Lakshmibaramma: ಲಕ್ಷ್ಮೀ ಆಕ್ಟಿಂಗ್ ಸಖತ್ತಾಗಿತ್ತು.. ಇಷ್ಟು ಬೇಗ ಇದು ನಾಟಕ ಅಂತ ಹೇಳಿದ್ದೇಕೆ? ವೀಕ್ಷಕರ ಪ್ರಶ್ನೆ
ಯಾವುದೇ ಧಾರಾವಾಹಿಯಾಗಲಿ ವೀಕ್ಷಕರು ಅದರ ಆಳಕ್ಕೆ ಹೋಗಿ ಬಿಡುತ್ತಾರೆ. ಇದು ಧಾರಾವಾಹಿ ಕಥೆ, ಕಥೆಗಾರ ಬರೆದಂತೆ, ನಿರ್ದೇಶಕರ ಆಜ್ಞೆಯಂತೆ ಸಾಗುತ್ತದೆ ಎಂಬುದನ್ನೇ ಮರೆತು ಬಿಡುತ್ತಾರೆ. ಯಾವುದೋ ಎಮೋಷನಲ್ ಕಥೆ ಕೇಳಿಸಿದಾಗಲೋ, ಯಾರದ್ದೋ ನೋವನ್ನ ನೋಡಿದಾಗಲೋ ತಮ್ಮದೇ ನೋವೆಂಬಂತೆ ಅಥವಾ ನಮ್ಮ ಅಕ್ಕಪಕ್ಕದವರ ನೋವೆಂಬಂತೆ ಫೀಲ್ ಮಾಡುತ್ತಾರೆ. ಟಿವಿ ಮುಂದೆ ಕೂತು ವಿಲನ್‌ಗಳಿಗೆ ಹಿಡಿ ಶಾಪ ಹಾಕುತ್ತಾರೆ.
ಧಾರಾವಾಹಿಯನ್ನ ಜನ ನೋಡುವ ರೀತಿಯೇ ಅದು. ಈಗ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಗೂ ಅದೇ ರೀತಿ ಫೀಲ್ ಮಾಡಿಕೊಳ್ಳುತ್ತಿದ್ದಾರೆ. ಬೈಕೊಂಡಾದರೂ ಸರಿ ಆ ಧಾರಾವಾಹಿಯಲ್ಲಿ ಏನಾಯ್ತು, ಯಾಕಾಯ್ತು ಎಂಬ ಕುತೂಹಲದೊಂದಿಗೆ ನೋಡುತ್ತಿದ್ದಾರೆ. ಈಗ ಲಕ್ಷ್ಮೀಯ ಬಗ್ಗೆ ಸತ್ಯ ಗೊತ್ತಾಗಿದ್ದು ಜನರಿಗೇನೆ ಕೊಂಚವೂ ಇಷ್ಟವಾಗಲಿಲ್ಲ. ಅದಕ್ಕೆ ಬೇಸರ ಮಾಡಿಕೊಂಡಿದ್ದಾರೆ.

ಸತ್ಯ ಹೊರ ತರುವ ಪ್ರಯತ್ನ
ಕೀರ್ತಿ ಎಲ್ಲಾ ಸತ್ಯವನ್ನು ಹೇಳುತ್ತೀನಿ ಎಂದು ವೈಷ್ಣವ್ ಹಾಗೂ ಲಕ್ಷ್ಮೀಯನ್ನು ಬೆಟ್ಟಕ್ಕೆ ಕರೆಸಿದ್ದಳು. ಆದರೆ ಸತ್ಯ ಹೇಳಿ ಬಿಡಬೇಕು ಎನ್ನುವಷ್ಟರಲ್ಲಿ ಕಾವೇರಿ ಅವಳನ್ನು ಕೊಂದಿದ್ದಳು. ಈಗ ಆ ಸತ್ಯವನ್ನು ಹೊರತೆಗೆಸಲೇಬೇಕಾಗಿದೆ. ಹೀಗಾಗಿ ಮೈಮೇಲೆ ಕೀರ್ತಿಯ ಆತ್ಮ ಬರ್ತಾ ಇದೆ ಎಂದು ನಾಟಕವಾಡುತ್ತಿದ್ದಾಳೆ.
ನೇರವಾಗಿ ಅಟ್ಯಾಕ್ ಮಾಡುತ್ತಿರುವ ಲಕ್ಷ್ಮೀ
ಲಕ್ಷ್ಮೀಗೆ ಕೀರ್ತಿಗೆ ಹೇಗೆಲ್ಲಾ ನಡೆದುಕೊಳ್ಳುತ್ತಿದ್ದಳು, ಇಂಗ್ಲೀಷ್ ಹೇಗೆ ಮಾತನಾಡುತ್ತಿದ್ದಳು ಎಂಬ ಅರಿವಿದೆ. ಹೀಗಾಗಿ ಎಲ್ಲರನ್ನು ನಂಬಿಸುವಂತೆ ನಾಟಕವಾಡುತ್ತಿದ್ದಾಳೆ. ಅದರಲ್ಲೂ ಕಾವೇರಿಯ ಬಳಿ ಹೋಗಿ ಕೀರ್ತಿಯ ಧ್ವನಿಯಂತೆ ಮಾತನಾಡಿದಾಗ ಅವಳು ಹೆದರುತ್ತಿದ್ದಾಳೆ. ಆದರೆ ಸತ್ಯ ಹೇಳುವ ಗೋಜಿಗೆ ಹೋಗುತ್ತಿಲ್ಲ.
ಕಾವೇರಿಯನ್ನು ಬಿಡಲ್ಲ ಲಕ್ಷ್ಮಿ
ಕೀರ್ತಿ ನಿಮಗೆ ಯಾಕೆ ಕಾಡುತ್ತಿರುವುದು ಎಂದು ಹೇಳಿ ಲಾಕ್ ಮಾಡುವುದಕ್ಕೆ ನೋಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಲಕ್ಷ್ಮೀಗೆ ಸತ್ಯ ಬಾಯಿ ಬಿಡಿಸುವುದೇ ದೊಡ್ಡ ಸಾಹಸವಾಗಿ ಹೋಗಿದೆ. ಕೀರ್ತಿಗೆ ಮೋಸ ಮಾಡಿರುವುದಂತು ಡೈರಿಯಿಂದ ಪ್ರೂವ್ ಆಗಿದೆ. ಹೀಗಾಗಿ ಕಾವೇರಿಯನ್ನು ಲಕ್ಷ್ಮೀ ಬಿಡುವ ಮಾತೇ ಇಲ್ಲ.

ಕಾವೇರಿಗೆ ಬುದ್ದಿ ಹೇಳಿದ ಲಕ್ಷ್ಮೀ
ಇತ್ತ ವೈಷ್ಣವ್ ಕಡೆಯಿಂದ ಕ್ಷಮೆಗಾಗಿ ಕಾಯುತ್ತಿರುವ ಕಾವೇರಿ ನಾಟಕ ಶುರು ಮಾಡಿದ್ದಾಳೆ. ನಾನು ಊಟ ತಿಂಡಿ ಏನು ಮಾಡಲ್ಲ ಎಂದು ಕೂತಿದ್ದಾಳೆ. ವೈಷ್ಣವ್ ಅದಕ್ಕೂ ಬಗ್ಗದೆ ತಪ್ಪು ಪದೇ ಪದೇ ಮಾಡಿದವರಿಗೆ ಕ್ಷಮೆ ಇಲ್ಲ ಎಂದೇ ಹೇಳಿ ಹೋಗಿದ್ದಾನೆ. ಈಗ ಊಟ ತೆಗೆದುಕೊಂಡು ಬಂದ ಲಕ್ಷ್ಮೀಯೂ ಕಾವೇರಿಗೆ ಬುದ್ದಿ ಹೇಳಿದ್ದಾಳೆ. ಒಂದೇ ಒಂದು ತಪ್ಪು ಮೂರು ಜನರ ಜೀವನವನ್ನು ಹಾಳು ಮಾಡುತ್ತಿದೆ. ಮೊದಲಿನಿಂದಾನೇ ಪ್ರಾಮಾಣಿಕವಾಗಿ ಇರಬೇಕಿತ್ತು ನೀವೂ ಎಂದಿದ್ದಾಳೆ.
ಸತ್ಯ ಗೊತ್ತಾಗಿದ್ದಕ್ಕೆ ವೀಕ್ಷಕರ ಬೇಸರ
ಲಕ್ಷ್ಮೀ ಮೇಲೆ ನಿಜಕ್ಕೂ ಕೀರ್ತಿಯ ಆವಾಹನೆ ಆಗಿದೆ ಅಂತ ವೀಕ್ಷಕರು ನಂಬಿದ್ದರು. ಆ ಎಪಿಸೋಡ್ ಕೂಡ ಅಷ್ಟೇ ಕುತೂಹಲವನ್ನು ಹುಟ್ಟಿಸಿತ್ತು. ಕೀರ್ತಿ ಈ ರೀತಿಯಾದರೂ ವಾಪಾಸ್ ಬಂದಳಲ್ಲ ಎಂಬ ಖುಷಿ ಫ್ಯಾನ್ಸ್‌ಗೆ ಇತ್ತು. ಆದರೆ ಇದು ಗಂಗಕ್ಕ ಹಾಗೂ ಲಕ್ಷ್ಮೀ ಸೇರಿ ಆಡುತ್ತಿರುವ ನಾಟಕ ಎಂಬುದು ಇತ್ತೀಚೆಗೆ ರಿವೀಲ್ ಆಗಿಬಿಟ್ಟಿದೆ. ಇದು ನಿಜಕ್ಕೂ ಬೇಸರ ತರಿಸಿದೆ. ಆ ನಾಟಕ ಅದೇ ರೀತಿ ಮುಂದುವರೆದಿದ್ದರೆ ನೋಡುವುದಕ್ಕೂ ಖುಷಿ ಕೊಡ್ತಾ ಇತ್ತು. ನೀವೂ ತಪ್ಪು ಮಾಡಿಬಿಟ್ರಿ. ನಾಟಕವನ್ನು ಹೇಳಬಾರದಿತ್ತು ಎನ್ನುತ್ತಿದ್ದಾರೆ.


Click it and Unblock the Notifications











