Lakshmibaramma: ಕೀರ್ತಿ ಆತ್ಮಹತ್ಯೆ ಮಾಡಿಕೊಳ್ತಾಳಾ? ಕೊಲ್ಲುತ್ತಾಳಾ? ವೈಷ್ಣವ್ ಇಬ್ಬರ ಹೆಂಡಿರ ಮುದ್ದಿನ ಗಂಡ ಆಗ್ತಾನಾ?

By ಎಸ್ ಸುಮಂತ್

'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕಾವೇರಿ ಒಬ್ಬಳಿಂದಾಗಿ ಮೂರು ಜನ ನೆಮ್ಮದಿ ಇಲ್ಲದೆ ಒದ್ದಾಡುತ್ತಿದ್ದಾರೆ. ಕೀರ್ತಿಗೆ ನಂಬಿಸಿ ಮೋಸ ಮಾಡಿದ ಕಾವೇರಿ, ಇಲ್ಲಿಯವರೆಗೂ ವೈಷ್ಣವ್ ಗೆ ಮತ್ತೆ ಮದುವೆ ಮಾಡಿಕೊಡುವ ನಿರ್ಧಾರ ಮಾಡಲಿಲ್ಲ. ಕಾವೇರಿ ಹೇಳಿದ ಒಂದೊಂದು ಮಾತನ್ನು ಕೀರ್ತಿ ಪಾಠದಂತೆ ಕೇಳುತ್ತಿದ್ದಳು.

ಹೆತ್ತ ತಾಯಿ ಕಾರುಣ್ಯಳಿಗೆ ಕಾವೇರಿಯ ಕಿತಾಪತಿ ತಿಳಿದಿತ್ತು. ಎಷ್ಟು ಸಲ ಹೇಳಿದರು ಕೀರ್ತಿ ತಾಯಿಯ ಮಾತನ್ನು ಕೇಳುವುದಕ್ಕೆ ರೆಡಿ ಇರಲಿಲ್ಲ. ಈಗಾ ಕಾವೇರಿಯ ನಿಜ ಬಣ್ಣ ಸಾಕ್ಷಿ ಸಮೇತ ಬಯಲಾಗಿದೆ.

Colors kannada Lakshmibaramma Written Update on July 4th episode

ಲಕ್ಷ್ಮೀ ಹಾಗೂ ವೈಷ್ಣವ್ ಇಬ್ಬರು ಒಪ್ಪಿಯೇ ಮದುವೆ ಆದವರು. ನಮ್ಮಿಬ್ಬರ ಮಧ್ಯೆ ಪ್ರೀತಿಯೇ ಇಲ್ಲದೆ ಹೋದರು ಮನೆಯವರಿಗಾಗಿ ಮದುವೆ ಆಗೋಣಾ ಎಂದು ಕೈ ಹಿಡಿದವರು. ಆದರೆ ದಿನಕಳೆದಂತೆ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ. ಲಕ್ಷ್ಮೀಗೆ ಆ ಪ್ರೀತಿ ಗಮನಕ್ಕೆ ಬಂದಿದೆ. ವೈಷ್ಣವ್ ಮನಸ್ಸಲ್ಲೂ ಪ್ರೀತಿ ಇದ್ದರೂ ಅದು ಗೊತ್ತಾಗುತ್ತಿಲ್ಲ.

ಸಾಕ್ಷಿಯ ಹಿಂದೆ ಬಿದ್ದ ಕೀರ್ತಿ

ಕೀರ್ತಿಗೆ ಈಗಾಗಲೇ ಸಾಕ್ಷಿ ಸಿಕ್ಕಿದೆ. ಭಾನುಮತಿ ಕರೆಸಿದ ರೌಡಿಗಳಿಗೆ ಕಾವೇರಿ ಡೀಲ್ ಕೊಟ್ಟಿರುವ ವಿಡಿಯೋ ಕೀರ್ತಿ ಕೈಯ್ಯಲ್ಲಿದೆ. ಆದರೆ ಕೀರ್ತಿಯ ಕಣ್ಣ ಮುಂದೆ ಇನ್ನೊಬ್ಬ ಸಾಕ್ಷಿ ಬಂದಾಗ ಆತನನ್ನು ಬೆನ್ನಟ್ಟಿ ಹೊರಟಿದ್ದಾಳೆ‌. ಕೀರ್ತಿ ಕೈಗೆ ಸಿಕ್ಕಿದ್ದರೆ ಹಬ್ಬವಾಗ್ತಾ ಇತ್ತು. ಆದರೆ ಅವನ ಅದೃಷ್ಟ ತಪ್ಪಿಸಿಕೊಂಡ.

ನನಗೂ ನ್ಯಾಯ ಬೇಕು ಎಂದ ಕೀರ್ತಿ

ಕೀರ್ತಿ ಈಗ ಮೊದಲಿನ ರೀತಿ ಇಲ್ಲ. ಸ್ಟ್ರಾಂಗ್ ಆಗಿದ್ದಾಳೆ. ನನ್ನ ಮುಗ್ಧತೆಯನ್ನು ಕಾವೇರಿ ಆಂಟಿ ಬಳಸಿಕೊಂಡು ಬಿಟ್ಟರಲ್ಲ ಎಂಬ ಕೋಪವಿದೆ. ಇನ್ಮೇಲೆ ನಾನು ಅವರ ಲೈಫ್‌ನಲ್ಲಿ ಆಟ ಆಡ್ತೀ‌ನಿ ಅಂತ ನಿರ್ಧಾರ ಮಾಡಿದ್ದಾಳೆ. ಸಾಕ್ಷಿ ಹುಡುಕುತ್ತಾ ಬಂದವಳಿಗೆ ಆತ ತಪ್ಪಿಸಿಕೊಂಡು ಬಿಟ್ಟ. ಆದರೂ ಲಕ್ಷ್ಮೀ ಹಾಗೂ ತನಗೆ ನ್ಯಾಯ ಬೇಕು ಎಂಬುದನ್ನಷ್ಟೇ ಯೋಚನೆ ಮಾಡಿದ್ದಾಳೆ.

Colors kannada Lakshmibaramma Written Update on July 4th episode

ಗನ್ ಹಿಡಿದು ಯೋಚನೆ

ಆ ವ್ಯಕ್ತಿ ತಪ್ಪಿಸಿಕೊಂಡ ಜಾಗದಲ್ಲಿ ಒಂದು ದೊಡ್ಡ ಬಾವಿಯಿತ್ತು. ಆ ಬಾವಿಯ ಮೇಲೆ ನಿಂತು ಕೀರ್ತಿ ಬೇರೆಯದ್ದೇ ಯೋಚನೆ ಮಾಡಿದ್ದಾಳೆ. ಕೈಯ್ಯಲ್ಲಿ ಗನ್ ಹಿಡಿದು ಇಲ್ಲ ಲಕ್ಷ್ಮೀಗೆ ಅನ್ಯಾಯವಾಗಬಾರದು ಎಂದು ಯೋಚಿಸಿದ್ದಾಳೆ. ಲಕ್ಷ್ಮೀಗೆ ಅನ್ಯಾಯವಾಗಬಾರದು ಎಂದರೆ ವೈಷ್ಣವ್‌ನ ಬಿಟ್ಟುಕೊಡಲೇಬೇಕು. ಇತ್ತ ನನಗೂ ನ್ಯಾಯ ಬೇಕು ಎಂದು ಯೋಚಿಸಿದ್ದಾಳೆ. ಕೈಯ್ಯಲ್ಲಿ ಬೇರೆ ಗನ್ ಇದೆ, ಮುಂದೆ ಬಾವಿ ಇದೆ. ಕೀರ್ತಿ ತಲೆಯಲ್ಲಿ ಆತ್ಮಹತ್ಯೆಯ ಯೋಚನೆ ಓಡಾಡುತ್ತಾ ಇದೆಯೋ ಕೊಲೆ ಮಾಡುವ ಹುನ್ನಾರ ಸೃಷ್ಟಿಯಾಗಿದೆಯೋ ಸ್ವಲ್ಪ ಸಮಯ ಬೇಕಾಗುತ್ತೆ ಗೊತ್ತಾಗುವುದಕ್ಕೆ.

ವೈಷ್ಣವ್‌ಗೆ ವೀಕ್ಷಕರ ಐಡಿಯಾ‌?

ಕೀರ್ತಿ ಮನಸಾರೆ ಇಷ್ಟಪಟ್ಟ ಹುಡುಗ ವೈಷ್ಣವ್. ಈಗಲೇ ಅಷ್ಟೇ ಪ್ರೀತಿ ಮಾಡುತ್ತಾಳೆ. ಆದರೆ ಕಾವೇರಿಯಿಂದಾಗಿ ಇಬ್ಬರು ದೂರವಾಗಬೇಕಾಯ್ತು. ಈಗ ಲಕ್ಷ್ಮೀಯನ್ನು ಬಿಟ್ಟುಕೊಡುವಂತೆ ಇಲ್ಲ. ಹೀಗಾಗಿ ವೈಷ್ಣವ್‌ಗೆ ಪ್ರೇಕ್ಷಕರು ಒಂದಷ್ಟು ಸಲಹೆಯನ್ನು ನೀಡಿದ್ದಾರೆ. ಇಬ್ಬರಿಗೂ ಅನ್ಯಾಯವಾಗಬಾರದು ಎಂದಾದರೆ ವೈಷ್ಣವ್ ಇಬ್ಬರನ್ನು ಮದುವೆಯಾಗಬೇಕು. ಯಾಕಂದ್ರೆ ಲಕ್ಷ್ಮೀ ಮುಗ್ಧೆ, ಕೀರ್ತಿ ಕೂಡ ಪ್ರೀತಿ ವಿಚಾರದಲ್ಲಿ ಅಷ್ಟೇ ಮುಗ್ದಳು. ಇಬ್ಬರಿಗೂ ಅನ್ಯಾಯವಾಗಬಾರದು ಅಲ್ವಾ. ಇದಕ್ಕೆ ಲಕ್ಷ್ಮೀ ಒಪ್ಪಬೇಕಲ್ಲ.

More from Filmibeat

English summary
Colors kannada Lakshmibaramma Written Update on July 4th episode. Here is the details about Will she kill Kaveri..? Will she commit suicide?
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X