ಹೆಂಡ್ತಿ ಮುಂದೆ ಆಂಕರ್‌ಗೆ ಡವ್ ಹೊಡೆಯೋಕೆ ದಮ್ ಬೇಕಲೆ ಎಂದ ಸೃಜನ್ : ಎಲ್ಲಾ ನಿಮ್ಮ ಆಶೀರ್ವಾದ ಎಂದ ಲೋಕೇಶ್
ಕಲರ್ಸ್ ಕನ್ನಡದಲ್ಲಿ 'ರಾಜಾ-ರಾಣಿ' ರೀ-ಲೋಡೆಡ್ ಆಗಿದೆ. ಶನಿವಾರದಿಂದ ಅದ್ದೂರಿಯಾಗಿ ಶುರುವಾಗಿದೆ. ಕಷ್ಟ-ಸುಖ ನಡುವೆ ಒಳ್ಳೆಯ ಮನರಂಜನೆಯನ್ನು ನೀಡುತ್ತಿದೆ. ಕಂಟೆಸ್ಟೆಂಟ್ ಮಾಡೋ ಕಾಮಿಡಿಯಿಂದ ಹೊಟ್ಟೆ ನೋವು ಬರಿಸುವಷ್ಟು ನಗು ಬರುತ್ತದೆ. ಮನಸ್ಸು ಭಾರವಾಗಿ, ಕಣ್ಣಲ್ಲಿ ನೀರು ತರಿಸುವ ಭಾವನೆಗಳು ಅಲ್ಲಿದ್ದಾವೆ. 'ರಾಜಾ-ರಾಣಿ' ಶೋಗೆ ಬಂದಿರುವ ಒಂದೊಂದು ಜೋಡಿಯದ್ದು, ಒಂದೊಂದು ರೀತಿಯ ನೋವಿದೆ, ಕಷ್ಟವಿದೆ. ಅದನ್ನೆಲ್ಲಾ ಕೇಳುತ್ತಿದ್ದರೆ ನೋಡುಗರ ಕಣ್ಣಲ್ಲೇ ನೀರು ಬರುತ್ತದೆ.
'ರಾಜಾ-ರಾಣಿ' ರಿಲೋಡೆಡ್‌ನಲ್ಲಿ ಸ್ಪರ್ಧಿಗಳು ಮಾತ್ರ ಕಣ್ಣೀರು ಹಾಕಿಸೋದಲ್ಲ ತೀರ್ಪುಗಾರರು ಕೂಡ ಕಣ್ಣೀರು ಹಾಕಿಸಿದ್ದಾರೆ. ಅದರಲ್ಲೂ ಮಗುವಾದ ಎರಡೇ ತಿಂಗಳಿಗೆ ರಿಯಾಲಿಟಿ ಶೋಗೆ ಬಂದ ಅದಿತಿ ಪ್ರಭುದೇವ ಸಾಕಷ್ಟು ಟ್ರೋಲ್ ಆಗಿದ್ದರು. ಎರಡು ತಿಂಗಳ ಮಗುವನ್ನೇ ಬಿಟ್ಟು ಬಂದಿದ್ದಾರೆ ಎಂದು. ಆದರೆ ವೇದಿಕೆ ಮೇಲೆ ಮಾತನಾಡುವಾಗ ಅದಿತಿ ಕೂಡ ಕಣ್ಣೀರಾದರು. ಹೀಗೆ ಸಾಕಷ್ಟು ವಿಷಯಗಳು 'ರಾಜಾ-ರಾಣಿ' ವೇದಿಕೆಯಲ್ಲಿ ನಮ್ಮನ್ನು ಕಾಡುತ್ತವೆ.

ಅಪ್ಸರೆಯಂತೆ ಬಂದ ರಚನಾ
ಸ್ಪರ್ಧಿಗಳು ವೇದಿಕೆ ಮೇಲೆ ಬರುವ ಮೊದಲು ಅವರದೊಂದು ಪರ್ಫಾಮೆನ್ಸ್ ಇರಲಿದೆ. ರಚನಾ ಹಾಗೂ ಲೋಕೇಶ್ ಬಸವಟ್ಟಿ ಕೂಡ ಅದ್ಭುತ ಪರ್ಫಾಮೆನ್ಸ್ ನೀಡಿದ್ದಾರೆ. ಸ್ಕಿಟ್ ರೀತಿ ಮಾಡಿ, ಮೇಲಿಂದ ಅಪ್ಸರೆಯಂತೆ ರಚನಾ ಇಳಿದು ಬಂದಿದ್ದಾರೆ. ತುಂಬಾ ಮುದ್ದಾಗಿ ಕಾಣಿಸುತ್ತಾ ಇದ್ದಾರೆ.
ಅನುಪಮಾಗೆ ಕಾಲೆಳೆದ ಲೋಕೇಶ್
ಡಾನ್ಸ್ ಪರ್ಫಾಮೆನ್ಸ್ ಮುಗಿದ ಮೇಲೆ ಅನುಪಮಾ ಗೌಡ, ಲೋಕೇಶ್ ಅವರಿಗೆ ಒಂದು ಸ್ವೀಟ್ ಹಗ್ ಕೊಟ್ಟಿದ್ದಾರೆ. ಲೇಟ್ ಆದ್ರೂ ಸಖತ್ತಾಗಿರೋದನ್ನೇ ಹಿಡಿದಿದ್ದೀರಿ ಅಂತ ಹೊಗಳಿದ್ದಾರೆ. ಆಗ ಲೋಕೇಶ್ ತನ್ನ ಫ್ಲರ್ಟ್ ಶುರು ಮಾಡಿಕೊಂಡಿದ್ದಾರೆ. ನಿಮ್ಮಿಂದಾನೆ ನಾನು ಇಷ್ಟು ಲೇಟ್ ಆಗಿ ಮದುವೆ ಆಗಿರೋದು. ಈ ಅವಕಾಶಕ್ಕಾಗಿ ಕಾಯುತ್ತಾ ಇದ್ದೆ. ಡೂಪ್ಲೆಕ್ಸ್ ಮನೆ ಮಾಡಬೇಕಾ ಹೇಗೆ ಅಂತ ಒಂದು ಅನುಪಮಾ ಗೌಡಗೆ ಗೊಂದಲ ಮಾಡಿಟ್ಟಿದ್ದಾರೆ. ಪ್ರತಿದಿನ ರಾತ್ರಿ ನಿನ್ನ ನಗುವನ್ನು ಕೇಳಿಯೇ ಮಲಗುವುದು ಎಂದಿದ್ದಾರೆ.
ಧಮ್ ಬೇಕಲೆ ಎಂದ ಸೃಜನ್
ಈ ಹೆಲ್ದಿ ಫ್ಲರ್ಟ್ ನಡುವೆ ತೀರ್ಪುಗಾರರು ಮನರಂಜನೆ ತೆಗೆದುಕೊಂಡಿದ್ದಾರೆ, ಮನರಂಜನೆ ನೀಡಿದ್ದಾರೆ. ಅನುಪಮಾ ಗೌಡ ಅವರನ್ನು ತಾನೆಷ್ಟು ಆರಾಧಿಸುತ್ತೀನಿ ಎಂದು ಹೇಳುವಾಗ ಸೃಜನ್ ಅವರು, ಆದರೂ ಹೆಂಡತಿಯನ್ನ ಪಕ್ಕದಲ್ಲಿಟ್ಟುಕೊಂಡು ಆಂಕರ್‌ಗೆ ಲೈನ್ ಹೊಡಿಬೇಕು ಅಂದ್ರೆ ಧಮ್ ಬೇಕಲೆ ಅಂತಾರೆ. ಅದಕ್ಕೆ ಲೋಕೇಶ್ ಅವರು, ಎಲ್ಲಾ ನಿಮ್ಮ ಆಶೀರ್ವಾದ ಅಣ್ಣ ಎಂದಿದ್ದಾರೆ.

ಫ್ಲರ್ಟ್ ಮಾಡ್ಲಿ ಎಂದ ರಚನಾ
ರಚನಾ ಮಾತು ಕೇಳಿ ತೀರ್ಪುಗಾರರಿಗೆ ಶಾಕ್ ಆಗಿದೆ. ಅದ್ಯಾವುದು ಇಲ್ವಲ್ಲ ಅಂತ. ಬಳಿಕ ವೇದಿಕೆ ಮೇಲೆ ಫ್ಲರ್ಟ್ ಮಾಡಿದ್ದರ ಬಗ್ಗೆ ಮಾತನಾಡಿದ ರಚನಾ, ಈಗ ನನಗೂ ಡಿ ಬಾಸ್ ಅಂದ್ರೆ ಇಷ್ಟ, ಶಾರೂಖ್ ಖಾನ್ ಅಂದ್ರೆ ಇಷ್ಟ. ಅವರು ಸಿಕ್ದಾಗ ನಾನು ಹೀಗೆ ಮಾತಾಡ್ತೀನಿ ಅನ್ಸುತ್ತೆ ಅದನ್ನ ಫ್ಲರ್ಟ್ ಅನ್ನೋದಕ್ಕಿಂತ ಫೀಲಿಂಗ್ಸ್ ಹೇಳಿಕೊಳ್ಳುವುದರಿಬಹುದು.. ಅವರು ಅಷ್ಟು ಫೀಲಿಂಗ್ಸ್ ಹೇಳಿಕೊಂಡಿದ್ದಾರೆ ಅಷ್ಟೇ ಅಂತ ಗಂಡನನ್ನು ಸಪೋರ್ಟ್ ಮಾಡಿಕೊಂಡಿದ್ದಾರೆ.


Click it and Unblock the Notifications











