Anupama gowda: ರಾಜಾರಾಣಿ ಶೋ ಆಂಕರ್ ಅನುಪಮಾ ಗೌಡ ಹೊಸ ಮನೆ ಹೇಗಿದೆ ಗೊತ್ತಾ?

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ 'ರಾಜಾ-ರಾಣಿ' ಶೋ ಸಾಕಷ್ಟು ಜನಪ್ರಿಯತೆಯನ್ನು ಪಡೆದಿತ್ತು. ಹೀಗಾಗಿ ಈ ಬಾರಿ ರಾಜಾರಾಣಿ ರಿಲೋಡೆಡ್ ಎಂಬ ಶೋ ಮೂಲಕ ಎಲ್ಲರನ್ನು ಮನರಂಜಿಸಲಾಗಿತ್ತು. ಈ ಶೋ ಆಂಕರ್ ಆಗಿದ್ದ ಅನುಪಮಾ ಗೌಡ ಇದೀಗ ಸುದ್ದಿಯಲ್ಲಿದ್ದಾರೆ. ಹೊಸ ಮನೆ ಖರೀದಿಸಿ, ಅದ್ದೂರಿಯಾಗಿ ಪೂಜೆಯನ್ನು ಮುಗಿಸಿದ್ದಾರೆ.

ಅನುಪಮಾ ಗೌಡ 'ಅಕ್ಕ' ಎಂಬ ಸೀರಿಯಲ್ ಮೂಲಕ ಫೇಮಸ್ ಆಗಿದ್ದರು. ರಿಯಾಲಿಟಿ ಶೋಗಳ ಮೂಲಕವೂ ಅಷ್ಟೇ ಖ್ಯಾತಿ ಪಡೆದಿದ್ದರು. ಇವರ ನಿರೂಪಣೆಗೆ ಸಾಕಷ್ಟು ಜನ ಫ್ಯಾನ್ಸ್ ಇದ್ದಾರೆ. ಹಾಗೇ ಇವರ ಗೆಳೆತನವೂ ಹಲವರಿಗೆ ಸ್ಪೂರ್ತಿ. ಇದೀಗ ಅನುಪಮಾ ಗೌಡ ಹೊಸ ಮನೆ ಖರೀದಿಸಿದ್ದು, ಎಲ್ಲರು ವಿಶ್ ಮಾಡುತ್ತಿದ್ದಾರೆ.

Colors kannada Raja-rani show Anchor Anupama Gowda buys new house

ನಮ್ಮ ಮನೆಯಲ್ಲಿ ಅನು ಮಿಂಚಿಂಗ್

ಅನುಪಮಾ ಗೌಡ ಸದ್ಯ ಹೊಸ ಮನೆ ಖರೀದಿಸಿದ ಖುಷಿಯಲ್ಲಿದ್ದಾರೆ. ಹೊಸ ಮನೆಯಲ್ಲಿ ಹಾಲು ಉಕ್ಕಿಸಿ, ಸತ್ಯ ನಾರಾಯಣ ಪೂಜೆಯನ್ನು ನೆರವೇರಿಸಿದ್ದಾರೆ. ಅದ್ದೂರಿಯಾಗಿ, ಅದ್ಭುತವಾಗಿ ಅನುಪಮಾ ಗೌಡ ತಮ್ಮ ಮನೆಯ ಗೃಹ ಪ್ರವೇಶ ನೆರವೇರಿಸಿದ್ದಾರೆ. ಅದರ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿವೆ. ಅನುಪಮಾ ಗೌಡ ಕೂಡ ಮನೆಯ ಗೃಹ ಪ್ರವೇಶದಲ್ಲಿ ಮಿಂಚಿದ್ದಾರೆ. ಹೋಮ ಮಾಡಿಸಿ, ಸಂಪ್ರದಾಯದಂತೆ ಹಾಲು ಉಕ್ಕಿಸಿದ್ದಾರೆ.

ಅನುಪಮಾ ಫ್ರೆಂಡ್ಸ್ ಹಾಜರ್‌

ಫ್ರೆಂಡ್ಶಿಪ್ ಅನ್ನೋ ಹೆಸರು ಬಂದಾಗ ಅನುಪಮಾ ಗೌಡ ಅಂಡ್ ಟೀಂ ಸ್ಪೂರ್ತಿಯಾಗಿ ನಿಲ್ಲುತ್ತಾರೆ. ಸ್ನೇಹಿತರ ನಡುವೆ ಇರುವ ಬಾಂಡಿಂಗ್ ಅದ್ಭುತವಾಗಿದೆ. ಅದೆಷ್ಟೋ ಜನ ಇವರನ್ನು ನೋಡಿ ಹೊಟ್ಟೆ ಉರಿದುಕೊಂಡವರಿದ್ದಾರೆ. ನಮಗೂ ಇಂಥದ್ದೊಂದು ಟೀಂ ಇರಬಾರದಾ ಎಂದುಕೊಂಡಿದ್ದಾರೆ. ಎಲ್ಲಾ ಸಮಯದಲ್ಲೂ ಜೊತೆಗಿರುವ ಸ್ನೇಹಿತರು ಇದೀಗ ಗೃಹಪ್ರವೇಶಕ್ಕೂ ಬಂದಿದ್ದಾರೆ. ಅನುಪ್ರಭಾಕರ್, ದಿವ್ಯಾ ಉರುಡುಗ, ಕೃಷಿ ತಾಪಂಡ, ಕಿಶನ್, ನಮ್ರತಾ ಹೀಗೆ ಅನುಪಮಾ ಗೌಡ ಆತ್ಮೀಯರು ಗೃಹ ಪ್ರವೇಶದಲ್ಲಿ ಭಾಗಿಯಾಗಿದ್ದಾರೆ. ಎಲ್ಲರು ಅನುಪಮಾ ಗೌಡಗೆ ವಿಶ್ ಮಾಡಿದ್ದಾರೆ. ತಮ್ಮ ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಸಿಕ್ಕಾಪಟ್ಟೆ ಆಕ್ಟೀವ್ ಅನುಪಮಾ

ಅನುಪಮಾ ಗೌಡ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಡ್ಯಾನ್ಸ್ ಮಾಡುತ್ತಾ, ರೀಲ್ಸ್ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಸುಮಾರು 1‌ಮಿಲಿಯನ್ ಫಾಲೋವರ್ಸ್ ಕೂಡ ಅನುಪಮಾ ಗೌಡ ಅವರಿಗೆ ಇದ್ದಾರೆ. ಒಂದೊಂದು ವಿಡಿಯೋ ಹಾಕಿದ್ರೆ ಮಿಲಿಯನ್ ಗಟ್ಟಲೇ ರೀಚ್ ಆಗುತ್ತದೆ. ಹೀಗಾಗಿಯೇ ಆನ್ಲೈನ್ ಪ್ರಮೋಷನ್ ಕೂಡ ಜೋರಾಗಿಯೇ ಬರುತ್ತಾ ಇರುತ್ತವೆ. ಅದರಲ್ಲೂ ಬ್ಯೂಟಿ ಪ್ರಾಡಕ್ಟ್ ಗಳನ್ನು ಹೆಚ್ಚು ಪ್ರಮೋಟ್ ಮಾಡುತ್ತಾರೆ. ಹೀಗಾಗಿ ಸೋಷಿಯಲ್ ಮೀಡಿಯಾ ಮೂಲಕವೂ ಒಳ್ಳೆ ಹಣದ ಅರಿವು ಇದೆ.

ಅಕ್ಕನ ಅಭಿಮಾನಿಗಳಿಂದ ವಿಶ್

ಅನುಪಮಾ ಗೌಡ ತಮ್ಮ ಮನೆಗೆ ಇಟ್ಟಿರುವ ಹೆಸರು ನಮ್ಮ ಮನೆ. ಅವರ ಸ್ನೇಹಿತೆಯರೆಲ್ಲಾ ಗೃಹ ಪ್ರವೇಶಕ್ಕೆ ಹೋಗಿದ್ದರು. ಈ ವೇಳೆ ಫೋಟೋ, ವಿಡಿಯೋಗಳನ್ನು ಹಾಕಿದ್ದರು. ಅವರನ್ನು ಟ್ಯಾಗ್ ಮಾಡಿರುವ ಕಾರಣ ಅನುಪಮಾ ಗೌಡ ಅವರ ಪ್ರೊಫೈಲ್‌ನಲ್ಲೂ ಮನೆ ಹೇಗಿದೆ ಎಂಬುದು ಕಾಣುತ್ತದೆ. ಅಷ್ಟೇ ಅಲ್ಲ ಅನುಪಮಾ ಗೌಡ ತಮ್ಮ ಸ್ಟೋರಿಯಲ್ಲೂ ಫೊಟೋ, ವಿಡಿಯೋ ಹಂಚಿಕೊಂಡಿದ್ದಾರೆ. ಮನೆ ಹೊರಗಿನಿಂದಲೂ ಸಿಕ್ಕಾಪಟ್ಟೆ ದೊಡ್ಡದಾಗಿದೆ. ಡ್ಯೂಪ್ಲೇಕ್ಸ್ ಅಥವಾ ತ್ರಿಬಲ್ ಫ್ಲೋರ್ ಮನೆ ಅದಾಗಿರಬಹುದು. ಹೊರಗಡೆಯಿಂದಾನೇ ಮನೆ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ವಿಶ್ ಕೂಡ ಮಾಡಿದ್ದಾರೆ.

More from Filmibeat

English summary
Colors kannada Rajarani show Anchor Anupama Gowda personal story. Here is the details about Anupama Gowda new home;
Read more about: anchor serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X