Raja-Rani: ಲೋಕಿಗೆ ಹೆಂಡತಿ ಬಿಟ್ಟು ಹೋಗ್ತಾಳೆಂಬ ಭಯ; ವೇದಿಕೆಯಲ್ಲೇ ರಚನಾ ಮಾಡಿದ್ದೇನು?
ಹಾಸ್ಯ ಕಲಾವಿದ ಲೋಕೇಶ್ ಹಾಗೂ ನಟಿ ರಚನಾ ದಶರಥ ಅವರು ಈ ಬಾರಿಯ ರಾಜಾ-ರಾಣಿ ರಿಲೋಡೆಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಜೋಡಿ ನಕ್ಕು ನಲಿಸಿದ್ದು ಇದೆ, ಅವರ ಜೀವನದ ಕಹಿ ಘಟನೆಯಿಂದ ಕಣ್ಣೀರು ಹಾಕಿಸಿದ್ದು ಇದೆ. ಲೋಕೇಶ್ ಅವರಿಗೆ ಡ್ಯಾನ್ಸ್ ಬಾರದೇ ಇದ್ದರು, ಕಲಿತು ಸೈ ಎನಿಸಿಕೊಂಡಿದ್ದಾರೆ. ಫೈನಲೀ ಫಿನಾಲೆಗೂ ತಲುಪಿದ್ದಾರೆ.
ಕಂಪ್ಲೀಟ್ ಜರ್ನಿಯನ್ನು ನೋಡಿದ ರಚನಾಗೆ ಮಾತೇ ಬರದಂತೆ ನಿಂತು ಬಿಟ್ಟಿದ್ದಾರೆ. ಅಷ್ಟು ದಿನದ ಜರ್ನಿಯಲ್ಲಿ ಬದಲಾವಣೆಯನ್ನು ಕಂಡು ಖುಷಿ ಪಟ್ಟಿದ್ದಾರೆ. ರಾಜಾ-ರಾಣಿ ನಮ್ಮಿಬ್ಬರಿಗೂ ರೀ ಬರ್ತ್ ಸರಿ ಎಂದು ಲೋಕೇಶ್ ಹಾಗೂ ರಚನಾ ಇಬ್ಬರು ರಾಜಾರಾಣಿಗೆ ಧನ್ಯವಾದ ತಿಳಿಸಿದ್ದಾರೆ.

ಹಳೆಯ ದಿನಗಳನ್ನು ನೆನೆದ ಜೋಡಿ
ರಾಜಾ-ರಾಣಿ ರಿಲೋಡೆಡ್ ಶೋನಲ್ಲಿ ರಚನಾ ಹಾಗೂ ಲೋಕೇಶ್ ಜೋಡಿ ಫೈನಲ್ ತಲುಪಿದ್ದಾರೆ. ಈ ವೇಳೆ ಇಷ್ಟು ದಿನ ಅವರ ರಾಜಾ-ರಾಣಿ ಜರ್ನಿಯನ್ನು ವಿಟಿ ಮಾಡಿ ತೋರಿಸಿದ್ದಾರೆ. ಆ ವಿಟಿ ನೋಡಿದಾಗಲೇ ಅವರ ಕಾಮಿಡಿ, ಜೀವನದ ನೋವು, ನಲಿವು ಎಲ್ಲವೂ ಅನಾವರಣವಾಗಿತ್ತು. ಅಷ್ಟು ಜರ್ನಿಯನ್ನು ಕಂಡ ರಚನಾ ಅಕ್ಷರಶಃ ಮೌನಿಯಾಗಿ ನಿಂತು ಬಿಟ್ಟರು.
ಇವತ್ತು ಫೈನಲ್‌ಗೆ ಬಂದಿದ್ದೀವಿ
ಲೋಕಿ ಕೂಡ ಇಷ್ಟೊಳ್ಳೆ ಜರ್ನಿಯನ್ನು ಕಂಡು ನಮ್ಮಿಬ್ಬರಿಗೂ ರೀ ಬರ್ತ್ ಎಂದರು. 'ಒಂದು ಸಮಯದಲ್ಲಿ ರಚನಗಾಗಿ ಒಳ್ಳೆಯ ಅವಕಾಶ ಇದ್ರೆ ಹೇಳಿ ಅಂತ ಎಲ್ಲರ ಬಳಿ ಹೇಳಿದ್ದೆ. ಆಗ ಬಂದಿದ್ದೆ ರಾಜಾ-ರಾಣಿ ಅವಕಾಶ. ರಚನಾಗೆ ಹೇಳಿದ್ದೆ ಇಲ್ಲೆ ಅಕ್ಷಯಾ ಸ್ಟುಡಿಯೋದಲ್ಲಿ ಕರೀತಾ ಇದ್ದಾರೆ. ಹೋಗಿ ಬರೋಣ ಅಂತ ಕರೆದೆ. ಇಂದು ಫೈನಲ್ ತಲುಪಿದ್ದೇವೆ' ಎಂದಿದ್ದಾರೆ.
ನನ್ನ ಜೀವನಕ್ಕೆ ಬಂದಿದ್ದಕ್ಕೆ ಥ್ಯಾಂಕ್ಸ್
ಈ ವೇಳೆ ರಚನಾ ಬಗ್ಗೆ ಮಾತನಾಡಿರುವ ಲೋಕೇಶ್ 'ಎಲ್ಲರೂ ರೇಗಿಸ್ತಾ ಇದ್ರಿ 40-45 ಆಯ್ತು ಅಂತ. ಆಗ ನೀವೂ ಬಂದು ಕೈ ಹಿಡಿದ್ರಿ. ನಮ್ಮ ಅಪ್ಪ ಇದಕ್ಕೆ ತುಂಬಾನೇ ಖುಷಿ ಪಡುತ್ತಾರೆ. ಎರಡೂ-ಎರಡೂವರೆ ವರ್ಷ ಆಯ್ತು. ನನ್ನ ಜೀವನ ಬ್ಯೂಟಿಫುಲ್ ಮಾಡಿರೋದು ನೀನು' ಎಂದು ಹೆಂಡತಿಯನ್ನು ಹಾಡಿ ಹೊಗಳಿದರು.
ಕೈಮೇಲೆ ರಚನಾ ಟ್ಯಾಟೂ
ಲೋಕೇಶ್ ಬಗ್ಗೆ ಮನಸಾರೆ ಮಾತನಾಡಿರುವ ರಚನಾ,'ಒಂದು ಹುಡುಗಿಗೆ ಮದುವೆಯಾಗಿ, ಮಗು ಆದ್ಮೇಲೆ ಲೈಫ್ ಕಂಪ್ಲೀಟ್ ಅನ್ನಿಸೋದು. ನಾನು ಮದುವೆ ಆಗಬಾರದು ಅಂತಾನೇ ಇದ್ದೆ. ಆದರೆ ಮದುವೆಯಾದ ಮೇಲೆ ಲೈಫ್ ಇಷ್ಟೊಂದು ಬ್ಯೂಟಿಫುಲ್ ಆಗಿದೆ. ಆ ರೀತಿ ಮಾಡಿದ್ದೇ ನೀವೂ. ಥ್ಯಾಂಕ್ಯೂ ಸೋ ಮಚ್. ನೀವೂ ನನ್ನ ತುಂಬಾ ಪ್ರೀತಿಸ್ತೀರಾ. ಎಷ್ಟೋ ಸಲ ನಮ್ಮ ಆಲೋಚನೆಗಳು ಮ್ಯಾಚ್ ಆಗ್ತಾ ಇಲ್ಲ ಅಂತ ನಾನು ಹೇಳಿದ್ದೀನಿ. ಈಗ ಎಲ್ಲರ ಎದುರು ಒಂದು ನಿರ್ಧಾರ ತೆಗೆದುಕೊಳ್ತಾ ಇದ್ದೀನಿ. ರಚನಾ ಬಿಟ್ಟು ಹೋಗಿಬಿಡ್ತಾಳೆ ಎಂಬ ಭಯ ನಿಮ್ಮಲ್ಲಿದೆ. ನಾನಂತು ನಿಮ್ಮನ್ನ ಬಿಟ್ಟು ಹೋಗಲ್ಲ. ನೀವೂ ಬಿಟ್ಟು ಹೋದರೂ ನಿಮ್ಮ ಹೆಸರು ನನ್ನ ಜೊತೆಗೆ ಇರುತ್ತೆ. ಅದಕ್ಕೆ ಟ್ಯಾಟೂ ಹಾಕಿಸಿಕೊಳ್ತಾ ಇದ್ದೀನಿ' ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಎಲ್ಲರನ್ನು ಅಳಿಸಿದ ರಚನಾ!
ರಚನಾ ಒಂದು ಸೂಜಿ ಕಂಡರೇನೆ ಭಯ ಪಡುತ್ತಿದ್ದರು. ಆದರೆ ಇಂದು ಲೋಕಿ ನಂಬಿಕೆಗೋಸ್ಕರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಳ್ಳುವಾಗ ರಚನಾ ಪಟ್ಟ ನೋವು ಎಲ್ಲರಿಗೂ ಕಣ್ಣೀರು ತರಿಸಿದೆ. ಅದರಲ್ಲೂ ಲೋಕೇಶ್ ಕಣ್ಣೀರು ಹಾಕಿದ್ದಾರೆ.


Click it and Unblock the Notifications











