Ramachari: ತುಮಕೂರಲ್ಲಿ 'ರಾಮಾಚಾರಿ'ಗೆ ಲವ್ ಟ್ರೈನಿಂಗ್ ಕೊಟ್ಟ ಅಜ್ಜಿ!

By ಎಸ್ ಸುಮಂತ್

ಚಾರು-ಚಾರಿ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಚಾರು ಚಾರಿ ಇಬ್ಬರು ಜೊತೆಗಿದ್ದರೆ ನೋಡುವುದಕ್ಕೇನೆ ಚೆಂದ. ರಾಮಾಚಾರಿಯಿಂದ ಹೇಗಿದ್ದ ಚಾರು ಇನ್ನೇಗೋ ಬದಲಾಗಿ ಬಿಟ್ಟಳು. ಶ್ರೀಮಂತ ಮನೆಯ ಚಾರು ರಾಮಚಾರಿ ಮನೆಗೆ ಬಂದ ಮೇಲೆ ಸಾಂಪ್ರಾದಾಯಿಕ ಮಗಳಾಗಿ ಬದಲಾದಳು. ನಾರಾಯಣಾಚಾರ್ಯರಿಗೆ ತಕ್ಕ ಸೊಸೆ. ಮನೆಗೆ ಏನೇ ಸಮಸ್ಯೆಯಾದರೂ ಅದನ್ನು ಪರಿಹರಿಸುವುದಕ್ಕೆ ಚಾರು ಮುಂದೆ ನಿಲ್ಲುತ್ತಾಳೆ.

ರಾಮಾಚಾರಿಯ ವೀಕ್ಷಕರೆಲ್ಲ ಅದರಲ್ಲೂ ಮಹಿಳೆಯರು ಚಾರು ಬದಲಾವಣೆ ಕಂಡು ಖುಷಿ ಪಟ್ಟರು. ಮನೆಗೆ ಬಂದ ಸೊಸೆಯಂದಿರು ಈ ರೀತಿ ಬದಲಾದರೆ, ಮನೆಗೆ ಹೊಂದಿಕೊಂಡು ಬಿಟ್ಟರೆ ಮನೆಯೇ ಮಂತ್ರಾಲಯ ಎಂಬ ಮಾತು ಸತ್ಯವಾಗಿ ಬಿಡುತ್ತದೆ ಎಂದು ಖುಷಿ‌ಪಟ್ಟರು.

Colors kannada Ramachari Serial sante promo

ಇದೀಗ ರಾಮಾಚಾರಿಯ ನಿರ್ದೇಶಕರು ಮಾಡದೆ ಇರುವ ಕೆಲಸವನ್ನು ತುಮಕೂರಿನ ಅಜ್ಜಿ ಮಾಡಿದ್ದಾರೆ. ಚಾರು ಆಸೆಯನ್ನ ಈಡೇರಿಸಿದ್ದಾರೆ.

ತುಮಕೂರಿನಲ್ಲಿ ಸೀರಿಯಲ್ ಸಂತೆ

ಜನರ ಮನಸ್ಸನ್ನು ಗೆದ್ದ ಧಾರಾವಾಹಿಗಳು ಆಗಾಗ ಬಿಡುವು ಮಾಡಿಕೊಂಡು ಜನರ ಬಳಿಗೆ ಹೋಗ್ತಾರೆ, ಸೀರಿಯಲ್ ಹೇಗೆ ಹೋಗ್ತಾ ಇದೆ ಎಂಬ ಬಗ್ಗೆ ಮನಬಿಚ್ವಿ ಮಾತಾಡ್ತಾರೆ. ರಾಮಾಚಾರಿ ಕೂಡ ಜನರ ಮನಸ್ಸನ್ನು ಗೆದ್ದಿರುವ ಧಾರಾವಾಹಿ. ಕಳೆದ ಕೆಲವು ದಿನಗಳ ಹಿಂದಷ್ಟೇ ಸೀರಿಯಲ್ ಸಂತೆ ಸಂಭ್ರಮದಲ್ಲಿ ಭಾಗಿಯಾಗಿತ್ತು. ತುಮಕೂರಿನಲ್ಲಿ ಈ ಸಂತೆಯನ್ನ ಮಾಡಲಾಗಿತ್ತು. ಅಲ್ಲಿನ ಜನರ ಜೊತೆ ಇಡೀ ರಾಮಾಚಾರಿ ಕುಟುಂಬ ಎಂಜಾಯ್ ಮಾಡಿದೆ.

ಚಾರು-ಚಾರಿಗೆ ಅಜ್ಜಿ ಲವ್ ಕ್ಲಾಸ್

ರಾಮಾಚಾರಿಯ ಹೀರೋ-ಹೀರೋಯಿನ್ ವೇದಿಕೆ ಮೇಲೆ ಇದ್ದಾಗಲೇ ಅಜ್ಜಿಯೊಬ್ಬರು ಎಂಟ್ರಿಕೊಟ್ಟರು. ಅಜ್ಜಿಯನ್ನ ತೃಪ್ತಿ ಪಡಿಸುವುದಕ್ಕೆ ಚಾರು-ಚಾರಿಯಿಂದ ಸಾಧ್ಯವೇ ಆಗಲಿಲ್ಲ. ಆ ಇಬ್ಬರ ಬಗ್ಗೆ ಅಜ್ಜಿಗಿದ್ದ ನಿರೀಕ್ಷೆ ಜೋರಾಗಿತ್ತು. ವೇದಿಕೆಯ ಮೇಲೆ ಬಂದ ಅಜ್ಜಿ ಎಲ್ಲರನ್ನ ಮನರಂಜಿಸಿದರು. ಜೊತೆಗೆ ಅಜ್ಜಿಯಿಂದ ವೇದಿಕೆ ಮೇಲೆ ಪ್ರೇಮಲೋಕವೇ ಸೃಷ್ಟಿ ಮಾಡಿದರು. ರಾಮಚಾರಿ ಕಾಲ ಮೇಲೆ ಚಾರು ಎರಡು ಕಾಲು ಇಡಬೇಕು. ನಿಧಾನಕ್ಕೆ ತಬ್ಬಿ ನಡೆಯಬೇಕು. ಇದು ದಂಪತಿಗೆ ಅಜ್ಜಿ ಕೊಟ್ಟ ಟಾಸ್ಕ್.

ಅಜ್ಜಿ ಮಾತಿಗೆ ನಗುವೋ ನಗು

ಅಜ್ಜಿಯ ಮಾತು, ಅವರು ಮಾಡುವ ಕಾಮಿಡಿ ಎಲ್ಲವೂ ಸಖತ್ ಮನರಂಜನೆ ನೀಡಿತ್ತು. ಅಷ್ಟೇ ಅಲ್ಲ ಪ್ರೇಮ ಲೋಕದ ಜೊತೆಗೆ ರೋಮ್ಯಾಂಟಿಕ್ ಮೂಡ್ ಕೂಡ ಕ್ರಿಯೇಟ್ ಮಾಡಿದ್ದರು. ರಾಮಾಚಾರಿಗೆ ಒಂದೊಂದೆ ಸ್ಟೆಪ್ ಸವಾಲು ನೀಡಲಾಗಿತ್ತು. ಕಾಲ ಮೇಲೆ ಕಾಲಿಟ್ಟು ನಡೆದದ್ದು ಅಜ್ಜಿಗೆ ತೃಪ್ತಿ ಸಿಗಲಿಲ್ಲ. ಮತ್ತೊಂದು ಚಾಲೆಂಜ್ ನೀಡಿದರು. ಚಾರಿಯನ್ನು ಎತ್ತಿಕೊಳ್ಳಬೇಕು. ಎತ್ತಿಕೊಂಡೆ ಹಾಡನ್ನು ಹಾಡಿದರು. ನೋಡುಗರನ್ನು ರೊಮ್ಯಾಂಟಿಕ್ ಮೂಡ್ ಕರೆದುಕೊಂಡು ಹೋಗಿತ್ತು ಟೀಂ.

ವೇದಿಕೆ ಮೇಲೆಯೇ ಕಿಸ್ಸಿಂಗ್

ಸೀರಿಯಲ್‌ನಲ್ಲಿ ರಾಮಾಚಾರಿಗೆ ಅಂಜಿಕೆ ಜಾಸ್ತಿ. ಚಾರು ಫುಲ್ ರೊಮ್ಯಾಂಟಿಕ್ ಆಗಿರುತ್ತಾಳೆ. ರೊಮ್ಯಾನ್ಸ್ ಮಾಡುವುದಕ್ಕೆ ಹೋದಾಗಲೂ ರಾಮಾಚಾರಿ ಓಡಿ ಹೋಗ್ತಾನೆ. ಮನೆಯಲ್ಲಿ ಎಲ್ಲರು ಇದ್ದಾರೆ ಮೇಡಂ ಅಂತ. ಇಬ್ಬರ ನಡುವೆ ಇನ್ನು ಸಂಸಾರವೇ ಶುರುವಾಗಿಲ್ಲ. ಇದನ್ನೆಲ್ಲ ಅರಿತಿದ್ದ ಅಜ್ಜಿ ಸುಮ್ಮನೆ ಇರುತ್ತಾರಾ..? ವೇದಿಕೆ ಮೇಲೆಯೇ ಚಾರು ಆಸೆಯನ್ನ ಈಡೇರಿಸಿದ್ದಾರೆ. ರಾಮಾಚಾರಿಗೆ ಇದೆಲ್ಲ ಬೇಡ ನಂಗೆ ತೃಪ್ತಿಯಾಗಬೇಕು ಅಂದ್ರೆ ಕಿಸ್ ಕೊಡಬೇಕು ಎಂದಿದ್ದಾರೆ. ವೇದಿಕೆ ಮುಂಭಾಗದಲ್ಲಿದ್ದವರೆಲ್ಲ ಕಣ್ಣು ಮುಚ್ಚಿ ಅಂತ ಹೇಳಿ ಚಾರು ಹಾಗೂ ಚಾರಿಗೆ ಕಿಸ್ ಕೊಡಲು ಹೇಳಿದ್ದಾರೆ. ವೀಕ್ಷಕರೆಲ್ಲ ಫುಲ್ ಖುಷಿಯಾಗಿದ್ದಾರೆ. ಡೈರೆಕ್ಟರ್ ಕಡೆಯಿಂದ ಆಗದ ಕೆಲಸ ಅಜ್ಜಿಯಿಂದ ಆಯ್ತು ಎಂದು ಖುಷಿ ಪಟ್ಟಿದ್ದಾರೆ.

More from Filmibeat

English summary
Here is the details about Tumkur Lady funny romantic to Ramachari couple;
Read more about: tv sumanth serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X