ಅಪರಾಧ ಲೋಕದ ಸುತ್ತ: 'ಶಾಂತಂ ಪಾಪಂ' ಹೊಸ ಸೀಸನ್ ಶೀಘ್ರದಲ್ಲೇ ಶುರು

By ಪ್ರಿಯಾ ದೊರೆ

ಜಗತ್ತಿನಲ್ಲಿ ಹತ್ತಾರು ರೀತಿಯ ಕ್ರೈಂ ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ಒಂದೊಂದು ಕ್ರೈಂ ಕೇಸ್‌ಗಳು ಕೂಡ ವಿಚಿತ್ರವಾಗಿ ನಡೆಯುತ್ತವೆ. ಎಲ್ಲಾ ಕ್ರೈಂಗಳಿಗೂ ಒಂದು ಕಾರಣ ಇರುತ್ತದೆ. ಕ್ಷುಲ್ಲಕ ಕಾರಣಗಳಿಗೂ ದೊಡ್ಡ ದೊಡ್ಡ ಅನಾಹುತಗಳು ನಡೆದು ಹೋಗುತ್ತದೆ. ಕೇಳಿದ್ದು ಕೊಡಿಸಲಿಲ್ಲ, ಸಾಲ ವಾಪಸ್ ಕೇಳಿದ್ರು, ವೈಯಕ್ತಿಕ ವಿಚಾರದ ಬಗ್ಗೆ ಪ್ರಶ್ನೆ ಮಾಡಿದಕ್ಕೆ, ಪ್ರೀತಿ ಒಪ್ಪದ್ದಕ್ಕೆ ಹೀಗೆ ನೂರೆಂಟು ಕಾರಣಗಳಿಗೆ ಕ್ರೈಂಗಳು ನಡೆಯುತ್ತಲೇ ಇವೆ.

ಇಂತಹ ಅಪರಾಧ ಪ್ರಕರಣಗಳ ಬಗ್ಗೆ ನಿತ್ಯ ಟಿವಿಗಳಲ್ಲಿ ಹಾಗೂ ಪೇಪರ್‌ಗಳ ಮೂಲಕವೂ ತಿಳಿದುಕೊಳ್ಳುತ್ತೇವೆ. ಆದರೆ, ಅಪರಾಧ ಕೃತ್ಯಗಳ ನೈಜ ಘಟನೆಗಳನ್ನು ಆಧರಿಸಿ ಧಾರಾವಾಹಿ ಕಥೆಯಂತೆ ಸಿರೀಸ್ ರೂಪದಲ್ಲಿಯೂ ತೋರಿಸಲಾಗುತ್ತದೆ. ಕನ್ನಡದಲ್ಲಿ ಇದೇ ಮಾದರಿಯಲ್ಲಿ 'ಶಾಂತಂ ಪಾಪಂ' ಎಂಬ ಸೀರೀಸ್ ಕೂಡ ಹಲವು ವರ್ಷಗಳಿಂದ ಮೂಡಿ ಬರುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೊದಲು ರಾತ್ರಿ ಪ್ರಸಾರವಾಗುತ್ತಿದ್ದ 'ಶಾಂತಂ ಪಾಪಂ' ಕಾರ್ಯಕ್ರಮ ಈಗ ಮಧ್ಯಾಹ್ನವೇ ಪ್ರಸಾರವಾಗುತ್ತದೆ.

Colors kannada programme Shantham Papam new season coming soon

ಒಂದು ಗಂಟೆಗಳ ಕಾಲ ಮೂಡಿ ಬರುವ ಈ ಸಿರೀಸ್ ಈಗ ಹೊಸ ಎಪಿಸೋಡ್‌ಗಳು ಮೂಡಿ ಬರಲಿವೆ. ಇಷ್ಟು ದಿನ ಹಳೆಯ ಎಪಿಸೋಡ್‌ಗಳನ್ನೇ ಮರು ಪ್ರಸಾರ ಮಾಡಲಾಗುತ್ತಿತ್ತು. ಇನ್ನು ಮುಂದೆ ಹೊಸ ಎಪಿಸೋಡ್‌ಗಳು ಮೂಡಿ ಬರಲಿವೆ. 'ಶಾಂತಂ ಪಾಪಂ' ಸಿರೀಸ್‌ ಹಲವು ನಟಿಯರು ನಟಿಸಿದ್ದು, ನಟಿ ರಜಿನಿ ಅವರು ನಿರೂಪಣೆಯನ್ನು ಮಾಡುತ್ತಿದ್ದರು. ಈಗ ಹೊಸದಾಗಿ ಮೂಡಿ ಬರುವ ಎಪಿಸೋಡ್‌ಗಳನ್ನು ರಜಿನಿ ಅವರೇ ನಡೆಸಿಕೊಡುತ್ತಾರೋ, ಇಲ್ಲವೇ ಹೊಸ ನಿರೂಪಕಿ ಬರುತ್ತಾರೋ ಗೊತ್ತಿಲ್ಲ.

Colors kannada programme Shantham Papam new season coming soon

ಆದರೆ ಹಳೆಯ ಎಪಿಸೋಡ್‌ಗಳನ್ನು ನೋಡಿ ನೋಡಿ, ಬೇಸರ ಪಟ್ಟುಕೊಂಡಿದ್ದವರು ಈಗ ಹೊಸ ಎಪಿಸೋಡ್‌ಗಳನ್ನು ನೋಡಬಹುದು. ಪಾಪದ ಕಥೆಗಳು.. ಪಾಠ ಕಲಿಸುವ ಕಥೆಗಳು ಎಂಬ ಟ್ಯಾಗ್ ಲೈನ್‌ನಿಂದಲೇ 'ಶಾಂತಂ ಪಾಪಂ' ಹಲವರಿಗೆ ಸಣ್ಣ ತಪ್ಪು ಮಾಡುವುದು, ಆತುರದ ನಿರ್ಧಾರ ತೆಗೆದುಕೊಳ್ಳುವುದು, ಸುಳ್ಳು ಹೇಳುವುದರಿಂದ ಏನೆಲ್ಲಾ ಆಗುತ್ತದೆ ಎಂಬ ಬಗ್ಗೆ ಪಾಠ ಹೇಳುತ್ತಿದೆ.

ಇದರಲ್ಲಿ ಅಪರಾಧ ಲೋಕವನ್ನು ವೈಭವೀಕರಿಸದೇ ನೈಜ ಕತೆಗಳನ್ನು ಅನಾವರಣಗೊಳಿಸಲಾಗುತ್ತಿದೆ. ಅಪರಾಧ ಜಗತ್ತಿನ ಹಿಂದಿರುವ ಮನಸ್ಥಿತಿಳಿಂದ ಉಂಟಾಗುವ ಅವಘಡಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಮಾನವೀಯ ನೆಲೆಗಟ್ಟಿನಲ್ಲಿ ಅಪರಾಧಗಳನ್ನು ನೋಡುವಂತೆ ಮಾಡುವ ಪ್ರಯತ್ನ ಇದಾಗಿದೆ.

ಇದರಲ್ಲಿ ಬಡತನ, ಸಂಪತ್ತಿನ ಅಸಮಾನತೆ, ಸಹಾನುಭೂತಿ, ಲೈಂಗಿಕ ಕಿರುಕುಳ, ಧ್ವೇಷ, ದುರಾಸೆ, ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ, ಮರ್ಯಾದಾ ಹತ್ಯೆ, ಕೌಟುಂಬಿಕ ವಿವಾದಗಳು ಮತ್ತು ವಿವಾಹೇತರ ಸಂಬಂಧಗಳಂತಹ ಸಾಮಾಜಿಕ ಅನಿಷ್ಟಗಳ ಮೇಲೆ ಬೆಳಕು ಚೆಲ್ಲುತ್ತದೆ. ಈ ಸಿರೀಸ್‌ಗಳು ಪ್ರೇಕ್ಷಕರ ಹೃದಯ ಮುಟ್ಟಿದ್ದು, ಅಪರಾಧ ಮಾಡುವುದರಿಂದಾಗುವ ಪರಿಣಾಮಗಳ ಬಗ್ಗೆ ಅರಿತುಕೊಂಡವರಿದ್ದಾರೆ. ಪ್ರತಿ ಎಪಿಸೋಡ್‌ನಲ್ಲಿ ಹೊಸ ಹೊಸ ಕಥೆ ಇರುತ್ತದೆ.

ಇನ್ನು ಈ ಕಾರ್ಯಕ್ರಮ ಈಗಾಗಲೇ ಸಾಕಷ್ಟು ಸೀಸನ್‌ಗಳಲ್ಲಿ ಮೂಡಿ ಬಂದಿದ್ದು, ಇದೀಗ ಹೊಸ ಸೀಸನ್‌ನ ಎಪಿಸೋಡ್‌ಗಳು ಶೂಟಿಂಗ್ ಹಂತದಲ್ಲಿವೆ. 2017ರಲ್ಲಿ ಶುರುವಾದ ಈ ಶೋ ,ಇಂದಿಗೂ ಜನಪ್ರಿಯತೆಯನ್ನು ಕಾಯ್ದುಕೊಂಡಿದೆ. ಇದರಲ್ಲಿ ಹೊಸ ನಟ-ನಟಿಯರು ಸಹಜ ಮೇಕಪ್ ಮೂಲಕ ಕಾಣಿಸಿಕೊಳ್ಳುತ್ತಾರೆ. ಸೀರಿಯಲ್‌ಗಿಂತ 'ಶಾಂತಂ ಪಾಪಂ' ಸಂಪೂರ್ಣ ಭಿನ್ನವಾದ ಅನುಭವವನ್ನು ಇದು ನೀಡಲಿದೆ ಎನ್ನುತ್ತದೆ ಕಲರ್ಸ್ ಸೂಪರ್ ತಂಡ.

More from Filmibeat

English summary
Colors kannada program Shantham Papam new season coming soon. Saturday And Sunday New Episodes Going to telecast. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X