Lakshmibaramma: ಲಕ್ಷ್ಮೀಯನ್ನು ಆಸ್ಪತ್ರೆಗೆ ಸೇರಿಸುವ ದೃಶ್ಯ ಸೆರೆಹಿಡಿದಿದ್ದೇಗೆ? ಬೆಡ್ ಮೇಲೆ ಆಕೆ ಇರ್ಲಿಲ್ಲ!

By ಎಸ್ ಸುಮಂತ್

ಯಾವುದೇ ಧಾರಾವಾಹಿಯಾಗಲಿ ನಾವೂ ಟಿವಿಯಲ್ಲಿ ನೋಡುವಾಗ ದೃಶ್ಯ ವೈಭವ ಚೆನ್ನಾಗಿಯೇ ಇರುತ್ತದೆ. ಶ್ರೀಮಂತಿಕೆಯನ್ನು ತೋರಿಸುವಾಗ ಶ್ರೀಮಂತಿಕೆ, ಬಡವರನ್ನು ತೋರಿಸುವಾಗ ಬಡತನ, ವ್ಯಕ್ತಿಯನ್ನು ಹೈಲೇಟ್ ಮಾಡುವಾಗ ಆತ ಮಾತ್ರ.

ಹೀಗೆ ಕಥೆಗೆ ತಕ್ಕ ಹಾಗೇ ನೋಡುಗನಿಗೆ ಏನು ಬೇಕೋ ಅಷ್ಟನ್ನು ಅದ್ಭುತವಾಗಿ ತೋರಿಸಲಾಗುತ್ತದೆ. ಇದಕ್ಕೆಲ್ಲಾ ಕ್ಯಾಮರಾ ಮಂದಿಯ ಕೈಚಳಕ ಚೆನ್ನಾಗಿ ಇರಬೇಕಾಗುತ್ತದೆ. ಆನ್ ಲೈನ್ ಎಡಿಟರ್ ಬೆಂಬಲವೂ ಬೇಕಾಗುತ್ತದೆ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಲಕ್ಷ್ಮೀಬಾರಮ್ಮ ಧಾರಾವಾಹಿಯ ಆ ಒಂದು ದೃಶ್ಯ.

Colors kannada Lakshmibaramma Written Update on June 26th episode

ಕೀರ್ತಿಗೆ ಎಲ್ಲವೂ ಕೈ ಮೀರಿ ಹೋಗುತ್ತಿದೆ ಎನಿಸಿತು. ಕಾವೇರಿ ನಂಬಿಕೊಂಡು ಕೂತರೆ ಏನು ಪ್ರಯೋಜವಿಲ್ಲ ಎನಿಸಿತ್ತು. ವೈಶ್ ನ ಪಡೆಯುವುದಕ್ಕೆ ಲಕ್ಷ್ಮೀಯ ಬಳಿ ಎಲ್ಲವನ್ನು ಹೇಳಿಬಿಡುವ ನಿರ್ಧಾರ ಮಾಡಿದಳು. ಆ ನಿರ್ಧಾರದಂತೆ ಲಕ್ಷ್ಮೀಗೆ ಸತ್ಯವೂ ಗೊತ್ತಾಯ್ತು. ಆದರೆ ಕಾವೇರಿಯ ಕ್ರಿಮಿನಲ್ ಬುದ್ದಿಯಿಂದ ಕೀರ್ತಿಗೆ ಎಲ್ಲವೂ ಉಲ್ಟಾ ಆಯಿತು. ಲಕ್ಷ್ಮೀ ಆಸ್ಪತ್ರೆ ಸೇರುವಂತೆ ಆಯಿತು.

ಲಕ್ಷ್ಮೀಯನ್ನು ಕಾಪಾಡಿದ ವೈಷ್ಣವ್

ಕೀರ್ತಿ ಹಾಗೂ ಲಕ್ಷ್ಮೀಯನ್ನು ಕೂಡ ಕಿಡ್ನ್ಯಾಪ್ ಮಾಡುತ್ತಾರೆ. ಇದು ಕಾವೇರಿಯದ್ದೇ ಪ್ಲ್ಯಾನ್. ಭಾನುಮತಿ ಕೊಟ್ಟ ಪ್ಲ್ಯಾನ್. ಲಕ್ಷ್ಮೀಯ ಮನಸ್ಸಲ್ಲಿ ಕೀರ್ತಿಯೇ ಮಾಡಿಸಿದ್ದು ಎಂಬ ಭಾವನೆ ಬರುವಂತೆ ಮಾಡಿದೆ. ರೌಡಿಗಳಿಗೆ ಚುಚ್ಚುವುದಕ್ಕೆ ಹೋದಾಗ ತಪ್ಪಿ ಲಕ್ಷ್ಮೀಗೆ ಚುಚ್ಚಿದ್ದಾಳೆ. ಅದೇ ಸಮಯಕ್ಕೆ ವೈಷ್ಣವ್ ಕೂಡ ಅಲ್ಲಿಗೆ ಬಂದಿದ್ದಾನೆ. ಎಲ್ಲವನ್ನು ಕಂಡು ಕೀರ್ತಿಯೇ ಮೇಲೆಯೇ ಆರೋಪ ಬಂದಿದೆ. ತಕ್ಷಣ ವೈಷ್ಣವ್ ಲಕ್ಷ್ಮೀಯನ್ನು ಆಸ್ಪತ್ರೆಗೆ ಸೇರಿಸಿದ್ದಾನೆ.

ರಿಸ್ಕ್ ಇರೋದೆ ಕ್ಯಾಮರಾಮೆನ್‌ಗೆ

ಈ ಆಸ್ಪತ್ರೆ ದೃಶ್ಯಗಳನ್ನು ಹೇಗೆ ಶೂಟ್ ಮಾಡುತ್ತಾರೆ ಎಂಬುದು ನೋಡುಗರಿಗೆ ಅಷ್ಟೊಂದು ಐಡಿಯಾ ಇರುವುದಿಲ್ಲ. ಎರಡ್ಮೂರು ರೀತಿ ತೋರಿಸುವುದರಿಂದ ಎರಡ್ಮೂರು ಕ್ಯಾಮರಾ ಹಾಕಿರಬಹುದು ಎಂದುಕೊಳ್ಳುತ್ತೇವೆ. ಆದರೆ ಆ ಕ್ಯಾಮರಾವನ್ನು ಯಾವ ಕ್ಯಾಮರಾವನ್ನು ಎಲ್ಲಿ ಇಟ್ಟಿರುತ್ತಾರೆ, ಕ್ಯಾಮರಾಮೆನ್ ರಿಸ್ಕ್ ಎಷ್ಟು ಅನ್ನೋದು ನಮ್ಮ ಅಂದಾಜಿಗೂ ಸಿಕ್ಕಿರುವುದಿಲ್ಲ. ಈಗ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಲಕ್ಷ್ಮೀಯನ್ನು ಕರೆದುಕೊಂಡು ಹೋಗುವಾಗ ಶೂಟ್ ಮಾಡಿದ ರೀತಿ ಶಾಕ್ ಎನಿಸಿದೆ.

Colors kannada Lakshmibaramma Written Update on June 26th episode

ಲಕ್ಷ್ಮೀ ಇದ್ದಾಗ ವೈಷ್ಣವ್ ಇಲ್ಲ

ಲಕ್ಷ್ಮೀಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ವೈಷ್ಣವ್ ಮುಖದಲ್ಲಿ ಗಾಬರಿ ಇತ್ತು, ನೋವಿತ್ತು, ಆತಂಕವಿತ್ತು. ಆ ಎಲ್ಲಾ ಭಾವನೆಗಳನ್ನು ಪ್ರೇಕ್ಷಕರಿಗೆ ತೋರಿಸಬೇಕು. ಹಾಗೇ ಲಕ್ಷ್ಮೀಯ ಸ್ಥಿತಿಯನ್ನು ತೋರಿಸಬೇಕು. ಈ ರೀತಿ ತೋರಿಸಲು ಎರಡು ಆ್ಯಂಗಲ್‌ನಲ್ಲಿ ಕ್ಯಾಮರಾ ಇಡಬೇಕಾಗುತ್ತದೆ. ವೈಷ್ಣವ್ ಮುಖ ತೋರಿಸುವಾಗ ಲಕ್ಷ್ಮೀ ಜಾಗದಲ್ಲಿ ಕ್ಯಾಮರಾಮೆನ್ ಮಲಗಿದ್ದಾರೆ. ಲಕ್ಷ್ಮೀ ತೋರಿಸುವಾಗ ತಳ್ಳಿಕೊಂಡು ಹೋಗುವುದರ ಮೇಲೆಯೇ ಕ್ಯಾಮರಾಮೆನ್ ಕುಳಿತಿದ್ದಾರೆ. ಇದೆಲ್ಲ ನೋಡಿದಾಗ ಕ್ಯಾಮರಾಮೆನ್ ಎಷ್ಟು ರಿಸ್ಕ್ ನಲ್ಲಿ ಸೆರೆ ಹಿಡಿಯುತ್ತಾರೆ ಎಂಬುದು ಗೊತ್ತಾಗಿದೆ.

ಲಕ್ಷ್ಮೀಗಾಗಿ ವೈಷ್ಣವ್ ಕಠಿಣ ವ್ರತ

ಇನ್ನು ಲಕ್ಷ್ಮೀ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಡುವೆ ಹೋರಾಡುತ್ತಿದ್ದಾಳೆ. ಅವಳನ್ನು ಬದುಕಿಸಿಕೊಳ್ಳಲು ವೈಷ್ಣವ್ ಕಠಿಣ ವ್ರತ ಮಾಡುವುದಕ್ಕೆ ರೆಡಿಯಾಗಿದ್ದಾನೆ. ವೈಷ್ಣವ್ ಅಪಾಯದಲ್ಲಿದ್ದಾಗ ಲಕ್ಷ್ಮೀ ಕೂಡ ಅಷ್ಟರೇ ಕಠಿಣ ವ್ರತ ಮಾಡಿದ್ದಳು. ಈಗ ವೈಷ್ಣವ್ ವ್ರತ ಮಾಡಲು ಹೋದಾಗ ಕಾವೇರಿ ಅದನ್ನು ತಡೆಯುವುದಕ್ಕೆ ಹೋಗಿದ್ದಾಳೆ. ಆದರೆ ವೈಷ್ಣವ್ ಯಾವುದೇ ಕಾರಣಕ್ಕೂ ಹಿಂದೇಟು ಹಾಕಿಲ್ಲ. ಲಕ್ಷ್ಮೀ ಎಂದರೆ ಅವನಿಗೆ ಪ್ರಾಣ. ಪ್ರೀತಿಯಾಗದೆ ಇದ್ದರು ಅವಳೆಂದರೆ ಇಷ್ಟ.

More from Filmibeat

English summary
Colors kannada Lakshmibaramma today episode. Here is the details about Lakshmi Baramma Serial Cameraman Risk Story;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X