Ramachari: ತಾಳಿ ತೆಗೆಯುವಂತೆ ಚಾರುಗೆ ರಾಮಾಚಾರಿ ತಾಕೀತು
ರಾಮಾಚಾರಿ ತಂದೆ ಹೇಳಿದ ಮಾತಿಗೆ ತುಂಬಾ ಯೋಚನೆ ಮಾಡುತ್ತಾ ಕುಳಿತಿದ್ದಾನೆ. ನಾನು ಹೇಗಾದರೂ ಮಾಡಿ ಚಾರು ಮೇಡಂ ಸಂಬಂಧವನ್ನು ಕಳೆದುಕೊಂಡು ತಂದೆಗೆ ಒಳ್ಳೆಯ ಮಗನಾಗಿ ಇರಬೇಕು ಎಂದು ಅಂದುಕೊಂಡಿದ್ದಾನೆ. ಅಷ್ಟರಲ್ಲಿ ಚಾರು ಫೋನ್ ಮಾಡಿದ್ದಾಳೆ. ಚಾರು ಬಳಿ ಮಾತನಾಡುತ್ತಿರುವ ರಾಮಾಚಾರಿ ಅಣ್ಣ ಮಾಡಿಕೊಂಡ ಮದುವೆಯನ್ನು ಒಪ್ಪಿದರು. ಆದರೂ ಸಮಸ್ಯೆ ಇದೆ ಎಂದಿದ್ದಾನೆ.
ಅಣ್ಣನ ಮದುವೆಯನ್ನು ಮನೆಯವರು ಒಪ್ಪಿದರು. ಆದರೆ ಅಣ್ಣನಿಗೆ ನಮ್ಮ ಮನೆಯವರ ಮನದಲ್ಲಿ ಸ್ಥಾನವಿಲ್ಲ ಎಂದು ಚಾರು ಬಳಿ ಹೇಳುತ್ತಾನೆ. ನಾಳೆ ಬೆಳಿಗ್ಗೆ ನನ್ನನ್ನು ಭೇಟಿಯಾಗಿ ನೀವು ಕಳಿಸುವ ಲೊಕೇಶನ್‌ಗೆ ನಾನು ಬಂದು ಮಾತನಾಡುತ್ತೇನೆ ಸಂಬಂಧ ಕೊನೆ ಮಾಡಿಕೊಳ್ಳಬೇಕು ಎಂದಿದ್ದಾನೆ. ರಾಮಾಚಾರಿ ಹೇಳಿದ ಮಾತಿಗೆ ಚಾರುಗೆ ತುಂಬಾ ಶಾಕ್ ಆಗಿದೆ.

ಆದರೆ ಸಾನ್ವಿಗೆ ಅದರ ಅರ್ಥ ಬೇರೆಯಾಗಿ ತಿಳಿಸಿದ್ದಾಳೆ. ನಮ್ಮಿಬ್ಬರ ಮದುವೆಯನ್ನು ಮನೆಯವರಿಗೆ ಹೇಳುತ್ತಿರುವ ಕಾರಣ ಸಂಬಂಧ ಕೊನೆ ಎಂದು ರಾಮಾಚಾರಿ ಹೇಳಿದ್ದಾನೆ. ನೀನು ಅದರ ಬಗ್ಗೆ ಚಿಂತೆ ಮಾಡಬೇಡ ಎಂದು ಸಾನ್ವಿ, ಚಾರುಗೆ ಹೇಳಿದ್ದಾಳೆ. ಚಾರು ಸಹ ಇದನ್ನೇ ನಂಬಿಕೊಂಡಿದ್ದಾಳೆ.
ರಾಮಾಚಾರಿ ಚಾರುಗೆ ನಮ್ಮಿಬ್ಬರ ಸಂಬಂಧದಿಂದ ಮನೆಯಲ್ಲಿ ಯಾರಿಗೂ ಸಹ ನೆಮ್ಮದಿ ಇಲ್ಲ ಎಂದು ಹೇಳುತ್ತಿದ್ದಾನೆ. ಅಣ್ಣನನ್ನು ಒಪ್ಪಿಕೊಂಡ ಅವರು ನಮ್ಮನ್ನು ಒಪ್ಪಿಕೊಳ್ಳುತ್ತಾರೆ ಎಂದು ಚಾರು, ರಾಮಾಚಾರಿಗೆ ಹೇಳಿದರು, ಸಹ ಅವನು ಅದನ್ನು ಕೇಳಲು ತಯಾರಿಲ್ಲ. ಮದುವೆಯ ಅರ್ಥ ಗೊತ್ತಿಲ್ಲದೆ ನಾನು ಯಾವುದೋ ಒತ್ತಡಕ್ಕೆ ಮಣಿದು ನಿಮಗೆ ತಾಳಿಯನ್ನು ಕಟ್ಟಿದ್ದೇನೆ. ಈಗ ನಿಮಗೆ ಕಣ್ಣಿದೆ ನೀವು ಈಗ ಆರಾಮಾಗಿ ಬಾಳಬಹುದು ಎಂದು ತಿಳಿಸಿದ್ದಾನೆ.

ನನ್ನ ತಂದೆ ಮಾತನಾಡುತ್ತಿದ್ದರೆ ನನ್ನ ಎದೆಗೆ ಚೂರಿಯನ್ನ ಹಾಕಿದಂತೆ ಆಗುತ್ತಿತ್ತು. ನಮ್ಮಿಬ್ಬರ ಮದುವೆಯಿಂದ ಯಾರ ಮನೆಗೆ ಸಹ ನೆಮ್ಮದಿ ಇಲ್ಲ. ಇಂತಹ ಮದುವೆ ಬೇಕಾ ನಿಮಗೆ ಕಟ್ಟಿದ ಮೂರು ಗಂಟು ನನಗೆ ಕಗ್ಗಂಟಾಗಿ ಪರಿಣಮಿಸಿದೆ ಎಂದು ರಾಮಾಚಾರಿ, ಚಾರುಗೆ ಹೇಳಿದ್ದಾನೆ. ಸ್ವಲ್ಪ ದಿನದಲ್ಲಿ ಪ್ರೀತಿ ಮಾಡಿದ ನಿಮಗೆ ನನ್ನ ಬಿಟ್ಟಿರಲು ಸಾಧ್ಯವಿಲ್ಲ, ಎಂದರೆ ನನ್ನನ್ನು ಹೆತ್ತು ಹೊತ್ತು ಸಾಕಿ ಸಂಸ್ಕಾರವನ್ನು ನೀಡಿದವರನ್ನು ನಾನು ಸಹ ಬಿಟ್ಟು ಬರಲು ಸಾಧ್ಯವಿಲ್ಲ. ನನಗೆ ಈ ಸಂಬಂಧ ಬೇಡ ದಯವಿಟ್ಟು ಮೂರು ಗಂಟು ಹಾಕಿರುವುದನ್ನು ಬಿಚ್ಚಿ ಎಂದು ಚಾರು ಬಳಿ ರಾಮಾಚಾರಿ ಹೇಳಿದ್ದಾನೆ.
ಕೋದಂಡನ ಹೆಂಡತಿ ನಾರಾಯಣ ಆಚಾರ್ಯರ ಮನೆಗೆ ಹೇಗೆ ಬೇಕೋ ಹಾಗೆಯೇ ಇದ್ದಾಳೆ. ಅಜ್ಜಿ ಮನೆಯಿಂದ ಹೊರಗಡೆ ಎದ್ದು ಬಂದು ನೋಡಿದಾಗ ವೈಶಾಖ ತುಳಸಿ ಪೂಜೆಯನ್ನು ಮಾಡುತ್ತಿದ್ದಾಳೆ. ಅಲ್ಲಿಗೆ ಬಂದ ಶ್ರುತಿಗೆ ಅಜ್ಜಿ ಕೋದಂಡ ಒಳ್ಳೆಯ ಸಂಸ್ಕಾರ ಇರುವ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂದು ಹೇಳಿದ್ದಾರೆ. ಇನ್ನು ಮನೆಯ ಒಳಗೆ ಬಂದ ವೈಶಾಖ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಂಡಿದ್ದಾಳೆ.

ಈ ವೇಳೆ ಕೋದಂಡ ನನ್ನ ತಂದೆ ನನಗೆ ದೇವರು ಅವರ ಕಾಲಿಗೆ ಬಿದ್ದು ಆಶೀರ್ವಾದ ತಗೋ ಎಂದು ಹೇಳಿದ್ದಾನೆ. ಇದಕ್ಕೆ ವೈಶಾಖ ನನ್ನ ಗಂಡನಿಗೆ ಆಶೀರ್ವಾದ ಮಾಡದವರು ನನಗೆ ದೊಡ್ಡವರು ಅಲ್ಲ ಎಂದು ಹೇಳಿ ಮನೆಯಲ್ಲಿದ್ದ ಎಲ್ಲರಿಗೂ ಶಾಕ್‌ನ್ನು ನೀಡಿದ್ದಾಳೆ. ಮಗ ಇದ್ದಾಗಲೇ ನನ್ನ ಪಾಲಿಗೆ ಸತ್ತು ಹೋದ ಎಂಬವರ ಕಾಲಿಗೆ ಬಿದ್ದರೆ ಪಾಪ ಬರುತ್ತದೆ ಎಂದು ಹೇಳಿದ್ದಾಳೆ.
ರಾಮಾಚಾರಿ ನಮ್ಮ ಇಬ್ಬರ ಮದುವೆ ಮುರಿದುಕೋ ಎಂದು ಹೇಳಿದ ಎಂದು ಸಾನ್ವಿ ಬಳಿ ಬಂದು ಚಾರು ಹೇಳುತ್ತಿದ್ದಾಳೆ. ಇದಕ್ಕೆ ಸಾನ್ವಿ, ಚಾರುಗೆ ಬುದ್ದಿ ಹೇಳಿದ್ದಾಳೆ. ಅವನಿಗೆ ಅವನ ಮನೆಯವರೇ ಹೆಚ್ಚು ನೋಡು, ನೀನು ಮೋಸದಿಂದ ಮಾಡಿಕೊಂಡ ಮದುವೆ ಬಹುಕಾಲ ಉಳಿಯಲಿಲ್ಲ ಎಂದು ಸಾನ್ವಿ ಹೇಳಿದ್ದಾಳೆ.
ಕಣ್ಣು ಕಾಣಿಸುತ್ತಿಲ್ಲ ಎಂದು ಬ್ಲಾಕ್‌ಮೇಲ್ ಮಾಡಿ ಮದುವೆಯಾದೆ. ಇದರಿಂದಾಗಿ ನಿನ್ನ ಕಣ್ಣ ಮುಂದೆ ನೀನೆ ಕಟ್ಟಿದ ಸೌಧ ಮುರಿದಿದೆ. ಹೇಗೋ ಮನೆಯವರು ವಿಕಾಸ್ ಬಾನೇರಿಯನ್ನು ನೋಡಿದ್ದಾರೆ. ಅವನನ್ನು ಮದುವೆಯಾಗು ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಚಾರು, ಸಾನ್ವಿ ಕಪಾಳಕ್ಕೆ ಹೊಡೆದಿದ್ದಾಳೆ.


Click it and Unblock the Notifications











