Lakshmibaramma: ಅಯ್ಯೋ ಲಕ್ಷ್ಮೀ ನಿಂಗಿನ್ನು ಸತ್ಯ ಗೊತ್ತಾಗಿಲ್ಲ; ಈಗ 'ಗೀತಾ' ಕೆಡಿ ಭಾನುಮತಿ ಕೂಡ ಬಂದ್ಲು ಹುಷಾರು!
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಬಹಳ ದಿನಗಳಿಂದ ಕಾದಿದ್ದಂತ ಸತ್ಯ ಬಟಾಬಯಲಾಗಿದೆ. ಯಾವ ಸತ್ಯ, ಯಾರಿಗೆ ತಲುಪಬಾರದು ಅಂತ ಕಾವೇರಿ ಅಂದುಕೊಂಡಿದ್ದಳೋ ಆ ಕರಾಳ ಸತ್ಯ ಒಬ್ಬರಿಗೆ ತಲುಪಿ ಆಗಿದೆ. ಮಾಡಿದ ಮೋಸ, ಮುಚ್ಚಿಟ್ಟ ಸುಳ್ಳಿನ ಕಂತೆಯನ್ನು ಕೀರ್ತಿಯಿಂದ ಕಾಪಾಡಿಕೊಂಡಿದ್ದಳು. ಕೀರ್ತಿ ಎಮೋಷನಲ್ ಆಗಿ, ಎಲ್ಲಾ ಸತ್ಯ ಹೇಳಿ ಬಿಡುತ್ತೀನಿ ಎಂದಾಗೆಲ್ಲಾ ವೇಷ್ಣವ್ ಆಸೆ ತೋರಿಸಿ ಸಮಾಧಾನ ಮಾಡುತ್ತಿದ್ದಳು ಕಾವೇರಿ. ಆದರೆ ಕೀರ್ತೊಯ ತಾಳ್ಮೆ ಕಟ್ಟರ ಒಡೆದಿದೆ. ಸತ್ಯ ಹೊರ ಬಂದಿದೆ.
ಬೇರೊಬ್ಬರ ಗಂಡನ ಮೇಲೆ ಕಣ್ಣಾಕಿದವಳು ನೀನು ಅಂದಾಗೆಲ್ಲಾ ಲಕ್ಷ್ಮೀಗೆ ಸತ್ಯ ಹೇಳುವ ಸಾಹಸ ಮಾಡಿದವಳು ಕೀರ್ತಿ. ಆದರೆ ಹೇಳುವುದಕ್ಕೆ ಆಗಿರಲಿಲ್ಲ. ಈಗ ವೈಷ್ಣವ್ ಕೈ ತಪ್ಪಿ ಹೋಗಿ ಬಿಡುತ್ತಾನೆ ಎಂಬ ಕಾರಣಕ್ಕೆ, ಲಕ್ಷ್ಮೀ ಹಳೇ ಗರ್ಲ್ ಫ್ರೆಂಡ್ ತಾನೇ ಎಂದು ಗೊತ್ತಾದ ಧೈರ್ಯಕ್ಕೆ ಜಾತಕದ ವಿಚಾರವನ್ನು ಬಾಯ್ಬಿಟ್ಟಿದ್ದಾಳೆ. ತ್ಯಾಗ ಮಾಡಿದ್ದೀನಿ ವೈಷ್ಣವ್ ನ ವಾಪಾಸ್ ಕೊಡು ಎಂದು ಕೇಳಿದ್ದಾಳೆ. ಆದರೆ ವೈಷ್ಣವ್ ನನ್ನು ಬಿಟ್ಟು ಕೊಡಲು ಲಕ್ಷ್ಮೀ ಒಪ್ಪಿಲ್ಲ.

ಅತ್ತೆಯ ಬಳಿ ಸರಣಿ ಪ್ರಶ್ನೆ
ಕೀರ್ತಿ ಹೇಳಿದ ಒಂದೊಂದು ಮಾತುಗಳು ಲಕ್ಷ್ಮೀ ಮನಸ್ಸನ್ನು ಕೆಡಿಸಿತ್ತು. ಮನೆಗೆ ಬಂದು ರೂಮಿನ ಬೆಳಕು ಹಾರಿಸಿ, ಕ್ಯಾಂಡಲ್ ಬೆಳಕಲ್ಲಿ ಸತ್ಯ ಹುಡುಕಲು ಹೊರಟಳು. ಅಲ್ಲಿಗೆ ಬಂದ ಕಾವೇರಿಗೆ ಲಕ್ಷ್ಮೀಯ ಪ್ರಶ್ನೆಗಳು ತಲೆ ತಿರುಗುವಂತೆ ಮಾಡಿತ್ತು. ನಿಮ್ಮಿಂದ ಮೂರು ಜನರ ಜೀವನ ಹಾಳಾಯ್ತಲ್ಲ, ಅದಕ್ಕೆ ಕಾರಣ ನೇರವಾಗಿ ನೀವೆ ಎಂದು ಹೇಳಿದಾಗ ಕಾವೇರಿಗೆ ಆತಂಕ ಶುರುವಾಗಿತ್ತು.
ಮೊಂಡು ವಾದವನ್ನೇ ಮಾಡಿದ ಕಾವೇರಿ
ಕಾವೇರಿ ಆ ಕ್ಷಣಕ್ಕೆ ಹೆದರುತ್ತಾಳೆ ಅಷ್ಟೇ. ಆದರೆ ಸೊಸೆಗೆ ಯಾಮಾರಿಸುವಷ್ಟು ಧೈರ್ಯ, ಬುದ್ದಿವಂತಿಕೆ ಇದೆ. ತನ್ನ ತಪ್ಪನ್ನು ಅಲ್ಲಿಯೂ ಒಪ್ಪಿಕೊಳ್ಳದೆ, ಕೀರ್ತಿ ಬಿಟ್ಟು ಹೋಗಿದ್ದಕ್ಕೆ ಅಲ್ವಾ ನಿಂಗೆ ಇಷ್ಟೊಳ್ಳೆ ಜೀವನ ಸಿಕ್ಕಿರುವುದು, ನನ್ನ ಪುಟ್ಟನಂಥ ಗಂಡ ಸಿಕ್ಕಿರುವುದು. ನೆಮ್ಮದಿಯಿಂದ ಜೀವನ ಮಾಡುವುದಕ್ಕೆ ಏನು. ಆಗ ಪುಟ್ಟನ ಜೀವ ಉಳಿಯಬೇಕಿತ್ತು. ಅದಕ್ಕೆ ಆ ರೀತಿ ಮಾಡಿದೆ. ಈಗ ಕೀರ್ತಿ ಕೇಳಿದರೆ ಅದೇಗೆ ಬಿಟ್ಟು ಕೊಡುವುದಕ್ಕೆ ಆಗುತ್ತದೆ ಎಂದು ಕಡ್ಡಿ ತುಂಡಾಗುವಂತೆ, ಲಕ್ಷ್ಮೀಗೆ ಉತ್ತರವೇ ಸಿಗದಂತೆ ಮಾತನಾಡಿದಳು.

ಸುಳ್ಳನ್ನು ಸತ್ಯ ಎಂದುಕೊಂಡ ಲಕ್ಷ್ಮೀ
ಕೀರ್ತಿ ಹೇಳಿರುವುದನ್ನೇ ಲಕ್ಷ್ಮೀ ಸತ್ಯ ಎಂದು ನಂಬಿದ್ದಾಳೆ. ವೈಷ್ಣವ್ ಜಾತಕದಲ್ಲಿ ಕಂಟಕ ಇದೆ ಎಂದೇ ನಂಬಿದ್ದಾಳೆ. ಈ ಕಹಿ ಸತ್ಯ ಅತ್ತ ಕೀರ್ತಿಗೂ ಗೊತ್ತಿಲ್ಲ, ಲಕ್ಷ್ಮೀಗೂ ಅರ್ಥವಾಗುತ್ತಿಲ್ಲ. ಇರಬಹುದು ಎಂದು ನಂಬಿರುವ ಲಕ್ಷ್ಮೀ, ವೈಷ್ಣವ್ ಬಂದ ಮೇಲೆ ಸತ್ಯ ಹೇಳಿಯೇ ತೀರುತ್ತೇನೆ ಎಂದು ಕೂತಿದ್ದಾಳೆ.
ಕಾವೇರಿಗೆ ಬಲ ತುಂಬಲು ಬಂದ ಕುತಂತ್ರಿ
ಕಾವೇರಿ ಇಷ್ಟು ದಿನ ಯಾವ ಸತ್ಯ ಗೊತ್ತಾಗಬಾರದು ಎಂದು ಎಲ್ಕವನ್ನು ಗೊಂಬೆಯಂತೆ ಆಡಿಸುತ್ತಿದ್ದಳೋ ಆ ಸತ್ಯ ಬಯಲಾಗಿದೆ. ಸೊಸೆಯನ್ನ ಹೇಗೋ ಸಂಭಾಳಿಸಿದ್ದಾಳೆ. ಈಗ ಮಗನಿಗೆ ಗೊತ್ತಾದರೇ ಅಮ್ಮನ ಮೇಲಿನ ಪ್ರೀತಿ ಉಳಿಯುವುದು ಅನುಮಾನ, ಅಮ್ಮನನ್ನು ನೋಡುವ ರೀತಿ ಬದಲಾಗಲು ಬಹುದು. ಇದೇ ಆತಂಕ ಕಾವೇರಿಗೆ. ಯೋಚನೆ ಮಾಡುವಾಗಲೇ ಭಾನುಮತಿಯ ಆಗಮನವಾಗಿದೆ. ಗೀತಾ ಕುಟುಂಬವನ್ನು ಸಂಪೂರ್ಣವಾಗಿ ನಾದಸ ಮಾಡಲು ಹೋಗಿದ್ದ ಖಳನಾಯಕಿ. ಕಾವೇರಿಗೆ ಬೆಸ್ಟ್ ಫ್ರೆಂಡ್. ಸಮಾನ ಮನಸ್ಕರಲ್ಲವೇ. ಈಗ ಭಾನುಮತಿಯ ಆಗಮನ ಕಾವೇರಿಯ ಕುತಂತ್ರಕ್ಕೆ ಆನೆಬಲ ಬಂದಂತೆ ಆಗಿದೆ.


Click it and Unblock the Notifications











