Lakshmibaramma: ಲಕ್ಷ್ಮೀಗೆ ಚಾಕು ಚುಚ್ಚಿ ವಾರವಾದ ಮೇಲೆ ಬಂದ್ರಾ ಕುಸುಮಾ? ಭಾಗ್ಯಾಗೆ ಲಡ್ಡು ಬಗ್ಗೆ ಯೋಚನೆಯೂ ಇಲ್ಲ!
'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನೋಡ್ತಾ ಇದ್ರೆ ಕಾವೇರಿಯಂಥ ಹೆಣ್ಣು ನಿಜಕ್ಕೂ ಭೂಮಿ ಮೇಲೆ ಇದಾರಾ? ಎಂಬ ಫೀಲ್ ಆಗದೆ ಇರುವುದಿಲ್ಲ. ಯಾಕಂದ್ರೆ ಒಬ್ಬನೇ ಮಗ. ಪ್ರೀತಿ ಮಾಡಿದ ಹುಡುಗಿಯನ್ನು ದೂರ ಮಾಡಿದಳು, ಅಮಾಯಕಿಯನ್ನು ತಂದು ಮದುವೆ ಮಾಡಿದಳು. ಈಗ ಅವರಿಬ್ಬರಲ್ಲೇ ಮನಸ್ತಾಪ ಬರುವಂತೆ ಮಾಡಿದಳು. ವೈಷ್ಣವ್, ಲಕ್ಷ್ಮೀಯನ್ನು ಉಳಿಸಿಕೊಳ್ಳಲೇಬೇಕೆಂದು ಹಠ ಮಾಡಿ, ವ್ರತ ಮಾಡಿ ಬಂದಿದ್ದಾನೆ.
ಕಾವೇರಿ ಬೇರೆ ಖಳನಾಯಕಿಯರಂತೆಯೂ ಅಲ್ಲ. ಬೇರೆ ಖಳನಾಯಕಿಯರು ಕೆಟ್ಟದ್ದನ್ನೇ ಮಾಡುವುದಕ್ಕೆ ರೆಡಿ ಇರುತ್ತಾರೆ. ಧೈರ್ಯ ಜಾಸ್ತಿ. ಹೆದರುವುದಿಲ್ಲ. ಆದರೆ ಕಾವೇರಿ ಸ್ಚಲ್ಪ ತಪ್ಪು ಮಾಡಿದರು ಹೆದರಿ ಬಿಡುತ್ತಾಳೆ. ಮುಖದ ಛಾಯೆಯೇ ಬದಲಾಗಿ ಬಿಡುತ್ತದೆ. ಮಗನ ಜೊತೆ ಸಂಸಾರ ಮಾಡಬೇಕಾದ ಸೊಸೆಯನ್ನೆ ಸಾಯಿಸಲು ಹೋಗಿ ಕುಸುಮಾ ಬಳಿ ತಗಲಾಕಿಕೊಂಡಿದ್ದಾಳೆ.

ಕುಸುಮಾಗೆ ಗೊತ್ತಿರ್ಲಿಲ್ವಾ?
ಲಕ್ಷ್ಮೀ ಎಂದರೆ ಭಾಗ್ಯಾಳಿಗೆ ಪ್ರಾಣ. ಕುಸುಮಾಗೂ ತುಂಬಾ ಇಷ್ಟ. ವೈಷ್ಣವ್ ಗೆ ಹುಡುಗಿ ನೋಡಬೇಕು ಎಂದಾಗ ಕುಸುಮಾನೇ ಮುಂದೆ ನಿಂತು ನೋಡಿ, ಮದುವೆ ಮಾಡಿಸಿದ್ದು. ಹೀಗಾಗಿ ತುಂಬಾನೇ ಇಷ್ಟ ಪಡುತ್ತಾಳೆ. ಆದರೆ ಲಕ್ಷ್ಮೀಗೆ ಚಾಕು ಹಾಕಿದ್ದರು ಕುಸುಮಾಗೆ ನೋಡುವ ಆತುರವೇ ಇಲ್ಲ. ಇನ್ನು ಭಾಗ್ಯಾ ಕೂಡ ಒಂದೇ ದಿನ ಬಂದು ಕಣ್ಣೀರಿಟ್ಟು ಹೋಗಿದ್ದು. ಕುಸುಮಾ ಮನೆಯಲ್ಲೂ ಲಕ್ಷ್ಮೀಯ ವಿಚಾರವೇ ಪ್ರಸ್ತಾಪವಾಗಿಲ್ಲ. ನಿಜ ಜೀವನದಲ್ಲಿ ಇಷ್ಟೆಲ್ಲಾ ಸಮಸ್ಯೆಯಾದಾಗ ಮನೆಯಲ್ಲಿ ಚರ್ಚೆ ಮಾಡದೆ ಇರುತ್ತಾರಾ. ಕಿಂಚ ರಿಯಾಲಿಟಿ ಇರಲಿ ನಿರ್ದೇಶಕರೆ ಎನ್ನುತ್ತಿದ್ದಾರೆ ಪ್ರೇಕ್ಷಕರು.
ಪ್ರಾಣ ತೆಗೆಯುತ್ತಿದ್ದ ಕಾವೇರಿ
ಕಾವೇರಿಗೆ ಈಗ ಲಕ್ಷ್ಮೀಯು ಇರುವುದು ಇಷ್ಟವಿಲ್ಲ. ಮಗನ ಜೀವನದಲ್ಲಿ ಹುಡುಗಿಯರೆ ಇರುವಂತೆ ಇಲ್ಲ. ಆ ಕಡೆ ಕೀರ್ತಿ ಕೊಲೆ ಆರೋಪಿ, ಈ ಕಡೆ ಲಕ್ಷ್ಮೀ ಸಾವು ಬದುಕಿನ ನಡುವಿನ ಹೋರಾಟಗಾರ್ತಿ. ಐಸಿಯು ಒಳಗೆ ಬಂದ ಕಾವೇರಿಯಿಂದ ಲಕ್ಷ್ಮೀಯ ಪ್ರಾಣಕ್ಕೆ ಕುತ್ತು ಬಂದಿದೆ. ಆಕ್ಸಿಜನ್ ತೆಗೆದು ಉಸಿರಾಟ ನಿಲ್ಲಿಸಲು ಹೊರಟಿದ್ದಾಳೆ. ತಕ್ಷಣ ಅಲ್ಲಿಗೆ ಕುಸುಮಾ ಬಂದಿದ್ದಕ್ಕೆ ಬಚಾವ್ ಆದಳು ಲಕ್ಷ್ಮೀ.
ಭಾನುಮತಿ ವಿಚಾರಕ್ಕೆ ಕಾವೇರಿ ಶಾಕ್
ಭಾನುಮತಿ ಮೊದಲೇ ಗೀತಾ ಸಂಸಾರವನ್ನು ಹಾಳು ಮಾಡಿದ ಹೆಣ್ಣು. ಈಗ ಕಾವೇರಿಯ ಸಹವಾಸವನ್ನು ಮಾಡಿದ್ದಾಳೆ. ಅವಳು ಬಂದು, ಐಡಿಯಾವನ್ನು ಕೊಟ್ಟ ಮೇಲೆ ಲಕ್ಷ್ಮೀ ಹೀಗೆ ಬೆಡ್ ಮೇಲೆ ಮಲಗಿರುವುದು. ಈಗ ಕುಸುಮಾಗೆ ಆ ವಿಚಾರ ತಿಳಿದು ಕೇಳಲು ಬಂದಿದ್ದಾಳೆ. ನಿಜ ಹೇಳು ಕಾವೇರಿ ಭಾನುಮತಿ ಬಂದಿದ್ಲಾ ಎಂದು ಕೇಳೊದರೆ ಕಾವೇರಿ, ಮೊದಲಿನಂತೆಯೇ ಗಾಬರಿಯಾಗಿದ್ದಾಳೆ.

ಸತ್ಯ ತಿಳಿದ ಕೀರ್ತಿ ಈಗ ಸ್ಟ್ರಾಂಗ್
ಕೀರ್ತಿ ಸತ್ಯದ ಹಿಂದೆ ಬಿದ್ದಿದ್ದಳು. ತಪ್ಪೇ ಮಾಡದೆ ಕೊಲೆ ಆರೋಪ ಬಂದಿದ್ದಕ್ಕೆ ಅದರ ಮೂಲ ಹಿಡಿಯುತ್ತಾ ಹೊರಟಳು. ರೌಡಿಗಳಿಗೆ ಏಟಿನ ರುಚಿ, ಹಣದ ರುಚಿ ತೋರಿಸಿದಾಗ ಸಾಕ್ಷಿ ಸಮೇತ ಕಾವೇರಿಯ ಬಣ್ಣ ಬಯಲಾಗಿತ್ತು. ಆರಂಭದಲ್ಲಿ ನಂಬುವುದಕ್ಕೆ ಕಷ್ಟ ಪಟ್ಟ ಕೀರ್ತಿ. ಈಗ ಹಠ ತೊಟ್ಟಿದ್ದಾಳೆ. ನನ್ನ ಜೊತೆಗೆ ಆಟ ಆಡಿ ಬಿಟ್ರಲ್ಲ ಕಾವೇರಿ ಆಂಟಿ, ಇನ್ಮುಂದೆ ಮುಗ್ಧ ಕೀರ್ತಿ ನೋಡಲ್ಲ ಬೇರೆಯದ್ದೇ ಕೀರ್ತಿ ನೋಡ್ತೀರಿ ಅಂತ ಕಾವೇರಿಗೆ ಪಾಠ ಕಲಿಸುವುದಕ್ಕೆ ರೆಡಿ ಆಗಿದ್ದಾಳೆ.


Click it and Unblock the Notifications











