Raja-Rani: ಗೋವಿಂದ ರಾಜು - ವೈಲಾರಂತೆ ಬಂದ ಶಿವು-ದೀಕ್ಷಾ; ನಕ್ಕು ನಕ್ಕು ಸಾಕಾಯ್ತು... ನೀವೂ ಒಮ್ಮೆ ನೋಡಿ!
'ರಾಜಾ-ರಾಣಿ' ಶೋ ಕಲರ್ಸ್ ಕನ್ನಡದ ಸೂಪರ್ ಹಿಟ್ ಶೋ ಆಗಿತ್ತು. ಇದು ಕೇವಲ ಮನರಂಜನೆ ನೀಡಿದ್ದಷ್ಟೇ ಅಲ್ಲ. ಹಲವು ಪಾಠಗಳನ್ನು ಕಲಿಸಿತ್ತು. ಈ ಶೋ ಮೂಲಕ ಕೆಲ ದಂಪತಿಗಳು ಸಾಂಸಾರಿಕ ಬದುಕನ್ನು ಇನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಶುರು ಮಾಡಿದರು. ಗಂಡ ಹೆಂಡತಿಯ ಬಂಧ ಇಲ್ಲಿಂದ ಇನ್ನಷ್ಟು ಗಟ್ಟಿ ಮಾಡಿಕೊಂಡು ಹೋದವರು ಇದ್ದಾರೆ.
ಈ ಶೋಗೆ ಸಾಕಷ್ಟು ಡಿಮ್ಯಾಂಡ್ ಹುಟ್ಟಿಕೊಂಡಿತ್ತು. ಹೀಗಾಗಿ 'ರಾಜಾರಾಣಿ ರಿಲೋಡೆಡ್' ಕಾರ್ಯಕ್ರಮವನ್ನ ಮತ್ತೆ ಕಲರ್ಸ್ ಕನ್ನಡ ಶುರು ಮಾಡಿದೆ. ಈ ಬಾರಿ ಇನ್ನು ವಿಭಿನ್ನವಾಗಿಯೇ ಶೋ ಮೂಡಿ ಬರುತ್ತಿದೆ. ಅದರಲ್ಲೂ ಗೋವಿಂದ ರಾಜು ಹಾಗೂ ವೈಲಾ ಜೋಡಿ ತುಂಬಾನೇ ಫೇಮಸ್ ಆಗಿದೆ. ಈಗ ಡ್ಯೂಪ್ ನೋಡಿ ಖುಷಿಯಾಗಿದ್ದಾರೆ.

ಗೋವಿಂದರಾಜು-ವೈಲಾ ರೀತಿ ವೇಷ
ಮನರಂಜನೆಗಾಗಿ ಆಗಾಗ ಹೊಸದೇನಾದರೊಂದು ಮಾಡುತ್ತಿರುತ್ತಾರೆ ಕಲರ್ಸ್ ಕನ್ನಡ. ಈಗ 'ರಾಜಾ-ರಾಣಿ' ಶೋನಲ್ಲಿ ಗಣೇಶೋತ್ಸವದ ಜೊತೆಗೆ ಸ್ಪರ್ಧಿಗಳ ಪ್ರತಿರೂಪಿಗಳನ್ನ ಕರೆಸಿದ್ದಾರೆ. ಅದರಂತೆ ಅನುಪಮಾ ಗೌಡ ಬದಲಿಗೆ ದಿವ್ಯಾ ಅವರು ಆಂಕರಿಂಗ್ ಮಾಡಿದ್ದಾರೆ. ವೇದಿಕೆ ಮೇಲೆ ಒಳ್ಳೆ ಮನರಂಜನೆ ನೀಡುವುದಕ್ಕೆ ಗೋವಿಂದ ರಾಜು ಮತ್ತು ವೈಲಾ ಬಂದಿದ್ದಾರೆ. ಆದರೆ ಇವರು ಅಸಲಿ ಅಲ್ಲ ನಕಲಿ.
ಗೋವಿಂದ ರಾಜು ರೀತಿ ನಟಿಸಿದ ಶಿವು
ಗೋವಿಂದರಾಜು ಹಾಗೂ ವೈಲಾ ಇಷ್ಟು ದಿನ ನಡೆದುಕೊಂಡು ಬಂದಿದ್ದನ್ನು ಗಮನಿಸಿದ್ದ ಶಿವಕುಮಾರ್ ಸೇಮ್ ಟು ಸೇಮ್ ಗೋವಿಂದ ರಾಜು ಅವರಂತೆಯೇ ನಟಿಸಿದ್ದಾರೆ. ಇನ್ನು ವೈಲಾ ರೀತಿಯಲ್ಲಿ ದೀಕ್ಷಾ ಕಾಣಿಸಿಕೊಂಡಿದ್ದು, ಸೇಮ್ ಅವರಂತೆಯೇ ನಾಚಿ ನೀರಾಗಿದ್ದಾರೆ. ಗೋವಿಂದ ರಾಜು ಬಳಿ ಅವರು ಹೇಗೆ ಮಾತನಾಡುತ್ತಾರೆ, ಹೇಗೆ ಕೇಳುತ್ತಾರೆ ಎಂಬುದೆಲ್ಲವನ್ನು ರಿಕ್ರಿಯೇಟ್ ಮಾಡಿದ್ದಾರೆ. ಶಿವು ಹಾಗೂ ದೀಕ್ಷಾ ನಟನೆಗೆ ಕಮೆಂಟ್ ಬಾಕ್ಸ್ ನಲ್ಲಿ ಹಾರ್ಟ್ ಸಿಂಬಲ್ ಗಳೇ ಬಂದಿವೆ.

ಕರ್ನಾಟಕ ಜನತೆ ಬಗ್ಗೆ ಹೇಳಿದ ಶಿವು
'ರಾಜಾ-ರಾಣಿ ರಿಲೋಡೆಡ್' ಶೋನಲ್ಲಿ ಗೋವಿಂದರಾಜು ದಂಪತಿ ಕೂಡ ಮೊದಲಿನಿಂದ ತಮ್ಮ ಜೀವನ ಹೇಗಿತ್ತು..? ಯಾರೆಲ್ಲಾ ಕಷ್ಟದಲ್ಲಿ ದೂರ ಸರಿದರು..? ನಮ್ಮನ್ನ ಕೈಹಿಡಿದದ್ದು ಏನು..? ಹೀಗೆ ತಮ್ಮ ಜೀವನದ ಅನುಭವವನ್ನ ಹೇಳಿದ್ದರು. ಅದರಲ್ಲೂ ತಮಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರೋತ್ಸಾಹ ನೀಡಿದ ಕರ್ನಾಟಕದ ಜನತೆಯ ಬಗ್ಗೆಯೂ ಸಾಕಷ್ಟು ಬಾರಿ ನೆನೆದು ಧನ್ಯವಾದವನ್ನು ಅರ್ಪಿಸಿದ್ದಾರೆ. ವೇದಿಕೆ ಮೇಲೆ ಶಿವು ಕೂಡ ಆ ಡೈಲಾಗ್ ಅನ್ನು ಸಾಕಷ್ಟು ಬಾರಿ ಹೇಳಿದ್ದಾರೆ. ಕರ್ನಾಟಕ ಜನತೆಗೆ ಧನ್ಯವಾದ.. ಕರ್ನಾಟಕ ಜನತೆ ನಮ್ಮ ಕೈ ಬಿಡಲ್ಲ ಎಂದಿದ್ದಾರೆ.
ನಾಚಿ ನೀರಾದ ವೈಲಾ
ಯಾವಾಗ.. ಯಾರು.. ಹೇಗೆ ಫೇಮಸ್ ಆಗ್ತಾರೆ ಎಂಬುದು ಗೊತ್ತಾಗಲ್ಲ. ಯಾವ ವಿಚಾರ ಕೈ ಹಿಡಿಯುತ್ತೆ ಎಂಬುದನ್ನು ಅಂದಾಜಿಸಲು ಆಗುವುದಿಲ್ಲ. ಗೋವಿಂದ ರಾಜು ಮತ್ತು ವೈಲಾ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆದವರು. ಯಾಮಿನಿ ಯಾರಮ್ಮ ನೀನು ಯಾಮಿನಿ ಹಾಡಿಗೆ ಹೆಜ್ಜೆ ಹಾಕಿ ಫೇಮಸ್ ಆದವರು. ಆ ಹಾಡನ್ನ ಚಿತ್ರೀಕರಿಸಿದ ರೀತಿ ಕ್ರಿಯೇಟಿವ್ ಆಗಿತ್ತು. ಹೀಗಾಗಿ ರಾತ್ರೋ ರಾತ್ರಿ ಫೇಮಸ್ ಆದರು. ಈಗ ವೇದಿಕೆ ಮೇಲೆ ತಮ್ಮದೇ ಪ್ರತಿರೂಪದ ಆಕ್ಟರ್ ಗಳನ್ನು ಕಂಡು ಗೋವಿಂದ ರಾಜು ಖುಷಿ ಪಟ್ಟರೆ ವೈಲಾ ನಾಚಿ ನೀರಾಗಿದ್ದಾರೆ.


Click it and Unblock the Notifications











