ಕನ್ನಡದ ಕಥೆಯೊಂದು ಹಿಂದಿಗೆ ರಿಮೇಕ್ ಆಗಲು ಸಿದ್ಧ!

By ಅನಿತಾ ಬನಾರಿ

ಕನ್ನಡ ಕಿರುತೆರೆಯಲ್ಲಿ ಕಳೆದ ಒಂದು ದಶಕದಿಂದ ಹಲವಾರು ಧಾರಾವಾಹಿಗಳು ಪರಭಾಷೆಗೆ ಡಬ್ ಆಗಿದೆ. ಹಿಂದಿಯಿಂದ ಬಹಳಷ್ಟು ಧಾರಾವಾಹಿಗಳನ್ನು ಕನ್ನಡಕ್ಕೆ ರಿಮೇಕ್ ಮಾಡಿದ್ದು ಇದೆ. 'ಪುಟ್ಟಗೌರಿ ಮದುವೆ', 'ಪುನರ್ ವಿವಾಹ', 'ಅಮೃತ ವರ್ಷಿಣಿ' ಹೀಗೆ ಹಲವಾರು ಧಾರಾವಾಹಿಗಳು ಹಿಂದಿಯಿಂದ ಕನ್ನಡಕ್ಕೆ ರೀಮೇಕ್ ಆಗಿ ಕನ್ನಡ ವೀಕ್ಷಕರೆ ಗಮನ ಸೆಳೆದಿದ್ದುಂಟು. ಅಷ್ಟೇ ಅಲ್ಲದೆ ಇತ್ತೀಚೆಗೆ ಹಿಂದಿ ಧಾರಾವಾಹಿಗಳು ರೀಮೇಕ್ ಆಗದೆ ಬರೀ ಡಬ್ ಆಗಿರುವ ಸಂದರ್ಭಗಳು ಇವೆ.

ಇದೀಗ ಕನ್ನಡ ಕಿರುತರಿಗೆ ವಿಶೇಷವಾದ ಸಂಭ್ರಮದ ವಿಚಾರವೇನೆಂದರೆ ಕನ್ನಡದ ಜನಪ್ರಿಯ ಧಾರಾವಾಹಿ ಹಿಂದಿಗೆ ರಿಮೇಕ್ ಆಗುತ್ತಿದೆ. ಹೌದು, ಕನ್ನಡದ ಜನಪ್ರಿಯ ಧಾರಾವಾಹಿ 'ರಾಮಾಚಾರಿ' ಕನ್ನಡದಲ್ಲಿ ವೀಕ್ಷಕರ ಮನೆಗೆದ್ದಿರುವುದು ಅಷ್ಟೇ ಅಲ್ಲದೆ ಹಿಂದಿಯಲ್ಲಿಯೂ ಸದ್ದು ಮಾಡಲು ರೆಡಿಯಾಗಿದೆ.

colors-kannada-raamachari-serial

ಅಂದ ಹಾಗೆ, ಕನ್ನಡ ಚಿತ್ರರಂಗಕ್ಕೆ ಹಾಗೂ ಕಿರುತೆರೆಗೆ 'ರಾಮಾಚಾರಿ' ಎಂಬ ಹೆಸರು ಬಹಳ ವಿಶೇಷವಾದುದು. ವಿಷ್ಣು ದಾದಾ ಅವರಿಂದ ಪಾಪ್ಯುಲಾರಿಟಿ ಪಡೆದಿರುವ ಈ ರಾಮಾಚಾರಿ ಪಾತ್ರ ನಂತರ ಹಲವಾರು ಧಾರಾವಾಹಿಗಳಲ್ಲೂ, ಸಿನಿಮಾದಲ್ಲೂ ಈ ಹೆಸರು ಬಳಕೆ ಆಗಿದೆ. ಇದೀಗ 'ರಾಮಾಚಾರಿ' ಧಾರಾವಾಹಿ ಹಿಂದಿಯಲ್ಲಿ ಮಿಂಚಲು ತಯಾರಾಗಿರುವುದು ಕನ್ನಡದ ಕಿರುತೆರೆ ಪ್ರಿಯರಿಗಂತೂ ಹೆಮ್ಮೆಯ ವಿಚಾರ.

ಅಂತೂ ಕನ್ನಡದ ಸ್ವಂತ ಕಥೆಗಳು ಬೇರೆ ರಾಜ್ಯ ಹಾಗೂ ಭಾಷೆಗಳನ್ನು ತಲುಪುತ್ತಿದೆ. ಕ್ರಿಯೇಟಿವ್ ಕಥಾಹಂದರವನ್ನು ಹೊಂದಿರುವ ಈ ಧಾರಾವಾಹಿ ಈಗಾಗಲೇ ಹಿಂದಿ ಡೈರೆಕ್ಟರ್ಸ್ ಅನ್ನು ಸೆಳೆದಿದ್ದು, ಇದರ ರಿಮೇಕ್‌ಗೆ ತಯಾರಿ ಶುರುವಾಗಿದೆ.

colors-kannada-raamachari-serial

ಹಿಂದಿಯ 'ರಾಮಾಚಾರಿ' ಧಾರಾವಾಹಿಗೆ ಲೀಡ್ ನಟರ ಆಡಿಶನ್ ನಡೆಯುತ್ತಿದ್ದು ಸದ್ಯದಲ್ಲೇ ಪ್ರೊಮೋ ಬಿಡುಗಡೆ ಮಾಡಲಿದ್ದಾರಂತೆ. ಹಾಗಾಗಿ ಸದ್ಯದಲ್ಲೇ ಈ ಧಾರವಾಹಿ ಹಿಂದಿ ವೀಕ್ಷಕರನ್ನು ರಂಜಿಸಲಿದೆ ಎಂಬುದು ಸಂತೋಷದ ವಿಚಾರ.

ಈ ವಿಚಾರ ತಿಳಿದು 'ರಾಮಾಚಾರಿ' ಧಾರಾವಾಹಿ ಅಭಿಮಾನಿಗಳಂತೂ ತಮ್ಮ ಖುಷಿ ವ್ಯಕ್ತಪಡಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರಿಂದ ಈ ಬಗ್ಗೆ ಪ್ರಶಂಸೆ ಕೇಳಿ ಬರುತ್ತಿದೆ.

More from Filmibeat

English summary
Colors Kannada Raamachari serial remaking into Hindi language
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X