Lakshmibaramma: ಸತ್ಯ ಹುಡುಕಾಟದಲ್ಲಿ ವಾರದಿಂದ ಬದಲಾಗಲಿಲ್ಲ ಕೀರ್ತಿ ಕಾಸ್ಟ್ಯೂಮ್: ಆಕೆ ಸ್ಥಿತಿಗೆ ಫ್ಯಾನ್ಸ್‌ಗೂ ಬೇಸರ

By ಎಸ್ ಸುಮಂತ್

ಕೀರ್ತಿ ಮತ್ತು ವೈಷ್ಣವ್ ಪ್ರಪಂಚವೇ ನಮ್ಮಿಬ್ಬರದ್ದು. ಈ ಪ್ರಪಂಚದಲ್ಲಿ ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬಂತೆ ಪ್ರೀತಿ ಮಾಡಿದ್ದರು. ಆದರೆ ದುರದೃಷ್ಟವಶಾತ್ ಇಬ್ಬರು ದೂರ ದೂರ ಆದ್ರು. ಕೀರ್ತಿಯ ಒಳ್ಳೆಯತನ ವೈಷ್ಣವ್‌ಗೆ ಗೊತ್ತೆ ಆಗಲಿಲ್ಲ. ವೈಷ್ಣವ್ ಕೂಡ ಕಾಲಿಗೆ ಬಿದ್ದು ಬೇಡಿಕೊಂಡ. ಆದರೂ ವೈಷ್ಣವ್‌ಗೆ ಒಳ್ಳೆಯದಾಗಬೇಕು ಅಂತ ಕೀರ್ತಿ ಕಲ್ಲಾಗಿದ್ದಳು. ಇಂದು ವೈಷ್ಣವ್ ಬೇಕೆಂದು ಬೇಡಿಕೊಂಡರು ಸಿಗುತ್ತಿಲ್ಲ.

ಅಂದೇ ಸತ್ಯ ಹೇಳಿದ್ದರೆ ವೈಷ್ಣವ್ ಬೇರೆ ಮದುವೆ ಆಗಲ್ಲ ಅಂತ ಕಾವೇರಿ ಯಾಮಾರಿಸಿದ್ದಳು. ಕಾವೇರಿಯ ತಾಳಕ್ಕೆ ಕೀರ್ತಿ ಚೆನ್ನಾಗಿಯೇ ಕುಣಿದಿದ್ದಳು. ಸಮಸ್ಯೆ ಆಗ್ತಾ ಇದೆ ಎಂದಾಗಲೇ ಕೀರ್ತಿಯನ್ನು ಕಾವೇರಿ ಯಾಮಾರಿಸುತ್ತಿದ್ದಳು. ಈಗ ಎಲ್ಲಾ ಸತ್ಯ ಹೊರ ಬಿದ್ದಿದೆ.

Colors kannada Lakshmibaramma Written Update on July 8th episode

ಸತ್ಯದ ಹುಡುಕಾಟದಲ್ಲಿ ಕೀರ್ತಿ

ಕೀರ್ತಿ ಮೇಲೆ ಅದ್ಯಾವಾಗ ಕೊಲೆ ಆರೋಪ ಬಂತು ಅಂದೇ ನಿರ್ಧಾರ ಮಾಡಿ ಬಿಟ್ಟಳು. ಇಲ್ಲಿ ಏನೋ ನಡೆಯುತ್ತಿದೆ, ಕಂಡು ಹಿಡಿಯಬೇಕು ಅಂತ. ರೌಡಿಗಳ ಹಿಂದೆ ಬಿದ್ದು ಅಲ್ಲಿಯೂ ಸಾಕ್ಷಿ ಸಮೇತ ಸತ್ಯ ತಿಳಿದುಕೊಂಡಳು. ಈಗ ಜ್ಯೋತಿಷಿ ಹತ್ತಿರ ಹೋಗಿ ವೈಷ್ಣವ್ ಡೇಟ್ ಆಫ್ ಬರ್ತ್, ಸಮಯ ಹೇಳಿ ಕಾವೇರಿ ಹೇಳಿದ್ದು ನಿಜವಾ ಎಂದು ಕೇಳಿದರೆ, ಈ ಜಾತಕದಲ್ಲಿ ದೋಷ ಇರಲು ಸಾಧ್ಯವೆ ಇಲ್ಲ ಎಂದಿದ್ದಾರೆ.

ಕಣ್ಣೀರಿಟ್ಟ ಕೀರ್ತಿ

ಕಾವೇರಿ ತನ್ನ ಜೀವನದಲ್ಲಿ ಆಡಿರುವ ಆಟವೂ ಕೀರ್ತಿ ಮುಂದೆ ಬಯಲಾಗಿದೆ. ಸುಳ್ಳು ಜಾತಕ ತೋರಿಸಿ, ನನ್ನ ಮತ್ತು ವೈಶ್ ನ ದೂರ ಮಾಡಿದ್ದಾರೆ ಎಂಬುದು ಅರ್ಥವಾಗಿದೆ. ಆದರೆ ಈಗ ಏನು ಮಾಡುವುದಕ್ಕೆ ಸಾಧ್ಯವಿಲ್ಲ. ನಿಮ್ಮ ಅಮ್ಮನೆ ಇದನ್ನೆಲ್ಲಾ ಮಾಡಿಸಿದ್ದು ಎಂದರು ವೈಷ್ಣವ್ ನಂಬುವುದಕ್ಕೆ ಸಾಧ್ಯವಿಲ್ಲ. ಜಾತಕದ ವಿಚಾರದಲ್ಲಿಯೇ ನಂಬದ ವೈಶ್ ಈಗ ಎಲ್ಲದಕ್ಕೂ ನಿಮ್ಮ ಕಾರಣ ಅಂದ್ರೆ ನಂಬಲ್ಲ.

ಕೀರ್ತಿ ಸ್ಥಿತಿಗೆ ಮರುಗಿದ ಫ್ಯಾನ್ಸ್

ಕೀರ್ತಿಗೆ ನೋವು ತಡೆದುಕೊಳ್ಳಲು ಆಗಲಿಲ್ಲ. ತಾನೂ ಇಷ್ಟೊಂದು ಮೋಸ ಹೋದೆನಾ ಅಂತ ತನಗೆ ತಾನೇ ಶಿಕ್ಷೆ ಕೊಟ್ಟುಕೊಂಡಿದ್ದಾಳೆ. ಕಪಾಳಕ್ಕೆ ಹೊಡೆದುಕೊಂಡು ಕಣ್ಣೀರು ಹಾಕಿದ್ದಾಳೆ. ಕೀರ್ತಿ ಎಷ್ಟರಮಟ್ಟಿಗೆ ಟೆನ್ಶನ್‌ನಲ್ಲಿದ್ದಾಳೆ ಅಂದ್ರೆ, ಕಳೆದ ಒಂದು ವಾರದಿಂದಾನೂ ಡ್ರೆಸ್ ಕೂಡ ಬದಲಾಯಿಸಿಲ್ಲ. ಅಷ್ಟು ಹುಡುಕಾಟದಲ್ಲಿದ್ದಾಳೆ. ಕೀರ್ತಿಯ ಸ್ಥಿತಿಗೆ ಫ್ಯಾನ್ಸ್ ಕರಗಿದ್ದಾರೆ. ಪ್ರೀತಿ ಕಳೆದುಕೊಂಡವರ ಸ್ಥಿತಿ ಹೀಗೆ ಇರುತ್ತೆ ಎಂದು ಸಮಾಧಾನ ಮಾಡಿದ್ದಾರೆ. ಅವತ್ತೆ ಜ್ಯೋತಿಷಿ ಹತ್ತಿರ ಹೋಗಬೇಕಿತ್ತು ಕೀರ್ತಿ ಅಂತ ಕೊರಗಿದ್ದಾರೆ.

Colors kannada Lakshmibaramma Written Update on July 8th episode

ಆಸ್ಪತ್ರೆಯಲ್ಲಿಯೇ ಹೂಗಳ ಅಲಂಕಾರ

ಇತ್ತ ವೈಷ್ಣವ್‌ಗೆ ಲಕ್ಷ್ಮಿಯನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಕಠಿಣ ವ್ರತ ಕೂಡ ಮಾಡಿದ. ಆದರೆ ಪ್ರಯೋಜನವಾಗಲಿಲ್ಲ. ಈಗ ಆಕೆಗಾಗಿ ಆಸ್ಪತ್ರೆಯಲ್ಲಿಯೇ ಹೂವಿನ ಅಲಂಕಾರ ಮಾಡಿ, ಲಕ್ಷ್ಮೀಯ ನಗುವಿಗಾಗಿ ಬಯಸುತ್ತಿದ್ದಾನೆ. ವೈಷ್ಣವ್ ಆಡುತ್ತಿರುವ ಪ್ರೀತಿಯ ಮಾತುಗಳಿಂದ ಲಕ್ಷ್ಮೀ ಎಚ್ಚರವಾಗಬಹುದು ಎಂಬ ನಂಬಿಕೆ. ಮನೆಯವರೆಲ್ಲ ಲಕ್ಷ್ಮೀಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ ಕಾವೇರಿ ಅವಳ ಪ್ರಾಣವನ್ನು ತೆಗೆಯುವುದಕ್ಕೆ ಹೊರಟಿದ್ದಳು. ಕುಸುಮಾ ಬಂದು ಪ್ರಾಣ ಉಳಿಸಿದ್ದಾಳೆ. ಲಕ್ಷ್ಮೀಯನ್ನು ವೈಷ್ಣವ್ ತನ್ನ ತಾಯಿ ಕಾವೇರಿಯಿಂದಾನೂ ಕಾಪಾಡಬೇಕಿದೆ.

More from Filmibeat

English summary
Colors kannada Lakshmibaramma Written Update on July 8th episode. Here is the details about keerthi Knowing the truth of the horoscope;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X