Lakshmibaramma: ಕೀರ್ತಿ ಬೇಡ, ಲಕ್ಷ್ಮೀ ಬೇಡ, ತನ್ನ ಸ್ವಾರ್ಥಕ್ಕಾಗಿ ಮಗನಿಗೆ ಇನ್ನೆಷ್ಟು ಮದುವೆ ಮಾಡ್ತಾಳೆ ಕಾವೇರಿ?
ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಏನೇನೋ ಆದ್ರೂ ಕೂಡ ಮಾತ್ರ ಬದಲಾಗುವಂತೆ ಕಾಣಿಸೋದಿಲ್ಲ. ಕೀರ್ತಿಯ ಪ್ರಾಣ ತೆಗೆದರು, ಲಕ್ಷ್ಮೀಗೆ ಮಾನಸಿಕ ಅಸ್ವಸ್ಥತೆ ಪಟ್ಟ ಕಟ್ಟಿದರು ಕಾವೇರಿಗೆ ಸಮಾಧಾನವೇ ಆಗುತ್ತಿಲ್ಲ.
ಕಾವೇರಿಗೆ ಬೇಕಿರೋದು ಮಗ ಸೊಸೆ ದೂರವಾಗಬೇಕು, ಮಗ ಹಾಡು ಗೀಡು ಹಾಡಿಕೊಂಡು ದುಡ್ಡು ಸಂಪಾದನೆ ಮಾಡಬೇಕು, ಕಾವೇರಿಯೇ ವೈಷ್ಣವ್‌ಗೆ ಎಲ್ಲಾ ಆಗಿರಬೇಕು. ತಾಯಿಯೇ ದೇವರು, ನನ್ನ ಈ ಎಲ್ಲಾ ಸಾಧನೆಯೂ ತಾಯಿಯೇ ಕಾರಣ ಎಂದು ವೈಷ್ಟವ್ ನುಡಿಯಬೇಕು. ಹಿಂಗಾದರೆ ಕಾವೇರಿನೂ ಖುಷಿ, ಮನೆಯೂ ನೆಮ್ಮದಿ.

ವೈಷ್ಣವ್ ಈಗ ಸಮಸ್ಯೆಗಳ ಆಗರದಲ್ಲಿ ಮುಳುಗಿ ಹೋಗಿದ್ದಾನೆ. ಕೀರ್ತಿಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ. ಅವಳನ್ನ ಮರೆಯೋಕು ಸಮಯ ಬೇಕಾಯ್ತು. ಲಕ್ಷ್ಮೀ ಆ ಸ್ಥಾನವನ್ನ ತುಂಬಿದ್ದಳು. ಈಗ ಲಕ್ಷ್ಮೀಯನ್ನು ಮರಿ ಎಂದರೆ ಅದೇಗೆ ಸಾಧ್ಯವಾಗುತ್ತೆ. ವೈಷ್ಣವ್ ತಾಯಿಯ ನಂಬಿಕೆಯ ವಿರುದ್ಧ ನಿಂತಿದ್ದಾನೆ.
ಸಣ್ಣ ಎಳೆಯಿಂದ ಕಾವೇರಿ ಬಚಾವ್
ಕಾವೇರಿಯ ಅದೃಷ್ಟ ಚೆನ್ನಾಗಿದೆ. ಎಲ್ಲಾ ಸಾಕ್ಷಿಗಳು ಕೈಯಲ್ಲಿಯೇ ಇದ್ದರು, ಮನೆಯವರೆದುರು ಸುಲಭವಾಗಿ ಬಚಾವ್ ಆಗುತ್ತಿದ್ದಾಳೆ. ಎಷ್ಟೇ ದೊಡ್ಡ ತಪ್ಪು ಮಾಡಿದರು ಸಿಕ್ಕಿಬೀಳದ ಕಾವೇರಿಯ ಅಹಂಕಾರ ಇನ್ನಷ್ಟು ಜಾಸ್ತಿಯಾಗಿದೆ. ನನ್ನನ್ನ ಗೆಲ್ಲುವವರೆ ಇಲ್ಲ ಎಂಬ ಮಾತು ಕಾವೇರಿಯ ನೆತ್ತಿಗೇರಿದೆ. ಇದರಿಂದ ಒಂದಲ್ಲ ಒಂದು ದಿನ ಎಲ್ಲದನ್ನು ಕಳೆದುಕೊಳ್ಳುತ್ತೇನೆ ಎಂಬ ಭಯವು ಅವಳಲ್ಲಿ ಇಲ್ಲ.
ಹಾಡಲು ಒತ್ತಾಯ ಮಾಡಿದ ಕಾವೇರಿ
ಲಕ್ಷ್ಮೀ ಆ ಪರಿಸ್ಥಿತಿಯಲ್ಲಿದ್ದಾಳೆ ಎಂಬ ಆತಂಕ, ನೋವಿನಲ್ಲಿರುವ ವೈಷ್ಣವ್‌ಗೆ ಲಕ್ಷ್ಮೀ ಮರೆತು ಕರಿಯರ್ ಕಡೆಗೆ ಗಮನ ಕೊಡು ಅಂದ್ರೆ. ಇದು ತಾಯಿ ಹೇಳೋ ಮಾತಾ ಎಂದೇ ನೆಟ್ಟಿಗರು ಕೇಳುತ್ತಿದ್ದಾರೆ. ಇವೆಂಟ್ ಮ್ಯಾನೇಜ್ಮೆಂಟ್ ಅವರನ್ನ ಮನೆಗೆ ಕರೆಸಿ, ಹಾಡು ಹಾಡುವುದಕ್ಕೆ ಬಲವಂತ ಮಾಡುತ್ತಿದ್ದಾಳೆ ಕಾವೇರಿ. ಇದಕ್ಕೆ ಸೊಪ್ಪು ಹಾಕದ ವೈಷ್ಣವ್ ಸುಮ್ಮನೆ ಹೋಗಿ ಲಾಕ್ ಮಾಡಿಕೊಂಡಿದ್ದ.
ಅಮ್ಮನಿಗೆ ಶಾಕ್ ಕೊಟ್ಟ ವೈಷ್ಣವ್
ಕಾವೇರಿಯ ಆರ್ಭಟ ಎಷ್ಟಿತ್ತು ಎಂದರೆ ವೈಷ್ಣವ್ ಕೋಪದಲ್ಲಿ ಹೊಡೆದೇ ಬಿಡುತ್ತಿದ್ದನೇನೋ. ಕಾವೇರಿಯ ಕಿರುಚಾಟ ನೋಡಿದ ವೈಷ್ಣವ್ ತನ್ನೆಲ್ಲಾ ಬಹುಮಾನಗಳನ್ನು ತಂದು ಸುರಿದ, ಖಾಲಿ ಚೆಕ್ ಗೆ ಸಹಿ ಮಾಡಿಕೊಟ್ಟು ಇದರಿಂದ ನನ್ನ ಮಹಾಲಕ್ಷ್ಮಿಯನ್ನ ವಾಪಾಸ್ ತಂದುಕೊಡಲು ಸಾಧ್ಯವಾ ಎಂದು ಕೇಳಿದ. ಮಹಾಲಕ್ಷ್ಮಿ ಜೊತೆಗೆ ಬರ್ತೀನಿ ಎಂದು ಮನೆ ಬಿಟ್ಟು ಹೋಗಿದ್ದಾನೆ. ಅವನಾಡುವ ಒಂದೊಂದು ಮಾತುಗಳು ಕಾವೇರಿಯನ್ನು ನೆಲಕ್ಕೆ ಕುಸಿಯುವಂತೆ ಮಾಡಿದೆ. ಮಗನ ಕೈಯಿಂದ ಬಿಡಿಸಿಕೊಂಡು ದೂರ ಹೋಗಿದ್ದನ್ನು ಅವಳಿಂದ ಸಹಿಸಲು ಆಗಿಲ್ಲ.
ಸತ್ಯ ಸೆರಗಲ್ಲಿ ಕಟ್ಟಿದ ಕೆಂಡದಂತೆ
ಕಾವೇರಿ ತನ್ನ ಸ್ವಾರ್ಥಕ್ಕಾಗಿ ಕೀರ್ತಿಯನ್ನು ದೂರ ಮಾಡಿದಳು ಈಗ ಲಕ್ಷ್ಮೀಯನ್ನು ದೂರ ಮಾಡುತ್ತಿದ್ದಾಳೆ. ಮಗನ ಸಂತೋಷಕ್ಕಾಗಿ ತನ್ನ ಸ್ವಾರ್ಥಕ್ಕೆ ಹೊಂದಿಕೊಳ್ಳುವ ಸೊಸೆಯನ್ನ ತರುತ್ತಾಳಾ ಕಾವೇರಿ. ಹಾಗೆಂದುಕೊಂಡು ಹೋದರೆ ಎಷ್ಟು ಮದುವೆಗಳನ್ನ ಮಾಡಬೇಕೋ. ನೋಡೋಣ ರೋಚಕ ಘಟ್ಟಕ್ಕೆ ಧಾರಾವಾಹಿ ತಲುಪುತ್ತಿವೆ. ಇದೇ ವಾರದಲ್ಲಿ ಕೀರ್ತಿಯು ಎದುರಾಗುತ್ತಾಳೆ. ಯಾವ ಸ್ಥಿತಿಯಲ್ಲಿದ್ದಾಳೆ ಎಂಬುದು ತಿಳಿಯಲಿದೆ. ಹಾಗೇ ಮತ್ತೆ ಕಾವೇರಿಯೇ ಗೆಲ್ಲುತ್ತಾಳಾ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಆದರೆ ಕಾವೇರಿಯ ನಡವಳಿಕೆಗೆ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.


Click it and Unblock the Notifications











