Lakshmibaramma: ನಕಲಿ ಕೀರ್ತಿ ಹಿಂದಿರೋದು ಸುಪ್ರೀತಾನಾ? ಸತ್ಯ ಹೊರಬರೋಕು ಮುನ್ನ ಆಗುತ್ತಾ ಯಡವಟ್ಟು?

By ಎಸ್ ಸುಮಂತ್

ಕಾವೇರಿಯ ಅಟ್ಟಹಾಸ ತೀರಾ‌ ಮಿತಿ ಮೀರಿದೆ. ಕೊಲೆ ಮಾಡಿದರೂ ಕೂಡ ತಾನೇನು ತಪ್ಪು ಮಾಡಿಲ್ಲ ಎಂದು ಬೀಗುತ್ತಾಳೆ. ಸ್ವಲ್ಪವೂ ಭಯವೇ ಇಲ್ಲದೆ ತನ್ನ ಸ್ವಾರ್ಥದ ಕಾರ್ಡ್ ಅನ್ನು ಪ್ಲೇ ಮಾಡುತ್ತಾಳೆ.

ಮನೆಯಲ್ಲಿ ಎಲ್ಲರೂ ಕಾವೇರಿಯನ್ನು ನಂಬಿದರು ಸುಪ್ರೀತಾ ಮಾತ್ರ ನಂಬುವುದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ತನ್ನ ಅತ್ತಿಗೆ ಎಷ್ಟು ಕೆಟ್ಟವಳು ಎಂಬುದನ್ನು ಮದುವೆಯಾಗಿ ಬಂದಾಗಿನಿಂದ ನೋಡಿದ್ದಾಳೆ. ಹೀಗಾಗಿ ಕಾವೇರಿಯನ್ನ ಮಾತಿನಲ್ಲಿಯೇ ಲಾಕ್ ಮಾಡುವುದಕ್ಕೆ ಟ್ರೈ ಮಾಡ್ತಾ ಇರುತ್ತಾಳೆ.

Colors kannada Lakshmibaramma Written Update on November 25th episode

ಸುಪ್ರೀತಾ ಹಾಗೂ ಕಾವೇರಿಯ ಆಗಾಗ ಮನೆಯಲ್ಲಿ ಅತ್ತಿಗೆ-ನಾದಿನಿಯ ಜಗಳ ಕಾಮನ್ ಎಂಬಂತೆ ಇಬ್ಬರು ಆಗಾಗ ಕಚ್ಚಾಡಿದರು, ಮನೆ ಮಂದಿ ಬೈದು ಸುಮ್ಮನೆ ಇರಿಸುವ ಪ್ರಯತ್ನ ಮಾಡುತ್ತಾರೆ. ಇಷ್ಟು ದಿನ ಕಾವೇರಿ ಆಟ ಆಡುತ್ತಿದ್ದಳು, ಆದರೆ ಈಗ ಸುಪ್ರೀತಾ ತನ್ನ ಆಟ ಆಡುವುದಕ್ಕೆ ಶುರು ಮಾಡಿದ್ದಾಳೆ. ಇದು ಕಾವೇರಿಗೆ ಸಣ್ಣ ಸುಳಿವನ್ನು ಕೊಟ್ಟಿಲ್ಲ.

ಕಾವೇರಿಯನ್ನು ಎಳೆದೊಯ್ದ ಪೊಲೀಸರು

ಕಾವೇರಿ ಸತ್ಯ ಒಪ್ಪಿಕೊಳ್ಳುವಂತೆ ಕಾಣಿಸುತ್ತಿಲ್ಲ. ಕೀರ್ತಿ ಅಷ್ಟು ಸಾಕ್ಷಿ ತೋರಿಸಿದರು, ಅಷ್ಟು ಗಟ್ಟಿಯಾಗಿ ಹೇಳಿದರು ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಸತ್ಯ ಬಾಯ್ಬಿಡಿಸಲು ಪೊಲೀಸರನ್ನೇ ಕರೆಸಿದ್ದಾಯ್ತು. ಆಗಲು ಸತ್ಯ ಬಾಯಿ ಬಿಡಲಿಲ್ಲ. ಈಗ ಪೊಲೀಸ್ ಠಾಣೆಯಲ್ಲಿ ವೈಷ್ಣವ್‌ನನ್ನು ಕೂರಿಸಿಕೊಂಡು ಸತ್ಯ ಹೊರಗೆ ತೆಗೆಸಲು ಪ್ರಯತ್ನ ನಡೆಯುತ್ತಿದೆ. ಈಗಲೂ ಕಾವೇರಿ ಒಪ್ಪುತ್ತಿಲ್ಲ.

Colors kannada Lakshmibaramma Written Update on November 25th episode

ಹೆಚ್ಚು ಖುಷಿ ಪಟ್ಟ ಸುಪ್ರೀತಾ

ಇದರ ನಡುವೆ ಗಂಗಾ ಗಮನಿಸಿರುವುದು ಸುಪ್ರೀತಾ ನಡೆಯನ್ನು. ಮನೆಯವರೆಲ್ಲ ಆತಂಕದಲ್ಲಿದ್ದರೆ ಸುಪ್ರೀತಾ ಮಾತ್ರ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಇದರಿಂದ ಗಂಗಕ್ಕನಿಗೆ ಅನುಮಾನ ಮೂಡಿದೆ‌. ಅತ್ತ ಕೀರ್ತಿಯ ಮಾತಿನ ಧಾಟಿಯೂ ಬದಲಾಗಿದೆ. ಕೀರ್ತಿ ಮಾತಾಡುವಾಗ ಬೇರೆಯದ್ದೇ ತೂಕವಿತ್ತು, ಆದರೆ ಈಗ ಬಂದಿರುವ ಕೀರ್ತಿ ಮಾತನಾಡುವ ರೀತಿ ಬೇರೆ ಆಗಿದೆ. ಇದರ ಜೊತೆಗೆ ಅವಳ ತಾಯಿಯನ್ನೇ ಗುರುತು ಹಿಡಿಯುತ್ತಿಲ್ಲ.

ಬ್ರೇಕ್ ಬೇಕೆಂದು ಹೋದ ಕೀರ್ತಿ

ಕಾರುಣ್ಯಗೆ ಇರೋದು ಒಬ್ಬಳೆ ಮಗಳು. ಚೆನ್ನಾಗಿ ಸಾಕಿದ್ದಾಳೆ, ಅವಳು ಚೆನ್ನಾಗಿರಬೇಕೆಂದೆ ಬಯಸುತ್ತಾಳೆ. ಕೀರ್ತಿ ಸತ್ತ ಮೇಲೆ ತುಂಬಾ ನೋವಿನಲ್ಲಿದ್ದಳು. ಈಗ ಮಗಳು ಕಣ್ಣಮುಂದೆ ಬಂದಿರೋದನ್ನ ಕಂಡು ಖುಷಿಯಾಗಿದ್ದಾಳೆ. ಮನೆಗೆ ಕರೆದುಕಂಡು ಹೋಗಿ ಉಪಚಾರ ಮಾಡಿದ್ದಾಳೆ. ಮಗಳಿಗೆ ಪ್ರೀತಿಯ ತುತ್ತು ತಿನಿಸಿದ್ದಾಳೆ. ಆದರೆ ಈ ಸಮಯದಲ್ಲಿ ಕಾರುಣ್ಯ ಕೇಳಿದ ಯಾವ ಮಾತಿಗೂ ಸರಿಯಾಗಿ ಉತ್ತರ ಕೊಡುತ್ತಿಲ್ಲ. ಆ ಮಾತು ಮರೆಸಿ, ಊಟದ ಕಡೆಗೆ ಗಮನ ಕೊಡುವಂತೆ ಮಾಡಿದ್ದಾಳೆ. ಅಷ್ಟೇ ಅಲ್ಲ ಕೀರ್ತಿಯಾಗಿ ಇದ್ದು ಸಾಕಾಗಿದೆ, ಬ್ರೇಕ್ ಬೇಕು ಅಂತಾನೇ ಹೇಳಿದ್ದಾಳೆ.

ಆದಷ್ಟು ಬೇಗ ಸಿಕ್ಕಿ ಬೀಳ್ತಾಳಾ?

ಕೀರ್ತಿ ಎಂದು ಹೇಳಿಕೊಂಡು ಬಂದಿರುವ ಹುಡುಗಿಯನ್ನ ಆಟವಾಡಿಸುತ್ತಿರುವುದೇ ಬೇರೆಯವರು. ಕೀರ್ತಿಗೆ ಕಿವಿಯಲ್ಲಿ ಎಲ್ಲವನ್ನು ಹೇಳಿಕೊಡುತ್ತಿದ್ದಾರೆ. ಮುಂದಿರೋದು ಅಮ್ಮ, ಕಾವೇರಿ ಹೀಗೆ ಎಲ್ಲಾ ಪಾತ್ರಗಳ ಬಗ್ಗೆಯೂ ಕಿವಿಯಲ್ಲಿ ಪಾಠವಾಗುತ್ತಿದೆ. ಅಂತೂ ಇಂತೂ ಸುಪ್ರೀತಾ ಬಯಸಿದ್ದು ನಿಜವಾಯ್ತು. ಕಾವೇರಿ ಸ್ಟೇಷನ್ ತಲುಪಾಯ್ತು. ಆದರೆ ಸತ್ಯ ಹೊರಗೆ ಬರುವುದಕ್ಕೆ ಮುನ್ನವೇ ಕೀರ್ತಿ ಯಡವಟ್ಟು ಮಾಡಿಕೊಳ್ತಾಳಾ ಅಂತ..? ಕಾವೇರಿಯ ಅಮ್ಮನ ಜೊತೆಗೆ ಮಾತನಾಡುವಾಗಲೇ ಅವರನ್ನ ಕೇಳಬೇಕು ಎನ್ನುತ್ತಾಳೆ, ಕೀರ್ತಿಯಾಗಿದ್ದು ಸಾಕಾಯ್ತು ಬ್ರೇಕ್ ಬೇಕು ಎನ್ನುತ್ತಾಳೆ. ಇದೆಲ್ಲವನ್ನು ನೋಡಿದರೆ ಕೀರ್ತಿಯನ್ನೇ ಹೋಲುವ ಇವಳನ್ನ ಸುಪ್ರೀತಾ ಕರೆತಂದಿರುವುದು ಅರ್ಥವಾಗುತ್ತಿದೆ.

More from Filmibeat

English summary
Colors kannada Lakshmibaramma Written Update on November 25th episode. Here is the details about Will Keerthi make a mistake before Kaveri accepts the truth?
Read more about: sumanth tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X