Lakshmibaramma: ಲಕ್ಷ್ಮೀ ಕೊಲ್ಲಲು ಸುಪಾರಿ ಕೊಟ್ಟು ಮಾದೇವನ ಕಥೆ ಮುಗಿಸಲು ಬಂದ ಕಾವೇರಿ ಸಿಕ್ಕಿಬಿದ್ಲು!
ಕಾವೇರಿಗೆ ಸ್ವಾರ್ಥ ತುಂಬಿ ತುಳುಕುತ್ತಿತ್ತು. ಅದರಿಂದಾಗಿ ಒಂದೇ ಒಂದು ಪಾಪ ಮಾಡಿದ್ದೇ ಆರಂಭ. ಮಗ ನನ್ನ ಮಾತೇ ಕೇಳಬೇಕು, ನನ್ನ ಮೇಲೆ ಡಿಪೆಂಡ್ ಆಗಬೇಕು ಎಂದೇ ಭಾವಿಸಿದ ಕಾವೇರಿ, ಮಗನ ಪ್ರೀತಿಯನ್ನು ಚಿವುಟಿದಳು. ಕೀರ್ತಿಯ ಭಾವನೆಯ ಜೊತೆಗೂ ಆಟ ಆಡಿದಳು.
ಬರೀ ನಾಟಕವಾಡಿಕೊಂಡು ಬಂದ ಕಾವೇರಿಯ ಬಂಡವಾಳ ಕೀರ್ತಿ ಎದುರು ಬಯಲಾಯಿತು. ಆದರೆ ಕಾವೇರಿ ಪಾಪ ಕರ್ಮದ ಬಗ್ಗೆ ಅಲ್ಲಿಯೂ ಯೋಚಿಸಲೇ ಇಲ್ಲ. ಮೊದಲು ತನ್ನ ಜೀವನ ಅಂತ ಅವಳ ಕಥೆಯನ್ನೇ ಮುಗಿಸಿಬಿಟ್ಟಳು.

ಕಾವೇರಿಯೇ ಒಪ್ಪಿ ಸೊಸೆ ಮಾಡಿಕೊಂಡು ಬಂದ ಲಕ್ಷ್ಮೀ, ತನಗೆ ಅನ್ಯಾಯವಾದಾಗ, ಬೇರೆಯವರಿಗೆ ಅನ್ಯಾಯವಾದಾಗ ಧ್ವನಿ ಎತ್ತಿ ಮಾತನಾಡುತ್ತಾಳೆ. ಅಂಥ ಸೊಸೆ ಕಾವೇರಿಗೆ ಇಷ್ಟ ಆಗಲ್ಲ. ಮನೆಯಲ್ಲಿ ಕೆಲಸ ಮಾಡಿಕೊಂಡಿ, ಮಾತೇ ಬರದಂತೆ ಇರುವ ಸೊಸೆಯಾದರೆ ಕಾವೇರಿಗೆ ಇಷ್ಟವಾಗುತ್ತಾಳೆ. ಅದಕ್ಕೆ ಈಗ ಲಕ್ಷ್ಮೀಯನ್ನು ಕೊಲ್ಲಲು ಹೋಗಿದ್ದಳು. ಮಗನ ಕೈಗೆ ಸರಿಯಾಗಿ ಸಿಕ್ಕಿಬಿದ್ದಿದ್ದಾಳೆ.
ಲಕ್ಷ್ಮೀಯನ್ನು ಕೊಲ್ಲಲು ಸುಪಾರಿ
ಲಕ್ಷ್ಮೀ ಹಾಗೂ ವೈಷ್ಣವ್‌ನನ್ನು ನಂಬಿಸಿ, ತಾನೂ ನಿಮ್ಮ ಸುಖ ಬಯಸುತ್ತೀನಿ ಎಂದು ಹೇಳಿ ಇಬ್ಬರನ್ನು ರೆಸಾರ್ಟ್‌ಗೆ ಕಳುಹಿಸಿದಳು. ಆದರೆ ಹಿಂದೆಯಿಂದ ದೊಡ್ಡ ಪ್ಲ್ಯಾನ್ ಅನ್ನೇ ಮಾಡಿದ್ದಳು. ಲಕ್ಷ್ಮೀ ಇನ್ನ್ಯಾವತ್ತು ಬರಬಾರದು ಎಂದು ಕೊಲೆ ಮಾಡಲು ಹೊರಟಿದ್ದಳು. ಲಕ್ಷ್ಮೀಯನ್ನ ವೀವ್ ಪಾಯಿಂಟ್‌ಗೆ ಕರೆದುಕೊಂಡು ಹೋಗು ಎಂದೇ ಹೇಳಿದ್ದಳು. ಆದರೆ ಯಾರೋ ಒಬ್ಬರು ಲಕ್ಷ್ಮೀಯನ್ನು ಎಚ್ಚರಿಸುತ್ತಲೇ ಇದ್ದರು.
ಮಾದೇವಯ್ಯನಿಗೆ ಚಾಕು ಇರಿದ ಕಾವೇರಿ
ಮಾದೇವಯ್ಯ ಬದುಕಿದ್ದರೆ ನನಗೆ ಯಾವತ್ತಿದ್ದರು ತೊಂದರೆಯೇ ಎಂದು ಭಾವಿಸಿದ ಕಾವೇರಿ, ಮಗ ಸೊಸೆ ಹೊರಗೆ ಹೋದ ಮೇಲೆ ಮಾದೇವಯ್ಯನನ್ನು ಹುಡುಕಿಕೊಂಡು ಬೆಟ್ಟಕ್ಕೆ ಬಂದಳು. ಮಾದೇವಯ್ಯ ಬಂದೊಡನೆ ಕಾವೇರಿಯ ಕುತ್ತುಗೆಯನ್ನು ಹಿಡಿದು ಕೊಲ್ಲಲ್ಲು ಯತ್ನಿಸಿದ. ಆದರೆ ಕಾವೇರಿ ತನ್ನ ಬ್ಯಾಗ್‌ನಲ್ಲಿದ್ದ ಚಾಕು ತೆಗೆದು ಕೈಗೆ ಕುಯ್ದಳು.
ಮಗನ ಎದುರು ಮತ್ತೆ ನಾಟಕ ಶುರು
ಅಷ್ಟೊತ್ತಿಗಾಗಲೇ ವೈಷ್ಣವ್ ಹಾಗೂ ಲಕ್ಷ್ಮೀ ಆ ಜಾಗಕ್ಕೆ ಬಂದು ನಿಂತಿದ್ದರು. ಆ ಇಬ್ಬರನ್ನು ನೋಡಿ ಕಾವೇರಿ ದಂಗಾಗಿ ಹೋದಳು. ಮಗನ ಮುಂದೆ ಮತ್ತೆ ನಾಟಕವಾಡುವುದಕ್ಕೆ ಶುರು ಮಾಡಿದಳು. ಆದರೆ ಅಲ್ಲಿಯೇ ಇದ್ದ ಲಕ್ಷ್ಮೀ ಅಲ್ಲಿನ ಸತ್ಯ ಮುಚ್ಚಿ ಹೋಗುವುದಕ್ಕೆ ಬಿಡಲಿಲ್ಲ. ಬದಲಿಗೆ ಅಲ್ಲಿ ನಡೆಯುತ್ತಿರುವ ನಾಟಕವನ್ನು ಜೋರು ಧ್ವನಿಯಲ್ಲಿ ಹೇಳಿದಳು. ತಪ್ಪು ಮಾಡಿದ್ದ ಕಾವೇರಿಯೂ ಅಷ್ಟೇ ಜೋರು ಧ್ವನಿ ಮಾಡಿದಳು. ವೈಷ್ಣವ್ ಈ ಬಾರಿ ಕಾವೇರಿಯನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಅಮ್ಮನ ಬಾಯಿ ಮುಚ್ಚಿಸಿದ.
ಕೀರ್ತಿ ಸಾವುಗೆ ಸಾಕ್ಷಿ ಹುಡುಕುವುದೇಗೆ?
ವೈಷ್ಣವ್ ಎದುರೇ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ತೆರೆದಿಟ್ಟ ಪುಸ್ತಕವಾಗಿದೆ. ಅಮ್ಮ ಯಾಕೆ ಬೆಟ್ಟದ ಮೇಲೆ ಬಂದಳು, ಮಾದೇವಯ್ಯನನ್ನು ಕೊಲ್ಲುವುದ್ದಕ್ಕೆ ಯಾಕೆ ಹೋದಳು, ಮಾದೇವಯ್ಯ ಯಾಕೆ ಅಮ್ಮನನ್ನು ಕಂಡರೆ ಕೊಲೆಗಾತಿ ಎನ್ನುವುದು..? ಇದೆಲ್ಲದಕ್ಕೂ ಉತ್ತರ ಕಂಡುಕೊಂಡರೆ ಖಂಡಿತ ಅವನಿಗೆ ತನ್ನ ತಾಯಿ ಎಂಥವಳು ಎಂಬ ಉತ್ತರ ಸಿಗುವುದಷ್ಟೇ ಅಲ್ಲ, ಕೀರ್ತಿಯ ಪರಿಸ್ಥಿತಿಗೆ, ಕೀರ್ತಿಯ ಸಾವುಗೆ ಕಾರಣ ಯಾರು ಎಂಬುದು ತಿಳಿಯದೆ ಇರುವುದಿಲ್ಲ.


Click it and Unblock the Notifications











