Ramachari: ಹೊಸ ಅತ್ತಿಗೆಯ ವರಸೆಯನ್ನು ನೋಡಿ ಶಾಕ್ ಆದ ರಾಮಾಚಾರಿ!
ಮನೆಗೆ ವಾಪಸ್ ಬಂದಿರುವ ಚಾರು ಸಾನ್ವಿ ಮೇಲೆ ಕೂಗಾಡುತ್ತಿದ್ದಾಳೆ. ರಾಮಾಚಾರಿ ನನ್ನ ಗಂಡ ನಾನು ಯಾವುದೇ ಕಾರಣಕ್ಕೂ ಅವನನ್ನು ಬಿಟ್ಟು ಕೊಡುವುದಿಲ್ಲ ಅವನೇ ನನ್ನ ಗಂಡ ನಾನು ಮೂರು ಗಂಟನ್ನು ಬಿಚ್ಚುವುದಿಲ್ಲ ಮೈಂಡ್ ಇಟ್ ಎಂದು ಚಾರು ಸಾನ್ವಿಗೆ ಚೆನ್ನಾಗಿ ಬೈದು ಮನೆಯೊಳಗೆ ಬಿರುಗಾಳಿಯಂತೆ ಹೋಗಿದ್ದಾಳೆ.
ಮನೆಯಲ್ಲಿ ಇರುವ ಎಲ್ಲರೂ ಚಾರಿ ಬಳಿ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ ಆದರೆ ಚಾರು ಎಲ್ಲರ ಬಳಿಯೂ ಸಹ ಜೋರಾಗಿ ಕೂಗಾಡಿಕೊಂಡು ರೂಮಿಗೆ ಹೋಗುತ್ತಿದ್ದಾಳೆ ಇದೆ ವೇಳೆ ಮಾನ್ಯತಾ ಕೈ ಹಿಡಿದುಕೊಂಡು ಕೇಳಿದರೂ ಸಹ ಏನನ್ನು ಹೇಳದೆ ನನ್ನನ್ನು ಬಿಡು ನಾನು ಒಬ್ಬಳೇ ಇರಬೇಕು ಎಂದು ಅಲ್ಲಿಂದ ಕೈಬಿಡಿಸಿಕೊಂಡು ಹೋಗಿದ್ದಾಳೆ.

ಈ ಕಡೆ ಮನೆಯವರೆಲ್ಲರಿಗೂ ಸಹ ಚಾರು ಕೋಪವನ್ನ ಕಂಡು ದಿಗಿಲಾಗಿದೆ. ಈ ರೀತಿ ಆಡುತ್ತಿದ್ದರೆ ಜೈ ಶಂಕರ್‌ನನ್ನು ಕರೆಯಿಸುವುದಾಗಿ ಮಾನ್ಯತಾ ಹೇಳಿದ್ದಾಳೆ. ಚಿನ್ನು ಮಾನ್ಯತಾರಾ ಮಾವ ಇದನ್ನೆಲ್ಲಾ ನೋಡಿ ಆಗಬಾರದು ಏನೋ ಹಾಗಿದೆ ಅದಕ್ಕೆ ಚಾರು ಈ ರೀತಿಯಾಗಿ ಆಡುತ್ತಿದ್ದಾಳೆ ಎಂದು ಹೇಳಿದ್ದಾರೆ. ಮಾನ್ಯತಾಗೂ ಸಹ ಏನು ನಡೆದಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.
ಮನೆಯವರೆಲ್ಲರೂ ಸಹ ವೈಶಾಖ ಮೇಲೆ ಚಾಡಿ ಹೇಳುತ್ತಿದ್ದರೆ ರಾಮಾಚಾರಿ ನಾನು ನೋಡಿಕೊಳ್ಳುತ್ತೇನೆ ಎಂದು ಆ ವೈಶಾಖ ಬಳಿ ಹೋಗಿದ್ದಾನೆ. ಹೋಗುವಾಗ ಕಾಫಿಯನ್ನು ತೆಗೆದುಕೊಂಡು ಹೋಗಿ ಅತ್ತಿಗೆಯ ಬಳಿ ಮಾತನಾಡುತ್ತಿದ್ದಾನೆ ಈ ಮನೆಯವರಿಗೆ ನೀವು ಸ್ವಲ್ಪ ಅಡ್ಜಸ್ಟ್ ಆಗಿ ನಿಮ್ಮನ್ನು ರಾಣಿ ಆ ತರ ಹೊತ್ತಿ ಮೆರೆಸುತ್ತಾರೆ ಅತ್ತಿಗಮ್ಮ ಎಂದು ಹೇಳಿದ್ದಾನೆ.

ಕೈನಲ್ಲಿದ್ದ ಕಾಫಿಯನ್ನು ಕೊಟ್ಟಿದ್ದಾನೆ ಕಾಫಿಯನ್ನು ತೆಗೆದುಕೊಂಡ ವೈಶಾಖ ರಾಮಾಚಾರಿಯ ಮುಖಕ್ಕೆ ಎರಚಿದ್ದಾಳೆ. ಉರಿತಾ ಇದ್ದೀಯಾ ನಿನಗೆ ಕೂಡ ನಿನ್ನ ಮಾತುಗಳಿಂದ ಉರಿಯುತ್ತಿದೆ ನಾನು ಯಾಕೆ ಅಡ್ಜಸ್ಟ್ ಆಗಲಿ ಈ ಮನೆಯವರೇ ಅಡ್ಜಸ್ಟ್ ಆಗಬೇಕು ಎಂದು ಹೇಳಿದ್ದಾಳೆ ನನ್ನನ್ನು ಯಾರು ತಲೆಯ ಮೇಲೆ ಹೊತ್ತು ಮೆರೆಸುವುದು ಬೇಕಾಗಿಲ್ಲ. ನಾನೇ ತಲೆಯ ಮೇಲೆ ನಿಂತು ಹೇಗೆ ಬೇಕೋ ಹಾಗೆ ಬದಲಾಯಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ ಈ ಮಾತುಗಳೆಲ್ಲವೂ ಸಹ ರಾಮಾಚಾರಿಗೆ ಬೇಸರವನ್ನು ತರಿಸಿದೆ ಕಣ್ಣೀರು ಹಾಕಿಕೊಂಡು ರೂಮಿನಿಂದ ಹೊರಗೆ ಬಂದಿದ್ದಾನೆ.
ರಾಮಾಚಾರಿ ನನಗೆ ಹೇಗೆ ಬೇಕೋ ಹಾಗೆ ಹೇಳಿದರೆ ನಾನು ಕೇಳೋದಿಲ್ಲ ಅವನು ಹಾಕಿರುವ ಮೂರು ಗಂಟೆ ನಾನು ಯಾವ ಕಾರಣಕ್ಕೂ ಬಿಚ್ಚೋದಿಲ್ಲ ರಾಮಾಚಾರಿ ನನ್ನ ಗಂಡ ಎಂದು ರೂಮಿನ ತುಂಬಾ ತಾಳಿಯನ್ನ ಹಿಡಿದುಕೊಂಡು ಚಾರು ಕಿರುಚಾಡುತ್ತಿದೆಮ ನಿನ್ನನ್ನ ಅತಿ ಹೆಚ್ಚು ಪ್ರೀತಿ ಮಾಡುತ್ತಿದ್ದೇನೆ ಯಾವುದೇ ಕಾರಣಕ್ಕೂ ಕೂಡ ನಾನು ನಿನ್ನನ್ನು ಬಿಟ್ಟು ಕೊಡುವುದಿಲ್ಲ ನೀನೆ ನನ್ನ ಗಂಡ ಎಂದು ಫಿಕ್ಸ್ ಆಗಿದ್ದೇನೆ ಅದೇ ಅಂತಿಮ ಎಂದು ಚಾರು ಹೇಳಿಕೊಂಡಿದ್ದಾಳೆ.
ವೈಶಾಖ ಬಳಿ ಮಾತನಾಡಿಕೊಂಡು ಬಂದ ರಾಮಚಾರಿ ಎಲ್ಲರ ಬಳಿಯೂ ಸುಳ್ಳನ್ನ ಹೇಳುತ್ತಿದ್ದಾನೆ. ಅತ್ತಿಗೆ ತುಂಬಾ ಚೆನ್ನಾಗಿ ಮಾತನಾಡಿದರು ನಾನು ಹೇಳಿದ್ದೆಲ್ಲವನ್ನು ತಾಳ್ಮೆಯಿಂದ ಕೇಳಿದರು ಎಂದು ರಾಮಾಚಾರಿ ಹೇಳುತ್ತಿದ್ದಾನೆ ನೀವು ಕೊಟ್ಟ ಕಾಫಿಯನ್ನು ಕುಡಿದರು ಎಂದು ಅಮ್ಮನ ಬಳಿಯೂ ಸುಳ್ಳನ್ನ ಹೇಳಿದ್ದಾನೆ. ಈ ಸುಳ್ಳು ಹೇಳುತ್ತಿದ್ದರೆ ವೈಶಾಖ ಆಡಿದ ಮಾತುಗಳೆ ರಾಮಾಚಾರಿಗೆ ಕಣ್ಮುಂದೆ ಬರುತ್ತಿತ್ತು.
ಶ್ರುತಿ ರಾಮಾಚಾರಿಯಲ್ಲಿ ಆದ ಬದಲಾವಣೆಯಿಂದ ರಾಮಾಚಾರಿ ಯನ್ನು ಪ್ರಶ್ನೆ ಮಾಡಿದ್ದಾಳೆ ಅಣ್ಣ ನಿಜಕ್ಕೂ ಅತ್ತಿಗೆ ನಿನ್ನನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಕೇಳಿದ್ದಾಳೆ ಇದಕ್ಕೆ ರಾಮಾಚಾರಿ ಹೌದು ಎಂದು ಸುಳ್ಳನ್ನ ಹೇಳಿದ್ದಾನೆ. ನನಗೆ ಅತ್ತಿಗೆಮ್ಮ ಎಂದರೆ ಅಪರ್ಣ ಅತ್ತಿಗೆನೇ ನೆನಪಿಗೆ ಬರುತ್ತಾರೆ ಅದಕ್ಕಾಗಿ ಇವರನ್ನು ಅತ್ತಿಗೆ ಎಂದು ಕರೆಯುತ್ತಿದ್ದೇನೆ ಎಂದು ಶ್ರುತಿಯ ಬಳಿ ರಾಮಾಚಾರಿ ಸುಳ್ಳು ಹೇಳಿ ಅಲ್ಲಿಂದ ಹೋಗಿದ್ದಾನೆ.


Click it and Unblock the Notifications











