Lakshmibaramma: ಪಾಪ ಅನ್ನಿಸ್ತಾ ಇದೆ ಕೀರ್ತಿ ಸ್ಥಿತಿ; ನೋಡುಗರಿಗೂ ನೋವು, ವೈಷ್ಣವ್ ಒಮ್ಮೆ ನಂಬು ಅಂತಿದ್ದಾರೆ ಪ್ರೇಮಿಗಳು!

By ಎಸ್ ಸುಮಂತ್

ಕಾವೇರಿಯ ಆಟಕ್ಕೆ ಕೀರ್ತಿ ಕಂಪ್ಲೀಟ್ ಬಲಿಯಾಗಿ ಬಿಟ್ಟಳು. ಕಾವೇರಿ ಯಾವುದೇ ಕಾರಣಕ್ಕೂ ತಾನೇ ಇದೆಲ್ಲ ಮಾಡಿಸಿದ್ದು ಅಂತ ಒಪ್ಪಿಕೊಳ್ಳುವುದಕ್ಕೆ ಚಾನ್ಸೇ ಇಲ್ಲ. ಯಾಕಂದ್ರೆ ತಾನೂ ಸಿಕ್ಕಿ ಬೀಳ್ತೀನಿ ಎಂದುಕೊಂಡಾಗೆಲ್ಲಾ ಕೀರ್ತಿಗೆ ಮಸ್ಕಾ ಹೊಡೆದಿದ್ದೆ ಜಾಸ್ತಿ. ಕೀರ್ತಿನು ಹಾಗೆ ಪ್ರತಿ ಸಲ ಕಾವೇರಿಯ ಮಾತನ್ನು ನಂಬುತ್ತಿದ್ದಳು.

ಕಾವೇರಿ ಪಕ್ಕಾ ಪ್ಲ್ಯಾ‌ನ್ ಮಾಡ್ತಾ ಇದ್ದಳು. ತನ್ನ ಪುಟ್ಟ‌ನ ಮುಂದೆ ತಾನೇ ಒಳ್ಳೆಯವಳು ಅಂತ ತೋರಿಸಿಕೊಳ್ಳುವುದಕ್ಕೆ ಇನ್ನಿಲ್ಲದ ನಾಟಕ ಮಾಡುತ್ತಿದ್ದಳು. ಈಗ ಆ ನಾಟಕವೆಲ್ಲಾ ವೈಷ್ಣವ್ ಕಣ್ಣಿಗೆ ಸತ್ಯವಾಗಿ ಕಾಣಿಸುತ್ತಿದೆ. ಕೀರ್ತಿ ಹೇಳಿದ ಮಾತು ಸುಳ್ಳಾಗಿ ಕೇಳಿಸುತ್ತಿದೆ. ಕೀರ್ತಿ ಅತ್ತು ಕರೆದರೂ ನಂಬುವುದಕ್ಕೆ ವೈಷ್ಣವ್ ರೆಡಿ ಇಲ್ಲ.

Colors kannada Lakshmibaramma Written Update on June 24th episode

ಆಸ್ಪತ್ರೆಗೆ ಬಂದ ಭಾಗ್ಯಾಗೆ ತಿಳಿಯಿತು ಸತ್ಯ

ಗುಂಡು ಎಂದರೆ ಭಾಗ್ಯಾಗೆ ಪಂಚಪ್ರಾಣ. ಮಲತಾಯಿಯ ಮಗಳೇ ಆದರೂ ಗುಂಡುಗೆ ಒಳ್ಳೆ ಜೀವನ ಸಿಗಬೇಕು ಎಂದೇ ಬಯಸಿದವಳು ಭಾಗ್ಯಾ. ವೈಷ್ಣವ್ ನನ್ನು ನೋಡಿದ್ದ ಕಾರಣಕ್ಕೆ ಅವನಿಗೆ ಕೊಟ್ಟು ಮದುವೆ ಮಾಡಿದಳು. ಆದರೆ ಈಗ ಕೀರ್ತಿಯಿಂದ ಲಕ್ಷ್ಮೀ ಪ್ರಾಣಕ್ಕೆ ಅಪಾಯ ಬಂದಿದೆ. ಯಾಕೆ ಎಂದು ಕಿರುಚಿದಾಗ ಭಾಗ್ಯಾಳ ಮುಂದೆ ಕೀರ್ತಿ-ವೈಷ್ಣವ್ ಲವ್ ಸ್ಟೋರಿ ಅನಾವರಣವಾಗಿದೆ.

ಜಾತಕ ದೋಷದ ಸತ್ಯ ಹೇಳಿದ ಕೀರ್ತಿ

ಅತ್ತ ಕೀರ್ತಿ ಸತ್ಯ ಹೇಳುವುದಕ್ಕೆ ರೆಡಿಯಾಗಿದ್ದಾಳೆ. ಇನ್ಮುಂದೆ ವೈಷ್ಣವ್ ನಂಗೆ ಸಿಕ್ಕಿಯೇ ಬಿಡುತ್ತಾನೆಂದು ಬಯಸಿದ್ದಾಳೆ. ಅದಕ್ಕೆ ಜಾತಕದ ವಿಚಾರವನ್ನು ವೈಷ್ಣವ್ ಬಳಿ ಹೇಳಿದ್ದಾಳೆ. ಲಕ್ಷ್ಮೀಗೂ ಹೇಳಿದ್ದೆ. ಅದಕ್ಕೆ ಇವತ್ತು ಕೂತು ಮಾತಾಡೋಣಾ ಎಂದು ಕರೆದಿದ್ದಳು ಎಂದಿದ್ದಾಳೆ‌. ಏನದು ವಿಚಾರ ಎಂದು ವೈಷ್ಣವ್ ಕೇಳಿದಾಗ ನಿನ್ನ ಜಾತಕದಲ್ಲಿ ದೋಷ ಇತ್ತು‌. ನಾನೇನಾದರೂ ಮದುವೆಯಾಗಿದ್ದರೆ ನಿನ್ನ ಪ್ರಾಣಕ್ಕೆ ಅಪಾಯ ಇತ್ತು. ನಿನಗಿಂತ ನನ್ನ ಪ್ರೀತಿ ದೊಡ್ಡದಲ್ಲ ಅಂತ ಲಕ್ಷ್ಮೀ ಜೊತೆಗೆ ಮದುವೆ ಮಾಡಿಸಿದೆ. ಈಗ ದೋಷ ಮುಗಿದಿದೆ. ಅದಕ್ಕೆ ನೀನು ನನಗೆ ಸಿಗಬೇಕು ಎಂದಿದ್ದಾಳೆ.

ಕಾವೇರಿ ಮೇಲೆ ಹೇಳಿದ ಕಾರುಣ್ಯ

ವೈಷ್ಣವ್, ಕೀರ್ತಿಯ ಮಾತನ್ನೆಲ್ಲಾ ನಂಬುತ್ತಾನೆ ಅಂತಾನೇ ನಂಬಿದ್ದಳು. ಆದರೆ ವೈಷ್ಣವ್ ನಂಬಲಿಲ್ಲ. ಕೀರ್ತಿಯನ್ನೇ ಜೋರಾಗಿ ತಳ್ಳಿದ. ಅಷ್ಟರಲ್ಲಿ ಬಂದ ಕಾರುಣ್ಯ, ಇದನ್ನೆಲ್ಲ ನಿಮ್ಮ ಅಮ್ಮನೆ ಹೇಳಿದ್ದು ಎಂದಿದ್ದಾಳೆ. ಆಗ ವೈಷ್ಣವ್ ಗೆ ಇನ್ನಷ್ಟು ಕೋಪ ಬಂದಿದೆ. ಕಾರುಣ್ಯ ಆಂಟಿ ಬಂದಾದ ಮೇಲೂ ಯಾಕೆ ನಮ್ಮ ಅಮ್ಮನ ಹೆಸರು ಬರಲಿಲ್ವಲ್ಲ ಅಂತ ಯೋಚಿಸ್ತಾ ಇದ್ದೆ ಎಂದಿದ್ದಾನೆ. ವೈಷ್ಣವ್ ಈಗ ಅಮ್ಮನ ಬಗ್ಗೆ ಯಾರೂ ಏನೇ ಹೇಳಿದರು ನಂಬುವ ಸ್ಥಿತಿಯಲ್ಲಿ ಇಲ್ಲ.

ಕೀರ್ತಿಯ ಕಣ್ಣೀರಿಗೆ ಕರಗಿದ ನೋಡುಗರು

ಕೀರ್ತಿ ಹೇಳಿದ ಮಾತಿಗೆ ತನ್ನೆಲ್ಲ ಹಳೆಯ ದಿನಗಳನ್ನು ನೆನೆದ. ಅಂದು ನಾಟಕದಲ್ಲಿ ಕಾವೇರಿಯೇ ಕೀರ್ತಿಯ ಕಾಲು ಹಿಡಿದುಕೊಂಡಿದ್ದಳು. ಅದನ್ನೇ ಈಗ ವೈಷ್ಣವ್ ನೆನಪಿಸಿದ. ಅಂದು ಅಮ್ಮನೇ ನಿನ್ನ ಕಾಲಿಡಿದು ಕೇಳಿಕೊಂಡರು ಅಲ್ವಾ ಎಂದು. ಈಗ ಕೀರ್ತಿ ಬಳಿ ಉತ್ತರವೇ ಇಲ್ಲ. ವೈಷ್ಣವ್ ನನ್ನು ನಂಬಿಸಲು ಪರಿಪರಿಯಾಗಿ ಬೇಡಿಕೊಂಡಳು. ಇಲ್ಲ ವೈಶ್ ನಾನು ಸುಳ್ಳು ಹೇಳ್ತಿಲ್ಲ. ನಿನ್ನ ಜಾತಕದಲ್ಲಿ ದೋಷ ಇತ್ತು ಎಂದೇ ಬೇಡಿಕೊಳ್ಳುತ್ತಿದ್ದಳು. ಆದರೆ ವೈಷ್ಣವ್ ಅವಳ ಮಾತುಗಳನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಐ ಹೇಟ್ ಯು ಎಂದು ಮುಂದೆ ಹೋದ.. ಆ ಮಾತಿಗೆ ಕೀರ್ತಿ ಕುಸಿದು ಬಿದ್ಲು‌. ಕೀರ್ತಿಯ ಮಾತು ಕೇಳುತ್ತಿದ್ದವರಿಗೆ ಕಣ್ಣಲ್ಲಿ ನೀರು ಬರುವಷ್ಟಿತ್ತು ಅವಳ ನೋವು, ಯಾತನೆ.

More from Filmibeat

English summary
Colors kannada Lakshmibaramma Written Update on June 24th episode. Here is the details about Vaishnav does not believe that he begged for keerthi
Read more about: tv serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X