Lakshmibaramma: 'ಲಕ್ಷ್ಮೀಬಾರಮ್ಮ' ಪ್ರೋಮೋ ನೋಡಿ ವೀಕ್ಷಕರು ಶಾಕ್: ಹಾರರ್ ಸಿನಿಮಾದಲ್ಲೂ ಹಿಂಗಿಲ್ಲ ಅಂತಿದ್ದಾರೆ!

By ಎಸ್ ಸುಮಂತ್

ಲಕ್ಷ್ಮೀಬಾರಮ್ಮ ಧಾರಾವಾಹಿಯಲ್ಲಿ ಕಳೆದ ಒಂದು ವಾರದಿಂದ ಸಿಕ್ಕಾಪಟ್ಟೆ ಟ್ವಿಸ್ಟ್ ಅಂಡ್ ಟರ್ನಿಂಗ್ ಕಾಣಿಸ್ತಾ ಇದೆ. ಸತ್ಯ ತಿಳಿದ ಮೇಲೆ ಕೀರ್ತಿ ಕಾವೇರಿಗೆ ಬುದ್ದಿ ಕಲಿಸುವುದಕ್ಕೆಂದೆ ಪ್ರಯತ್ನ ಪಟ್ಟಳು ಆದ್ರೆ ಕಾವೇರಿಯ ಜಾಣತನ, ಹುಂಬತನ ಕೀರ್ತಿಯ ಪ್ರಾಣವನ್ನೇ ಬಲಿ ಪಡೆದುಕೊಂಡಿದೆ.

ಕೀರ್ತಿಯನ್ನು ಹುಡುಕಿ ಓಡಿ ಬಂದ ಲಕ್ಷ್ಮೀ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟಿದ್ದಾಳೆ. ಹೀಗಾಗಿ ಕೀರ್ತಿಯ ಪರಿಸ್ಥಿತಿ ಏನಾಯ್ತು ಎಂಬುದು ವೈಷ್ಣವ್ ಗಾಗಲೀ ಲಕ್ಷ್ಮೀಗಾಗಲೀ ಕೀರ್ತಿಯ ಸುಳಿವು ಸಿಗಲಿಲ್ಲ. ವೈಷ್ಣವ್ ಗೆ ಕೀರ್ತಿಗಿಂತ ಲಕ್ಷ್ಮೀಯ ಚಿಂತೆ ಜಾಸ್ತಿಯಾಗಿತ್ತು. ಹೀಗಾಗಿಯೇ ಅಲ್ಲಿಂದ ಮೊದಲು ಲಕ್ಷ್ಮೀಯನ್ನು ಕರೆದುಕೊಂಡು ಹೊರಟೇ ಬಿಟ್ಟ. ಅಲ್ಲಿಯೇ ನಿಂತು ಎಲ್ಲವನ್ನು ನೋಡಿದ್ದ ಆ ವ್ಯಕ್ತಿಗೆ ಕಾಪಾಡುವುದಾದರೂ ಹೇಗೆ ಎಂಬ ಚಿಂತೆ. ಕಣ್ಣೀರುಡತ್ತಲೇ ನೋಡಿದಾಗ ಸಿಕ್ಕಿದ್ದು ಕೀರ್ತಿ ಫಿಕ್ಸ್ ಮಾಡಿದ್ದ ಕ್ಯಾಮೆರಾ.

Colors kannada Lakshmibaramma Written Update on special promo episode

ಕ್ಯೂರಿಯಾಸಿಟಿ ಹುಟ್ಟಿಸಿದ ಪ್ರೋಮೋ

ಲಕ್ಷ್ಮೀಬಾರಮ್ಮ ಧಾರಾವಾಹಿ ಸೋಮವಾರದಿಂದ ಶುಕ್ರವಾರದ ತನಕ ಪ್ರಸಾರವಾಗಲಿದೆ. ಶುಕ್ರವಾರದ ತನಕ ಕಲರ್ಸ್ ಕನ್ನಡ ಪ್ರೋಮೋ ರಿಲೀಸ್ ಮಾಡುತ್ತೆ. ಆದರೆ ಶನಿವಾರದಂದು ಪ್ರೋಮೋ ಹಾಕ್ತಾ ಇರಲಿಲ್ಲ, ಹೈಲೇಟ್ ಹಾಕ್ತಾ ಇದ್ದರು. ಆದರೆ ಸೋಮವಾರದ ಎಪಿಸೋಡನ್ನ ಕಲರ್ಸ್ ಕನ್ನಡ ಇಂದೇ ಪ್ರೋಮೋ ಬಿಟ್ಟಿದೆ. ಈ ಪ್ರೋಮೋ ಕಂಡು ಪ್ರೇಕ್ಷಕರು ಶಾಕ್ ಆಗಿದ್ದಾರೆ. ಹೆಚ್ಚಿನ ಕುತೂಹಲವನ್ನು ಹುಟ್ಟುಹಾಕಿದೆ.

ಕಾವೇರಿಗೆ ಕಾಡುತ್ತಿದೆ ಭ್ರಮೆ

ಕಾವೇರಿ ಮಾಡಿರುವ ಪಾಪ ಕರ್ಮ ಒಂದಿಷ್ಟಲ್ಲ. ತನ್ನ ಅತ್ತೆಯಿಂದ ಮಗನನ್ನು ದೂರ ಮಾಡಿರುವ ಕಾವೇರಿ, ಕೊನೆಗಳಿಗೆಯವರೆಗೂ ನೆಮ್ಮದಿ ನೀಡಿರಲಿಲ್ಲ. ಕಾವೇರಿಗೆ ಚೆನ್ನಾಗಿಯೇ ಅರ್ಥವಾಗಿದೆ ತನ್ನ ಪಾಪ ಕರ್ಮಗಳು ತನ್ನನ್ನು ಸುತ್ತುತ್ತಿವೆ ಎನ್ನುವುದು. ಹೀಗಾಗಿಯೇ ಆಗಾಗ ಭಯದಲ್ಲಿರುತ್ತಾಳೆ. ಈಗ ತಾನು ಮಾಡಿದ ಕರ್ಮದ ಕೆಲಸವೆಲ್ಲಾ ಕನಸಲ್ಲಿ ಬರುವುದಕ್ಕೆ ಶುರುವಾಗಿದೆ. ನೆಮ್ಮದಿಯಾಗಿ ನಿದ್ದೆಯನ್ನೇ ಮಾಡದಂತೆ ಮಾಡಿದೆ. ಕೀರ್ತಿಯನ್ನು ಕೊಂದಿದ್ದು, ಅತ್ತೆಗೆ ನೋವು ಕೊಟ್ಟಿದ್ದು ಎಲ್ಲವೂ ನಿದ್ದೆಯನ್ನು ಕಿತ್ತುಕೊಳ್ಳುವಷ್ಟು ಕಾಡುತ್ತಿದೆ. ರಾತ್ರಿಯಿಡೀ ನಿದ್ದೆ ಮಾಡದೆ ಒದ್ದಾಡುತ್ತಿದ್ದಾಳೆ.

Colors kannada Lakshmibaramma Written Update on special promo episode

ಕೀರ್ತಿ ಮತ್ತು ಅತ್ತೆಯಿಂದ ಕಾಟ

ಕೀರ್ತಿ ಈಗ ಬದುಕುಳಿಯುವುದು ಬಹಳ ಕಷ್ಟವಿದೆ. ಯಾಕಂದ್ರೆ ಕೆಳಗೆ ಬಿದ್ದ ಕೀರದತಿಯನ್ನು ಕಾಪಾಡುವುದಕ್ಕೂ ಯಾರೂ ಇಲ್ಲದಂತೆ ಆಗಿದೆ. ಆ ವ್ಯಕ್ತಿಗೆ ಜಸ್ಟ್ ಕ್ಯಾಮಾರಾ ಸಿಕ್ಕಿದೆ. ಆ ಕ್ಯಾಮಾರಾವನ್ನ ಲಕ್ಷ್ಮೀಗೆ ತಲುಪಿಸುವುದಾದರೂ ಹೇಗೆ ಎಂಬುದು ಗೊತ್ತಿಲ್ಲ. ಆದ್ರೆ ಕೀರ್ತಿ ಮಾತ್ರ ಕಾವೇರಿಯನ್ನು ಬಿಡದೇ ಕಾಡುತ್ತಿದ್ದಾಳೆ. ಸಾಯುವುದಕ್ಕೂ ಮುನ್ನ ಕೂಡ ಹೇಳಿನೇ ಸತ್ತಿದ್ದಾಳೆ. ನಾನು ನಿಮ್ಮನ್ನ ಬಿಡುವುದಿಲ್ಲ. ಸತ್ತ ಮೇಲೂ ಕಾಡುತ್ತೇನೆ ಎಂದೇ ಹೇಳಿದ್ದಳು. ಅದೆಲ್ಲವೂ ಈಗ ಕಾವೇರಿಯ ಭ್ರಮಾ ಲೋಕದಲ್ಲಿ ಸಂಚಾರವಾಗುತ್ತಿದೆ. ಕೀರ್ತಿ ತಾನೂ ಯಾವ ರೀತಿ ಸತ್ತಳೋ ಅದೇ ವೇಶಷದಲ್ಲಿ ಕಾವೇರಿಯನ್ನು ಕಾಡುತ್ತಿದ್ದಾಳೆ.

ಪ್ರೋಮೋ ಬಗ್ಗೆ ಕುತೂಹಲ

ಈ ಪ್ರೋಮೋಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸೀರಿಯಲ್ ಅದ್ಭುತವಾಗಿ ಬರುತ್ತಿರುವುದಕ್ಕೆ ಚಪ್ಪಾಳೆ ಹೊಡೆದಿದ್ದಾರೆ. ಅದರಲ್ಲೂ ಸಖತ್ ಟ್ವಿಸ್ಟ್ ಕೊಡಲು ಹೊರಟಿರುವ ಈ ಪ್ರೋಮೋ ನೋಡಿ ಸಿನಿಮಾಗೆ ಹೋಲಿಕೆ ಮಾಡುತ್ತಿದ್ದಾರೆ. ಯಾವ ಹಾರರ್ ಸಿನಿಮಾ ಕೂಡ ಈ ರೇಂಜಿಗೆ ಇರುವುದಿಲ್ಲ ಎನ್ನುತ್ತಿದ್ದಾರೆ. ಸೋಮವಾರದಿಂದ ಲಕ್ಷ್ಮೀಬಾರಮ್ಮ ಸಖತ್ ಕುತೂಹಲದಿಂದ ಸಾಗಲಿದೆ. ಕಾವೇರಿಯ ಆಟಕ್ಕೆ ಬ್ರೇಕ್ ಹಾಕುವವರು ಯಾರು..? ಅನ್ಯಾಯವಾದ ಕೀರ್ತಿಗೆ ಸಾವಲ್ಲಾದರೂ ನ್ಯಾಯ ಸಿಗುತ್ತಾ..? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತಾ ಹೋಗುತ್ತದೆ.

More from Filmibeat

English summary
Colors kannada Lakshmibaramma Written Update on special promo episode. Here is the details about Keerthi's death has disturbed Kaveri's sleep;
Read more about: filmbeat original sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X