Lakshmibaramma: ಕಾವೇರಿನ ಸಾಯ್ಸಿ, ಇಲ್ವಾ ಧಾರಾವಾಹಿ ನೋಡೋದ್ ನಿಲ್ಲಿಸ್ತೀವಿ!
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಏನೋ ಒಂದು ಟ್ವಿಸ್ಟ್ ಸಿಗುತ್ತೆ ಅಂತಾನೇ ವೀಕ್ಷಕರು ಕಾಯುತ್ತಿದ್ದಾರೆ. ಆದರೆ ಒಂದು ಗಾದೆ ಮಾತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತಿದೆ. ಆ ಮಾತಿಗೆ ತಕ್ಕ ಹಾಗಿದೆ ಲಕ್ಷ್ಮೀ ಬಾರಮ್ಮ ಧಾರಾವಾಹಿ. ಕೀರ್ತಿ ಸಾಯುವುದು ವೀಕ್ಷಕರಿಗೆ ಕಿಂಚವೂ ಇಷ್ಟ ಇರಲಿಲ್ಲ. ಆದರೂ ಸತ್ತೇ ಹೋದಳು. ಅವಳ ಸಾವಿಗೆ ಇನ್ನೇನು ನ್ಯಾಯ ಸಿಗುತ್ತೆ ಎಂದುಕೊಳ್ಳುತ್ತಿರುವಾಗಲೇ ಕೈ ತಪ್ಪಿ ಹೋಗುತ್ತಿದೆ.
ಲಕ್ಷ್ಮೀಯ ಮಾತನ್ನ ಯಾರೂ ನಂಬದ ಹಾಗೇ ಕಾವೇರಿ ಪಕ್ಕಾ ಪ್ಲ್ಯಾನ್ ಮಾಡುತ್ತಿದ್ದಾಳೆ. ಲಕ್ಷ್ಮೀ ಸಾಕ್ಷಿ ಸಮೇತ ಸತ್ಯ ಹೇಳುವುದಕ್ಕೆ ಹೊರಟಾಗಲೂ ಆ ಸಾಕ್ಷಿ ನಾಶ ಮಾಡಿ ಹುಚ್ಚಿ ಪಟ್ಟ ಕಟ್ಟುತ್ತಿದ್ದಾಳೆ. ಒಂದು ಹಂತಕ್ಕೆ ಇವೆಲ್ಲಾ ಸರಿ. ಆದರೆ ಕಾವೇರಿಯದ್ದೇ ಮೇಲುಗೈ ಸಾಧಿಸುತ್ತಿದೆ ಇದರಿಂದ ವೀಕ್ಷಕರಿಗಂತು ಸಿಕ್ಕಾಪಟ್ಟೆ ಬೇಜಾರಾಗಿದೆ.

ಲಕ್ಷ್ಮೀಯನ್ನು ಕೊಲ್ಲುವ ಪ್ಲ್ಯಾನ್
ಕಾವೇರಿಗೆ ಅದೇನ್ ಆಗಿದೆಯೋ ಏನೋ. ಮಗನನ್ನು ಪ್ರೀತಿಸಿದ ಕೀರ್ತಿಗೆ ಮೋಸ ಮಾಡಿ ಕೊಂದಿದ್ದಾಯ್ತು. ಈಗ ತನ್ನ ವಿರುದ್ಧ ಮಾತಾಡುತ್ತಾಳೆ, ಮಗನನ್ನ ತನ್ನತ್ತ ಸೆಳೆದುಕೊಂಡಿದ್ದಾಳೆ ಎಂದು ತಾನೇ ನೋಡಿದ ಸೊಸೆ ಲಕ್ಷ್ಮೀಯನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದಾಳೆ. ಅದಕ್ಕೆ ಸುಪಾರಿ ಕೊಟ್ಟು, ಐಡಿಯಾ ಕೊಟ್ಟು ಕಿಡ್ನ್ಯಾಪ್ ಮಾಡಿಸಿದ್ದಾಳೆ.
ಲಕ್ಷ್ಮೀ ಕಾಣದೆ ಮನೆಯವರು ಕಂಗಾಲು
ಎಲ್ಲರ ಊಟ ಮುಗಿಯುವಷ್ಟರಲ್ಲಿ ಕಿಡ್ನ್ಯಾಪರ್ಸ್ ಲಕ್ಷ್ಮೀಯನ್ನು ಹೊತ್ತೊಯ್ದಿದ್ದರು. ವೈಷ್ಣವ್, ಲಕ್ಷ್ಮೀಗಾಗಿ ಮನೆಯ ಎಲ್ಲಾ ಹುಡುಕಾಡಿದರು ಸಿಗಲಿಲ್ಲ. ಸಿಸಿಟಿವಿ ಕ್ಯಾಮಾರಾ ಚೆಕ್ ಮಾಡಿದರೂ ಸಿಗಲಿಲ್ಲ. ಸುಪ್ರೀತಾಗೆ ಅನುಮಾನವಿದ್ದರು ಅಲ್ಲಿ ತೋರಿಸುವುದಕ್ಕೆ ಸಾಧ್ಯವಿಲ್ಲದ ಪರಿಸ್ಥಿತಿ. ವೈಷ್ಣವ್ ಅಜ್ಜಿಯಂತು ದೇವರಿಗೆಲ್ಲಾ ಹರಕೆ ಹೊತ್ತುಕೊಂಡಿದ್ದಾರೆ. ಆದರೂ ಲಕ್ಷ್ಮೀಯ ಸುಳಿವೇ ಸಿಗುತ್ತಿಲ್ಲ. ಲಕ್ಷ್ಮೀ ಹೊರಗೆ ಹೋಗಿಲ್ಲ, ಒಳಗೂ ಯಾರೂ ಬಂದಿಲ್ಲ ಅಂದರೆ ಲಕ್ಷ್ಮೀ ಹೋಗಿದ್ದು ಎಲ್ಲಿಗೆ ಎಂಬ ಪ್ರಶ್ನೆ ಶುರುವಾಗಿದೆ. ಆತಂಕವೂ ಹೆಚ್ಚಾಗಿದೆ.
ಒಳಗೊಳಗೆ ಖುಷಿ ಪಟ್ಟ ಕಾವೇರಿ
ಮನೆಯವರೆಲ್ಲಾ ಆತಂಕದಲ್ಲಿದ್ದರೆ ಕಾವೇರಿ ಮಾತ್ರ ಒಳಗೊಳಗೆ ಖುಷಿಯಲ್ಲಿದ್ದಳು. ನೀವೆಲ್ಲಾ ಹುಡುಕಾಟ ಶುರು ಮಾಡುವಷ್ಟರಲ್ಲಿ ಅಲ್ಲಿ ಲಕ್ಷ್ಮೀ ಕಥೆ ಮುಗಿದಿರುತ್ತೆ ಅಂತ ಸಂತಸ ಪಟ್ಟಳು. ಆದರೆ ಎಲ್ಲರೆದುರು ತೋರಿಸಿಕೊಳ್ಳಬಾರದೆಂದು ನಾಟಕವನ್ನು ಶುರು ಮಾಡಿದಳು. ನಾನು ನಿಮಗೆಲ್ಲಾ ಹೇಳಿದೆ. ಅವಳನ್ನ ಆಸ್ಪತ್ರೆಗೆ ಸೇರಿಸೋಣಾ ಅಂತ. ಆಗ ಯಾರು ನನ್ನ ಮಾತು ಕೇಳಲಿಲ್ಲ. ಈಗ ನೋಡಿ ಏನಾಯ್ತು ಅಂತ ನಾಟಕ ಮಾಡುತ್ತಿದ್ದಾಳೆ. ಆದರೆ ಕಾವೇರಿ ಗೇಮ್ ಪ್ಲ್ಯಾನ್ ಮಾತ್ರ ಯಾರಿಗೂ ಅರ್ಥವಾಗುತ್ತಲೇ ಇಲ್ಲ. ಲಕ್ಷ್ಮೀಯಾದರೂ ಜೀವಂತ ಸಿಗುತ್ತಾಳಾ ಹೇಗೆ ಎಂಬುದೇ ಪ್ರಶ್ನೆಯಾಗಿದೆ.
ನಿರ್ದೇಶಕರಿಗೆ ಕಿವಿ ಮಾತು
ಕೆಟ್ಟವರಿಗೆ ಇದು ಕಾಲ ಎಂಬ ಮಾತು ಆಗಾಗ್ಗೆ ಕೇಳಿ ಬರುತ್ತಾ ಇರುತ್ತದೆ. ಅದು ಈಗ ಈ ಧಾರಾವಾಹಿಯಲ್ಲಿ ಪ್ರೂವ್ ಆದಂತೆ ಆಗಿದೆ. ಕಾವೇರಿ ಪದೇ ಪದೇ ತಪ್ಪು ಮಾಡಿದರೂ ಅವಳ ಪರವೇ ನ್ಯಾಯ ಸಿಗುತ್ತಿದೆ. ಅದಕ್ಕೆ ತಕ್ಕಂತೆ ಪರಿಸ್ಥಿತಿಗಳು ಕ್ರಿಯೇಟ್ ಆಗುತ್ತಿದೆ. ಎಷ್ಟು ಸಲ ಇದನ್ನೇ ನೋಡುವುದು. ಮೊದಲು ಕಾವೇರಿಯನ್ನು ಸಾಯಿಸಿ, ಇಲ್ಲ ನಾವೂ ಸೀರಿಯಲ್ ನೋಡೋದನ್ನೇ ನಿಲ್ಲಿಸ್ತೀವಿ ಅಂತ ವೀಕ್ಷಕರು ನಿರ್ದೇಶಕರಿಗೆ ಕಿವಿ ಮಾತು ಹೇಳುತ್ತಿದ್ದಾರೆ. ಇದನ್ನಾದರೂ ನಿರ್ದೇಶಕರು ಅರ್ಥ ಮಾಡಿಕೊಂಡು ಕಾವೇರಿಯ ಪಾಪ ಕರ್ಮಗಳಿಗೆ ಕೊನೆಯಾಡುತ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











