Ramachari: ಎಲ್ಲರೂ ಇರುವ ಕಡೆ ಸಿಕ್ಕಿಹಾಕಿಕೊಳ್ಳುತ್ತಾರಾ ರಾಮಾಚಾರಿ - ಚಾರು?
ರಾಮಾಚಾರಿ ತಾನು ಮದುವೆಯಾದ ದಿನದಿಂದಲೂ ಸಹ ಒಂದಲ್ಲ ಒಂದು ಕಾರಣಕ್ಕೆ ಮನೆಯವರಿಗೆ ಸಿಕ್ಕಿ ಬಿದ್ದು ನಿನ್ನ ಮದುವೆ ಆಗಿದ್ಯಾ ಎಂದು ಕೇಳುವ ಮಟ್ಟಕ್ಕೆ ತಲುಪಿದ್ದಾನೆ. ಒಂದಾದ ಮೇಲೆ ಒಂದು ಸಮಜಾಯಿಸಿಯನ್ನ ನೀಡಿ ನಾನು ಮದುವೆಯಾಗಿಲ್ಲ ಎಂದು ಹೇಳುವ ಮೂಲಕ ಮನೆಯವರ ನಂಬಿಕೆಗೆ ಅರ್ಹನು ಸಹ ಹಾಗಿದ್ದಾನೆ. ಈ ನಡುವೆ ರಾಮಾಚಾರಿ ಹಾಗೂ ಚಾರು ಬೆಟ್ಟದ ಮಂಜಪ್ಪನ ದೇವಸ್ಥಾನಕ್ಕೆ ಬಂದಿದ್ದಾರೆ.
ರಾಮಾಚಾರಿ ಫ್ಯಾಮಿಲಿ ಸಹ ಬೆಟ್ಟದ ಮಂಜಪ್ಪನ ದೇವಸ್ಥಾನಕ್ಕೆ ಬಂದಿದ್ದು ಪ್ರಾಕಾರ ಸೇವೆಯನ್ನು ಮಾಡುತ್ತಿದ್ದಾರೆ. ಆದರೆ ರಾಮಾಚಾರಿಗೆ ತನ್ನ ಫ್ಯಾಮಿಲಿ ಬೆಟ್ಟದ ಮಂಜಪ್ಪನ ದೇವಸ್ಥಾನಕ್ಕೆ ಬಂದಿದೆ ಎಂದು ಗೊತ್ತಿಲ್ಲ. ಇದರಿಂದಾಗಿ ಚಾರುವನ್ನು ಬೆಟ್ಟದ ಮೇಲಕ್ಕೆ ಹೊತ್ತುಕೊಂಡು ಹೋಗುತ್ತಿದ್ದಾನೆ. ಇನ್ನೇನು ಶ್ರುತಿಗೆ ಸಿಕ್ಕಿ ಬೀಳಬೇಕು ಎನ್ನು ಅಷ್ಟರಲ್ಲಿ ಶ್ರುತಿ ಪಕ್ಕದಲ್ಲಿ ಇದ್ದಂತಹ ಮಂಟಪದ ಒಳಗಿಂದ ಹೋಗಿದ್ದಾಳೆ.

ಇದ್ಯಾವುದರ ಚಿಂತೆಯು ಇಲ್ಲ ರಾಮಾಚಾರಿ ತನ್ನನ್ನು ಹೊತ್ತುಕೊಂಡು ದೇವಸ್ಥಾನಕ್ಕೆ ಹೋಗುತ್ತಿದ್ದಾನೆ ಎಂಬುದೇ ಚಾರುಗೆ ಇರುವ ಅತಿ ದೊಡ್ಡ ಸಂತಸವಾಗಿದೆ. ಖುಷಿ ಖುಷಿಯಿಂದ ರಾಮಾಚಾರಿ ಯ ಜೊತೆಯಲ್ಲಿ ಮಾತಾಡಿಕೊಂಡು ಮೆಟ್ಟಿಲನ್ನು ಹತ್ತುತ್ತಿದ್ದಾರೆ. ರಾಮಾಚಾರಿ ಮಾತ್ರ ಸುತ್ತಮುತ್ತ ಕಣ್ಣಾಯಿಸಿ ಯಾರಾದರೂ ಇದ್ದಾರಾ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾನೆ.
ವಿಕಾಸ್ ಬಾನೇರಿ ಚಾರುಗೆ ಫೋನ್ ಮಾಡಿ ನಾನು ಬೆಟ್ಟದ ಮಂಜಪ್ಪನ ದೇವಸ್ಥಾನಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾನೆ ಆದರೆ ಚಾರು ಮಾತ್ರ ನಾನು ಫಿಲಂ ನೋಡಲು ಬಂದಿದ್ದೇನೆ ಎಂದು ಹೇಳಿದ್ದಾಳೆ ನೀನು ಯಾಕೆ ನಾನು ಅಷ್ಟು ಹೇಳಿದರು ಹೀಗೆ ಮಾಡಿದ್ದೀಯಾ ಎಂದು ಚಾರು ಕೇಳಿದ್ದಾಳೆ. ಮುಂದಕ್ಕೆ ಏನು ಮಾತನಾಡದೆ ಫೋನನ್ನು ಕಟ್ ಮಾಡಿದ್ದಾಳೆ.
ಆದರೆ ವಿಕಾಸ್ ಬೆಟ್ಟದ ಮಂಜಪ್ಪನ ದೇವಸ್ಥಾನದಲ್ಲಿ ಕಂಡ ಶ್ರುತಿಯನ್ನು ಹುಡುಕಿಕೊಂಡು ಹೊರಟಿದ್ದಾನೆ ಇದ್ಯಾವುದು ಸಹ ರಾಮಾಚಾರಿ ಚಾರುಗೆ ಗೊತ್ತಿಲ್ಲ. ಅವರಿಗಿಂತ ಮುಂದೆ ವಿಕಾಸ್ ಇದ್ದಾಗ ಅದನ್ನು ನೋಡಿದ ಚಾರು ರಾಮಾಚಾರಿಗೆ ಹೇಳಿದ್ದಾಳೆ. ರಾಮಾಚಾರಿ ಅವರು ನಮ್ಮನ್ನು ನೋಡದಂತೆ ದೇವರೇ ಅನುಗ್ರಹ ಕರುಣಿಸಬೇಕು ಎಂದು ಅಂದುಕೊಂಡಿದ್ದಾರೆ ಅಷ್ಟೇರಲ್ಲಿ ವಿಕಾಸ್ ಮುಂದೆ ಮೆಟ್ಟಿಲುಗಳನ್ನು ಹತ್ತುಕೊಂಡು ಹೋಗಿದ್ದಾನೆ.

ಶೃತಿ ಮೆಟ್ಟಿಲನ್ನು ಹತ್ತುವ ವೇಳೆ ವಿಕಾಸ್ ಗೆ ಡಿಕ್ಕಿಯನ್ನು ಹೊಡೆದಿದ್ದಳು. ಇದನ್ನೇ ಮನಗೊಂಡ ವಿಕಾಸ್ ಹೇಗಾದರೂ ಮಾಡಿ ಶ್ರುತಿಯನ್ನ ಪಟಾಯಿಸಿ ಇಂದು ಟೈಂಪಾಸ್ ಮಾಡಬೇಕು ಎಂದುಕೊಂಡಿದ್ದನು. ಇನ್ನು ಶ್ರುತಿಯನ್ನು ಕೊಂಡು ಸಹ ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತಿ ಶೃತಿ ಇರುವ ಜಾಗಕ್ಕೆ ಬಂದಿದ್ದಾನೆ.
ಶ್ರುತಿ ಉಲ್ಟಾ ಪ್ರದಕ್ಷಿಣೆ ಮಾಡುತ್ತಿದ್ದೀರಾ ಎಂದು ಹೇಳಿದ್ದಾಳೆ ಇದನ್ನೇ ಬಂಡವಾಳನ್ನಾಗಿ ಮಾಡಿಕೊಂಡ ಶ್ರುತಿಯನ್ನ ಕೆಣಕಿದ್ದಾನೆ. ಶೃತಿ ಇದು ದೇವಸ್ಥಾನ ಈ ರೀತಿಯಲ್ಲ ಮಾತನಾಡಬಹುದು ನಿಮ್ಮಂತ ಪವಿತ್ರರು ಯಾಕೆ ದೇವಸ್ಥಾನಕ್ಕೆ ಬರುತ್ತಾರೋ ಎಂದು ಅಂದಿದ್ದಾಳೆ. ಇದಕ್ಕೆ ಹೊರಗಡೆ ಹೋಗಿ ಕಷ್ಟ ಸುಖ ಮಾತನಾಡೋಣ ಬಾ ಎಂದು ವಿಕಾಸ್ ಅಂದಿದ್ದಾನೆ. ಇದಕ್ಕೆ ಶೃತಿ ವಿಕಾಸ್ ಕಪಾಳಕ್ಕೆ ಹೊಡೆದು ಬುದ್ಧಿಯನ್ನು ಹೇಳಿ ಅಲ್ಲಿಂದ ಹೋಗಿದ್ದಾಳೆ.
ರಾಮಾಚಾರಿ ಓರ್ವ ವ್ಯಕ್ತಿಯ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ ಆದರೆ ಅದು ರಾಮಾಚಾರಿಗೆ ಗೊತ್ತಿಲ್ಲ
ರಾಮಾಚಾರಿಯನ್ನು ಗಮನಿಸಿದ ವ್ಯಕ್ತಿ ಮೆಟ್ಟಿಲುಗಳನ್ನು ಹತ್ತಿಕೊಂಡು ನಾರಾಯಣ ಆಚಾರ್ಯರು ಬಂದಿದ್ದಾರೆ ಎಂದು ಅವರ ಬಳಿ ಹೋಗುತ್ತಿದ್ದಾನೆ. ನಾರಾಯಣ ಆಚಾರ್ಯರು ಪ್ರಾಕಾರದ ಸೇವೆಯನ್ನ ಮುಗಿಸಿದ್ದಾರೆ. ಈಗ ಏನಿದ್ದರೂ ಸಿಕ್ಕಿ ಬೀಳುವ ಸರದಿ ರಾಮಾಚಾರಿ ಹಾಗೂ ಚಾರವಿನದ್ದಾಗಿದೆ.


Click it and Unblock the Notifications











