Ramachari: ಸಿಕ್ಕಿಬಿದ್ದ ಕೋದಂಡ; ರಾಮಾಚಾರಿ-ಚಾರು ಸೇಫ್
ರಾಮಾಚಾರಿ ಹಾಗೂ ಚಾರು ಇಬ್ಬರು ಬೆಟ್ಟದ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುತ್ತಿದ್ದಾರೆ. ಈ ವೇಳೆ ಚಾರು ಮಾತ್ರ ಖುಷಿ ಖುಷಿಯಿಂದ ರಾಮಾಚಾರಿ ಜೊತೆಗೆ ಕಾಲವನ್ನು ಕಳೆಯುತ್ತಿದ್ದಾಳೆ ರಾಮಾಚಾರಿಗೆ ಮಾತ್ರ ನಮ್ಮಿಬ್ಬರನ್ನು ಯಾರಾದರೂ ನೋಡಿಬಿಟ್ಟರೆ ಎಂಬ ಟೆನ್ಶನ್ ಕಾಡುತ್ತಿದೆ.
ನಾರಾಯಣ ಆಚಾರ್ಯರ ಬಳಿ ಹೋಗಿ ನಿಮ್ಮ ಮಗ ರಾಮಚಾರಿ ದೇವರ ಸೇವೆ ಮಾಡುತ್ತಿದ್ದಾನೆ ಎಂದು ಹೇಳಿದ್ದಾನೆ ಇದಕ್ಕೆ ನಾರಾಯಣ ಆಚಾರ್ಯರು ನನ್ನ ಮಗನ ಬಂದಿಲ್ಲವಲ್ಲ ಎಂದು ಕೇಳಿದ್ದಾರೆ ಇದಕ್ಕೆ ಆ ವ್ಯಕ್ತಿ ಮಗನ ಮದುವೆಗೆ ಕರೆದಿದ್ದರೆ ನಾವು ಸಹ ಬರುತ್ತಿದೆ ಎಂದು ಹೇಳಿ ಅಲ್ಲಿಂದ ಹೋಗಿದ್ದಾನೆ.

ನಾರಾಯಣ ಆಚಾರ್ಯರು ಮೆಟ್ಟಿಲುಗಳನ್ನು ಒಂದೇ ಉಸಿರಿಗೆ ತಿಳಿದುಕೊಂಡು ಬರುತ್ತಿದ್ದಾರೆ ಈ ಕಡೆ ಮುರಾರಿ ಸಾನ್ವಿಗೆ ಫೋನ್ ಮಾಡಿ ರಾಮಾಚಾರಿ ಹಾಗೂ ಚಾರು ಆಫೀಸಿನಲ್ಲಿ ಇರುವ ಬಗ್ಗೆ ಕೇಳಿದ್ದಾನೆ ಅಲ್ಲಿ ಇಲ್ಲ ಎಂದ ಮೇಲೆ ಓಡೋಡಿ ರಾಮಾಚಾರಿ ಹಾಗೂ ಚಾರು ಬಳಿಗೆ ಬಂದು ಅವರಿಬ್ಬರನ್ನು ಒಂದು ಕಡೆ ಕರೆದುಕೊಂಡು ಹೋಗಿದ್ದಾನೆ.
ಓಡೋಡಿ ಬಂದಂತಹ ನಾರಾಯಣ ಆಚಾರ್ಯರಿಗೆ ಅವರ ಹಿರಿಯ ಮಗ ಕೋದಂಡ ಒಂದು ದೊಡ್ಡ ಶಾಕ್‌ನ್ನು ನೀಡಿದ್ದಾನೆ. ಅಪರ್ಣ ಸತ್ತು ಹೋದ ಮೇಲೆ ಇಂದು ಕೋದಂಡ ಎರಡನೇ ಮದುವೆಯನ್ನ ಮಾಡಿಕೊಂಡು ಆ ಹುಡುಗಿಯನ್ನು ಹೊತ್ತುಕೊಂಡು ದೇವರ ಸೇವೆಯನ್ನ ಮಾಡಲು ಬಂದಿದ್ದಾನೆ.
ಮನೆಯವರೆಲ್ಲರೂ ಸಹ ಕೋದಂಡನನ್ನು ಈ ಹುಡುಗಿ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೋದಂಡ ಮನೆಗೆ ಹೋಗಿ ಮಾತಾಡೋಣ ನಾನು ದೇವರ ಸೇವೆ ಮಾಡಬೇಕು ಜಾಗ ಬಿಡಿ ಎಂದು ಅಲ್ಲಿಂದ ಹುಡುಗಿಯನ್ನು ಹೊತ್ತುಕೊಂಡು ದೇವಸ್ಥಾನದ ಬಳಿಗೆ ಹೋಗಿದ್ದಾನೆ.
ರಾಮಾಚಾರಿ ಹಾಗೂ ಚಾರು ಸಿಕ್ಕಿ ಬೀಳಬೇಕಿತ್ತು ಆದರೆ ಅದೃಷ್ಟವಶಾತ್ ಕೋದಂಡನಿಂದ ಇಬ್ಬರೂ ಸಹ ಪಾರಾಗಿದ್ದಾರೆ ಅವರೇನಾದರೂ ಸಿಕ್ಕಿ ಬಿದ್ದಿದ್ದರೆ ನಾರಾಯಣ ಆಚಾರ್ಯರ ಮನೆಯಲ್ಲಿ ದೊಡ್ಡ ಯುದ್ಧವೇ ನಡೆದು ಹೋಗಿ ನಾರಾಯಣ ಆಚಾರ್ಯರಿಗೆ ಬಿದ್ದ ಕನಸು ನಿಜವಾಗಿ ರಾಮಾಚಾರಿ ವಚನ ಭ್ರಷ್ಟನಾದ ಎಂದು ಪಟ್ಟವನ್ನು ಕಟ್ಟಿಕೊಂಡು ಮನೆಯವರ ಕೋಪಕ್ಕೆ ಗುರಿಯಾಗಬೇಕಿತ್ತು.
ಚಾರುವನ್ನು ಕ್ಯಾಬ್ ಮಾಡಿಕೊಂಡು ಮನೆಗೆ ಹೋಗುವಂತೆ ರಾಮಾಚಾರಿ ತಿಳಿಸಿದ್ದಾನೆ. ಇದೇ ವೇಳೆ ನಾವಿಬ್ಬರು ನಮಸ್ಕಾರ ಹಾಕಲಿಲ್ಲ ಎಂದು ಚಾರು ರಾಮಾಚಾರಿಗೆ ಕೇಳಿದ್ದಾಳೆ. ದೂರದಿಂದಲೇ ದೇವರಿಗೆ ನಮಸ್ಕಾರ ಮಾಡೋಣ ಎಂದು ರಾಮಾಚಾರಿ ಹೇಳಿದ್ದಾನೆ ಇಬ್ಬರೂ ಸಹ ನಮಸ್ಕಾರವನ್ನು ಮಾಡಿದ್ದಾರೆ.
ನಂತರ ರಾಮಾಚಾರಿಯನ್ನು ಕರೆದು ಕುಂಕುಮವನ್ನು ಇಡಲಿಲ್ಲ ಎಂದು ಕೇಳಿಕೊಂಡಿದ್ದಾಳೆ. ಕೈನಲ್ಲಿ ಕುಂಕುಮವನ್ನು ತಂದು ತನ್ನ ಹಣೆಗೆ ಇಳಿಸಿ ಕೊಂಡು ಖುಷಿಪಟ್ಟಿದ್ದಾಳೆ. ಇದೇ ಸಂದರ್ಭದಲ್ಲಿ ರಾಮಾಚಾರಿ ದೇವರಾ ಮೊರೆಯನ್ನ ಹೋಗಿದ್ದಾನೆ ಗೊತ್ತು ಗೊತ್ತಿಲ್ಲದೆಯೋ ಈ ರೀತಿಯ ಸಂದರ್ಭ ಎದುರಾಗಿದೆ ಅದಕ್ಕೆ ಕೆಲವು ಸಹ ನೀನೇ ಕಾರಣ ನಮ್ಮ ಮನೆಯಲ್ಲಿ ಆಗಿರುವ ಎಲ್ಲಾ ಗೊಂದಲವನ್ನು ಸರಿಪಡಿಸು ತಂದೆ ಎಂದು ದೇವರ ಬಳಿ ಬೇಡಿಕೊಂಡಿದ್ದಾನೆ.
ನಾರಾಯಣ ಆಚಾರ್ಯರು ಪ್ರಕಾರ ಸೇವೆಯನ್ನು ಖುಷಿಯಿಂದಲೇ ಮುಗಿಸಿದ್ದರು. ಆದರೆ ಕೋದಂಡ ಮರು ಮದುವೆ ಆಗಿರುವುದನ್ನು ಕೇಳಿದ ಕೂಡಲೇ ನಾರಾಯಣ ಆಚಾರ್ಯರ ಕೋಪ ನೆತ್ತಿಗೆ ಏರಿದೆ ಒಂದು ಸಮನೆ ಮೆಟ್ಟಿಲುಗಳನ್ನು ಹೇರಿಕೊಂಡು ಬಂದು ಮನೆಗೆ ಹೋಗೋಣ ಎಂದು ಕುಟುಂಬಸ್ಥರಿಗೆ ಹೇಳಿದ್ದಾರೆ ಅಬ್ಬರವನ್ನು ಕಂಡ ಮನೆಯವರೆಲ್ಲರೂ ಕಕ್ಕಾಬಿಕ್ಕಿಯಾಗಿ ಕಾರನ್ನು ಹತ್ತಿ ಮನೆ ಕಡೆ ಹೊರಟಿದ್ದಾರೆ.


Click it and Unblock the Notifications











