Family Gang stars: ನಿಮ್ಮ ನೆಚ್ಚಿನ ಸೀರಿಯಲ್ ನಟ- ನಟಿಯರ ಹೊಸ ಗೇಮ್ ಶೋ
ಈ ವಾರದಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್' ಎನ್ನುವ ಹೊಸ ರಿಯಾಲಿಟಿ ಶೋ ಶುರುವಾಗುತ್ತಿದೆ. ವಾಹಿನಿಯಲ್ಲಿ ಹಲವಾರು ರಿಯಾಲಿಟಿ ಶೋಗಳು ಆರಂಭವಾಗಿ ಮುಕ್ತಾಯವಾಗಿದ್ದು, ಈಗ 'ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್' ರಿಯಾಲಿಟಿ ಶೋ ವೀಕ್ಷಕರ ಮುಂದೆ ಬರ್ತಿದೆ. ನಟ ಸೃಜನ್ ಲೋಕೇಶ್ ನಿರೂಪಣೆಯಲ್ಲಿ ಈ ಕಾರ್ಯಕ್ರಮ ಮೂಡಿ ಬರುತ್ತಿರುವುದು ಮತ್ತೊಂದು ವಿಶೇಷ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ನಟ- ನಟಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆಯನ್ನ ಅನಾವರಣ ಮಾಡಲಿದ್ದಾರೆ. ಇಲ್ಲೂ ಸಹ ಹಲವು ಗೇಮ್ಸ್ ಇದ್ದು ಒಂದೊಂದು ಟೀಮ್ ಒಂದೊಂದು ಗೇಮ್ ಅನ್ನು ಗೆದ್ದು ತಮ್ಮ ತಂಡವನ್ನು ಸೇಫ್ ಮಾಡಬೇಕಾಗಿದೆ. ಡ್ಯಾನ್ಸ್ ಮೂಲಕ ಹಾಗೂ ಕಾಮಿಡಿಯ ಮೂಲಕ 'ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್' ವೇದಿಕೆಗೆ ಬರಲು ತಯಾರಿಯನ್ನು ನಡೆಸಿದ್ದಾರೆ.

ವೇದಿಕೆ ಮೇಲೆ ಭಾಗ್ಯ- ಲಕ್ಷ್ಮಿ ಕಮಾಲ್
ವೇದಿಕೆ ಮೇಲೆ ಅಕ್ಕ ತಂಗಿ ಇಬ್ಬರು ಒಟ್ಟಾಗಿದ್ದು ಭಾಗ್ಯ- ಲಕ್ಷ್ಮಿ ಕಮಾಲ್ ಮಾಡಿದ್ದಾರೆ. ಕರಾಟೆಯಲ್ಲಿ ಇಟ್ಟಿಗೆ ಒಡೆಯುವ ರೀತಿಯಲ್ಲಿ ಭಾಗ್ಯ ಹಾಗೂ ಲಕ್ಷ್ಮೀ ಇಬ್ಬರು ಸಹ ಸ್ಟಂಟ್ ಮಾಡಿದ್ದಾರೆ. ಇದೇ ವೇಳೆ 'ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್' ಬಗ್ಗೆ ಮಾತನಾಡಿರುವ ಅಕ್ಕ ತಂಗಿ ಇಬ್ಬರು ನಾವು ಮಾಡಿರುವ ಸ್ಟಂಟ್ ನೋಡಿ ನಮಗೆ ಮೆಚ್ಚುಗೆಯನ್ನ ಸೂಚಿಸಿ ಎಂದು ಪ್ರೇಕ್ಷಕರ ಬಳಿ ಮನವಿ ಮಾಡಿದ್ದಾರೆ.
ಅದ್ದೂರಿಯಾಗಿ ಚಾರಿ-ಚಾರು ಎಂಟ್ರಿ
ರಾಮಾಚಾರಿ ತಂಡದಿಂದ ರಾಮಾಚಾರಿ ಹಾಗೂ ಚಾರು ಸೇರಿದಂತೆ ಇನ್ನೂ ಹಲವಾರು ಮಂದಿ 'ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್' ಶೋನಲ್ಲಿ ಭಾಗವಹಿಸಿ ತಮ್ಮ ಪ್ರದರ್ಶನ ನೀಡಲು ಸಿದ್ದರಾಗಿದ್ದಾರೆ. ರಾಮಾಚಾರಿ ಹಾಗೂ ಚಾರು ಇಬ್ಬರು ಸಕ್ಕತ್ ಆಗಿ ಹಾಡಿಗೆ ಸ್ಟೆಪ್ ಹಾಕುವ ಮೂಲಕ ವೇದಿಕೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಚಾರು ಸಹ ಗೌನ್ ಹಾಕಿ ಫುಲ್ ಮಿಂಚಿದ್ದಾರೆ.

ಕೆಂಡಸಂಪಿಗೆಯಿಂದ ಸುಮನಾ- ತೀರ್ಥ ಎಂಟ್ರಿ
ಇನ್ನು 'ಕೆಂಡ ಸಂಪಿಗೆ' ಧಾರಾವಾಹಿಯಿಂದ ಸುಮನಾ ಹಾಗೂ ತೀರ್ಥ ಇಬ್ಬರು ಸೇರಿಕೊಂಡು ತಮ್ಮ ತಂಡ ಕಟ್ಟಿಕೊಂಡು 'ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್'ನಲ್ಲಿ ಗೆಲ್ಲಬೇಕು ಎಂದು ಎಂಟ್ರಿಯನ್ನು ಕೊಡುತ್ತಿದ್ದಾರೆ. ಇಬ್ಬರೂ ಸಹ ಮಿಸ್ ಮಾಡದೇ ನಮ್ಮ ತಂಡದ ಪರ್ಫಾರ್ಮೆನ್ಸ್ ನೋಡಿ ಎಂದು ಪ್ರೇಕ್ಷಕರಲ್ಲಿ ಶುಭ ಹಾರೈಸಲು ಕೇಳಿಕೊಂಡಿದ್ದಾರೆ. 'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ಹೆಣ್ಣು ಮಕ್ಕಳದ್ದೇ ದರ್ಬಾರ್ ಆಗಿದೆ. ಆನ್ಯಾ, ಬೃಂದಾ, ಆಮ್ರಪಾಲಿ , ನಿನಾದ್ ತ್ರಿಪುರ ಸುಂದರಿ ಧಾರಾವಾಹಿಯಿಂದ ಶೋಗೆ ಬಂದಿದ್ದಾರೆ.
ಯಾವ ಯಾವ ತಂಡ, ಎಷ್ಟು ಜನ?
'ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್'ನಲ್ಲಿ ಗ್ಯಾಂಗ್ ಸ್ಟಾರ್ ಆಗಲು ಭಾರೀ ಹಣಾಹಣಿಗೆ ಸೀರಿಯಲ್ ತಂಡಗಳು ತಯಾರಾಗಿವೆ. 'ಅಂತರಪಟ' ಸೀರಿಯಲ್‌ನಿಂದ ಆರಾಧನಾ, ಮಹೇಶ್, ಸುಶಾಂತ್, ಸಂದೀಪ್, ಸಾವಿತ್ರಿ ಆಟವನ್ನು ಆಡಲಿದ್ದಾರೆ. ಭಾಗ್ಯಲಕ್ಷ್ಮೀ ಸಿರೀಯಲ್‌ನಿಂದ ಭಾಗ್ಯ, ತಾಂಡವ್, ಲಕ್ಷ್ಮೀ, ಶ್ರೇಷ್ಠಾ, ವೈಷ್ಣವ್ ಭರ್ಜರಿ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
'ಗೀತಾ' ಸೀರಿಯಲ್‌ನಿಂದ ಸಿತಾರ, ಶೃತಿ, ವಿಜಯ್, ಗೀತಾ , ಸುಶೀಲಾ ಪರ್ಫಾಮೆನ್ಸ್ ನೀಡಲು ಸಿದ್ದವಾಗಿದ್ದಾರೆ. 'ಕೆಂಡಸಂಪಿಗೆ' ಧಾರಾವಾಹಿಯಿಂದ ಸಾಧನಾ, ತೀರ್ಥಂಕರ್, ಸುಮನಾ, ರಾಜೇಶ್, ನಿತ್ಯಾ ಭಾಗಿಯಾಗಲಿದ್ದಾರೆ. ರಾಮಾಚಾರಿ ತಂಡದಿದ ರಾಮಾಚಾರಿ, ಮುರಾರಿ , ಚಾರು, ದೀಪಾ, ಶೃತಿ ಆಟವಾಡಲಿದ್ದಾರೆ. ಇನ್ನೂ ತ್ರಿಪುರ ಸುಂದರಿ ತಂಡದಿಂದ ಆನ್ಯಾ, ಬೃಂದಾ, ಆಮ್ರಪಾಲಿ, ನಿನಾದ್ ಪ್ರದರ್ಶನ ನೀಡಲಿದ್ದಾರೆ.


Click it and Unblock the Notifications











