Ninagagi: ದಿವ್ಯಾ ಉರುಡುಗ-ಕಿಶನ್ ಬಿಳಗಲಿ ಮದುವೆ ಫೋಟೋಗಳು ವೈರಲ್!

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ 'ನಿನಗಾಗಿ' ಸೀರಿಯಲ್ ಎಲ್ಲರ ಮನಸ್ಸನ್ನು ಗೆದ್ದಿರುವುದೇ ಗೊತ್ತೇ ಇದೆ. ಕಥೆ ಸಖತ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಾ ಇದೆ. ಈ ಧಾರಾವಾಹಿ ದಿವ್ಯಾ ಉರುಡುಗ ಅವರಿಗೆ ಕಮ್ ಬ್ಯಾಕ್. ಕಥೆಯನ್ನು ಸೂಕ್ಷ್ಮವಾಗಿಯೇ ಆಯ್ಕೆ ಮಾಡಿಕೊಂಡಿದ್ದಾರೆ. ಸಂಪೃಥ್ವಿ ಈಗಾಗಲೇ ಹಲವು ಧಾರಾವಾಹಿಗಳನ್ನು ಮಾಡಿರುವ ಅನುಭವ ಪಡೆದಿದ್ದು, ವೀಕ್ಷಕರ ನಾಡಿಮಿಡಿತವನ್ನು ಚೆನ್ನಾಗಿಯೇ ಅರಿತುಕೊಂಡಿದ್ದಾರೆ.

'ನಿನಗಾಗಿ' ಧಾರಾವಾಹಿಯಲ್ಲಿ ಕೃಷ್ಣ ಹಾಗೂ ರಚನಾ ಪಾತ್ರಗಳು ಹೈಲೆಟ್. ಕೃಷ್ಣಾಗೆ ರಚನಾ ತನ್ನ ತಾಯಿ ಆಗಿ ಬರಬೇಕೆಂಬ ಆಸೆ. ಅದನ್ನ ಗಣಪನ ಬಳಿ ಚೀಟಿ ಬರೆದು ಮನವಿ ಕೂಡ ಮಾಡಿದ್ದಾಳೆ. ಮಕ್ಕಳು ಕೇಳಿದ್ದನ್ನ ದೇವರು ಯಾವತ್ತಿಗೂ ಇಲ್ಲ ಅನ್ನಲ್ಲ ಎಂಬ ಮಾತಿದೆ. ಈಗ ನಿರ್ದೇಶಕರು ಕೂಡ ಆ ಮಾತನ್ನು ನಿಜ ಮಾಡಲು ಹೊರಟಿದ್ದಾರೆ. ಅಂದ್ರೆ ಮಕ್ಕಳ ಬೇಡಿಕೆಯನ್ನ ದೇವರು ಸದಾ ಈಡೇರಿಸುತ್ತಾನೆ ಎಂಬುದನ್ನು ಪ್ರೂವ್ ಮಾಡುತ್ತಿದ್ದಾರೆ.

colors kannada Ninagagi serial divya uruduga shares reel marriage photos

ಅಶ್ವಿನ್ ಜೊತೆ ರಚನಾ ಮದುವೆ

ರಚನಾಳನ್ನ ವಜ್ರೇಶ್ವರಿ ದುಡಿಯುವ ಯಂತ್ರ ಮಾಡಿಕೊಂಡಿದ್ದಾಳೆ. ರಚನಾ ಎಂದರೆ ಕೇವಲ ನಟನೆ ಮಾಡಬೇಕು, ತಾನೂ ಹೇಳಿದಂತೆ ಕೇಳಬೇಕು. ನಾಟಕದ ಪ್ರೀತಿಯನ್ನೇ ರಚನಾ ತ್ಯಾಗ ಎಂದುಕೊಂಡಿದ್ದಾಳೆ. ಬೇರೆ ಯಾರನ್ನೋ ಮದುವೆಯಾದರೆ ರಚನಾ ನಟನೆಗೆ ಫುಲ್ ಸ್ಟಾಪ್ ಹಾಕಿಬಿಡುತ್ತಾಳೆ ಎಂಬ ಕಾರಣಕ್ಕೆ ತಾನೇ ಹುಡುಗನನ್ನು ಸೃಷ್ಟಿ ಮಾಡಿದ್ದಾಳೆ. ಈಗ ಇಷ್ಟವಿಲ್ಲದ ಹುಡುಗ ಅಶ್ವಿನ್ ಜೊತೆಗೆ ರಚನಾ ಹಸೆಮಣೆ ಏರಿದ್ದಾಳೆ.

ಮಗಳ ಮಾತಿಗೆ ಕಟ್ಟು ಬಿದ್ದ ಜೀವ

ಕೃಷ್ಣಾಗೆ ರಚನಾಳೇ ನನ್ನ ಅಮ್ಮನಾಗಿ ಬರಬೇಕೆಂಬ ಆಸೆ. ಈಗ ಅಶ್ವಿನ್ ಜೊತೆಗೆ ಮದುವೆಯಾಗುತ್ತಿದ್ದಾಳೆ. ಇದನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ. ಒಂದೇ ಸಮನೆ ಅಳುತ್ತಿದ್ದಾಳೆ. ಮಗಳ ದುಃಖ ನೋಡಲಾಗದೆ, ರಚನಾ ಮಾಡಿದ ತ್ಯಾಗ ನೆನಪಾಗಿ, ಈಗ ಜೀವನೇ ರಚನಾಳನ್ನು ಕಾಪಾಡಲು ಹೊರಟಿದ್ದಾನೆ. ಅಲ್ಲಿ ತಾಳಿ ಕಟ್ಟಿಸಿಕೊಳ್ಳುವುದಕ್ಕೂ ಮುನ್ನವೇ ಮಾವನ ಸತ್ಯ ಕೂಡ ಬಯಲಾಗಿದೆ.

ಮದುವೆ ಫೋಟೋ ಹಂಚಿಕೊಂಡ ದಿವ್ಯಾ

ಮದುಮಗಳಂತೆ ದಿವ್ಯಾ ರೆಡಿಯಾಗಿದ್ದಾರೆ. ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಮದುಮಗಳ ಕಳೆ ಎದ್ದು ಕಾಣುತ್ತಿದೆ. ಮದುವೆ ಮಂಟಪದಲ್ಲಿ ತೆಗೆಸಿಕೊಂಡ ಒಂದಷ್ಟು ಫೋಟೋಗಳನ್ನು ದಿವ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಿಶನ್ ಹಾಗೂ ದಿವ್ಯಾ‌ ಮದುಮಕ್ಕಳಂತೆ ಕಂಗೊಳಿಸುತ್ತಿದ್ದಾರೆ. ಹಸೆಮಣೆ‌ ಮೇಲೆ ಕೂತಿರುವುದು, ಹೋಮಕುಂಡಕ್ಕೆ ಪೂಜೆ ಮಾಡುತ್ತಿರುವುದು, ಅರಿಶಿನ ಶಾಸ್ತ್ರದ ಫೋಟೋಗಳು ಹೀಗೆ ಮದುವೆಯ ಎಲ್ಲಾ ಶಾಸ್ತ್ರದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅರವಿಂದ ಪರವಾಗಿ ದೇವರಲ್ಲಿ ಮನವಿ

ಈ ಫೋಟೊಗಳಿಗೆ 102 ಸಾವಿರ ಕಮೆಂಟ್ಸ್ ಬಂದಿದೆ. ಯಾಕಂದ್ರೆ ದಿವ್ಯಾ ಉರುಡುಗ ಅವ್ರಿಗೆ ಫ್ಯಾನ್ಸ್, ಫಾಲೋವರ್ಸ್ ಸಿಕ್ಕಾಪಟ್ಟೆ ಇದ್ದಾರೆ. ಅವರ ಸೋಷಿಯಲ್ ಮೀಡಿಯಾದಲ್ಲೇ ಮಿಲಿಯನ್ ಫಾಲೋವರ್ಸ್ ರೀಚ್ ಆಗಿದ್ದಾರೆ. 266 ಜನ ಕಮೆಂಟ್ ಮಾಡಿದ್ರೆ, ಶೇರ್ ಜಾಸ್ತಿಯಾಗಿದೆ. ಆದರೆ‌ ಕಮೆಂಟರ್ಸ್ ಎಲ್ಲಾ‌ ಕೇಳಿರೋದು ಒಂದೇ‌ಪ್ರಶ್ನೆ 'ಇದು ರಿಯಲ್ ಅಲ್ಲ, ಸೀರಿಯಲ್ ತಾನೇ' ಎಂದು. ಅದಕ್ಕೆ ಕಿಶನ್ ಕೂಡ ಸಮಾಧಾನ ಮಾಡಿದ್ದಾರೆ. ಹೌದು ಇದು ಸೀರಿಯಲ್‌ನಲ್ಲಿ ಬರುವ ದೃಶ್ಯ ಎಂದು. 'ಯಾರೂ ಈ ಫೋಟೋಗೆ ಅರವಿಂದ್ ಕೆಪಿ ಅವರನ್ನ ಮೆನ್ಷನ್ ಮಾಡಬೇಡಿ. ಆ ಜೀವ ಇದನ್ನೆಲ್ಲ ತಡೆದುಕೊಳ್ಳಲ್ಲ' ಅಂತ ಕಮೆಂಟ್ ಹಾಕಿದ್ರೆ, 'ಯಾರೂ ಗಾಬರಿ ಆಗ್ಬೇಡಿ ಇದು ಸೀರಿಯಲ್ ಕಥೆ' ಎಂದು ಇನ್ನೊಬ್ಬರು ಅಭಿಮಾನಿಗಳನ್ನು ಸಮಾಧಾನ ಮಾಡಿದ್ದಾರೆ.

More from Filmibeat

English summary
Colors kannada Ninagagi serial; Divya uruduga shares marriage photos. Here is the details about Divya get married to Kishan?
Read more about: tv serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X