Lakshmibaramma: ತಲೆ ಕೆಡ್ತಿದೆ, ಡೈರೆಕ್ಟ್ರೇ ಸಿಗಿ ಕೈಗೆ, ಲಕ್ಷ್ಮೀಬಾರಮ್ಮ ವೀಕ್ಷಕರಿಗೆ ಇಷ್ಟು ಸಿಟ್ಯಾಕೆ?
ಲಕ್ಷ್ಮೀಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿಯನ್ನು ಇಷ್ಟಪಡುವುದಕ್ಕೆ ಶುರು ಮಾಡಿದ್ದು ಅದೆಷ್ಟು ಜನ ಗೊತ್ತಾ? ಆರಂಭದಲ್ಲಿ ದ್ವೇಷ ಮಾಡಿದವರಿಗಿಂತ ಕೊನೆಯಲ್ಲಿ ಅವಳ ಮುಗ್ಧತೆ, ಪ್ರೀತಿಗೆ ಬೆಲೆ ಕೊಟ್ಟವರೆ ಹೆಚ್ಚು. ಅದು ಧಾರಾವಾಹಿಯೇ ಆದರೂ, ಪಾತ್ರಧಾರಿಯೇ ಸತ್ತರು ಆ ಪಾತ್ರಧಾರಿಗೆ ನ್ಯಾಯ ಸಿಗಬೇಕು ಎಂದೇ ವೀಕ್ಷಕರು ಬಯಸುತ್ತಿರುವುದು. ಬೇಡಿಕೆ ಇಡುತ್ತಿರುವುದು. ಆದರೆ ಕಾವೇರಿಯ ಕೆಟ್ಟತನವೇ ಇಲ್ಲಿ ಗೆಲ್ಲುತ್ತಿದೆ.
ಲಕ್ಷ್ಮೀ ಕೈಗೆ ಸಿಕ್ಕ ಸಾಕ್ಷಿಯೂ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಮಾಯವಾಗಿದೆ. ಸಾಕ್ಷಿ ಇಲ್ಲದೆ ಮಾತಾಡಿದ ಲಕ್ಷ್ಮೀಗೆ ಕಡೆಗೆ ಸಿಕ್ಕಿದ್ದು ಹುಚ್ಚಿ ಪಟ್ಟ. ಹುಚ್ಚಿ ಪಟ್ಟ ಕಟ್ಟಿದ್ದ ಕಾವೇರಿಯೇ ಮನೆಯವರ ಮುಂದೆ ನಾಟಕ ಶುರು ಮಾಡಿದ್ದಾಳೆ. ಈಗ ಮಗನ ಮುಂದೆ ತಗಲಾಕಿಕೊಂಡರು, ಕ್ಷಣ ಮಾತ್ರದಲ್ಲೇ ಯಾಮಾರಿಸಿಬಿಟ್ಟಳು. ಇದನ್ನ ನೋಡಿಯೇ ವೀಕ್ಷಕರಿಗೆ ಬೇಸರವಾಗಿ ಹೋಗಿದೆ.

ಮತ್ತೆ ಕಾವೇರಿ ನಾಟಕ ಶುರು
ಮಾದೇವಯ್ಯನಿಂದ ತನಗೆ ಯಾವತ್ತಿದ್ದರು ತೊಂದರೆ ಎಂದು ತಿಳಿದ ಕಾವೇರಿ ಅವನನ್ನ ಕೊಲ್ಲುವುದಕ್ಕೆಂದು ಬೆಟ್ಟಕ್ಕೆ ಬಂದಳು. ಗಂಗಾ ಅವಳನ್ನ ಫಾಲೋ ಮಾಡ್ತಾ ಇದ್ದದ್ದು ಗೊತ್ತಿಲ್ಲ. ಆದರೂ ಸಖತ್ ಪ್ಲ್ಯಾನ್ ಮಾಡಿದ್ದಳು. ಮಾದೇವಯ್ಯನನ್ನು ಕೊಲ್ಲುವುದಕ್ಕೆ ಹೋಗಿ ನೇರವಾಗಿ ವೈಷ್ಣವ್‌ಗೆ ಸಿಕ್ಕಿಬಿದ್ದಳು. ಆದರೂ ಕಾವೇರಿಯ ನಾಟಕದ ಮುಂದೆ, ಕಿಲಾಡಿತನದ ಮುಂದೆ ಯಾವ ಸತ್ಯ ಇದ್ದರೇನು ಬಿಟ್ಟರೇನು..?
ಕಾವೇರಿ ನಾಟಕಕ್ಕೆ ಲಕ್ಷ್ಮೀಯೂ ಲಾಕ್
ಮನೆಯಿಂದ ಹೊರಟಾಗಿನಿಂದಲೂ ಲಕ್ಷ್ಮೀಗೆ ಅದ್ಯಾವುದೋ ನಂಬರ್‌ನಿಂದ ಎಚ್ಚರಿಕೆಯ ಗಂಟೆ ಕೇಳಿ ಬರುತ್ತಲೇ ಇತ್ತು. ಪ್ರಾಣ ತೆಗೆಯುವ ಎಚ್ಚರಿಕೆ ಅದು. ಭಯದಲ್ಲಿಯೇ ಇದ್ದ ಲಕ್ಷ್ಮೀಗೆ ಕಾವೇರಿಯ ನಾಟಕದಿಂದ ಮತ್ತಷ್ಟು ಪ್ರಶ್ನೆಗಳು ಹುಟ್ಟಿಕೊಂಡವು. ಯಾರೋ ಮೆಸೇಜ್ ಮಾಡಿದ್ದಕ್ಕಷ್ಟೆ ಇಲ್ಲಿಗೆ ಬಂಧ್ದು ಎಂಬ ಸುಳ್ಳನ್ನ ಹೇಳಿದಳು. ಆ ಸುಳ್ಳನ್ನೇ ಲಕ್ಷ್ಮೀ ನಂಬುವಂತೆ ಆಯ್ತು. ಯಾಕಂದ್ರೆ ಒಂದೇ ನಂಬರ್‌ನಿಂದ ಲಕ್ಷ್ಮೀ ಹಾಗೂ ಕಾವೇರಿಗೆ ಒಂದೇ ನಂಬರ್‌ನಿಂದ ಮೆಸೇಜ್ ಬಂದ ಕಾರಣ ಮಗ ಸೊಸೆ ಇಬ್ಬರು ನಂಬುವಂತೆ ಆಯ್ತು.
ಕಾವೇರಿಯ ಬಲೆಯಲ್ಲಿ ಮತ್ತೆ ಬಿದ್ರು
ಕಾವೇರಿ ತನ್ನ ತಪ್ಪನ್ನ ಎಲ್ಲಿಯೂ ಹೇಳಲ್ಲ. ಹಾಗೇ ತಾನೂ ಸಿಕ್ಕಿ ಬೀಳ್ತೀನಿ ಅಂತ ಗೊತ್ತಾದ್ರೆ ಹೇಗೆ ಬೇಕಾದರೂ ಯಾಮಾರಿಸುತ್ತಾಳೆ. ಈಗ ಆಗಿದ್ದು ಅದೇ. ಕಾವೇರಿಗೂ ಮೆಸೇಜ್ ಬಂದಿದೆ ಅಂದ್ರೆ ಇದು ಕಾವೇರಿಯ ಪ್ಲ್ಯಾನ್ ಆಗಿದೆ. ಕಾವೇರಿಯ ಕಡೆಯ ಹುಡುಗನೇ ಆಗಿರುತ್ತಾನೆ. ಆದರೆ ಈಗ ಆ ಮೂರನೇಯ ವ್ಯಕ್ತಿ ಯಾರೆಂದು ವೈಷ್ಣವ್ ಹುಡುಕಲು ಹೊರಟಿದ್ದಾನೆ.
ವೀಕ್ಷಕರಿಗೆ ತಲೆ ಕೆಡಿಸುತ್ತಿರೋ ಡೈರೆಕ್ಟರ್
ಲಕ್ಷ್ಮೀಗೆ ಸಾಕ್ಷಿ ಸಿಕ್ಕಿದ್ದು, ಕಾವೇರಿ ಬೆಟ್ಟದ ಮಾದೇವಯ್ಯನನ್ನು ಕೊಲ್ಲಲು ಹೋಗಿದ್ದು ಈ ಎಲ್ಲವನ್ನು ಕಂಡಾಗ ವೀಕ್ಷಕರಿಗೆ ಒಂದು ಭರವಸೆ ಸಿಕ್ಕಿತ್ತು. ಈಗಲಾದರೂ ಕಾವೇರಿ ತಗಲಾಕಿಕೊಳ್ಳುತ್ತಾಳೆ ಅಂತ. ಆದರೆ ಆ ಮೂರನೇಯ ವ್ಯಕ್ತಿ ಎಂಬ ಹೆಸರನ್ನು ತಂದು ಈಗ ಮತ್ತೆ ಪ್ಲಾಫ್ ಆಗಿದೆ. ಇದೆಲ್ಲವನ್ನು ಪ್ರತಿದಿನ ನೋಡುತ್ತಿರುವ ವೀಕ್ಷಕರಿಗೆ ಕೋಪ ನೆತ್ತಿಯ ಬುಡಕ್ಕೆ ಹತ್ತಿದೆ. ಇನ್ನೇನು ಎಲ್ಲವೂ ಬಯಲಾಗುತ್ತೆ ಎಂದುಕೊಂಡರೆ ಏನು ಬಯಲಾಗುತ್ತಿಲ್ಲ. ಏನೋ ಒಂದು ಆಗಿ ನಿರೀಕ್ಷಿಸಿದ ದೃಶ್ಯ ಸ್ಕಿಪ್ ಆಗುತ್ತಿದೆ ಎಂಬ ಬೇಸರ. ಡೈರೆಕ್ಟ್ರೇ ನೀವೊಮ್ಮೆ ಸಿಗಿ ಇದೆ ಅಂತಾನೇ ಆಕ್ರೋಶ ಹೊರ ಹಾಕುತ್ತಿದ್ದಾರೆ.


Click it and Unblock the Notifications











