Lakshmibaramma: ಕೀರ್ತಿ ಭಯದಿಂದ ಕಾವೇರಿ ಸೊರಗಿ ಹೋಗಿದ್ದಾಳೆ; ನಿಮಗೂ ಹಾಗೇ ಅನ್ನಿಸ್ತಾ ಇದ್ಯಾ?
ಮಗನ ಮೇಲಿನ ಅತಿಯಾದ ಪ್ರೀತಿ ಇಂದು ಕಾವೇರಿಯನ್ನ ದೊಡ್ಡ ಅಪರಾಧಿಯನ್ನಾಗಿ ಮಾಡಿದೆ. ಅವಳ ಸ್ವಾರ್ಥದಿಂದ ಒಂದು ಜೀವವೇ ಸತ್ತು ಹೋಗಿದೆ. ಆದರೂ ಮನೆಯವರ ಮುಂದೆ ಸತ್ಯ ಹೇಳುತ್ತಿಲ್ಲ. ಸತ್ಯ ಬಿಟ್ಟಾಕಿ ಪಶ್ಚಾತ್ತಾಪ ಕೂಡ ಕಾಣಿಸುತ್ತಿಲ್ಲ. ಇದು ಸಹಜವಾಗಿಯೇ ಲಕ್ಷ್ಮೀಯ ಕೋಪಕ್ಕೆ ಕಾರಣವಾಗಿದೆ. ಹೇಗಾದರೂ ಮಾಡಿ ಸತ್ಯ ಬಾಯಿ ಬಿಡಿಸಬೇಕು ಎಂಬ ಹಠ ತೊಟ್ಟು ನಿಂತಿದ್ದಾಳೆ.
ಮಗನ ಮೇಲೆ ಕಾವೇರಿಗೆ ಇರುವ ವ್ಯಾಮೋಹದಿಂದಾನೇ ಮನೆಯಲ್ಲಿ ಶಾಂತಿ, ನೆಮ್ಮದಿ ಹಾಳಾಗಿದೆ. ವೈಷ್ಣವ್ ಹಾಗೂ ಕೀರ್ತಿ ಜಾಸ್ತಿ ಪ್ರೀತಿ ಮಾಡ್ತಾ ಇದ್ದವರು. ಆದರೆ ಕೀರ್ತಿ ಬಂದರೆ ಮಗನನ್ನು ದೂರ ಮಾಡಿ ಬಿಡ್ತಾಳೆ ಎಂಬ ಭಯಕ್ಕೆ ಅವರಿಬ್ಬರ ಪ್ರೀತಿಗೆ ಕಲ್ಲು ಹಾಕಿದಳು. ಆದರೆ ಈಗ ಕಾವೇರಿಯ ಪರಿಸ್ಥಿತಿ ನೋಡುವುದಕ್ಕೆ ಆಗ್ತಿಲ್ಲ. ಅಷ್ಟು ಸೊರಗಿ ಹೋಗಿದ್ದಾಳೆ.

ಎಲ್ಲರ ರೂಮ್ ಲಾಕ್ ಮಾಡಿದ ಗಂಗಾ
ಈಗಾಗಲೇ ಕೀರ್ತಿ ಸತ್ತು ಸುಮಾರು ದಿನಗಳಾಗಿವೆ. ಅಂದಿನಿಂದಲೂ ಕಾವೇರಿಯನ್ನು ಲಕ್ಷ್ಮೀ ಕಾಡುತ್ತಿದ್ದಾಳೆ. ಆದರೂ ಕಾವೇರಿ ಸತ್ಯ ಹೇಳುವ ಗೋಜಿಗೆ ಹೋಗುತ್ತಿಲ್ಲ. ಈಗ ಎಲ್ಲರ ರೂಮನ್ನು ಲಾಕ್ ಮಾಡಿಕೊಂಡು, ಕಾವೇರಿಯನ್ನು ಹೆದರಿಸುವ ಪ್ರಯತ್ನವಾಗುತ್ತಿದೆ. ಲಕ್ಷ್ಮೀ ಹಾಗೂ ಗಂಗಾ ಇಬ್ಬರು ಸೇರಿಕಿಂಡು ನೀರಿಳಿಸುತ್ತಿದ್ದಾರೆ.
ತುತ್ತು ಅನ್ನ ತಿನ್ನುವುದಕ್ಕೂ ಆಗುತ್ತಿಲ್ಲ
ಮಗನಿಂದ ಕ್ಷಮೆಗಾಗಿ ಕಾವೇರಿ ಉಪವಾಸ ಮಾಡುತ್ತಿದ್ದಾಳೆ. ಆದರೆ ಹೊಟ್ಟೆ ಕೇಳಬೇಕಲ್ಲ. ಜೋರು ಹಸಿವಾಗಿದೆ. ಎಲ್ಲರು ಮಲಗಿದ್ದ ಸಮಯ ನೋಡಿಕೊಂಡು ಕದ್ದು ಊಟ ಮಾಡುವುದಕ್ಕೆ ಬಂದಿದ್ದಾಳೆ. ಅಲ್ಲಿಗೆ ಬಂದ ಲಕ್ಷ್ಮೀಯನ್ನು ಕಂಡು ಕಾವೇರಿಗೆ ಎದೆ ಬಡಿತವೇ ನಿಂತಂತೆ ಆಗಿದೆ. ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದಾಳೆ. ಹೊಟ್ಟೆ ಹಸಿವಾಗಿದೆ. ಒಂದೇ ಒಂದು ತುತ್ತು ಅನ್ನ ಬಾಯಲ್ಲಿಟ್ಟುಕೊಂಡಳು ಅಷ್ಟೇ. ಆದರೆ ಗಂಟಲಿನಿಂದ ನುಂಗುವುದರೊಳಗೆ ಕೀರ್ತಿಯ ಭ್ರಮೆ ಕಣ್ಣ ಮುಂದೆ ಬಂದಿದೆ. ಲಕ್ಷ್ಮೀ ನಡೆ ಕಂಡು ಅನ್ನ ತಿನ್ನೋದಾಕ್ಕಾದರೂ ಬಿಡು ಕೀರ್ತಿ ಎಂದು ಬೇಡಿಕೊಂಡಿದ್ದಾಳೆ. ಕಿರುಚಿದರು ಮನೆಯವರ್ಯಾರು ಬರುವುದಕ್ಕೆ ಸಾಧ್ಯವಾಗದಂತೆ ಮಾಡಿದ್ದಾಳೆ.
ಸೊರಗಿ ಸುಣ್ಣವಾಗಿದ್ದಾಳೆ ಕಾವೇರಿ
ಕಾವೇರಿ ಮೊದಲೇ ಸಣ್ಣ ಇದ್ದವಳು. ಈಗ ಕೀರ್ತಿಯ ಭಯಕ್ಕೆ ಇನ್ನಷ್ಟು ಸೊರಗಿ ಹೋಗಿದ್ದಾಳೆ. ರಿಯಲ್ ಲೈಫ್‌ನಲ್ಲಿ ಅಲ್ಲ, ಕ್ಯಾಮೆರಾ ಮುಂದೆ. ಇಂದು ಊಟ ಮಾಡುವುದಕ್ಕೆ ಕದ್ದು ಬಂದಾಗ, ಕಾವೇರಿಗೆ ಮಾಡಿದ್ದ ಮೇಕಪ್ ನೋಡಿದರೆ ಪಾಪ ಸೊರಗಿಯೇ ಹೋಗಿದ್ದಾರೆ ಎಂಬ ಫೀಲ್ ಬಂತು. ಹಠದಿಂದ ಊಟವಿಲ್ಲ, ಕೀರ್ತಿಯಿಂದ ನಿದ್ದೆಯಿಲ್ಲ. ಹೀಗಾಗಿ ಸೊರಗಿ ಹೋದರವರಂತೆ ಕಾಣಿಸುತ್ತಿದ್ದಾಳೆ.

ಕಾವೇರಿ ಸತ್ಯ ಹೇಳುವುದು ಯಾವಾಗ..?
ಲಕ್ಷ್ಮೀ ಅದೆಷ್ಟೇ ಭಯ ಪಡಿಸಿದರೂ, ಮಂತ್ರವಾದಿ ಎದುರು ಕರೆದುಕೊಂಡು ಹೋಗಿ ನಿಲ್ಲಿಸಿದರು ಕಾವೇರಿ ಸತ್ಯ ಬೇಳುತ್ತಿಲ್ಲ. ಹೀಗೆ ಮುಂದುವರೆದರೆ ನೋಡುಗರ ತಲೆ ಕೆಡುವುದಂತು ಸತ್ಯ. ಹೀಗಾಗಿ ಈಗ ಲಕ್ಷ್ಮೀ ಸ್ಟ್ರಾಂಗ್ ಆಗಿ ಏನಾದರೊಂದು ಪ್ಲ್ಯಾನ್ ಮಾಡಬೇಕಿದೆ. ಕಾವೇರಿಗೆ ಇನ್ನಷ್ಟು ಗಾಢವಾಗಿ ಭಯ ಹುಟ್ಟಿಸಬೇಕಿದೆ. ಆಗ ಮಾತ್ರ ಕಾವೇರಿ ಬಾಯಿಂದ ಸತ್ಯ ಹೊರಗೆ ಬರಬಹುದು. ಇಲ್ಲವಾದರೆ ಸತ್ಯವೂ ಬರಲ್ಲ, ನೋಡುಗರಿಗೂ ಸಂತಸವಾಗಲ್ಲ. ಲಕ್ಷ್ಮೀಯ ಇಷ್ಟು ದಿನದ ಪ್ರಯತ್ನ ನೀರಲ್ಲಿ ಹೋಮ ಮಾಡಿದಂತೆ ಆಗಿ ಬಿಡುತ್ತದೆ. ಲಕ್ಷ್ಮೀಯ ಪ್ರಯತ್ನ ಸೋಲಬಾರದು ಅಂತಿದ್ದಾರೆ ವೀಕ್ಷಕರು.


Click it and Unblock the Notifications











