Ramachari: ಅಣ್ಣನ ಸ್ಥಾನದಲ್ಲಿ ತನ್ನ ನೆನೆದ ರಾಮಾಚಾರಿ
ಮದುವೆಯನ್ನ ಮಾಡಿಕೊಂಡು ಬಂದ ಕೋದಂಡ ಮನೆಯ ಮುಂಭಾಗದ ಬಳಿ ನಿಂತಿದ್ದಾನೆ. ಇದೆನ್ನೆಲ್ಲವನ್ನು ಜಾನಕಿ ಪ್ರಶ್ನೆಯನ್ನ ಮಾಡುತ್ತಿದ್ದಾಳೆ. ರಾಮಾಚಾರಿ ಸಹ ತಾನು ಚಾರುವನ್ನು ಮದುವೆ ಮಾಡಿಕೊಂಡಿರುವ ಬಗ್ಗೆ ನೆನಪಿಸಿಕೊಂಡು ಭಯಭೀತನಾಗಿದ್ದಾನೆ. ರಾಮಾಚಾರಿಯ ಪಕ್ಕದಲ್ಲಿರುವ ಮುರಾರಿ ರಾಮಾಚಾರಿ ನಿನಗೂ ಸಹ ಇದೇ ಗತಿ ಬರುತ್ತದೆ ಎಂದು ಹೇಳಿದ್ದಾನೆ.
ಈ ಕಡೆ ನಾರಾಯಣ ಆಚಾರ್ಯರ ಕುಟುಂಬ ಮನೆಗೆ ಬಂದಿರುವುದನ್ನ ನೋಡಿ ಎಲ್ಲರೂ ಕೋಪಗೊಂಡಿದ್ದಾರೆ ಮನೆಗೆ ಯಾಕೆ ಬಂದೆ ಎಂದು ಕೇಳಿದ್ದಾರೆ. ನನ್ನ ಮನೆಗೆ ನಾನು ಬಂದಿದ್ದೇನೆ ಎಂದು ಕೋದಂಡ ಹೇಳಿದ್ದಾನೆ ಇದು ನಿನ್ನ ಮನೆಯಲ್ಲ ನನ್ನ ಪಾಲಿಗೆ ನೀನು ಸತ್ತು ಹೋದೆ ಎಂದು ಜಾನಕಿ ಕೋದಂಡನಿಗೆ ಬೈಯುತ್ತಿದ್ದಾರೆ.

ಜಾನಕಿ ಕೋದಂಡನಿಗೆ ಬೈಯುತ್ತಿದ್ದರೆ ರಾಮಾಚಾರಿ ಬೆಟ್ಟದ ಮೇಲೆ ನಿಂತುಕೊಂಡು ಚಾರುಗೆ ಪ್ರಕೃತಿಯ ಸಾಕ್ಷಿಯಾಗಿ ನಾನು ನಿಮಗೆ ತಾಳಿ ಕಟ್ಟುತ್ತಿದ್ದೇನೆ ಇನ್ನು ಮುಂದೆ ನಿಮ್ಮ ಸಂಪೂರ್ಣ ಜವಾಬ್ದಾರಿ ನನ್ನದೇ ಎಂಬ ಮಾತನ್ನು ನೆನಪಿಸಿಕೊಳ್ಳುತ್ತಿದ್ದಾನೆ. ಮನೆಯವರಿಗೆ ಇದು ಗೊತ್ತಾದರೆ ಏನು ಎಂಬ ರೀತಿಯಲ್ಲಿ ಯೋಚನೆ ಮಾಡುತ್ತಿದ್ದಾನೆ.
ಕೋದಂಡ ಮನೆಯಲ್ಲಿ ಯಾರಿಗೂ ಹೇಳದೆ ಮದುವೆ ಯಾಗಿರುವುದು ನಾರಾಯಣ ಆಚಾರ್ಯರಿಗೆ ದೊಡ್ಡ ತಲೆ ನೋವಾಗಿದೆ. ಪಕ್ಕದ ಊರಿನವರಾದರೂ ಸಹ ಮದುವೆಯಾಗುತ್ತಿದ್ದೇವೆ ಆಶೀರ್ವಾದ ಮಾಡಿ ಎನ್ನುತ್ತಾರೆ ಆದರೆ ಮನೆಯ ಮಗ ಮಾತ್ರ ಈ ರೀತಿ ಮಾಡಿದ್ದು ನಮ್ಮ ಮರ್ಯಾದೆಯನ್ನು ಹಾಳು ಮಾಡುವ ಕೆಲಸವಾಗಿದೆ ಎಂದು ಜಾನಕಿ ಕೋದಂಡನಿಗೆ ಹೇಳುತ್ತಿದ್ದಾರೆ.
ಕೋದಂಡ ಸಹ ಜಾನಕಿ ಮಾತಿಗೆ ನನ್ನನ್ನು ನಾರಾಯಣ ಆಚಾರ್ಯರ ಮಗ ಕೋದಂಡ ಎಂದು ಗುರುತಿಸುತ್ತಾರೆ ಹಾಗಾಗಿ ನಾನು ಮನೆಗೆ ಬಂದಿದ್ದೇನೆ ಎಂದು ಹೇಳುತ್ತಿದ್ದಾನೆ. ಯಾವಾಗ ನೀನು ನಮಗೆ ತಿಳಿಸದೆ ಮದುವೆಯಾದೆಯೂ ಅಂದೆ ನೀನು ನಮ್ಮ ಪಾಲಿಗೆ ಸತ್ತು ಹೋದೆ ಎಂದು ಕೋದಂಡನಿಗೆ ಜಾನಕಿ ಹೇಳಿದ್ದಾರೆ. ಬಾಗಿಲಲ್ಲೇ ಕೋದಂಡ ಹಾಗೂ ಆತನ ಹೆಂಡತಿ ನಿಂತಿದ್ದಾರೆ.

ಸಾನ್ವಿ ಚಾರು ಅನ್ನು ಭೇಟಿಯಾಗಲು ಬಂದಿದ್ದಾಳೆ ಅಲ್ಲಿ ಏನೆಲ್ಲಾ ನಡೆಯಿತು ಎಂದು ತಿಳಿದುಕೊಳ್ಳುವ ಕುತೂಹಲ ಸಾನ್ವಿಗೆ ಇದೆ. ಸಾನ್ವಿಗೆ ಚಾರು ನಮ್ಮನ್ನು ನನ್ನ ಗಂಡನ ಅಣ್ಣ ಕೋದಂಡ ಪಾರು ಮಾಡಿದನು ಎಂದು ಹೇಳುತ್ತಿದ್ದಾಳೆ ಅದನ್ನು ಹೇಗೆ ಎಂದು ಸಾನ್ವಿ ಕೇಳಿದ್ದಾಳೆ. ಇದಕ್ಕೆ ನಮ್ಮನ್ನು ಇನ್ನೇನು ನಾರಾಯಣ ಆಚಾರ್ಯರು ನೋಡಬೇಕು ಎನ್ನುವಷ್ಟರಲ್ಲಿ ಮುರಾರಿ ಬಂದು ಮರೆ ಮಾಡಿದರು.
ಅಷ್ಟರಲ್ಲಿ ಮೆಟ್ಟಿಲುಗಳನ್ನು ಹೊತ್ತುಕೊಂಡು ಮುರಾರಿ ಅವರ ಹೆಂಡತಿಯನ್ನು ಹೊತ್ತುಕೊಂಡು ಬರುತ್ತಿದ್ದರು ಅವರ ಗಮನವೆಲ್ಲ ಕೋದಂಡನ ಮೇಲೆ ಹೋಯಿತು ನಾವಿಬ್ಬರು ಸೇಫ್ ಆದವು ಎಂದು ಸಾನ್ವಿಗೆ ದೇವಸ್ಥಾನದ ಬಳಿ ನಡೆದ ಎಲ್ಲಾ ಕಥೆಗಳನ್ನು ಹೇಳುತ್ತಿದ್ದಾಳೆ. ಈಗ ಮನೆಯಲ್ಲಿ ಏನು ಆಗುತ್ತಿದೆ ಅದೇ ಸಹ ನೀನು ಹಾಗೂ ರಾಮಾಚಾರಿ ಮನೆಗೆ ಹೋದಾಗಲೂ ನಡೆಯುವ ಸನ್ನಿವೇಶ ಎಂದು ಸಾನ್ವಿ ಚಾರುಗೆ ಎಚ್ಚರಿಕೆಯ ಗಂಟೆಯನ್ನು ನೀಡಿದ್ದಾಳೆ.
ಅಪ್ಪ ಅಮ್ಮನಿಗೆ ತಿಳಿಸದೇ ಈ ರೀತಿ ದೇವಸ್ಥಾನಕ್ಕೆ ಹೋದರೆ ಏನು ಸರಿಯಾಗಿದೆ ನಿನ್ನನ್ನು ನೀನು ಏನು ಅಂದುಕೊಂಡಿದ್ದೀಯಾ ಏನು ಸೇವೆಯಂತೆ ಕಾರ್ಯವಂತೆ ಎಂದು ಚಾರುಗೆ ಮಾನ್ಯತಾ ಹಾಗೂ ಜೈ ಶಂಕರ್ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಇದಕ್ಕೆ ಚಾರು ನಮ್ಮಿಬ್ಬರ ಮದುವೆಯಾದ ಬಗ್ಗೆ ತಿಳಿಯುತ್ತಾ ಎಂಬ ಟೆನ್ಶನ್ ನಲ್ಲಿ ಇದ್ದಾಳೆ.
ಮೊದಲು ಅವನಿಗೆ ಫೋನ್ ಮಾಡಿ ಕರಿ ತಪ್ಪು ಯಾರದ್ದು ಎಂದು ನಾವು ಕೇಳುತ್ತೇವೆ ಎಂದು ಚಾರುಗೆ ಜೈ ಶಂಕರ್ ಪ್ರಶ್ನೆಯನ್ನು ಮಾಡುತ್ತಿದ್ದರೆ ಸಾನ್ವಿಗೂ ಸಹ ಶಾಕ್ ಆಗಿದೆ. ನೀನು ಫೋನ್ ಮಾಡಲಿಲ್ಲ ಅಂದರೆ ಅವನ ಮನೆಗೆ ನಾವೇ ಹೋಗಬೇಕಾಗುತ್ತದೆ ಎಂದು ಮಾನ್ಯತಾ ಚಾರುಗೆ ಹೇಳಿದ್ದಕ್ಕೆ ಚಾರು ತುಂಬಾ ಶಾಕ್ ನಲ್ಲಿ ಇದ್ದಾಳೆ.


Click it and Unblock the Notifications











