Chukki thare: ಫ್ಯಾಮಿಲಿ ಪರಿಚಯ ಮಾಡಿಕೊಟ್ಟ ಇಬ್ಬನಿ: ಚುಕ್ಕಿ ಕಾಲು ಕಳೆದುಕೊಳ್ಳುವುದಕ್ಕೆ ಕಾರಣ ಯಾರು?
ಕಲರ್ಸ್ ಕನ್ನಡ ಹೊಸದೊಂದು ಧಾರಾವಾಹಿಯನ್ನು ಅರ್ಪಿಸುತ್ತಿದೆ. ಚುಕ್ಕಿ-ತಾರೆ ಎಂಬುದು. ಈ ಧಾರಾವಾಹಿ ಆರಂಭದಲ್ಲಿ ಪ್ರೋಮೋ ಬಿಟ್ಟಾಗ ಎಲ್ಲರು ಅಕ್ಕತಂಗಿಯರ ಕಥೆ ಎಂದೇ ಭಾವಿಸಿದ್ದರು. ಆದರೆ ಬೇರೆ ಬೇರೆ ಪ್ರೋಮೋಗಳನ್ನು ಬಿಟ್ಟು ಕಥೆಯ ಬಗ್ಗೆ ಒಂದಷ್ಟು ಕ್ಲಾರಿಟಿ ನೀಡಿದೆ. ಈ ಧಾರಾವಾಹಿ ಮಕ್ಕಳ ಸುತ್ತಾ ಸುತ್ತುವ ಕಥೆಯನ್ನು ಹೊಂದಿದೆ.
ಚುಕ್ಕಿ-ತಾರೆ. ಅಂದ್ರೆ ಇಬ್ಬನಿ ಹಾಗೂ ಚುಕ್ಕಿ ಎಂಬ ಇಬ್ಬರು ಮಕ್ಕಳ ಕಥೆ. ಇಬ್ಬರು ಕೆಲವೊಂದು ನಿಯಮಗಳನ್ನು ಮೀರಿ ಹೇಗೆ ಒಂದಾಗುತ್ತಾರೆ ಎಂಬ ಕಥೆ. ಶ್ರೀಮಂತಿಕೆ, ಶಿಸ್ತಿನ ಬೇಲಿಯನ್ನು ಇಬ್ಬನಿ ಹೇಗೆ ದಾಟುತ್ತಾಳೆ ಎಂಬ ಕುತೂಹಲಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ.

ಅತ್ತೆಯ ಮಗಳಾಗಿ ಬೆಳೆಯುವ ಇಬ್ಬನಿ
ಇಬ್ಬನಿ ಹುಟ್ಟುತ್ತಲೇ ಶ್ರೀಮಂತರ ಮನೆಯಲ್ಲಿ ಹುಟ್ಟಿದ್ದಾಳೆ. ಮಗು ಹುಟ್ಟಿದ ಕೂಡಲೇ ಆಕೆಯ ತಂದೆ-ತಾಯಿಗೆ ಅತ್ತೆ ಆರ್ಡರ್ ಮಾಡಿದ್ದಾಳೆ. ಇವಳು ನನ್ನ ಆಜ್ಞೆಯಂತೆಯೇ ಬೆಳೆಯುವುದು ಎಂಬುದನ್ನು ತಿಳಿಸಿದ್ದಾಳೆ. ಅದರಂತೆಯೇ ಯಾವುದೇ ಸ್ವಾತಂತ್ರ್ಯವನ್ನು ನೀಡದೇ, ಸಂಪೂರ್ಣವಾಗಿ ಹಿಡಿತದಲ್ಲಿಯೇ ಬೆಳೆಸಿದ್ದಾಳೆ. ಅಂದರೆ ಬಡವರನ್ನು ಮಾತನಾಡಿಸಬಾರದು, ಫುಲ್ ಟೈಟ್ ಸೆಕ್ಯೂರಿಟಿಯೊಂದಿಗೆ ಇಬ್ಬನಿಯ ಬಾಲ್ಯ ಮುಂದುವರೆದಿದೆ. ಆದರೆ ಈ ಬಾಲ್ಯ ಇಬ್ಬನಿಗೆ ಬೇಕಾಗಿಲ್ಲ. ಅವಳು ಬಯಸುತ್ತಿರುವುದು ಚುಕ್ಕಿಯಂತ ಬಾಲ್ಯವನ್ನು.
ಅತ್ತೆಯ ಬಗ್ಗೆ ಹೊಗಳಿಕೆ
ಕಿರುತೆರೆ ವೀಕ್ಷಕರ ಮನಸ್ಸನ್ನು ತಟ್ಟಲು ಧಾರಾವಾಹಿ ಬರುತ್ತಿದೆ. ಅದಕ್ಕೂ ಮುನ್ನ ಇಬ್ಬನಿ ತನ್ನ ಇಡೀ ಫ್ಯಾಮಿಲಿಯನ್ನು ಪರಿಚಯ ಮಾಡಿಕೊಟ್ಟಿದ್ದಾಳೆ. ಅದರಲ್ಲಿ ಮುಖ್ಯವಾಗಿ ಆಕೆಯ ಅತ್ತೆಯ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದಾಳೆ. ಮಕ್ಕಳೆಲ್ಲಾ ಆಟವಾಡುತ್ತಾ, ಚೀಟಿ ಎತ್ತಬೇಕು. ಅದರಲ್ಲಿ ಯಾವ ವಿಷಯ ಬರುತ್ತೋ ಅದರ ಬಗ್ಗೆ ಮಾತನಾಡಬೇಕು. ಇಬ್ಬನಿಗೆ ಫ್ಯಾಮಿಲಿ ಎಂಬ ವಿಚಾರ ಬಂದಿದೆ. 'ನಂಗೆ ಫ್ಯಾಮಿಲಿ ಎಂದರೆ ತುಂಬಾ ಇಷ್ಟ. ನಮ್ಮ ಅತ್ತೆ ಎಂದರೆ ಸುಮ್ಮನೆ ಅಲ್ಲ, ಸಕ್ಸಸ್ ಫುಲ್ ವುಮೆನ್. ಸಿಕ್ಕಾಪಟ್ಟೆ ಶಿಸ್ತು. ಅವರು ಉಶ್ ಎಂದರೆ ನಮ್ಮ ಮನೆ ಗಡಿಯಾರವು ಸೈಲೆಂಟ್ ಆಗಿ ಬಿಡುತ್ತದೆ. ಅವರಿಗೆ ನಮ್ಮ ಮನೆಯಲ್ಲಿ ಎಲ್ಲರು ತುಂಬಾ ರೆಸ್ಪೆಕ್ಟ್ ಕೊಡ್ತಾರೆ. ನಂಗೆ ಅವರನ್ನು ನೋಡಿದ್ರೆ ತುಂಬಾ ಭಯ ಆಗಿ ಬಿಡುತ್ತಪ' ಎಂದಿದ್ದಾಳೆ.

ಅಪ್ಪನಿಗೆ ಕಾರಿನ ಕ್ರೇಜ್
ತನ್ನ ಅತ್ತೆ ಯಶೋಧಾ ಖರ್ವೆ ಬಗ್ಗೆ ಹೇಳಿ ಈಗ ತಂದೆ ದಿವಾನ್ ಖರ್ವೆ ವಿಚಾರಕ್ಕೆ ಬಂದಿದ್ದಾಳೆ. 'ನಮ್ಮ ತಂದೆ ದಿವಾನ್ ಖರ್ವೆ. ನಮ್ಮ ಅಪ್ಪ ಯಾರದ್ದಾದರು ಮಾತು ಕೇಳುತ್ತಾರೆ ಅಂದ್ರೆ ಅದು ನಮ್ಮ ಅತ್ತೆಯದ್ದು ಮಾತ್ರ. ಅವರಿಗೆ ನಮ್ಮ ಅತ್ತೆ ಬಿಟ್ಟು ನೆಕ್ಸ್ಟ್ ಇಷ್ಟ ಆಗೋದು ಕಾರು ಡ್ರೈವ್ ಮಾಡುವುದು ಮಾತ್ರ' ಎಂದಿದ್ದಾಳೆ.
ಚುಕ್ಕಿ ವಿಕಲ ಚೇತನ ಆಗಿದ್ದೇಗೆ?
ಈ ಧಾರಾವಾಹಿಯಲ್ಲಿ ಚುಕ್ಕಿಗೆ ಒಂದು ಕಾಲಿಲ್ಲ. ನಡೆಯುವುದಕ್ಕೆ ಬಹಳ ಕಷ್ಟ. ಆದರೆ ಆಕೆಯ ಅಪ್ಪ ಅಮ್ಮ ಅವಳಿಗೆ ಆ ಕೊರಗು ಕಾಡದಂತೆ ನೋಡಿಕೊಳ್ಳುತ್ತಿದ್ದಾರೆ. ಕಾಲಿಗೆ ಸಮಸ್ಯೆ ಎಂಬುದನ್ನೇ ಹೇಳದೆ, ಎತ್ತಿ ಬೆಳೆಸುತ್ತಿದ್ದಾರೆ. ಆದರೆ ಈಗ ಇಬ್ಬನಿ ಹೇಳಿದ ಕಥೆಯಲ್ಲಿ ವೀಕ್ಷಕರು ಒಂದು ಟ್ವಿಸ್ಟ್ ಹುಡುಕಿದ್ದಾರೆ. ಚುಕ್ಕಿಯ ಕಾಲು ಮುರಿಯುವುದಕ್ಕೆ ಆಕೆಯ ತಂದೆಯೇ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಧಾರಾವಾಹಿ ಶುರುವಾದ ಮೇಲೆ ತಿಳಿಯುತ್ತೆ. ಒಮ್ಮೊಮ್ಮೆ ಕಥೆಯ ಎಳೆಯನ್ನು ಗಮನಿಸಿ, ಊಹೆ ಮಾಡುವ ವೀಕ್ಷಕರ ಅನುಮಾನ ಸರಿಯಾಗಿಯೇ ಇರುತ್ತೆ.


Click it and Unblock the Notifications











