Ramachari: ತಂದೆ ನಾರಾಯಣ ಆಚಾರ್ಯರ ಮಾತಿನಿಂದ ಚಿಂತಾಕ್ರಾಂತನಾದ ರಾಮಾಚಾರಿ

By ಶೃತಿ ಹರೀಶ್ ಗೌಡ

'ರಾಮಾಚಾರಿ' ಧಾರಾವಾಹಿಯಲ್ಲಿ ಜಾನಕಿ, ಕೋದಂಡನಿಗೆ ಯಾಕೆ ಈ ರೀತಿ ಮಾಡಿದೆ ಎಂದು ಪ್ರಶ್ನೆ ಮೇಲೆ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಇದಕ್ಕೆ ಕೋದಂಡ ನನ್ನಲ್ಲಿ ಆಸೆ ಚಿಗುರಿಸಿದವರೇ ನೀವು ಎಂದು ಮನೆಯವರ ಬಳಿ ಹೇಳಿದ್ದಾನೆ. ನಾವಾ ಎಂದು ಕೇಳಿದ್ದಕ್ಕೆ ಹೌದು ಮಂಜಪ್ಪನ ದೇವಸ್ಥಾನದ ಹೆಸರನ್ನು ಹೇಳಿ ನನ್ನೊಳಗು ಹೆಂಡತಿಯ ಆಸೆ ಹುಟ್ಟಿಸಿದ್ರಿ ಎಂದು ಕೋದಂಡ ಹೇಳಿದ್ದಾನೆ. ಅಪರ್ಣ ಸತ್ತ ಮೇಲೆ ನನ್ನ ಆಸೆ ಆಕಾಂಕ್ಷೆಗಳನ್ನು ಯಾರು ಕೇಳಲಿಲ್ಲ ಎಂದಿದ್ದಾನೆ.

ಕೋದಂಡನ ಮಾತು ಕೇಳುತ್ತಿರುವ ನಾರಾಯಣ ಆಚಾರ್ಯರು ಮಾತ್ರ ಸುಮ್ಮನೆ ಇದ್ದಾರೆ. ರಾಮಾಚಾರಿ ಇದೆಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದಾನೆ. ಮುರಾರಿ ನಿನ್ನ ಅಣ್ಣನ ಬಗ್ಗೆ ತೆಗೆದುಕೊಳ್ಳುವ ನಿರ್ಧಾರ ನಿನ್ನ ಜೀವನದಲ್ಲಿ ಅಡಗಿದೆ ಎಂದು ಹೇಳಿದ್ದಾನೆ. ಈ ಕಡೆ ಜಾನಕಿ ಮನೆಯಿಂದ ಹೊರಗೆ ಹೋಗು ಎಂದು ಹೇಳುತ್ತಿದ್ದಾಳೆ. ಕೋದಂಡ ಮಾತ್ರ ನಾನು ಅಪ್ಪ ಹೇಳಿದ ಮೇಲೆ ಈ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಹೇಳಿದ್ದಾನೆ.

Colors Kannada Ramachari serial Written Update on April 13th episode

ನಾರಾಯಣ ಆಚಾರ್ಯರು, ಕೋದಂಡನ ಮಾತನ್ನು ಕೇಳಿ ಜಾನಕಿಗೆ ಮನೆ ತುಂಬಿಸಿಕೊಳ್ಳುವಂತೆ ಹೇಳಿದ್ದಾರೆ.‌ ನಾರಾಯಣ ಆಚಾರ್ಯರ ಮಾತುಗಳನ್ನು ಕೇಳಿದ ಕೋಡಂದ ಹಾಗೂ ವೈಶಾಖಗೆ ತುಂಬಾ ಖುಷಿಯಾಗಿದೆ. ಜಾನಕಿ ಹಾಗೂ ಶೃತಿ ಆರತಿಯನ್ನು ಬೆಳಗಿ ಸೇರನ್ನು ಇಟ್ಟು ಮನೆಯನ್ನು ತುಂಬಿಸಿಕೊಂಡಿದ್ದಾರೆ. ಆಶೀರ್ವಾದ ತಗೆದುಕೊಳ್ಳಲು ಹೋದಾಗ ಆಶೀರ್ವಾದವನ್ನು ಮಾಡದೇ ಹಿಂದೆ ಸರಿದಿದ್ದಾರೆ. ಇದನ್ನು ನೋಡಿದ ರಾಮಾಚಾರಿ ಹಾಗೂ ಮನೆಯವರಿಗೂ ಒಮ್ಮೆ ಶಾಕ್ ಆಗಿದೆ.

ಈ ಮನೆಯ ಗೌರವ ಹಾಗೂ ಗುಟ್ಟು ನಾಲ್ಕು ಮೂಲೆಯಲ್ಲಿ ಇರಬೇಕು ಅದು ಬಿಟ್ಟು ಊರಿನವರ ಬಾಯಿಗೆ ಆಹಾರ ಆಗಬಾರದು ಎಂದು ಮನೆಗೆ ತುಂಬಿಸಿಕೊಂಡೆ ಎಂದು ನಾರಾಯಣ ಆಚಾರ್ಯರು ಸ್ಪಷ್ಟನೆಯನ್ನು ನೀಡಿದ್ದಾರೆ. ಸಾನ್ವಿ ಜೊತೆಯಲ್ಲಿ ಚಾರು ರಾಮಾಚಾರಿ ಮನೆಯಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಚರ್ಚೆಯನ್ನು ಮಾಡುತ್ತಿದ್ದಾಳೆ. ಮಾವ ಅವರಿಬ್ಬರ ಮದುವೆಯನ್ನು ಒಪ್ಪಿಕೊಂಡರೆ ನಮ್ಮ ಮದುವೆಯ ಬಗ್ಗೆ ಸಹ ಮಾತನಾಡಲು ರಾಮಾಚಾರಿ ಧೈರ್ಯ ಮಾಡಬಹುದು ಎಂಬ ಆಸೆ ಚಾರುವಲ್ಲಿ ಮನೆ ಮಾಡಿದೆ.

ಇನ್ನೂ ಮನೆಯವರು ನಿನ್ನ ಮದುವೆ ಮಾಡಲು ಕಾಯುತ್ತಿದ್ದಾರೆ ಅಂದಾಗ ನಂಗೆ ವಿಕಾಸ್ ಕಂಡರೆ ಮೈ ಉರಿಯುತ್ತದೆ. ಆದಷ್ಟು ಬೇಗ ನಮ್ಮ ಮದುವೆ ವಿಷಯವನ್ನು ಮನೆಯವರಿಗೆ ತಿಳಿಸುತ್ತೇವೆ ಎಂದು ಚಾರು, ಸಾನ್ವಿ ಬಳಿಯಲ್ಲಿ ಹೇಳಿದ್ದಾಳೆ. ರಾಮಾಚಾರಿ ಮನೆಯಲ್ಲಿ ಏನು ಆಗುತ್ತಿದೆಯೋ ಎಂದು ಚಾರು ಯೋಚನೆ ಮಾಡುತ್ತಿದ್ದಾಳೆ. ನಾರಾಯಣ ಆಚಾರ್ಯರು ಚಿಂತಾಕ್ರಾಂತರಾಗಿದ್ದಾರೆ.

Colors Kannada Ramachari serial Written Update on April 13th episode

ಎಲ್ಲರೂ ನಾರಾಯಣ ಆಚಾರ್ಯರ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ರೂಮ್‌ಗೆ ಬಂದ ಮನೆಯವರು ನಾರಾಯಣ ಆಚಾರ್ಯರ‌ ಮಾತುಗಳನ್ನು ಕೇಳಲು ಕಾತುರರಾಗಿದ್ದಾರೆ. ಮನೆಯವರಿಗೆ ಆಚಾರ್ಯರು ಬುದ್ದಿವಾದ ಹೇಳುತ್ತಿದ್ದಾರೆ. ಆ ಹುಡುಗಿ ಈ ಮನೆಯ ಸೊಸೆ , ಕೋದಂಡನನ್ನೇ ನಂಬಿಕೊಂಡು‌ ಬಂದಿದ್ದಾಳೆ

ಅಪರ್ಣಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದೀರಾ ಹಾಗೇ ಇವಳನ್ನು ನಡೆಸಿಕೊಳ್ಳಬೇಕು. ಈ ಮನೆಯಲ್ಲಿ ಹೆಣ್ಣಿಗೆ ಗೌರವ ಕೊಡುತ್ತೇವೆ. ಅದಕ್ಕೆ ಕಿಂಚಿತ್ತೂ ಸಹ ಅಗೌರವ ಬರದ ರೀತಿಯಲ್ಲಿ ನೀವು ನಡೆಸಿಕೊಳ್ಳಬೇಕು ಎಂದು ನಾರಾಯಣ ಆಚಾರ್ಯರು ತಾಕೀತು ಮಾಡಿದ್ದಾರೆ. ಇನ್ನೂ ನನ್ನ ಹಾದಿಯಲ್ಲಿ ನಡೆಯುವುದು ಮಾತ್ರ ರಾಮಾಚಾರಿ ನನ್ನ ಮಗ ಎಂದು ಹೇಳಿದ್ದಾರೆ. ಈ ಮಾತು ರಾಮಾಚಾರಿಯನ್ನು ಚಿಂತೆಗೀಡು ಮಾಡಿದೆ.

More from Filmibeat

English summary
Colors Kannada serial Ramachari here details about narayanaachar permits kodanda and vyshaka to stay in the house but he disowns them
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X