Nanna Devru: ಇಂದ್ರಾಣಿಯ ಕುತಂತ್ರದಿಂದಾನೇ ಹತ್ತಿರವಾಗ್ತಿದ್ದಾರೆ ಮಯೂರಿ - ಸಚ್ಚಿದಾನಂದ!

By ಎಸ್ ಸುಮಂತ್

ಊರಿಗೆ ದೇವರಂತೆ ಇರುವ ಸಚ್ಚಿದಾನಂದನಿಗೆ ಯಾವುದೇ ಸಮಸ್ಯೆ ಆಗುವುದನ್ನು ಮಯೂರಿ ಸಹಿಸುವುದಿಲ್ಲ. ಕೆಟ್ಟದ್ದನ್ನು ಮಾಡಲು ಬಿಡುವುದಿಲ್ಲ. ಸಾಧ್ಯವಾದಷ್ಟು ಧಣಿಗಳನ್ನು ಕಾಯುತ್ತಿರುತ್ತಾಳೆ. ಊಟದಲ್ಲಿ ಬೆರೆಸಿದ್ದ ಅನ್ನ ತಿಂದು ಧಣಿಗಳನ್ನು ಕಾಪಾಡಿಯೇ ನಂಬಿಕೆ ಗಳಿಸಿಕೊಂಡಳು. ಇಲ್ಲಿಯವರೆಗೂ ಅಷ್ಟೇ ಪ್ರಾಮಾಣಿಕವಾಗಿದ್ದಾಳೆ. ಅದಕ್ಕೆ ಧಣಿಗಳಿಗೂ ಇಷ್ಟವಾಗುವುದು.

ಶಾರದಾ ಬದುಕಿದ್ದಾಗ ಎಲ್ಲವೂ ಅವಳೇ ಆಗಿದ್ದಳು. ಆದರೆ ಶಾರದಾ ಹೋದ ಧಣಿಗಳು ಮಂಕಾಗಿದ್ದಾರೆ. ಇತ್ತಿಚೆಗೆ ಆ ಸ್ಥಾನವನ್ನು ತುಂಬುತ್ತಿರುವುದು ಇದೇ ಮಯೂರಿ. ಧಣಿಗಳ ತಾಯಿಗೂ ಮಯೂರಿ ತುಂಬಾ ಇಷ್ಟ ಆಗಿದ್ದಾಳೆ. ಮಗನ ಒಂಟಿತನಕ್ಕೆ ಮಯೂರಿಯೇ ಬೆಸ್ಟ್ ಮದ್ದು ಎನಿಸಿದೆ. ಹೀಗಾಗಿ ಮಯೂರಿಯ ಜಾತಕ ನೋಡಿದ್ದಾಳೆ. ಮೂರು ತಿಂಗಳ ಒಳಗೆ ಮದುವೆ ಆಗಬೇಕಿದೆ. ಜಯಮ್ಮ ಅದರ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ.

Colors kannada Nanna devru Written Update on August 17th episode

ಪ್ರಾಣಕ್ಕೆ ಕುತ್ತು ತಂದ ಇಂದ್ರಾಣಿ

ಸಚ್ಚಿಗೆ ಮನೆಯವರೆಂದರೆ ಪ್ರಾಣ. ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸ್ತಿ. ಯಾವುದೇ ಕೊರತೆಯನ್ನು ಮಾಡದೆ ನೋಡಿಕೊಳ್ಳುತ್ತಿದ್ದಾನೆ. ಆದರೆ ತಂಗಿ ಇಂದ್ರಾಣಿಗೆ ಮಾತ್ರ ಆ ಮನೆ ನೆಮ್ಮದಿಯಿಂದ ಇರುವುದು ಇಷ್ಟವಿಲ್ಲ. ಸಚ್ಚಿದಾನಂದನಿಗೆ ಸಂತೋಷ ಸಿಕ್ಕರೆ ಆಗುವುದಿಲ್ಲ. ಸಾಮೂಹಿಕ ವಿವಾಹದಲ್ಲಿ ತನಗೆ ಮದುವೆ ಮಾಡಿಬಿಟ್ಟರು ಎಂಬ ಕೋಪ ಅವಳಲ್ಲಿದೆ. ಶ್ರೀಮಂತರ ಕುಟುಂಬ ಎಂಬ ಅಹಂಕಾರವೂ ಸ್ವಲ್ಪ ಜಾಸ್ತಿಯೇ ಇದೆ. ಹಾಗೇ ಯಾರಿಗೂ ತಿಳಿಯದಂತೆ ಹಣ ಮಾಡುವುದಕ್ಕೆ ಮುಂದಾಗಿದ್ದಾಳೆ‌. ಅದಕ್ಕೆ ಮಯೂರಿ ಅಡ್ಡ ಬರುತ್ತಿರುವ ಕಾರಣ ಅವಳ ಮೇಲೂ ಕೆಂಡ ಕಾರುತ್ತಿದ್ದಾಳೆ. ಮನೆಗೆ ಬಂದ ಮಯೂರಿಯನ್ನು ಪ್ರಾಣಾಪಾಯದಿಂದ ದೂಡಿದ್ದಾಳೆ.

ಮಯೂರಿ ಕಾಪಾಡಿದ ಸಚ್ಚಿದಾನಂದ

ಸಚ್ಚಿದಾನಂದನ ಮನೆಯವರ ಆಹ್ವಾನದ ಮೇರೆಗೆ ಮಯೂರಿ ಹಬ್ಬಕ್ಕೆಂದು ಹೋಗಿದ್ದಳು. ಬಾಗಿಲಲ್ಲಿಯೇ ಇಂದ್ರಾಣಿ, ಮಯೂರಿಯನ್ನ ತಡೆದಿದ್ದಳು. ಅಲ್ಲಿಗೆ ಬಂದ ಶ್ವೇತಾ, ಮಯೂರಿಯನ್ನ ಒಳಗೆ ಕರೆದಿದ್ದಳು. ಧಣಿಗಳ ಪರವಾಗಿ ಮಯೂರಿ ವ್ರತ ಮಾಡುತ್ತಿದ್ದಾಳೆ. ಡೈಲಿ ಪ್ರಸಾದ ಕೊಡಲು ಬರುತ್ತಾಳೆ. ಈ ಬಾರಿ ಹಬ್ಬದ ತಯಾರಿಯನ್ನು ಅವಳೇ ಮಾಡುತ್ತಿದ್ದಳು. ಆದರೆ ಇಂದ್ರಾಣಿ ಅವಳ ದುಪ್ಪಟ್ಟಾಕೆ ಬೆಂಕಿ ಹೊತ್ತಿಸಿದ್ದಳು. ಮಯೂರಿಯ ಪ್ರಾಣ ತೆಗೆಯುವುದಕ್ಕೂ ಹಿಂದೆ ಮುಂದೆ ನೋಡಲಿಲ್ಲ.

Colors kannada Nanna devru Written Update on August 17th episode

ಮನೆಯವರೆಲ್ಲರಿಗೂ ಖುಷಿ

ಮಯೂರಿಯನ್ನ ಈಗ ಇಂದ್ರಾಣಿ ಒಬ್ಬಳು ಬಿಟ್ಟು ಎಲ್ಲರೂ ಶಾರದಾಳ ಸ್ಥಾನದಲ್ಲಿಟ್ಟು ನೋಡುತ್ತಿದ್ದಾರೆ. ಸಚ್ಚಿಗೆ ಮದುವೆ ಮಾಡಿಸಬೇಕೆಂದು ಯೋಜಿಸುತ್ತಿದ್ದಾರೆ. ಹೀಗಾಗಿ ಅವಳನ್ನು ಕಂಡರೆ ಮುದ್ದಾಗಿ ಮಾತಾಡಿಸುತ್ತಾರೆ, ಪ್ರೀತಿ ತೋರಿಸುತ್ತಾಳೆ. ಮಯೂರಿಗೂ ಅಷ್ಟೇ, ಸಚ್ಚಿದಾನಂದ ನೆಮ್ಮದಿಯಿಂದ, ಸುಖವಾಗಿ ಇರುವುದೇ ಬೇಕಾಗಿರುವುದು. ಅವರಿಗೆ ಬೇಸರ ಎಂದರೆ ಸಾಕು ಗೊತ್ತೋ ಗೊತ್ತಿಲ್ಲದೆಯೋ ಶಾರದಾ ಮಾಡುವ ರೀತಿಯೇ ಸತ್ಕಾರ ಮಾಡುತ್ತಾಳೆ. ಸಚ್ಚಿ ಕೂಡ ಮಯೂರಿಯನ್ನು ನೋಡಿದರೆ ಒಂದು ಕ್ಷಣ ಕಳೆದೋದವನಂತೆ ನಿಂತು ಬಿಡುತ್ತಾನೆ.

ಶಾರದಾಳ ಹೆಸರು ಚಡಪಡಿಸಿದ ಸಚ್ಚಿ

ಮನೆಯಲ್ಲಿ ಮಯೂರಿಯ ಪ್ರಾಣಕ್ಕೆ ಕುತ್ತು ಬಂದಾಗ ಒಂದು ಕ್ಷಣ ವೂ ಯೋಚಿಸದೇ ಕಾಪಾಡಿದ. ಬೇರೆ ಬಟ್ಟೆ ಇಲ್ಲದ ಕಾರಣ, ಶಾರದೆಯ ಸೀರೆಯನ್ನೇ ನೀಡಿದರು ದೊಡ್ಡ ಅಕ್ಕ. ಮಯೂರಿ ರೆಡಿಯಾಗಿ ಬರುತ್ತಿದ್ದರೆ ಶಾರದೆಯ ಪ್ರತಿರೂಪದಂತೆಯೇ ಕಾಣುತ್ತಿದ್ದಾಳೆ. ಆ ಸೀರಿಯಲ್, ಆ ಒಡವೆಗಳನ್ನೆಲ್ಲಾ ಹಾಕಿಕೊಂಡು, ದೇವರಿಗೆ ಪೂಜೆ ಮಾಡಿ, ಸಚ್ಚಿದಾನಂದನಿಗೆ ಆರತಿ ಕೊಟ್ಟರೆ ಶಾರದೆಯ ಹೆಸರನ್ನು ಹೇಳಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ ಸಚ್ಚಿ. ತಾಯಿ ಜಯಮ್ಮನ ಮನಸ್ಸಲ್ಲಿ ಇರುವುದು ಮಯೂರಿಯನ್ನ ಸೊಸೆಯನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆ. ಈಗ ಸಚ್ಚಿ ಕುಇಡ ಅವಳಲ್ಲಿ ಶಾರದೆಯನ್ನು ಕಾಣುತ್ತಿರುವಾಗ ದಾರಿ ಸುಲಭವಾಗಿದೆ.

More from Filmibeat

English summary
Nanna devaru kannada serial today episode. Here is the details about Mayuri Varamahalakshmi festival at Satchidananda's house;
Read more about: filmbeat original sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X