Lakshmibaramma: ಗೀತಾ ಸಂಸಾರ ಹಾಳು ಮಾಡಿದ್ದ ಭಾನುಮತಿ ಬಂದ್ರೆ ಕೀರ್ತಿ ಲೈಫ್ ಹಾಳಾಗದೇ ಇರುತ್ತಾ?

By ಎಸ್ ಸುಮಂತ್

ಕಾವೇರಿಯ ಸ್ವಾರ್ಥ ಇಂದು ಲಕ್ಷ್ಮೀ ಪ್ರಾಣಕ್ಕೆ ಕುತ್ತು ತಂದು ನಿಲ್ಲಿಸಿದೆ. ಮಗ ಬಿಟ್ಟು ಹೋಗಬಾರದೆಂದು, ಮನೆಯಲ್ಲಿ ಅಧಿಕಾರ ಹಸ್ತಾಂತರವಾಗಬಾರದೆಂದು ಕಾವೇರಿ ಹೇಳಿದ ಸುಳ್ಳು ಒಂದಲ್ಲ. ಆದರೆ ಅದರಿಂದ ನಷ್ಟ ಅನುಭವಿಸುತ್ತಿರುವುದು ಮಾತ್ರ ಮನೆಯವರು. ವೈಷ್ಣವ್ ಪ್ರೀತಿ ಕೀರ್ತಿ ಎಂಬುದನ್ನು ಮುಚ್ಚಿಟ್ಟರು, ಕಾವೇರಿ ಸುಳ್ಳು ಹೇಳಿದ್ದು ಯಾರಿಗೂ ಗೊತ್ತೆ ಆಗಲಿಲ್ಲ.

ಕೀರ್ತಿ ಇಲ್ಲಿಯವರೆಗೂ ವೈಷ್ಣವ್ ಸಿಗುತ್ತಾನೆ ಎಂಬ ಭ್ರಮೆಯಿಂದಾನೇ ಕಾದಳು. ಆದರೆ ವೈಷ್ಣವ್ ದಿನೇ ದಿನೇ ಅವಳಿಂದ ದೂರ ಹೋಗುವುದಕ್ಕೇನೆ ಪ್ರಯತ್ನಿಸಿದ. ಇದನ್ನ ತಡೆಯಲಾರದೆ ಕೀರ್ತಿ ಕಡೆಗೂ ಲಕ್ಷ್ಮೀ ಬಳಿ ಸತ್ಯ ಹೇಳಿದಳು. ಆದರೆ ಅದೇ ಕಹಿ ಸತ್ಯವನ್ನ ಕಾವೇರಿ ಬಳಿ ಕೇಳಿದರೆ, ಎಲ್ಲಾ ಮಗನ ಬದುಕಿಗಾಗಿ ಅಂತ ಹೇಳಿ ಲಕ್ಷ್ಮೀಯ ಬಾಯನ್ನೇ ಮುಚ್ಚಿಸಿದಳು.

Colors kannada Lakshmibaramma Written Update on June 18th episode

ಲಕ್ಷ್ಮೀ-ಕೀರ್ತಿ ಕಿಡ್ನ್ಯಾಪ್ ಐಡಿಯಾ

ಕಾವೇರಿಗೆ ಕಷ್ಟ ಎಂದು ಕುಳಿತಾಗ ಕೈ ಹಿಡಿದಿದ್ದು ಭಾನುಮತಿ. ಆಕೆಯ ಕ್ಲೋಸ್ ಫ್ರೆಂಡ್. ಲಕ್ಷ್ಮೀ-ಕೀರ್ತಿ ಇಬ್ಬರಿಗೂ ಸತ್ಯ ಗೊತ್ತಾಗಿ ಹೋಯ್ತು, ಈಗೇನಪ್ಪ ಮಾಡೋದು ಎನ್ನುವಾಗಲೇ ಜೊತೆಗೂಡಿದ್ದು, ಭಾನುಮತಿ. ನಾನಿರುವಾಗ ನಿನಗ್ಯಾಕೆ ಚಿಂತೆಮ ಈಗ ಇಬ್ಬರಲ್ಲಿ ಯಾರು ಇರಬೇಕು ಅಂತ ಅಪ್ಶನ್ ಕೇಳಿ, ಭಾನುಮತಿ ಬೇರೆಯದ್ದೇ ಪ್ಲ್ಯಾನ್ ಮಾಡಿ ಬಿಟ್ಟಳು. ಅದರಲ್ಲಿ ದೇವಸ್ಥಾನಕ್ಕೆಂದು ಹೋದ ಲಕ್ಷ್ಮೀ ಹಾಗೂ ಕೀರ್ತಿ ಇಬ್ಬರ ಕಿಡ್ನ್ಯಾಪ್.

ಕೀರ್ತಿ ಮೇಲೆ ಬರುವಂತೆ ಪ್ಲ್ಯಾನ್

ಕಿಡ್ನ್ಯಾಪರ್ಸ್ ಕಡೆಯಿಂದ ಪದೇ ಪದೇ ಲಕ್ಷ್ಮೀ ಮೇಲೆ ಅನುಮಾನ ಬರುವಂತ ಮಾತುಗಳು. ಕೀರ್ತಿಯನ್ನೇ ಬಾಸ್ ಮಾಡಿದ್ದರು. ಬಾಸ್ ನೀವೇಳಿದಂತೆ ಮಾಡ್ತಾ ಇದ್ದೀವಿ ಅಂತ. ಲಕ್ಷ್ಮೀಗೆ ಒಂದು ಕ್ಷಣ ಗೊಂದಲವಾಗಿತ್ತು‌. ಕೀರ್ತಿಗೂ ಕೋಪ ಬಂದಿತ್ತು. ಆದರೆ ಏನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅದೇ ಸಮಯಕ್ಕೆ ಕಾರುಣ್ಯ ಕೂಡ ಅಲ್ಲಿಗೆ ಬಂದಿದ್ದಾಳೆ. ಮಗಳನ್ನು ಬಿಡಿಸಿಕೊಂಡು ಹೋಗುವ ಪ್ರಯತ್ನ ಪಟ್ಟಿದ್ದಾಳೆ. ಆದರೆ ಕಾರುಣ್ಯಗೆ ಜಾಗ ಗೊತ್ತಾಗುವಂತೆ ಮಾಡಿದ್ದು, ಅಲ್ಲಿ ನಾಟಕ ಆಗುವಂತೆ ನೋಡಿಕೊಂಡಿದ್ದು ಕೂಡ ಭಾನುಮತಿ. ಆ ನಾಟಕ ಕೀರ್ತಿಯೇ ಕಿಡ್ನ್ಯಾಪ್ ಮಾಡಿಸಿದ್ದು ಎಂದು ಲಕ್ಷ್ಮೀ ಬಲವಾಗಿ ನಂಬುವಂತ ವಾತಾವರಣವನ್ನು ನಿರ್ಮಾಣ ಮಾಡಿತ್ತು.

Colors kannada Lakshmibaramma Written Update on June 18th episode

ಲಕ್ಷ್ಮೀಗೆ ಚಾಕು ಹಾಕಿದ ಕೀರ್ತಿ

ಮೊದಲು ಅಲ್ಲಿಂದ ಬಿಡಿಸಿಕೊಂಡು ಹೋಗಲು ಇಬ್ಬರು ಪ್ರಯತ್ನ ಪಟ್ಟರು‌. ಅಷ್ಟರಲ್ಲಿ ರೌಡಿಗಳು ಲಕ್ಷ್ಮೀಯ ಕುತ್ತಿಗೆ ಹಿಡಿದಿದ್ದರು. ಕೀರ್ತಿ ಅವಳನ್ನು ಕಾಪಾಡುವುದಕ್ಕೆ ಪ್ರಯತ್ನ ಪಟ್ಟಳು. ಅಲ್ಲಿಯೇ ಬಿದ್ದಿದ್ದ ಚಾಕು ಹಿಡಿದು ಕಾಪಾಡಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟಳು. ಆದರೆ ರೌಡಿಗೆ ಚಾಕು ಚುಚ್ಚಲು ಹೋಗಿ ಲಕ್ಷ್ಮೀಗೆ ಚುಚ್ಚಿದಳು. ತಕ್ಷಣ ರೌಡಿಗಳು, ಬಾಸ್ ಪ್ಲ್ಯಾನ್ ಬಿ ಎಕ್ಸಿಕ್ಯೂಟ್ ಮಾಡಿಬಿಟ್ರಾ ಎಂದು ಮತ್ತೆ ಲಕ್ಷ್ಮೀ ಮನಸ್ಸಲ್ಲಿ ಅನುಮಾನ ಹುಟ್ಟಿಸಿದ.

ಹೆಂಡತಿಯ ಸ್ಥಿತಿಗೆ ವೈಷ್ಣವ್ ಕಣ್ಣೀರು

ವೈಷ್ಣವ್ ಮೇಲೆ ಕೀರ್ತಿ ಪ್ರಾಣವನ್ನೇ ಇಟ್ಟುಕೊಂಡಿದ್ದಾಳೆ. ಜೇಗಾದರೂ ಮಾಡಿ ವೈಷ್ಣವ್ ನನ್ನು ಪಡೆಯಬೇಕೆಂಬ ಹಠ ಅವಳದ್ದು. ಆದರೆ ಲಕ್ಷ್ಮೀಯನ್ನು ಸಾಯಿಸುವ ಉದ್ದೇಶ ಅವಳದ್ದಾಗಿರಲಿಲ್ಲ. ಆದರೆ ಭಾನುಮತಿ ಮಾಡಿದ ಪ್ಲ್ಯಾನ್ ಅಲ್ಲಿ ವರ್ಕೌಟ್ ಆಗಿದೆ. ಕೀರ್ತಿಯೇ ಲಕ್ಷ್ಮೀಗೆ ಚುಚ್ಚಿದ್ದಾಳೆ. ಅದನ್ನ ವೈಷ್ಣವ್ ಕಣ್ಣಾರಡ ನೋಡಿದ್ದಾನೆ. ಇನ್ನೆಲ್ಲಿ ವೈಷ್ಣವ್ ನ ಮರಳಿ ಪಡೆಯಬೇಕೆಂಬ ಕೀರ್ತಿಯ ಕಾಯುವಿಕೆ. ಎಲ್ಲವೂ ಹಾಳಾಯಿತು‌ ವೈಷ್ಣವ್ ದ್ವೇಷ ಹೆಚ್ಚಾಗುವಂತೆ ಮಾಡಿ ಆಯ್ತು.

More from Filmibeat

English summary
Lakshmibaramma kannada serial today episode. Here is the details about Keerti stabbed Lakshmi with a knife;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X