Ninagagi: ನಿನಗಾಗಿ ಧಾರಾವಾಹಿ ರಕ್ಷಿತ್ ಲಾಠಿ ಹಿಡಿದ್ರೆ ಅದರ ರುಚಿನೇ ಬೇರೆ : ಕೃಷ್ಣಾ ನೋಡು ನಿನ್ ಫ್ರೆಂಡ್ ನಾ..!

By ಎಸ್ ಸುಮಂತ್

ಮಕ್ಕಳು ಏನೇ ಮಾಡಿದರೂ ತುಂಬಾನೇ ಇಷ್ಟವಾಗುತ್ತಾರೆ. ಏನು ಗೊತ್ತಿಲ್ಲದೆಯೂ ತಮಾಷೆ ಮಾಡುತ್ತಾ, ಅಕ್ಕಪಕ್ಕದಲ್ಲಿ ಇರುವವರನ್ನು ನಕ್ಕು ನಲಿಸುತ್ತಾರೆ. ಹಾಗೇ ಹಠ‌ ಮಾಡುವುದಕ್ಕೆ ಶುರು ಮಾಡಿದರೆ ಮುಗೀತು ಕಥೆ. ಸಮಾಧಾನ ಮಾಡೋದಕ್ಕೆ ಹರಸಾಹಸ ಪಡಬೇಕಾಗುತ್ತದೆ.

ಮಕ್ಕಳನ್ನು ಬಳಸಿಕೊಂಡು ಧಾರಾವಾಹಿಯಾಗಲೀ, ಸಿನಿಮಾ ಚಿತ್ರೀಕರಣ ಆಗಲಿ ಮಾಡುವುದು ಅಷ್ಟು ಸುಲಭವಲ್ಲ. ಭಾವನೆಗಳನ್ನು ಹೇಳಿಕೊಡಬೇಕು, ಡೈಲಾಗ್‌ಗಳನ್ನು ಕಲಿಸಬೇಕು ಇದೆಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಶೂಟಿಂಗ್ ಸ್ಪಾಟ್‌ನಲ್ಲಿ ಇರುವಂತೆ ತಾಳ್ಮೆ ತರಬೇಕಾಗುತ್ತದೆ.

Colors kannada Ninagagi serial fame child artist dushyanth funny videos

ಇಷ್ಟೆಲ್ಲ ಹೇಳುವುದಕ್ಕೆ ಕಾರಣ 'ನಿನಗಾಗಿ' ಧಾರಾವಾಹಿ. ಈ ಧಾರಾವಾಹಿಯಲ್ಲಿ ಕೃಷ್ಣಾ ಹಾಗೂ ರಕ್ಷಿತ್ ಅಂತ ಇಬ್ಬರು ಮಕ್ಕಳು ಬಹಳ ಗಮನ ಸೆಳೆಯುತ್ತಾರೆ. ರಕ್ಷಿತ್, ಕೃಷ್ಣಾಳನ್ನು ಕಾಪಾಡುವ ಬೆಸ್ಟ್ ಫ್ರೆಂಡ್. ರಕ್ಷಿತ್ ಪಾತ್ರದಲ್ಲಿ ಮಾಡಿರುವುದು ದುಷ್ಯಂತ್. ಈ ದುಷ್ಯಂತ್ ಮನೆಯಲ್ಲೂ ಎಷ್ಟು ತರಲೆ ಗೊತ್ತಾ? ನೀವೇ ನೋಡಿ‌ .

ಲಾಠಿ ಹಿಡಿದ ದುಷ್ಯಂತ್

ಮನೆಯಲ್ಲಿ ದುಷ್ಯಂತ್ ಸಿಕ್ಕಾಪಟ್ಟೆ ತರಲೆ ಅನ್ನೋದು ಎಲ್ಲರಿಗೂ ಗೊತ್ತು. ಈಗ ಪೊಲೀಸ್ ಟೋಪಿ ಹಾಕಿಕೊಂಡು, ಕೈಯಲ್ಲಿ ಲಾಠಿ ಹಿಡಿದು ತಾನು ಪೊಲೀಸ್ ಎಂಬಂತೆ ವರ್ತಿಸುತ್ತಿದ್ದಾನೆ. ಎದುರು ಕುಳಿತಿದ್ದವರಿಗೇನೆ ಲಾಠಿ ರುಚಿ ತೋರಿಸಿದ್ದಾನೆ. ಲಾಠಿಯಲ್ಲಿ ಹೊಡೆದರೆ ಪೆಟ್ಟು ಬೀಳದೆ ಇರುತ್ತದೆಯೇ. ಏಟಾಗುತ್ತೆ ಬೇಡ ದುಷ್ಯಂತ್ ಅಂದ್ರು ಕೇಳುತ್ತಿಲ್ಲ. ಟಪಾ ಟಪಾ ಟಪಾ ಅಂತ ಹೊಡೀತಾ ಇದಾನೆ.

ರಚನಾ ಕ್ಯಾನೆರಾಮೆನ್ ಆದ ದುಷ್ಯಂತ್

ರಚನಾ ಕಂಡರೆ ಕೃಷ್ಣಾಗೆ ತುಂಬಾ ಇಷ್ಟ. ಅವಳಲ್ಲಿ ತನ್ನ ಅಮ್ಮನನ್ನು ಕಾಣುತ್ತಿದ್ದಾಳೆ ಕೃಷ್ಣಾ. ಹಾಗೇ ರಕ್ಷಿತ್ (ದುಷ್ಯಂತ್)ಗೆ ಕೃಷ್ಣಾ ಎಂದರೆ ಇಷ್ಟ. ಅವಳನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಾನೆ, ಪಾಠ ಹೇಳಿಕೊಡುತ್ತಾನೆ. ಹೀಗಾಗಿ ಸ್ಟಾರ್ ನ ಮೀಟ್ ಮಾಡಿಸೋಕೆ ಕದ್ದು ಕರೆದುಕೊಂಡು ಹೋಗಿದ್ದ. ಒಮ್ಮೆ ಸ್ಟಾರ್ ರಚನಾ ಅವ್ರು ರಕ್ಷಿತ್ ಹಾಗೂ ಕೃಷ್ಣಾಳ ಸ್ಕೂಲಿಗೆ ಬಂದಿದ್ರು. ಆಗ ರಕ್ಷಿತ್ ಅವರ ಕ್ಯಾಮೆರಾ ಮೆನ್ ಆಗಿದ್ದ. ಅವರ ಸುಂದರವಾದ ಫೋಟೋಗಳನ್ನು ಕ್ಲಿಕ್ಕಿಸಿದ್ದಾನೆ.

ಕೃಷ್ಣಾ ಜೊತೆಗೆ ಜಗಳ

ಶಾಲೆ ಬಿಟ್ಟು ಮಕ್ಕಳು ಶೂಟಿಂಗ್ ಬರುತ್ತಾರೆ. ದೊಡ್ಡವರಿಗೆ ಒಮ್ಮೊಮ್ಮೆ ತಾಳ್ಮೆ ಇರುವುದಿಲ್ಲ. ಮಕ್ಕಳಿಗೆ ಸುಸ್ತಾಗದೆ ಇರುತ್ತದೆಯೇ. ತೆರೆ ಮೇಲೆ ಕೃಷ್ಣಾಳನ್ನು ರಕ್ಷಿಸುವ ದುಷ್ಯಂತ್, ಶಾಟ್ ಇಲ್ಲದೆ ಇದ್ದರೆ ಸಣ್ಣ ಪುಟ್ಟದ್ದಕ್ಕೂ ತನ್ನದೇ ಸರಿ ಎಂಬ ವಾದ ಮಾಡುತ್ತಾನೆ. ಇಬ್ಬರು ಕಿತ್ತಾಡುತ್ತಿರುತ್ತಾರೆ. ದುಷ್ಯಂತ್ ಸುಸ್ತಾಗಿ ಕೂತಿದ್ದಾನೆ. ಅದು ಬೇರೆ ಶಾಲೆಯ ಬ್ಯಾಗ್ ಬೇರೆ ತಗಲಾಕಿಕೊಂಡೆ ಕೂತಿರುವವನನ್ನು ಕೃಷ್ಣಾ ರೇಗಿಸುತ್ತಾ ಇದ್ದಾಳೆ.

ಚಿಕ್ಕವನಿದ್ದಾಗ ಇವನೇ ಪೂಜಾರಿ

ಮನೆಯಲ್ಲಿ ಮಕ್ಕಳಿದ್ದರೆ ಪೋಷಕರಿಗೆ ಸಂಭ್ರಮ. ಹಬ್ಬ ಹರಿದಿನಗಳು ಬಂದಾಗ ಮಕ್ಕಳನ್ನು ಸಿಂಗರಿಸುವುದು, ಅವರ ಮೂಲಕವೇ ಹಬ್ಬ ಮಾಡುವುದು. ದುಷ್ಯಂತ್ ಮೊದಲೇ ತುಂಟ. ಮಗುವಿದ್ದಾಗಿನಿಂದಲೂ ಅಷ್ಟೇ. ಅವನ ಸೋಷಿಯಲ್ ಮೀಡಿಯಾದಲ್ಲಿನ ವಿಡಿಯೋಗಳನ್ನು ನೋಡಿದರೇನೆ ಗೊತ್ತಾಗುತ್ತೆ. ಅವನು ಪುಟ್ಟ ಮಗುವಾಗಿದ್ದಾಗ, ಬಟ್ಟೆ ಕಟ್ಟಿಕೊಂಡು ದೇವರ ಮನೆಯಲ್ಲಿ ತಾನೇ ಪೂಜೆ ಮಾಡಿ, ಮನೆಯವರಿಗೆಲ್ಲಾ‌ ತೀರ್ಥ ಕೊಟ್ಟಿರುವ ವಿಡಿಯೋ ಕೂಎ ವೈರಲ್ ಆಗಿದೆ. ಓ ಚಿಕ್ಕ ಪೂಜಾರಿಗಳು ಅಂತ ರೇಗಿಸಿ ಕಮೆಂಟ್ ಹಾಕಿದ್ದಾರೆ.

More from Filmibeat

English summary
colors kannada serial Ninagagi Written Update on Krishna friend RAKSHITH Insta story. Here is the details about Dushyant kicked his mother with a lotty;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X