NooruJanmaku: ಚಿರು - ಮೈತ್ರಿ ದೂರಾಗಲ್ಲ, ಕಾಮಿನಿ ಸುಮ್ನಿರೋಲ್ಲ; 'ನೂರು ಜನ್ಮಕೂ' ವಾರದ ಕಥೆ

By ಎಸ್ ಸುಮಂತ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಆಗಾಗ ಹೊಸ ಧಾರಾವಾಹಿಗಳು ಬರ್ತಾನೇ ಇರುತ್ತವೆ. ಕಳೆದ ವಾರವಷ್ಟೇ 'ಶ್ರೀಗೌರಿ' ತನ್ನ ಪಯಣ ಮುಗಿಸಿ, 'ನೂರು ಜನ್ಮಕೂ' ಧಾರಾವಾಹಿಗೆ ಜಾಗ ಮಾಡಿಕೊಟ್ಟಿತ್ತು. ಇದೀಗ ಒಂದು ವಾರದಿಂದ ಈ ಧಾರಾವಾಹಿ ಮೂಡಿ ಬರುತ್ತಾ ಇದೆ. ಇದು ತ್ರಿಕೋನ ಪ್ರೇಮ ಕತೆ. ಚಿರುಗಾಗಿ ಕಾಮಿನಿಯ ಆತ್ಮ ಕಾಯ್ತಾ ಇದ್ರೆ, ರಾಘವೇಂದ್ರ ಸ್ವಾಮಿ ಭಕ್ತೆ ಮೈತ್ರಿ ಎಲ್ಲಾ ಕೆಟ್ಟತನದಿಂದ ಚಿರುನನ್ನು ಕಾಪಾಡಿಕೊಳ್ಳುತ್ತಿದ್ದಾಳೆ.

'ನೂರು ಜನ್ಮಕೂ' ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೇ ಇದೆ‌. ಗಿರಿಜಾ ಲೋಕೇಶ್ ಇಲ್ಲಿ ಕದಂಬ ವಂಶದ ಹಿರಿಯರಾಗಿದ್ದಾರೆ. ಅವರ ಮಾತೇ ಫೈನಲ್. ಅವರೇಳಿದರೆ ಮುಗೀತು. ಒಂದು ವಾರದಿಂದ ಹಲವು ಘಟನೆಗಳು ನಡೆದಿದ್ದು, ಬಹಳ ಮುಖ್ಯವಾದ ಘಟ್ಟಕ್ಕೆ ತಲುಪಿತ್ತು.

Colors kannada Noorujanmaku Written Update on December 29th episode

ಮದುವೆಯಲ್ಲಿ ಅಪಶಕುನ

ಚಿರು ಪ್ರೀತಿಸುತ್ತಾ ಇರೋದು ಮನೆಯಲ್ಲಿ ಲೆಕ್ಕ ಬರೆದುಕೊಂಡಿದ್ದವನ ಮಗಳನ್ನ ಎಂಬುದನ್ನು ಕದಂಬ ವಂಶದಲ್ಲಿ ಹಲವರಿಂದ ಸಹಿಸಲು ಸಾಧ್ಯವಾಗಲಿಲ್ಲ. ಆದರೆ ಗಿರಿಜಾ ಲೋಕೇಶ್ ಮಾತು ಫೈನಲ್. ಅವರೇ ಮನೆಯ ಹಿರಿ ತಲೆ, ಯಜಮಾನಿ. ಮೈತ್ರಿ ಮನೆಗೆ ಹೋಗಿ ಮದುವೆಯನ್ನು ಗೊತ್ತು ಮಾಡಿ ಬಂದರು. ಆದರೆ ಅಂದಿನಿಂದಲು ಅಪಶಕುನ ನಡೆಯುತ್ತಲೇ ಇದೆ.

ಮಂಟಪ ತಲುಪಿದ ಕಾಮಿನಿ

ಇದಕ್ಕೆಲ್ಲ ಕಾರಣ ಕಾಮಿನಿ. ಮೊದಲಿನಿಂದಲೂ ಚಿರು ಪಡೆದುಕೊಳ್ಳುವ ಹಠ. ಆದರೆ ಅವಳು ಎಲ್ಲರಿಗೂ ಕಾಣಿಸುವುದಿಲ್ಲ. ಕಾಮಿನಿ ತನ್ನ ಮನೆಯವರಿಗೆ ಮಾತ್ರ ಕಾಣಿಸೋದು. ಈಗ ಮದುವೆ ಮನೆಗೆ ಮಧುಮಗಳಾಗಿ ಬಂದಿದ್ದಾಳೆ. ಮೈತ್ರಿ ಕೂತ ಜಾಗದಲ್ಲಿ ಕೂರಲು ನೋಡಿದ್ದಾಳೆ. ಹಾರ ಹಾಕಿಸಿಕೊಳ್ಳು, ಕುಂಕುಮ ಹಚ್ಚಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ ಅದ್ಯಾವುದು ಸಾಧ್ಯವಾಗಿಲ್ಲ. ಅಲ್ಲಿಯೇ ಇದ್ದ ಕಾಲಜ್ಞಾನಿಗಳು ಬೇಗ ಮಾಂಗಲ್ಯಧಾರಣೆ ಮಾಡಲು ಹೇಳಿದ್ದಾರೆ. ಒಂದೇ ಸಮನೇ ಮಂತ್ರ ಪಠಿಸಿದ್ದಾರೆ. ಆದರೆ ಒಂದು ಕ್ಷಣ ಅವರ ಗಮನ ಬೇರೆಡೆಗೆ ಹೋಗಿದ್ದಕ್ಕೆ ದೊಡ್ಡ ಅವಾಂತರವೇ ನಡೆದಿದೆ. ಇಡೀ ಮಂಟಪ ಬೆಂಕಿಗೆ ಆಹುತಿಯಾಗಿದೆ. ಚಿರು ಬೆಂಕಿಯ ನಡುವೆ ಬಿದ್ದಿದ್ದಾನೆ. ಕಾಮಿನಿ ಅಟ್ಟಹಾಸ ಮೆರೆದಿದ್ದಾಳೆ.

ಮೈತ್ರಿ ಮೇಲೆ ಗಜೇಂದ್ರ ಗರಂ

ಇದೆಲ್ಲವನ್ನು ನೋಡಿದ ಗಜೇಂದ್ರ ಮೊದಲೇ ಮೈತ್ರಿ ತಂದೆಯನ್ನು ಕಂಡರೆ ಆಗುತ್ತಿರಲಿಲ್ಲ. ಹೀಗಾಗಿ ಈ ಮದುವೆ ನಡೆಯಲ್ಲ, ಮೈತ್ರಿ ಕಾಲ್ಗುಣ ಸರಿ ಇಲ್ಲ ಎಂಬ ರೀತಿಯಲ್ಲೆಲ್ಲಾ ಮಾತಾಡಿದ್ದಾನೆ. ಇದನ್ನ ಗಿರಿಜಮ್ಮನಿಗೆ ಸಹಿಸಲು ಸಾಧ್ಯವಾಗಿಲ್ಲ‌. ಯಾಕಂದ್ರೆ ಚಿರು ಸಾವು ಬದುಕಿನ ನಡುವೆ ಹೋರಾಡುವಾಗ ಕಾಪಾಡಿದ್ದು ಇದೇ ಮೈತ್ರಿ. ಬೆಂಕಿಯನ್ನು ಲೆಕ್ಕಿಸದೆ ಚಿರುನನ್ನು ಕರೆದುಕೊಂಡು ಬಂದಿದ್ದಾಳೆ.

ದೆವ್ವನಾ? ದೇವರಾ?

ಇದೆಲ್ಲವನ್ನು ಕದಂಬ ವಂಶದ ಯಜಮಾನಿ ನೋಡುತ್ತಿದ್ದರು. ಎಲ್ಲರ ಬಾಯ್ಮಿಚ್ಚಿಸಿ, ಚಿರುಗೆ ಮೈತ್ರಿಯನ್ನೇ ಮದುವೆ ಮಾಡಿಕೊಳ್ಳುವುದು ಎಂದು ಮಾತು ಕೊಟ್ಟರು. ಇದು ಮನೆಯವರಲ್ಲಿ ಹಲವರಿಗೆ ಇಷ್ಟವಾಗಲಿಲ್ಲ. ಹಾಗೇ ಕಾಮಿನಿಗೂ ಈ ನಿರ್ಧಾರದಿಂದ ಕೋಪ ಬಂದಿದೆ. ಈ ಧಾರಾವಾಹಿ ಶುರುವಾಗಿ ಒಂದು ವಾರ ಆಗಿದೆ. ಇಲ್ಲಿ ಮದುವೆ ಮಂಟಪದಲ್ಲಿ ಕಾಮಿನಿ ತಂದೆ ತಾಯಿಯೂ ಇದ್ದರು. ಇವರ್ಯಾಕೆ ಇಲ್ಲಿ ಬಂದದ್ದು, ಮದುವೆ ತಡೆಯಲು ಮಗಳ ಆತ್ಮ ಇದ್ದರು ಯಾರಿಗೂ ಹೇಳದಿರಲು ಕಾರಣವೇನು ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಅಷ್ಟೇ ಅಲ್ಲ ಮೈತ್ರಿ ರಾಘವೇಂದ್ರ ಸ್ವಾಮಿಗಳ ಭಕ್ತೆ. ದೆವ್ವನಾ..? ದೇವರ ನೋಡಬೇಕಿದೆ.

More from Filmibeat

English summary
Noorujanmaku serial today episode; Here is the details about Grandma says Chiru and Maitri will get married.. what will Kamini do now..?
Read more about: tv sumanth serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X