Lakshmibaramma: ಕಾವೇರಿ ಕರ್ಮ ರಿಟರ್ನ್ಸ್; ಕೆಡುಕು ಬಯಸುವ ಮುನ್ನ ಎಲ್ಲರೂ ಯೋಚಿಸಬೇಕಿದೆ!
'ಲಕ್ಷ್ಮೀಬಾರಮ್ಮ' ಧಾರವಾಹಿಯಲ್ಲಿ ಈಗ ಯಾವುದು ಗುಟ್ಟಾಗಿ ಉಳಿದಿಲ್ಲ. ಕಾವೇರಿ ಅದ್ಯಾವ ರೀತಿ ಯೋಚಿಸುತ್ತಾಳೆ ಎಂಬುದೇ ಅದೆಷ್ಟೋ ತಾಯಂದಿರಿಗೆ ಈಗಲೂ ಪ್ರಶ್ನೆಯಾಗಿ ಕಾಡುತ್ತಿದೆ. ಯಾಕಂದ್ರೆ ಕಾವೇರಿಗೆ ಮಗನೆಂದರೆ ಪ್ರಾಣ.
ಮಗನ ಏಳಿಗೆಗಾಗಿ ಕಾವೇರಿ ಸದಾ ಕಷ್ಟಪಡುತ್ತಾಳೆ. ಅವನು ಗೆದ್ದರೆ ಖುಷಿ ಪಡುತ್ತಾಳೆ. ಆದರೆ ಯಾವತ್ತಿಗೂ ಆ ಮಗ ತನ್ನ ಕೈಮೀರಿ ಹೋಗಬಾರದು. ತನ್ನ ಕಂಟ್ರೋಲ್ ನಲ್ಲಿಯೇ ಇರಬೇಕು. ಎಲ್ಲದಕ್ಕೂ ಅಮ್ಮ ಇದು ಬೇಕು ಅಮ್ಮ ಅದು ಬೇಕು ಅಂತ ಕೂಗ್ತಾ ಇರಬೇಕು ಎಂಬುದೇ ಅವಳ ಸ್ವಾರ್ಥ.

ಈ ರೀತಿಯ ತಾಯಿ ಇರ್ತಾರಾ ಎಂದು ಪ್ರಶ್ನೆ ಮೂಡಬಹುದು. ತೆರೆಮೇಲೆ ಮಾತ್ರ ಎಂದುಕೊಳ್ಳಬಹುದು. ಆದರೆ ರಿಯಲ್ ಲೈಫ್‌ನಲ್ಲೂ ಈ ರೀತಿಯ ತಾಯಂದಿರು ಇದ್ದಾರೆ. ಆದರೆ ಅದು ನಮ್ಮ ಗಮನಕ್ಕೆ ಬಾರದೇ ಇರಬಹುದು. ಈಗ ಕಾವೇರಿಯ ಕರ್ಮ ರಿಟರ್ನ್ ಆಗ್ತಾ ಇದೆ. ಅದಕ್ಕೆ ಒಬ್ಬರಿಗೆ ನೋವು ಕೊಡುವ ಮುನ್ನ ಯೋಚಿಸಬೇಕಿದೆ.
ಅದೇ ರೌಡಿಗಳಿಂದ ಕಾವೇರಿಗೆ ಸಂಕಟ
ಕಾವೇರಿ ಈಗ ಸಂಪೂರ್ಣವಾಗಿ ಕೀರ್ತಿಯ ಕೈಗೊಂಬೆಯಾಗಿದ್ದಾಳೆ. ಕೀರ್ತಿ ಮತ್ತು ಲಕ್ಷ್ಮೀಯಮ್ನು ಕಿಡ್ನ್ಯಾಪ್ ಮಾಡಿದ್ದವರೇ ಕಾವೇರಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಅವರಿಗೆ ಹಣ ಹೆಚ್ಚಿಗೆ ಕೊಟ್ಟರೆ ಯಾವ ಕೆಲಸಬೇಕಾದರೂ ಮಾಡುತ್ತಾರೆ. ಇದು ಕಾವೇರಿಗೆ ಅರ್ಥವಾಗದೆ ಉಳಿದು ಬಿಟ್ಟಿದೆ. ಈಗ ಅದೇ ರೌಡಿಗಳು ಕಾವೇರಿಯನ್ನು ಕೀರ್ತಿ ಬಳಿ ಕರೆದುಕೊಂಡು ಬಿಟ್ಟಿದ್ದಾರೆ.
ಕೈಯ್ಯಾರೆ ಲಗ್ನ ಪತ್ರಿಕೆ ಬರೆದ ಕಾವೇರಿ
ವೈಷ್ಣವ್ ಹಾಗೂ ಕೀರ್ತಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಾ ಇದ್ರು. ಯಾವುದೋ ಜಾತಕದ ನೆಪ ಹೇಳಿ ಇಬ್ಬರನ್ನು ದೂರ ಮಾಡಿದಳು ಕಾವೇರಿ. ಆದರೆ ಈಗ ಕೀರ್ತಿಗೆ ಆ ಸತ್ಯ ಅರ್ಥವಾಗಿದೆ. ಹೀಗಾಗಿಯೇ ಕಾವೇರಿಗೆ ಬುದ್ದಿ ಕಲಿಸಲು ನಿರ್ಧರಿಸಿದ್ದಾಳೆ. ಕಾವೇರಿಗೆ ರಿವೇಂಜ್ ತೀರಿಸಿಕೊಳ್ಳುತ್ತಿದ್ದಾಳೆ. ಅವಳ ಕೈಯ್ಯಾರೆ ಕೀರ್ತಿ ಹಾಗೂ ವೈಷ್ಣವ್ ಲಗ್ನ ಪತ್ರಿಕೆ ಬರೆಸಿದ್ದಾಳೆ. ವಿಧಿ ಇಲ್ಲದೇ ಇಬ್ಬರ ಹೆಸರಿನ ಲಗ್ನ ಪತ್ರಿಕೆ ಬರೆಯುವಂತಾಗಿದೆ.

ಮದು ಮಗಳಾಗಿ ಕಂಡ ಕೀರ್ತಿ
ಕೀರ್ತಿ ನೀಡಿದ ಶಿಕ್ಷೆ ಒಂದೊಂದಲ್ಲ. ಯಾಕಂದ್ರೆ ಎಲ್ಲರ ಮುಂದೆ ಯಾವಾಗಲೂ ಅವಮಾನ ಅನುಭವಿಸುತ್ತಾ ಇದ್ದದ್ದು ಕೀರ್ತಿಯೇ ವಿನಃ ಕಾವೇರಿಯಲ್ಲ. ಕೀರ್ತಿಯನ್ನು ಯಾಮಾರಿಸಿ, ತಾನೂ ಬಚಾವ್ ಆಗಿ ಬಿಡುತ್ತಾ ಇದ್ದಳು. ಈಗ ಅದೆಲ್ಲವನ್ನು ಕೀರ್ತಿ ಒಟ್ಟಿಗೆ ತೀರಿಸಿಕೊಳ್ಳುತ್ತಾ ಇದ್ದಾಳೆ. ಬೆಟ್ಟದ ಕೆಳಗಿಂದ ಕಾವೇರಿ ಕೈಯಿಂದ ದೊಡ್ಡ ಗಾತ್ರ ಡೋಲು ಬಡಿಸಿಕೊಂಡು ಬಂದಿದ್ದಾಳೆ. ಅಷ್ಟು ಹಾರಾಡುತ್ತಿದ್ದ ಕಾವೇರಿ ತುಟಿಕ್ ಪಿಟಿಕ್ ಎನ್ನುವಂತೆಯೂ ಇಲ್ಲ. ಕೀರ್ತಿ ಮದು ಮಗಳಂತೆ ರೆಡಿಯಾಗಿ ನಿಂತಿದ್ದಾಳೆ.
ಸ್ವಾರ್ಥಕ್ಕಾಗಿ ವಿಲನ್ ಆಗಿದ್ದ ಕಾವೇರಿ
ಕಾವೇರಿ ತನ್ನ ಸ್ವಾರ್ಥಕ್ಕಾಗಿ ಹಾಳು ಮಾಡಿದ್ದು ಮೂವರ ಲೈಫ್. ಕೀರ್ತಿ ಪ್ರೀತಿ ಕಿತ್ತುಕೊಂಡಳು, ವೈಷ್ಣವ್ ಒಂಟಿತನ ಅನುಭವಿಸುವಂತೆ ಮಾಡಿದಳು, ಲಕ್ಷ್ಮೀಯ ಮುಗ್ಧತೆ ಬಳಸಿಕೊಂಡಳು. ಈಗ ಎಲ್ಲರೂ ಕಾವೇರಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾವೇರಿಯ ಕರ್ಮ ಅವಳನ್ನು ಬಿಡದೇ ಕಾಡುತ್ತಿದೆ. ಈ ಪ್ರೋಮೋ ನೋಡಿದವರೆಲ್ಲ ಕರ್ಮ ರಿಟರ್ನ್ ಬಗ್ಗೆ ಕಮೆಂಟ್ ಹಾಕುತ್ತಿದ್ದಾರೆ. ಅದಕ್ಕೆ ಇಷ್ಟೆಲ್ಲ ಯಾರ ಮನಸ್ಸನ್ನು ನೋಯಿಸಬಾರದು ಎಂದಿದ್ದಾರೆ. ಸೀರಿಯಲ್ ಸನ್ನಿವೇಶ ನಿಜ ಜೀವನಕ್ಕೂ ಅಪ್ಲೈ ಆಗಿದೆ.


Click it and Unblock the Notifications











