕೆಂಡಾಮಂಡಲ!

By ಎಸ್ ಸುಮಂತ್

ಲಕ್ಷ್ಮೀ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ. ಕಾವೇರಿಯ ಕಿತಾಪತಿಯಿಂದ ಕೀರ್ತಿ, ಲಕ್ಷ್ಮೀಗೆ ಚಾಕು ಇರಿದಿದ್ದಾಳೆ. ಇದರಿಂದ ಹಾಸ್ಪಿಟಲ್ ಬೆಡ್ ಮೇಲೆ ಮಲಗಿದ್ದಾಳೆ. ಕೀರ್ತಿಗೂ ಇದೆಲ್ಲಾ ಹೇಗಾಯ್ತು ಎಂಬುದೇ ಅರಿಯದೇ ಹೋಗಿದ್ದಾಳೆ. ವೈಷ್ಣವ್‌ನನ್ನು ಮರಳಿ ಪಡೆಯಬೇಕೆಂದುಕೊಂಡ ಕೀರ್ತಿಗೆ, ಲಕ್ಷ್ಮೀಯನ್ನು ಚುಚ್ಚಿ ಸಾಯಿಸಬೇಕೆಂಬ ಯಾವ ಉದ್ದೇಶವೂ ಇರಲಿಲ್ಲ.

ಲಕ್ಷ್ಮೀಯನ್ನು ಉಳಿಸಿಕೊಳ್ಳಲೇಬೇಕೆಂದು ವೈಷ್ಣವ್ ಕಷ್ಟಪಡುತ್ತಿದ್ದಾನೆ. ದೇವಸ್ತಾನಕ್ಕೆ ಹೋಗಿ ಕಷ್ಟಪಟ್ಟು ವ್ರತ ಮಾಡಿದ್ದಾನೆ. ಅದು ಕಠಿಣ ವ್ರತ. ಆದರೂ ಲಕ್ಷ್ಮೀಗಾಗಿ ಮಾಡಲೇಬೇಕೆಂದು ವ್ರತ ಮುಗಿಸಿ, ಆ ಕುಂಕುಮ ತಂದು ಲಕ್ಷ್ಮೀ ಹಣೆಗೆ ಇಡಬೇಕೆಂದುಕೊಂಡಿದ್ದಾನೆ. ಇಲ್ಲಿಯೂ ಕಾವೇರಿ ತನ್ನ ಕೈ ಚಳಕ ತೋರಿದ್ದಾಳೆ. ಕುಂಕುಮವನ್ನೇ ದೋಚಿಬಿಟ್ಟಿದ್ದಾಳೆ.

Colors kannada Lakshmibaramma Written Update on July 2nd episode

ರೌಡಿಗಳಿಗೆ ಬುದ್ದಿ ಕಲಿಸಿದ ಕೀರ್ತಿ

ಕೀರ್ತಿಗೆ ಇಲ್ಲಿ ಏನೋ ಮಸಲತ್ತು ನಡೆಯುತ್ತಿದೆ ಎಂಬ ಸತ್ಯವಂತು ಗೊತ್ತಾಗಿತ್ತು. ಆದರೆ ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಿತ್ತು. ಅದಕ್ಕೆ ಕೀರ್ತಿಯೇ ರೌಡಿಗಳ ಅಡ್ಡಕ್ಕೆ ಬಂದಿದ್ದಾಳೆ. ರೋಪ್ ಹಾಕಲು ಬಂದವರನ್ನು ಎಡೆಮುರಿ ಕಟ್ಟಿದ್ದಾಳೆ. ಕೀರ್ತಿ ಹೊಡೆದ ಹೊಡೆತಕ್ಕೆ ಒಂದಿಬ್ಬರು ನೆಲಕ್ಕೆ ಬಿದ್ದರು‌ ಅದನ್ನು ಕಂಡು ಉಳಿದವರು ತೆಪ್ಪಗಾದರು. ಈಗ ಕೀರ್ತಿಯ ಆಫರ್ ಸರದಿ. ಮೂರು ಲಕ್ಷ ಹಣ ಕೊಟ್ಟು, ಆ ಒಂದು ಸತ್ಯ ಬೇಕು ಅಷ್ಟೇ ಎಂದಿದ್ದಾಳೆ.

ಸತ್ಯ ನೋಡಿ ಕೀರ್ತಿ ಕಣ್ಣೀರು

ಲಕ್ಷ್ಮೀ ಹಾಗೂ ಕೀರ್ತಿ ಭೇಟಿ ಮಾಡಿ ಒಂದು ನಿರ್ಧಾರಕ್ಕೆ ಬರಬೇಕು ಭೇಟಿಯಾಗುತ್ತಿದ್ದರು. ಅಷ್ಟರಲ್ಲಿ ಭಾನುಮತಿ ಮಾತು ಕೇಳಿ ಇಬ್ಬರನ್ನು ಕಿಡ್ನ್ಯಾಪ್ ಮಾಡಿಸಿ, ಕೀರ್ತಿ ಮೇಲೆ ಅಒವಾದ ಬರುವಂತೆ ಮಾಡಿದ್ದಳು ಕಾವೇರಿ. ಕೀರ್ತಿಗೆ ಅವರ ಪರಿಚಯವೇ ಇಲ್ಲದ ಕಾರಣ ಸತ್ಯದ ಹಿಂದೆ ಬಿದ್ದಳು. ರೌಡಿಗಳಿಗೆ ಹಣ ರುಚಿ ತೋರಿಸಿದ ಮೇಲೆ ಸತ್ಯ ಹೇಳದೆ ಇರುತ್ತಾರೆಯೇ. ದಾಖಲೆ ಸಮೇತ ಸತ್ಯ ಬಾಯ್ಬಿಟ್ಟರು. ಬಾನುಮತಿಯ ಮಾತು ಕೇಳಿ,‌ಕಾವೇರಿಯೇ ಕೀರ್ತಿಯ ಮೇಲೆ ಅಪವಾದ ಬರುವಂತೆ ಮಾಡಿದ್ದು ಕಣ್ಣ ಮುಂದೆ ಇತ್ತ. ಅದನ್ನು ನೋಡಿ ಕೀರ್ತಿ ಕಣ್ಣೀರಾದಳು.

Colors kannada Lakshmibaramma Written Update on July 2nd episode

ಆಕ್ಸಿಜನ್ ಹೋಗದಂತೆ ಮಾಡಿದ ಕಾವೇರಿ

ಕಾವೇರಿಗೆ ಮಗನ ಸಂಸಾರ ಮುಂದುವರೆಯುವುದು ಇಷ್ಟವಿಲ್ಲ. ಮಗನಿಗೆ ಹೆಂಡತಿಯಾಗಿ ಬಂದವಳು ತಿನ್ನಬೇಕು, ಕೂರಬೇಕು, ಅತ್ತೆ ಹೇಳಿದಂತೆ ಕೇಳಬೇಕು, ಗಂಡನ ಜೊತೆಗೆ ಸಲುಗೆಯಿಂದ ಇರಬಾರದು. ಇದಿಷ್ಟೇ ಅವಳು ಕೇಳೋದು. ಆದರೆ ಲಕ್ಷ್ಮೀ ಈಗ ಗಂಡನ ಪೂರ್ತಿ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾಳೆ. ಇದು ಕಾವೇರಿಗೆ ಸಹಿಸುವುದಕ್ಕೆ ಆಗುತ್ತಿಲ್ಲ. ಅದಕ್ಕೆ ಹಾಸ್ಪಿಟಲ್ ನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಲಕ್ಷ್ಮೀಯನ್ನು ಸಾಯಿಸುವುದಕ್ಕೆ ಹೊರಟಿದ್ದಾಳೆ.

ಸಿಸಿಟಿವಿ ಪರಿಶೀಲಿಸಲು ಒತ್ತಾಯ!

ಕಾವೇರಿಯ ವರ್ತನೆಯಿಂದ ವೀಕ್ಷಕರಿಗೇನೇ ಕೋಪ ಬಂದಿದೆ. ಈ ಥರದ ತಾಯಿಯೂ ಭೂಮಿ‌ ಮೇಲೆ ಇರುತ್ತಾಳಾ..? ಮಗನ ಸಂತಸವನ್ನೇ ಬಯಸದ ಈಕೆ ತಾಯಿನಾ..? ಎಂದೆಲ್ಲಾ ಬೈಯ್ಯುತ್ತಿದ್ದಾರೆ. ಅಷ್ಟೇ ಅಲ್ಲ, ಮೊದಲು ಸಿಸಿಟಿವಿ ನೋಡಿ ಅದರಲ್ಲಿ ಕಾವೇರಿಯ ಕೆಲಸ ಬಯಲಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಕಾವೇರಿಯ ಈ ವರ್ತನೆ ವೀಕ್ಷಕರಿಗೂ ಇಷ್ಟವಾಗಿಲ್ಲ. ಮಗನ ಸಂತೋಷ ನೋಡಿ ಹೊಟ್ಟೆ ಕಿಚ್ಚು ಪಡುವ, ಸೊಸೆಯನ್ನು ನೋಡಿ ಸಹಿಸಲಾರದ, ತನ್ನ ಸ್ವಾರ್ಥಕ್ಕೆ ಕೀರ್ತಿ ಜೀವನವನ್ನೇ ಹಾಳು ಮಾಡಿದ ಕಾವೇರಿಯನ್ನು ನೋಡುಗರು ಎಂದಿಗೂ ಕ್ಷಮಿಸಲ್ಲ.

More from Filmibeat

English summary
Colors kannada Lakshmibaramma Written Update on July 2nd episode. Here is the details about Kaveri went to kill Lakshmi;
Read more about: filmbeat original serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X