Lakshmibaramma: ಪಾಪಿ ಚಿರಾಯು, ಲಕ್ಷ್ಮೀ ಕೈತುದಿಯಲ್ಲಿದ್ದ ಸಾಕ್ಷಿ ನಾಶ: ವೀಕ್ಷಕರಿಗೆ ಬೇಸರ!
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಸದ್ಯ ಮುಚ್ಚಿಟ್ಟ ಸತ್ಯಗಳೆಲ್ಲಾ ಬಯಲಾಗುವ ಸಮಯ ಹತ್ತಿರ ಬಂದಿದೆ. ಅದರಲ್ಲೂ ಕೀರ್ತಿಯ ಸಾವಿನ ಹಿಂದೆ ಬಿದ್ದಿರುವ ಲಕ್ಷ್ಮೀಗೆ ಬಲವಾದ ಸಾಕ್ಷಿ ಸಿಕ್ಕಿದೆ.
ಅತ್ತೆ ಕಾವೇರಿಯೇ ಏನೋ ಮಾಡಿದ್ದಾಳೆ ಎಂಬ ಅನುಮಾನವಿದ್ದ ಲಕ್ಷ್ಮೀಗೆ ಅದೇ ಸತ್ಯವಾಗಿದೆ. ಕೀರ್ತಿ ಕೊನೆಯದಾಗಿ ಭೇಟಿ ಮಾಡಲು ಕರೆದಿದ್ದ ಬೆಟ್ಟದಲ್ಲೂ ಕಾವೇರಿ ಇದ್ದಳು. ಕೀರ್ತಿಯನ್ನ ಬೆರಳ ತುದಿಯಲ್ಲಿ ಆಟವಾಡಿಸ್ತಾ ಇದ್ದವಳು ಕಾವೇರಿ. ಬಲವಾದ ಸಾಕ್ಷಿ ಸಿಕ್ಕಿದರು, ಅದನ್ನು ಪ್ರೂವ್ ಮಾಡುವಾಗಲೇ ಲಕ್ಷ್ಮೀ ಸೋತಿದ್ದಾಳೆ.

ಕಾವೇರಿಯೇ ಕೀರ್ತಿಗೆ ಏನೋ ಮಾಡಿದ್ದಾರೆ ಎಂಬ ಅನುಮಾನ ಲಕ್ಷ್ಮೀಗೆ ಇತ್ತು. ಅದನ್ನ ಬಾಯಿ ಬಿಡಿಸುವ ಸಲುವಾಗಿಯೇ ನಾಟಕ ಕೂಡ ಮಾಡಿದಳು. ಕೀರ್ತಿಯ ದೆವ್ವ ಮೈಮೇಲಿದೆ ಎಂಬ ನಾಟಕವಾಡಿದಳು. ಆಗಲೂ ಕಾವೇರಿ ಬಗ್ಗಲಿಲ್ಲ. ಕೀರ್ತಿಗೆ ಸಂಬಂಧಿಸಿದ ಎಲ್ಲಾ ಸಾಕ್ಷಿಗಳನ್ನು ನಾಶ ಮಾಡಿಕೊಂಡೆ ಬಂದಳು. ಈಗ ಕ್ಯಾಮೆರಾ ಫುಟೆಜ್ ಕೂಡ.
ಇದ್ದ ಒಂದೇ ಒಂದು ಸಾಕ್ಷಿ ನಾಶ
ಅಂದು ಕೀರ್ತಿ ಬೆಟ್ಟದಲ್ಲಿ ಕ್ಯಾನೆರಾ ಫಿಕ್ಸ್ ಮಾಡಿದ್ದಳು. ಕಾವೇರಿ ಬಂದದ್ದು, ಕೊಲೆ ಮಾಡಿದ್ದು ಎಲ್ಲವೂ ಅದರಲ್ಲಿ ರೆಕಾರ್ಡ್ ಆಗಿತ್ತು. ಮಾದೇವನ ಕೈಗೆ ಅದು ಸಿಕ್ಕಿತ್ತು. ಗಣೇಶನ ಹಬ್ಬಕ್ಕೆ ಬಂದ ಮಾದೇವ ಅದನ್ನ ಲಕ್ಷ್ಮೀ ಕೊರಳಿಗೆ ಹಾಕಿ ಹೋಗಿದ್ದ. ಅದರೊಳಗಿನ ಸತ್ಯ ಕಂಡು ಗಾಬರಿಯಾಗಿದ್ದ ಲಕ್ಷ್ಮೀ, ಎಲ್ಲರ ಮುಂದೆ ತೋರಿಸಿ ಬಿಡೋಣಾ ಎಂದುಕೊಂಡಾಗಲೇ ಆ ವಿಡಿಯೋ ಮಾಯವಾಗಿತ್ತು.
ಚಾಕು ಹಿಡಿದು ಹೆದರಿಸಿದ ಲಕ್ಷ್ಮೀ
ಕಾವೇರಿಯೇ ಕೊಲೆಗಾತಿ ಎಂಬುದನ್ನು ತಿಳಿದಿದ್ದ ಲಕ್ಷ್ಮೀ ಈ ವಿಡಿಯೋ ಡಿಲೀಟ್ ಮಾಡಿರೋದು ಕಾವೇರಿಯೇ ಎಂಬ ಸತ್ಯವೂ ಅರ್ಥವಾಗಿತ್ತು. ಅದಕ್ಕೆ ಜೋರು ಮಾಡಿ ಕೇಳಿದಳು. ಕಾವೇರಿ ಈಗ ಇನ್ನಷ್ಟು ಮೊಂಡಾಗಿದ್ದಾಳೆ. ಇದ್ದ ಒಂದು ಸಾಕ್ಷಿಯೂ ಕಾಣಿಸದೇ ಇದ್ದದ್ದಕ್ಕೆ ಕಾವೇರಿ ಖುಷಿಯಾಗಿದ್ದಾಳೆ. ಚಾಕುವನ್ನು ಕುತ್ತಿಗೆಗೆ ಹಿಡಿದು ಹೆದರಿಸಿದರು ಕಾವೇರಿ ಹೇಳಲಿಲ್ಲ. ಮನೆಯವರೆಲ್ಲಾ ಸೇರಿ ಕಾಪಾಡಿದ್ದಾರೆ.
ವೈಷ್ಣವ್‌ಗೆ ತಿಳಿಸಿ ಹೇಳುವ ಪ್ರಯತ್ನ
ಈಗ ವೈಷ್ಣವ್ ಲಕ್ಷ್ಮೀಯನ್ನು ಸಮಾಧಾನ ಮಾಡುವುದಕ್ಕೆಂದು ಹೋದಾಗ್ಲೂ ಲಕ್ಷ್ಮೀ, ಆ ಕ್ಯಾಮರದೊಳಗಿನ ಸತ್ಯದ ಬಗ್ಗೆಯೇ ಮಾತನಾಡಿದಳು. ಆದರೆ ವೈಷ್ಣವ್ ಅದನ್ನು ನಂಬುವುದಕ್ಕೆ ಸಿದ್ಧವಿರಲಿಲ್ಲ. ಅಮ್ಮನನ್ನು ಅನುಮಾನಿಸುವುದು ಹೇಗೆ..? ಸತ್ಯ ಅಂತ ಏನಾದರೂ ಅಡಗಿದ್ದಿದ್ದರೆ ಇಷ್ಟೊತ್ತಿಗೆ ಹೊರಗೆ ಬರಬೇಕಿತ್ತು ಅಲ್ವಾ. ಸುಮ್ಮನೆ ನೀವೂ ಏನೇನೋ ಯೋಚನೆ ಮಾಡಬೇಡಿ ಎಂದು ಸಮಾಧಾನ ಮಾಡಿ ಹೋಗಿದ್ದಾನೆ. ವೈಷ್ಣವ್ ಕೂಡ ಲಕ್ಷ್ಮೀಯ ಮಾತನ್ನು ನಂಬುತ್ತಿಲ್ಲ. ಇದು ಲಕ್ಷ್ಮೀಗೆ ಬೇದರ ತರಿಸಿದೆ. ಮುಂದೆ ಏನು ಮಾಡಬೇಕು ಎಂದು ದಾರಿ ಕಾಣದೆ ಜೋರಾಗಿ ಕಿರುಚಿದ್ದಾಳೆ.
ಕಾವೇರಿಯ ಆಟಕ್ಕೆ ವೀಕ್ಷಕರ ಬೇಸರ
ಲಕ್ಷ್ಮೀ ಕೈಯಲ್ಲಿದ್ದ ಸಾಕ್ಷಿ ನಾಶ ಆಗಿದ್ದಕ್ಕೆ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಲಕ್ಷ್ಮೀ ಗೆಲ್ಲುತ್ತಾಳೆ. ಕೀರ್ತಿ ಸಾವಿಗೆ ನ್ಯಾಯ ಸಿಗುತ್ತೆ. ಕಾವೇರಿಗೆ ಶಿಕ್ಷೆ ಆಗುತ್ತೆ ಎಂದುಕೊಂಡಿದ್ದರೆ ಇಲ್ಲಿ ಕಾವೇರಿಯೇ ಗೆದ್ದಿದ್ದಾಳೆ. ಅಂದ್ರೆ ಪಾಪಿ ಚಿರಾಯು ಅನ್ನೋದು ಮತ್ತೆ ಪ್ರೂವ್ ಆಯ್ತು. ಕಾವೇರಿಯೇ ಗೆದ್ದು ಬಿಟ್ಟಳು ಎಂದು ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಈಗ ಮುಂದೆ ಏನು ನಿರ್ದೇಶಕರು ಅದೇನು ಪ್ಲ್ಯಾನ್ ಮಾಡುತ್ತಾರೆ ಎಂಬ ಕುತೂಹಲವಿದೆ. ಆ ಸಾಕ್ಷಿ ಎಲ್ಲಿದೆ ಎಂಬ ಪ್ರಶ್ನೆಯೂ ಕಾಡುತ್ತಿದೆ.


Click it and Unblock the Notifications











