Actress Bhvuana: ಚಿಕ್ಕ ಹುಡುಗಿಯಾಗಿ ಪೂರ್ವಿ ಅದೆಷ್ಟು ಕ್ಯೂಟ್.. ಬಾಲ್ಯದ ಫೋಟೊ ವೈರಲ್!

By ಎಸ್ ಸುಮಂತ್

ಧಾರಾವಾಹಿ, ಸಿನಿಮಾಗಳಲ್ಲಿ‌ ನಟಿಸುವ ನಟಿಯರನ್ನು ನೋಡಿ ವಾವ್ಹ್.. ಅಂತ ಅಂದ್ಕೊಂಡಿರ್ತೀವಿ. ಆದ್ರೆ ಅವರ ಬಾಲ್ಯದ ಫೋಟೋಗಳನ್ನು ನೋಡಿದಾಗ ವಾವ್ಹ್ ಎನಿಸದೆ ಇರದು. ಈಗ ಪೂರ್ವಿ ಫೋಟೋ ನೋಡಿದಾಗಲೂ ಹಾಗೆ ಅನ್ನಿಸಿದ್ದು. ಚಿಲ್ಡ್ರನ್ಸ್ ಡೇ ದಿನ ಎಲ್ಲರೂ ತಮ್ಮ ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳುವುದು ಕಾಮನ್. ಆದರೆ, ಈಗ ಪೂರ್ವಿ ಫ್ಯಾನ್ಸ್ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ 'ಪುಣ್ಯವತಿ' ಧಾರಾವಾಹಿ ಬರ್ತಾ ಇದೆ. ಈ ಧಾರಾವಾಹಿಯಲ್ಲಿ ತಾಳಿ ಬಂಧವನ್ನು ಮೀರಿ ಮನಸ್ಸಿನ ಬಂಧವನ್ನು ಉಳಿಸಿಕೊಳ್ಳುವುದು. ಅಕ್ಕನನ್ನು ಪ್ರೀತಿಸಿದ ನಂದನ್ ಕೈಯಿಂದ ತಾಳಿ ಬಿದ್ದಿರೋದು ಮಾತ್ರ ತಂಗಿಯ ಕೊರಳಿಗೆ. ಈ ಬಂಧವನ್ನು ಬಿಡಿಸುವುದೇ ಈಗ ಕಗ್ಗಂಟು.

Colors kannada Punyavathi Poorvi fame Bhavana childhood photos viral

ಪೂರ್ವಿಯ ಬಾಲ್ಯ ಫೋಟೋ ವೈರಲ್

ಪೂರ್ವಿಯ ನಿಜವಾದ ಹೆಸರು ಭುವನಾ. 'ಪುಣ್ಯವತಿ' ಧಾರಾವಾಹಿ ಮೂಲಕ ಪೂರ್ವಿಯಾಗಿ ಎಲ್ಲರ ಮನ ಕದ್ದಿದ್ದಾಳೆ. ಸದ್ಯ ಬಾಲ್ಯದ ಫೋಟೋ ಒಂದನ್ನು, ಈಗಿನ ಫೋಟೋ ಜೊತೆಗೆ ಕೊಲ್ಯಾಜ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಬಿಡಲಾಗಿದೆ. ಆ ಫೋಟೋಗೆ ಎಷ್ಟು ಚೆಂದ ಇವಳು, ಯಾವ ರಾಣಿ ಮಗಳು ಎಂಬ ಹಾಡನ್ನು ಸೆಟ್ ಮಾಡಲಾಗಿದೆ. ಭುವನಾರ ಫ್ಯಾನ್ಸ್ ಈ ಫೋಟೋಗೆ ಹಾರ್ಟ್ ನೀಡುತ್ತಿದ್ದಾರೆ. ದಿಲ್ ಖುಷ್ ಆಗಿದ್ದಾರೆ.

ಪೂರ್ವಿಗಿದೆ ಫ್ಯಾನ್ ಪೇಜ್

ಭುವನಾ 'ಪುಣ್ಯವತಿ' ಧಾರಾವಾಹಿ ಮೂಲಕ ಎಲ್ಲರಿಗೂ ಪರಿಚಿತರಾಗಿದ್ದಾರೆ. ಪೂರ್ವಿಯಾಗಿ ಪರಿಚಿತರಾದ ಮೇಲೆ ಫ್ಯಾನ್ಸ್ ಜಾಸ್ತಿಯಾಗಿದ್ದಾರೆ. ಪೂರ್ವಿ ಹೆಸರಲ್ಲಿ ಪೇಜ್ ಗಳು ಸಹ ಕ್ರಿಯೇಟ್ ಆಗಿದೆ. ಆ ಪೇಜ್‌ಗಳ ಮೂಲಕ ಪೂರ್ವಿಯ ಅಪ್ಡೇಟ್ ಮಾಡ್ತಾ ಇರ್ತಾರೆ. ಇನ್ನು ಭುವನಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. 64 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಫೋಟೋಶೂಟ್, ಸೀರಿಯಲ್ ಸೆಟ್, ಸಹ ಕಲಾವಿದರ ಜೊತೆಗೆ ರೀಲ್ಸ್ ಮಾಡಿ ಹಂಚಿಕೊಳ್ಳುತ್ತಾ ಇರುತ್ತಾರೆ.

ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡ ಪೂರ್ವಿ

ಪಕ್ಕ ಹಳ್ಳಿ ಭಾಷೆ ಮಾತನಾಡುವುದು ಅಷ್ಟು ಸುಲಭವಲ್ಲ. ಆ ಪ್ರದೇಶದಲ್ಲಿ ಹುಟ್ಟಿ ಬೆಳೆದರೆ ಸುಲಭ. ಆದರೆ, ಪೂರ್ವಿ ಅಲಿಯಾಸ್ ಭುವನಾ ಪ್ರೊಫೈಲ್ ನೋಡಿದರೆ, ಹಳ್ಳಿ ಭಾಷೆಯನ್ನು ಸೀರಿಯಲ್‌ಗಾಗಿ ಕಲಿತಂತೆ ಕಾಣುತ್ತೆ. ಧಾರಾವಾಹಿಯಲ್ಲಿ ಅದೆಷ್ಟು ಅದ್ಭುತವಾಗಿ ಹಳ್ಳಿ ಭಾಷೆ ಮಾತಾಡ್ತಾರೆ ಅಂದ್ರೆ ಕೇಳುವುದಕ್ಕೆ ಚೆಂದ ಎನಿಸುತ್ತದೆ. ಇನ್ನು ಬಯೋಡೇಟಾದಲ್ಲಿ ಅಮ್ಮ ಮತ್ತು ಸೋದರ ನನ್ನ ಪ್ರಪಂಚ, ಡ್ಯಾಡ್ ಅಂದ್ರೆ ಪ್ರೀತಿ ಅಂತ ಹಾಕಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ಅಕ್ಕನಿಗಾಗಿ ತ್ಯಾಗ ಮಾಡ್ತಾಳಾ ತಂಗಿ?

'ಪುಣ್ಯವತಿ' ಧಾರಾವಾಹಿಯಲ್ಲಿ ಮದನ್ ಮತ್ತು ಪದ್ಮಿನಿ ಪ್ರೀತಿ ಮಾಡ್ತಾ ಇದ್ರು. ಆದರೆ, ಯಾವುದೋ ಅಚಾನಕ್ ಸ್ಥಿತಿಗೆ ಸಿಲುಕಿ ನಂದನ್, ಪೂರ್ವಿಗೆ ತಾಳಿ ಕಟ್ಟಿದ್ದಾನೆ. ಆದ್ರೆ ಈಗ ಪದ್ಮಿಗೆ ನಂದನ್ ನ ಬಿಟ್ಟುಕೊಡುವ ಮನಸ್ಸು ಇಲ್ಲ. ಮೊದಲಿಗೆ ಪೂರ್ವಿಗೆ ಸೇರಬೇಕಾದವರು ನೀವೂ ಎಂದಿದ್ದಳು. ಆಗ ಪೂರ್ವಿ, ನಂದನ್ ಮತ್ತು ಪದ್ಮಿನಿಯನ್ನು ಒಂದು ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದಳು. ಆದ್ರೆ ಈಗ ಎಲ್ಲವೂ ಉಲ್ಟಾ ಆಗಿದೆ. ಪೂರ್ವಿ, ನಂದನ್ ಮೇಲೆ ಗಂಡ ಎಂಬ ಬಾಂಧವ್ಯ ಬೆಳೆಸಿಕೊಳ್ಳುತ್ತಿದ್ದಾಳೆ. ಈಗ ಪುಣ್ಯವತಿಯಲ್ಲಿ ತಾಳಿ ಸಂಬಂಧ ಗೆಲ್ಲುತ್ತಾ, ಪ್ರೀತಿ ಸಂಬಂಧ ಗೆಲ್ಲುತ್ತಾ ನೋಡಬೇಕಿದೆ.

More from Filmibeat

English summary
Colors kannada Punyavathi Poorvi fame Bhavana childhood photos viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X